ಆಗಸ್ಟ್ ತಿಂಗಳಲ್ಲಿ ಹೆಚ್ಚು ಮಾರಾಟವಾದ ಮಹೀಂದ್ರಾ ಕಾರುಗಳಿವು
ಭಾರತೀಯ ವಾಹನ ಉತ್ಪಾದನಾ ಸಂಸ್ಥೆ ಮಹೀಂದ್ರಾ ಮತ್ತೊಮ್ಮೆ ಮಾರಾಟದಲ್ಲಿ ಕುಸಿತ ಕಂಡಿದೆ. ಕಾರು ಮಾರಾಟದ ಪಟ್ಟಿಯಲ್ಲಿ ಮಹೀಂದ್ರಾ ಮೂರನೇ ಸ್ಥಾನದಲ್ಲಿದ್ದರೆ, ಮಾರುತಿ ಸುಜುಕಿ ಮತ್ತು ಹ್ಯುಂಡೈ ಕ್ರಮವಾಗಿ ಮೊದಲನೇ ಮತ್ತು ಎರಡನೇ ಸ್ಥಾನವನ್ನು ವಶಪಡಿಸಿಕೊಂಡಿದೆ.

ಮಹೀಂದ್ರಾ ಒಂದು ವರ್ಷದ ಆಧಾರದ ಮೇಲೆ ಶೇ. 27 ರಷ್ಟು ಕುಸಿತ ಕಂಡಿದೆ. ಕಂಪನಿಯ ಈ ವರ್ಷದ ಆಗಸ್ಟ್ ತಿಂಗಳಲ್ಲಿ ಕೇವಲ 13,147 ಯುನಿಟ್‍ಗಳು ಮಾರಾಟವಾಗಿದ್ದು, ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ 18,037 ಯುನಿಟ್‍ಗಳು ಮಾರಾಟವಾಗಿತ್ತು.

ಮಹೀಂದ್ರಾ ಪ್ರಸುತ್ತ ಶೇ. 6.7 ರಷ್ಟು ಮಾರುಕಟ್ಟೆಯಲ್ಲಿ ಮಾರಾಟದ ಪಾಲನ್ನು ಹೊಂದಿದ್ದು, ಈ ವರ್ಷದ ಆಗಸ್ಟ್ ತಿಂಗಳಲ್ಲಿ ಕಂಪನಿಯ ಕಾರುಗಳ ಮಾರಾಟದ ಅಂಕಿ ಅಂಶಗಳ ಪಟ್ಟಿ ಇಲ್ಲಿವೆ.
| ಮಾದರಿಗಳು | ಆಗಸ್ಟ್ 2019 | ಆಗಸ್ಟ್ 2018 |
| ಮಹೀಂದ್ರಾ ಬೊಲೆರೊ | 3,993 | 6,030 |
| ಮಹೀಂದ್ರಾ ಸ್ಕಾರ್ಪಿಯೋ | 2,862 | 3,606 |
| ಮಹೀಂದ್ರಾ ಎಕ್ಸ್‌ಯುವಿ300 | 2,532 | - |
| ಮಹೀಂದ್ರಾ ಟಿಯುವಿ300 | 1,059 | 1,966 |
| ಮಹೀಂದ್ರಾ ಎಕ್ಸ್‌ಯುವಿ500 | 968 | 2,078 |
| ಮಹೀಂದ್ರಾ ಮರಾಜೋ | 697 | 1,762 |
| ಮಹೀಂದ್ರಾ ಜೈಲು | 356 | 581 |
| ಮಹೀಂದ್ರಾ ಥಾರ್ | 326 | 669 |
| ಮಹೀಂದ್ರಾ ಕೆಯುವಿ100 | 169 | 1,173 |
| ಮಹೀಂದ್ರಾ ವೆರಿಟೊ | 110 | 145 |
| ಮಹೀಂದ್ರಾ ಅಲ್ತುರಾಸ್ ಜಿ4 | 71 | - |

