ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಮಹೀಂದ್ರಾ ಬಿ‍ಎಸ್ 6 ಬೊಲೆರೊ ಪಿಕ್ ಅಪ್

ಸಿ‍ಎನ್‍‍ಜಿ ಅಥವಾ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ ಇಂಧನವು ಪೆಟ್ರೋಲ್ ಹಾಗೂ ಡೀಸೆಲ್‍‍ಗಳಿಗೆ ಪರ್ಯಾಯವಾದ ಜನಪ್ರಿಯ ಇಂಧನವಾಗಿದೆ. ಸಿ‍ಎನ್‍‍ಜಿಯನ್ನು ಬಳಸುವ ವಾಹನಗಳಲ್ಲಿ ಹೆಚ್ಚಿನ ಮಾಲಿನ್ಯವು ಉಂಟಾಗುವುದಿಲ್ಲ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಮಹೀಂದ್ರಾ ಬಿ‍ಎಸ್ 6 ಬೊಲೆರೊ ಪಿಕ್ ಅಪ್

ದೇಶಿಯ ಮಾರುಕಟ್ಟೆಯಲ್ಲಿರುವ ಬಹುತೇಕ ವಾಹನ ತಯಾರಕ ಕಂಪನಿಗಳು ಡೀಸೆಲ್, ಪೆಟ್ರೋಲ್ ಎಂಜಿನ್ ವಾಹನಗಳಿಗೆ ಪರ್ಯಾಯವಾಗಿ ಸಿ‍ಎನ್‍‍ಜಿ ಎಂಜಿನ್ ವಾಹನಗಳನ್ನು ಸಹ ಅಭಿವೃದ್ಧಿಪಡಿಸಿ ಬಿಡುಗಡೆಗೊಳಿಸುತ್ತಿವೆ. ಇವುಗಳಲ್ಲಿ ಭಾರತೀಯ ಮೂಲದ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯೂ ಒಂದು.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಮಹೀಂದ್ರಾ ಬಿ‍ಎಸ್ 6 ಬೊಲೆರೊ ಪಿಕ್ ಅಪ್

ಮಹೀಂದ್ರಾ ಕಂಪನಿಯು ತನ್ನ ಸರಣಿಯಲ್ಲಿರುವ ಪಿಕ್ ಅಪ್ ಟ್ರಕ್‍ ವಾಹನದಲ್ಲಿ ಸಿ‍ಎನ್‍‍ಜಿ ಎಂಜಿನ್ ಅನ್ನು ಬಿ‍ಎಸ್ 6 ನಿಯಮಗಳಿಗೆ ತಕ್ಕಂತೆ ಅಭಿವೃದ್ದಿಪಡಿಸುತ್ತಿದೆ. ಮಹೀಂದ್ರಾ ಕಂಪನಿಯು ಬಿ‍ಎಸ್ 6 ಸಿ‍ಎನ್‍‍ಜಿ ಎಂಜಿನ್ ಹೊಂದಿರುವ ಪಿಕ್ ಅಪ್ ಟ್ರಕ್ ಅನ್ನು ಸ್ಪಾಟ್ ಟೆಸ್ಟ್ ನಡೆಸುತ್ತಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಮಹೀಂದ್ರಾ ಬಿ‍ಎಸ್ 6 ಬೊಲೆರೊ ಪಿಕ್ ಅಪ್

ಹೀಗೆ ಸ್ಪಾಟ್ ಟೆಸ್ಟ್ ಮಾಡಲಾಗುತ್ತಿರುವ ಪಿಕ್ ಅಪ್ ಟ್ರಕ್‍‍ನಲ್ಲಿ ಟೆಂಪರರಿ ರಿಜಿಸ್ಟ್ರೇಷನ್ ಪ್ಲೇಟ್ ಹಾಗೂ ಸೈಡಿಗೆ ಕೋಡ್‍‍ಗಳನ್ನು ಅಳವಡಿಸಲಾಗಿದೆ. ಇವುಗಳು ಸ್ಪಾಟ್ ಟೆಸ್ಟ್ ಮಾದರಿಗಳಲ್ಲ, ಬದಲಿಗೆ ಗ್ರಾಹಕರ ವಾಹನಗಳು ಎಂದು ಬಿಂಬಿಸುವುದು ಇದರ ಹಿಂದಿರುವ ಉದ್ದೇಶ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಮಹೀಂದ್ರಾ ಬಿ‍ಎಸ್ 6 ಬೊಲೆರೊ ಪಿಕ್ ಅಪ್

