ದೀಪಾವಳಿ ಸಂಭ್ರಮದಲ್ಲಿ ಭರ್ಜರಿ ಕಾರು ಮಾರಾಟ ಮಾಡಿದ ಮಹೀಂದ್ರಾ

ಹೊಸ ಕಾರು ಮಾರಾಟದಲ್ಲಿ ಸತತ ಹಿನ್ನಡೆ ಅನುಭವಿಸಿದ್ದ ಆಟೋ ಉತ್ಪಾದನಾ ಸಂಸ್ಥೆಗಳಿಗೆ ದೀಪಾವಳಿ ಮತ್ತು ಧಂತೇರಾಸ್ ಸಂಭ್ರಮಾಚರಣೆಯು ಭರ್ಜರಿ ಆದಾಯ ತಂದುಕೊಟ್ಟಿದ್ದು, ಮಹೀಂದ್ರಾ ಸೇರಿದಂತೆ ಬಹುತೇಕ ಕಾರು ಉತ್ಪಾದನಾ ಸಂಸ್ಥೆಗಳು ನೀರಿಕ್ಷೆಗೂ ಮೀರಿ ಹೊಸ ಕಾರುಗಳನ್ನು ಮಾರಾಟ ಮಾಡಿವೆ.

ದೀಪಾವಳಿ ಸಂಭ್ರಮದಲ್ಲಿ ಭರ್ಜರಿ ಕಾರು ಮಾರಾಟ ಮಾಡಿದ ಮಹೀಂದ್ರಾ

ದಸರಾ ಮತ್ತು ದೀಪಾವಳಿಗೂ ಮುನ್ನ ಭಾರೀ ರಿಯಾಯ್ತಿ ಮತ್ತು ವಿವಿಧ ಆಕರ್ಷಕ ಆಫರ್‌ಗಳ ಹೊರತಾಗಿಯೂ ಕಾರು ಮಾರಾಟದಲ್ಲಿ ಹಿನ್ನಡೆ ಅನುಭವಿಸುತ್ತಿರುವ ಬಹುತೇಕ ಕಾರು ಉತ್ಪಾದನಾ ಸಂಸ್ಥೆಗಳು ವರ್ಷದ ಆರಂಭದಿಂದಲೂ ಸತತ ಹಿನ್ನಡೆಯ ನಡುವೆ ಇದೀಗ ದೀಪಾವಳಿ ಸಂಭ್ರಮವು ತುಸು ಸಮಾಧಾನಕ್ಕೆ ಕಾರಣವಾಗಿದ್ದು, ತೀವ್ರ ಪೈಪೋಟಿಯ ನಡುವೆಯೂ ಮಹೀಂದ್ರಾ ಸಂಸ್ಥೆಯು ಬರೋಬ್ಬರಿ 13,500 ಕಾರುಗಳನ್ನು ಒಂದೇ ದಿನದಲ್ಲಿ ವಿತರಣೆ ಮಾಡಿದೆ.

ದೀಪಾವಳಿ ಸಂಭ್ರಮದಲ್ಲಿ ಭರ್ಜರಿ ಕಾರು ಮಾರಾಟ ಮಾಡಿದ ಮಹೀಂದ್ರಾ

ಎಕ್ಸ್‌ಯುವಿ300, ಬೊಲೆರೊ, ಸ್ಕಾರ್ಪಿಯೋ ಮತ್ತು ಎಕ್ಸ್‌ಯುವಿ500 ಕಾರುಗಳು ಹೆಚ್ಚಿನ ಮಟ್ಟದಲ್ಲಿ ಮಾರಾಟವಾಗಿದ್ದು, ತದನಂತರದ ಸ್ಥಾನದಲ್ಲಿ ಟಿಯುವಿ300, ಟಿಯುವಿ300 ಪ್ಲಸ್ ಮತ್ತು ಜಿಟೋ ವಾಣಿಜ್ಯ ವಾಹನ ಕೂಡಾ ಗ್ರಾಹಕರ ಆಕರ್ಷಣೆ ಕಾರಣವಾಗಿದೆ.

ದೀಪಾವಳಿ ಸಂಭ್ರಮದಲ್ಲಿ ಭರ್ಜರಿ ಕಾರು ಮಾರಾಟ ಮಾಡಿದ ಮಹೀಂದ್ರಾ

ವರ್ಷದ ಆರಂಭದಿಂದಲೂ ಹೊಸ ವಾಹನ ಮಾರಾಟದಲ್ಲಿ ಸತತ ಹಿನ್ನಡೆ ಅನುಭವಿಸಿದ್ದ ಆಟೋ ಉತ್ಪಾದನಾ ಸಂಸ್ಥೆಗಳಿಗೆ ದೀಪಾವಳಿ ಉತ್ಸವವು ಸಂಭ್ರಮಕ್ಕೆ ಕಾರಣವಾಗಿದ್ದು, ಮಾರುತಿ ಸುಜುಕಿ, ಟೊಯೊಟಾ, ಕಿಯಾ ಮೋಟಾರ್ಸ್, ಟಾಟಾ ಕೂಡಾ ಇದೇ ವೇಳೆ ಭರ್ಜರಿ ಪ್ರಮಾಣದ ಕಾರುಗಳನ್ನು ವಿತರಣೆ ಮಾಡಿವೆ.