ಮಹೀಂದ್ರಾ ಬೊಲೆರೊ 3,993 ಯುನಿಟ್ ಮಾರಾಟವಾಗಿದೆ ಎಂದು ದಾಖಲಾಗಿದೆ. ಬ್ರ್ಯಾಂಡ್‍ನ ಅತೀ ಹೆಚ್ಚು ಮಾರಾಟವಾದ ವಾಹನ ಎಂಬ ಖ್ಯಾತಿಗೆ ಬೊಲೆರೊ ಪಾತ್ರವಾಗಿದೆ. ಆದರೆ ಬೊಲೆರೊ ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ 6,030 ಯುನಿಟ್‍ಗಳು ಮಾರಾಟವಾಗಿದ್ದವು, ಈ ಅಂಕಿ ಅಂಶಗಳನ್ನು ಹೋಲಿಸಿದರೆ ಶೇ. 34 ರಷ್ಟು ಕುಸಿತ ಕಂಡಿದೆ.

ಮಹೀಂದ್ರಾ ಸಂಸ್ಥೆಯ ಅತೀ ಹೆಚ್ಚು ಕಾರು ಮಾರಾಟದ ಪಟ್ಟಿಯಲ್ಲಿ ಸ್ಕಾರ್ಪಿಯೋ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಈ ವರ್ಷದ ಆಗಸ್ಟ್ ತಿಂಗಳಲ್ಲಿ ಸ್ಕಾರ್ಪಿಯೋ 2,862 ಯುನಿಟ್‍ಗಳ ಮಾರಾಟವಾಗಿದೆ ಎಂದು ದಾಖಲಾಗಿದೆ. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ 3,606 ಯುನಿಟ್‍ಗಳು ಮಾರಾಟವಾಗಿತ್ತು, ಇದನ್ನು ಹೋಲಿಸಿದರೆ ಶೇ. 21 ರಷ್ಟು ಕುಸಿತ ಕಂಡಿದೆ. ಮುಂದೆ ಬರಲಿರುವ ಸ್ಕಾರ್ಪಿಯೋ ಫೇಸ್‍ಲಿಫ್ಟ್ ನೊಂದಿಗೆ ಮಾರಾಟವನ್ನು ಹೆಚ್ಚಿಸುವ ಆಶಯವನ್ನು ಕಂಪನಿ ಹೊಂದಿದೆ.

ಮಹೀಂದ್ರಾ ಎಕ್ಸ್‌ಯುವಿ 300 ಈ ವರ್ಷದ ಆಗಸ್ಟ್ ತಿಂಗಳಲ್ಲಿ 2.532 ಯುನಿಟ್‍ಗಳು ಮಾರಾಟವಾಗುವ ಮೂಲಕ ಕಂಪನಿಯ ಕಾರು ಮಾರಾಟದ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. 1,059 ಯುನಿಟ್ ಮಾರಾಟವಾಗುವ ಮೂಲಕ ಟಿಯುವಿ 300 ನಾಲ್ಕನೇ ಸ್ಥಾನವನ್ನು ಪಡೆದು ಕೊಂಡಿದೆ. ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ 1,966 ಯುನಿಟ್‍ಗಳು ಮಾರಾಟವಾಗಿದ್ದವು. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 46 ರಷ್ಟು ಕುಸಿತ ಕಂಡಿದೆ.