ಯಾವುದೇ ಎಂಜಿನ್‍‍ನ ವಾಹನಗಳನ್ನು, ಎಂಜಿನ್‍‍ನ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವುದರ ಮೂಲಕ ಸಿ‍ಎನ್‍‍ಜಿ ವಾಹನವನ್ನಾಗಿ ಬದಲಿಸಿಕೊಳ್ಳಬಹುದು. ಸಿ‍ಎನ್‍‍ಜಿ ವಾಹನಗಳಲ್ಲಿ ಹೆಚ್ಚಿನ ಪ್ರಮಾಣದ ಮಾಲಿನ್ಯ ಉಂಟಾಗುವುದಿಲ್ಲ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಮಹೀಂದ್ರಾ ಬಿ‍ಎಸ್ 6 ಬೊಲೆರೊ ಪಿಕ್ ಅಪ್

ಇದರ ಜೊತೆಗೆ ಸಿ‍ಎನ್‍‍ಜಿ ವಾಹನಗಳನ್ನು ಬಳಸುವುದು ಹೆಚ್ಚು ವೆಚ್ಚದಾಯಕವೂ ಅಲ್ಲ. ಇದರಿಂದಾಗಿ ಪ್ಯಾಸೆಂಜರ್ ಕಾರುಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಇದರಲ್ಲಿರುವ ಅನಾನುಕೂಲವೆಂದರೆ ಸಿ‍ಎನ್‍‍ಜಿ ಫ್ಯೂಯಲ್ ಟ್ಯಾಂಕ್‍‍ಗಳು ಚಿಕ್ಕ ಕಾರುಗಳ ಹೆಚ್ಚಿನ ಲಗೇಜ್ ಜಾಗವನ್ನು ಬಳಸುತ್ತವೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಮಹೀಂದ್ರಾ ಬಿ‍ಎಸ್ 6 ಬೊಲೆರೊ ಪಿಕ್ ಅಪ್

ಆದರೆ ಮಹೀಂದ್ರಾ ಪಿಕ್ ಅಪ್‍‍ನಂತಹ ಕಮರ್ಷಿಯಲ್ ವಾಹನಗಳಲ್ಲಿ ಈ ರೀತಿಯ ಅನಾನುಕೂಲತೆ ಇರುವುದಿಲ್ಲ. ದೇಶಿಯ ಮಾರುಕಟ್ಟೆಯ ಈ ಸೆಗ್‍‍ಮೆಂಟಿನಲ್ಲಿ ಮಹೀಂದ್ರಾದ ಬೊಲೆರೊ ಪಿಕ್ ಅಪ್ ಹೆಚ್ಚು ಮಾರಾಟವಾಗುತ್ತಿರುವ ವಾಹನವಾಗಿದೆ.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಮಹೀಂದ್ರಾ ಬಿ‍ಎಸ್ 6 ಬೊಲೆರೊ ಪಿಕ್ ಅಪ್

ಇದರಲ್ಲಿರುವ ಬಹು ಫೀಚರ್‍‍ಗಳು ಈ ವಾಹನವನ್ನು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಹೆಚ್ಚು ಜನಪ್ರಿಯವಾಗಿಸಿದೆ. ಕೆಲವು ತಿಂಗಳ ಹಿಂದಷ್ಟೇ ಮಹೀಂದ್ರಾ ಕಂಪನಿಯು ಪಿಕ್ ಅಪ್ ವಾಹನದ 15ನೇ ಲಕ್ಷ ವಾಹನವನ್ನು ಮಾರಾಟ ಮಾಡಿ ಹೊಸ ಮೈಲಿಗಲ್ಲನ್ನು ಸೃಷ್ಟಿಸಿದೆ.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಮಹೀಂದ್ರಾ ಬಿ‍ಎಸ್ 6 ಬೊಲೆರೊ ಪಿಕ್ ಅಪ್

ಮಹೀಂದ್ರಾ ಪಿಕ್ ಅಪ್ ವಾಹನವನ್ನು ಬೇಕಾದ ರೀತಿಯಲ್ಲಿ ಮಾಡಿಫೈ ಮಾಡಿಕೊಂಡು ಅಗತ್ಯಕ್ಕೆ ತಕ್ಕಂತೆ ಬಳಸಬಹುದಾಗಿದೆ. ಕೆಲವು ಮಾದರಿಯ ಪಿಕ್ ಅಪ್‍ ವಾಹನಗಳನ್ನು ರೇರ್ ಲ್ ಡ್ರೈವ್ ಹಾಗೂ ಫೋರ್ ವ್ಹೀಲ್ ಡ್ರೈವ್ ಎಂಬ ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಮಹೀಂದ್ರಾ ಬಿ‍ಎಸ್ 6 ಬೊಲೆರೊ ಪಿಕ್ ಅಪ್