ಮಹೀಂದ್ರಾ ಎಕ್ಸ್‌ಯುವಿ 500 ಕಾರು ಆಗಸ್ಟ್ ತಿಂಗಳಲ್ಲಿ 968 ಯುನಿಟ್‍ಗಳು ಮಾರಾಟವಾಗುವ ಮೂಲಕ ಐದನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ 2,078 ಯುನಿಟ್‍ಗಳು ಮಾರಾಟವಾಗಿದ್ದವು. ಕಂಪನಿಯ ಬಹುನಿರೀಕ್ಷಿತ ಎಕ್ಸ್‌ಯುವಿ 500 ಕಾರಿನ ಮಾರಾಟ ಪಾತಾಳಕ್ಕೆ ಕುಸಿದಿದೆ. ಎಕ್ಸ್‌ಯುವಿ 500 ಕಾರು ಬರೊಬ್ಬರಿ ಶೇ. 53 ರಷ್ಟು ಕುಸಿತ ಕಂಡಿದೆ.ಆದರೆ ಇನ್ನೊಂದು ಪ್ರಮುಖ ಅಂಶವೆಂದರೆ ಕಿಯಾ ಸೆಲ್ಟೋಸ್, ಎಂಜಿ ಹೆಕ್ಟರ್ ಮತ್ತು ಟಾಟಾ ಹ್ಯಾರಿಯರ್ ಕಾರು ಪ್ರಬಲ ಪೈಪೋಟಿಯು ಮಹೀಂದ್ರಾ ಎಕ್ಸ್‌ಯುವಿ 500 ಮಾರಾಟದ ಕುಸಿತಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಆದರೆ ಪ್ರಬಲ ಪೈಪೋಟಿಯ ನಡುವೆ 968 ಯುನಿಟ್‍ಗಳು ಮಾರಾಟ ದಾಖಲಾಗಿದೆ. ಪ್ರಬಲ ಪೈಪೋಟಿಯ ನಡುವೆ 968 ಯುನಿಟ್ ಮಾರಾಟವಾಗುದಕ್ಕೆ ಅದರ ಆಕರ್ಷಕ ಲುಕ್ ಮತ್ತು ವೈಶಿಷ್ಟ್ಯತೆಗಳೇ ಕಾರಣ ಎಂದು ಹೇಳಬಹುದು.

ಮಹೀಂದ್ರಾ ಮರಾಜೋ ಮಾರಾಟವು ಎಂಪಿವಿಯಲ್ಲಿನ ಪೈಪೋಟಿಯಿಂದಾಗಿ ನಿಧಾನಗತಿಯಲ್ಲಿದೆ. ಈ ವರ್ಷದ ಆಗಸ್ಟ್ ತಿಂಗಳಲ್ಲಿ 697 ಯುನಿಟ್‍ಗಳ ಮಾರಾಟವನ್ನು ದಾಖಲಿಸಿದೆ. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ 1,7262 ಯುನಿಟ್‍ಗಳ ಮಾರಾಟವಾಗಿದೆ. ಕಾರು ಬಿಡುಗಡೆಯ ಸಮಯದಲ್ಲಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರಕಿತ್ತು. ಆದರೆ ದಿನಗಳು ಕಳೆದಂತೆ ಮಾರಾಟವಾಗುವ ಸಂಖ್ಖೆಯಲ್ಲಿ ಕುಸಿತ ಕಂಡಿದೆ.

ಮಹೀಂದ್ರಾ ಜೈಲು ಕಾರು ಈ ವರ್ಷದ ಆಗಸ್ಟ್ ತಿಂಗಳ ಕಾರು ಮಾರಾಟದ ಅಂಕಿ ಅಂಶಗಳ ಪ್ರಕಾರ 356 ಯುನಿಟ್‍ಗಳು ಮಾರಾಟವಾಗಿದೆ. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ 581 ಯುನಿಟ್‍ಗಳು ಮಾರಾಟ ದಾಖಲಿಸಿದೆ. ಮಹೀಂದ್ರಾ ಥಾರ್ ಈ ವರ್ಷ ಆಗಸ್ಟ್ ತಿಂಗಳಲ್ಲಿ 326 ಯುನಿಟ್‍ಗಳು ಮಾರಾಟವಾಗಿದ್ದರೆ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ 669 ಯುನಿಟ್‍ಗಳು ಮಾರಾಟವಾಗಿದೆ ಎಂದು ದಾಖಲಾಗಿದೆ.
MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಮೈಕ್ರೊ ಎಸ್‍ಯುವಿ ವಿಭಾಗದ ಮಹೀಂದ್ರಾ ಕೆಯುವಿ 100 ಕಾರು ಮಾರಾಟದಲ್ಲಿ ದೊಡ್ಡ ಪ್ರಮಾಣದ ಕುಸಿತ ಕಂಡಿದೆ. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಬರೊಬ್ಬರಿ 1,173 ಯುನಿಟ್‍ಗಳು ಮಾರಾಟವಾಗಿದೆ ಎಂದು ದಾಖಲಾಗಿದೆ. ಆದರೆ ಈ ವರ್ಷದ ಆಗಸ್ಟ್ ತಿಂಗಳಲ್ಲಿ ಕೇವಲ 169 ಯುನಿಟ್‍ಗಳು ಮಾರಾಟವಾಗಿದೆ. ಕಳೆದ ವರ್ಷದ ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಶೇ. 86 ರಷ್ಟು ಕುಸಿತ ಕಂಡಿದೆ.
MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಮಹೀಂದ್ರಾ ಕಂಪನಿಯ ಆಗಸ್ಟ್ ತಿಂಗಳ ಮಾರಾಟದಲ್ಲಿ ವೆರಿಟೊ ಕಂಪನಿಯು 110 ಯುನಿಟ್‍ಗಳೂ ಮಾರಾಟವಾಗಿದೆ, ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ 145 ಯುನಿಟ್‍ಗಳ ಮಾರಾಟವನ್ನು ದಾಖಲಿಸಿದೆ. 71 ಯುನಿಟ್‍ಗಳು ಮಾರಾಟವಾಗುವ ಮೂಲಕ ಅಲ್ತುರಾಸ್ ಜಿ4 ಕೊನೆ ಸ್ಥಾನವನ್ನು ಪಡೆದಿದೆ.
MOST READ: ಭಾರತದಲ್ಲಿ ಐಕಾನಿಕ್ ಯಜ್ಡಿ ಬೈಕ್‌ಗಳ ಮರುಬಿಡುಗಡೆ ಪಕ್ಕಾ

ಆಟೋಮೊಬೈಲ್ ಪಾತಳಕ್ಕೆ ಕುಸಿತ ಕಂಡಿರುವ ಹಿನ್ನಲೆಯಲ್ಲಿ ಜನಪ್ರಿಯ ಎಸ್‍ಯುವಿಗಳನ್ನು ಹೊಂದಿರುವ ಮಹೀಂದ್ರಾ ಕುಸಿತವನ್ನು ಕಂಡಿದರು ಅದು ತತ್ಕಾಲಿಕ ಕುಸಿತ ಎಂದು ಹೇಳಬಹುದು. ಟಾಟಾ ಸಂಸ್ಥೆಯು ಕಾರು ಮಾರಾಟದಲ್ಲಿ ಶೇ. 51ರಷ್ಟು ಕುಸಿತ ಕಂಡಿದರೆ ಹೋಂಡಾ ಸಂಸ್ಥೆಯು ಶೇ.60 ರಷ್ಟು ಕುಸಿತ ಕಂಡಿದೆ. ಮಹೀಂದ್ರಾ ಅನೇಕ ಮಾದರಿಗಳಲ್ಲಿ ಮುಂದಿನ ದಿನಗಳಲ್ಲಿ ಫೇಸ್‍ಲಿಫ್ಟ್ ಬಿಡುಗಡೆ ಮಾಡಲಿದೆ ಇದರ ಮೂಲಕ ಮಾರಾಟವನ್ನು ಹೆಚ್ಚಿಸಬಹುದು ಎಂದು ನಿರೀಕ್ಷಿಸುತ್ತೇವೆ.


Click it and Unblock the Notifications