ಸದ್ಯಕ್ಕೆ ಬೊಲೆರೊ ಪಿಕ್ ಅಪ್ ವಾಹನವನ್ನು ಪಿಕ್ ಅಪ್, ಮ್ಯಾಕ್ಸಿ, ಟ್ರಕ್ ಹಾಗೂ ಕ್ಯಾಂಪರ್ ಎಂಬ ನಾಲ್ಕು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ನಾಲ್ಕೂ ಮಾದರಿಗಳನ್ನು ಕೈಗಾರಿಕೆ, ಸಾಗಾಣಿಕೆ ಹಾಗೂ ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಬಳಸಲಾಗುತ್ತದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಮಹೀಂದ್ರಾ ಬಿ‍ಎಸ್ 6 ಬೊಲೆರೊ ಪಿಕ್ ಅಪ್

ನಾಲ್ಕು ಮಾದರಿಗಳಲ್ಲಿ ಟಾಪ್ ಎಂಡ್ ಎನ್ನಲಾಗುವ ಪಿಕ್ ಅಪ್ ಮಾದರಿಯನ್ನು ಎಕ್ಸ್ ಟ್ರಾ ಸ್ಟ್ರಾಂಗ್ ಅಥವಾ ಎಕ್ಸ್ ಟ್ರಾ ಲಾಂಗ್ ಫಾರ್ಮಾಟ್‍‍ನಲ್ಲಿ ಖರೀದಿಸಬಹುದು. ಈ ಎರಡೂ ಫಾರ್ಮಾಟ್‍‍ಗಳು ಫ್ಲಾಟ್ ಬೆಡ್ ಅಥವಾ ಸಿಬಿಸಿ ಮಾದರಿಯಲ್ಲಿರಲಿವೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಮಹೀಂದ್ರಾ ಬಿ‍ಎಸ್ 6 ಬೊಲೆರೊ ಪಿಕ್ ಅಪ್

ಕ್ಯಾಂಪರ್, ಲೈಫ್ ಸ್ಟೈಲ್ ಮಾದರಿಯ ಪಿಕ್ ಅಪ್ ಟ್ರಕ್ ಆಗಿದೆ. ಮಹೀಂದ್ರಾ ಕಂಪನಿಯು ಇನ್ನೂ ಅಧಿಕೃತವಾಗಿ ಬಿ‍ಎಸ್ 6 ಎಂಜಿನ್ ಹೊಂದಿರುವ ಪಿಕ್ ಅಪ್ ಸರಣಿಯ ವಾಹನಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿಲ್ಲ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಮಹೀಂದ್ರಾ ಬಿ‍ಎಸ್ 6 ಬೊಲೆರೊ ಪಿಕ್ ಅಪ್

2.5 ಲೀಟರಿನ ನಾಲ್ಕು ಸಿಲಿಂಡರ್‍‍ನ ಬಿಎಸ್ 4 ಎಂಜಿನ್ ಹೊಂದಿರುವ ಎಕ್ಸ್ ಟ್ರಾ ಸ್ಟ್ರಾಂಗ್ ಮಾದರಿಯು 63 ಬಿ‍‍ಹೆಚ್‍‍ಪಿ ಪವರ್ ಹಾಗೂ 195 ಎನ್‍ಎಂ ಟಾರ್ಕ್ ಉತ್ಪಾಸಿದರೆ, ಇದೇ ಎಂಜಿನ್ ಹೊಂದಿರುವ ಎಕ್ಸ್ ಟ್ರಾ ಲಾಂಗ್ ಮಾದರಿಯು 70 ಬಿ‍‍ಹೆಚ್‍‍ಪಿ ಪವರ್ ಹಾಗೂ 200 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಮಹೀಂದ್ರಾ ಬಿ‍ಎಸ್ 6 ಬೊಲೆರೊ ಪಿಕ್ ಅಪ್

ಬಿ‍ಎಸ್ 6 ಎಂಜಿನ್ ಹೊಂದಲಿರುವ ವಾಹನಗಳು ಉತ್ಪಾದಿಸುವ ಅಂಕಿ ಅಂಶಗಳಲ್ಲಿ ಸಹಜವಾಗಿಯೇ ವ್ಯತ್ಯಾಸವಾಗಲಿದೆ. ಸಿ‍ಎನ್‍‍ಜಿ ಎಂಜಿನ್ ಹೊಂದಲಿರುವ ವಾಹನವು ಇದೇ ಅಂಕಿ ಅಂಶಗಳನ್ನು ಉತ್ಪಾದಿಸುವ ಸಾಧ್ಯತೆಗಳಿವೆ. ಬಿ‍ಎಸ್ 6 ಎಂಜಿನ್ ಹೊಂದಲಿರುವ ಮಹೀಂದ್ರಾ ಪಿಕ್ ಅಪ್ ವಾಹನಗಳ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.7 ಲಕ್ಷಗಳಾಗಲಿದೆ.

Source: Rushlane

Article Published On: Monday, December 16, 2019, 12:12 [IST]
English summary
Mahindra Bolero Pick-Up BS6 CNG variant spied on test - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+