ದೀಪಾವಳಿ ಸಂಭ್ರಮದಲ್ಲಿ ಭರ್ಜರಿ ಕಾರು ಮಾರಾಟ ಮಾಡಿದ ಮಹೀಂದ್ರಾ

ಇನ್ನು ವರ್ಷಾಂತ್ಯದೊಳಗೆ ಬಿಎಸ್-6 ಎಂಜಿನ್ ಕಾರುಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿರುವ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ರೋಡ್ ಟೆಸ್ಟಿಂಗ್ ಪ್ರಕ್ರಿಯೆ ಮೇಲೆ ಹೆಚ್ಚಿನ ಒತ್ತು ನೀಡುತ್ತಿದ್ದು, ಮಹೀಂದ್ರಾ ಕೂಡಾ ತನ್ನ ಜನಪ್ರಿಯ ಕಾರುಗಳನ್ನು ಬಿಎಸ್-6 ವೈಶಿಷ್ಟ್ಯತೆಯೊಂದಿಗೆ ಉನ್ನತೀಕರಣ ಕೈಗೊಂಡಿರುವುದಲ್ಲದೇ ಹೊಸ ಮಾದರಿಯ ಎಲೆಕ್ಟ್ರಿಕ್ ಕಾರುಗಳ ಮಾರಾಟಕ್ಕೂ ಚಾಲನೆ ನೀಡಲಿದೆ. 2020ರ ಏಪ್ರಿಲ್ 1 ರಿಂದ ಜಾರಿಗೆ ಬರಲಿರುವ ಬಿಎಸ್-6 ನಿಯಮಕ್ಕೆ ಅನುಗುಣವಾಗಿ ಬಹುತೇಕ ಕಾರು ಉತ್ಪಾದನಾ ಸಂಸ್ಥೆಗಳು ತಮ್ಮ ಜನಪ್ರಿಯ ಕಾರುಗಳನ್ನು ಉನ್ನತಿಕರಿಸುತ್ತಿದೆ.

ದೀಪಾವಳಿ ಸಂಭ್ರಮದಲ್ಲಿ ಭರ್ಜರಿ ಕಾರು ಮಾರಾಟ ಮಾಡಿದ ಮಹೀಂದ್ರಾ

ಮಹೀಂದ್ರಾ ಸಂಸ್ಥೆಯು ನೆಕ್ಸ್ಟ್ ಜನರೇಷನ್ ಕಾರು ಮಾದರಿಗಳ ಜೊತೆಗೆ ಫೇಸ್‌ಲಿಫ್ಟ್ ಮಾದರಿಯನ್ನು ಸಹ ಹೊಸ ನಿಯಮಕ್ಕೆ ಅನುಗುಣವಾಗಿ ಬಿಡುಗಡೆ ಮಾಡಲು ನಿರ್ಧರಿಸಿದೆ. ಹೀಗಾಗಿ ಮುಂಬರುವ ಒಂದು ವರ್ಷದೊಳಗೆ ನೆಕ್ಸ್ ಜನರೇಷನ್ ಮಾದರಿಗಳಾದ ಎಕ್ಸ್‌ಯುವಿ500, ಥಾರ್, ಬೊಲೆರೊ, ಸ್ಕಾರ್ಪಿಯೋ, ಫೇಸ್‌ಲಿಫ್ಟ್ ಮಾದರಿಗಳಾದ ಎಕ್ಸ್‌ಯುವಿ300, ಟಿಯುವಿ300 ಪ್ಲಸ್ ಮತ್ತು ಹೊಸದಾಗಿ ಎಕ್ಸ್‌ಯುವಿ300 7 ಸೀಟರ್ ಆವೃತ್ತಿಯನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ದೀಪಾವಳಿ ಸಂಭ್ರಮದಲ್ಲಿ ಭರ್ಜರಿ ಕಾರು ಮಾರಾಟ ಮಾಡಿದ ಮಹೀಂದ್ರಾ

ಇದಲ್ಲದೇ ಫೋರ್ಡ್ ಜೊತೆ ಹೊಸ ಕಾರುಗಳ ಅಭಿವೃದ್ದಿ ಮತ್ತು ಮಾರಾಟಕ್ಕೆ ಕೈಜೋಡಿಸಿರುವ ಮಹೀಂದ್ರಾ ಸಂಸ್ಥೆಯು ಸಹಭಾಗಿತ್ವ ಯೋಜನೆಯಲ್ಲಿ ಆಸ್ಪೈರ್ ಎಲೆಕ್ಟ್ರಿಕ್ ಮತ್ತು ಎಕ್ಸ್‌ಯುವಿ100 ಎಲೆಕ್ಟ್ರಿಕ್ ಕಾರುಗಳನ್ನು 2020ರ ಮಧ್ಯಂತರದಲ್ಲಿ ಬಿಡುಗಡೆ ಮಾಡಲಿದೆ.

MOST READ: ಮೂರನೇ ವ್ಯಕ್ತಿಯ ಕೈಗೆ ಕಾರು ಕೊಟ್ಟ ಮಾಲೀಕನಿಗೆ ಶಾಕ್ ಕೊಟ್ಟ ವಿಮಾ ಕಂಪನಿ..!

ದೀಪಾವಳಿ ಸಂಭ್ರಮದಲ್ಲಿ ಭರ್ಜರಿ ಕಾರು ಮಾರಾಟ ಮಾಡಿದ ಮಹೀಂದ್ರಾ

ಸದ್ಯ ದೇಶಾದ್ಯಂತ ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ಹೊಸ ವಾಹನಗಳ ಎಂಜಿನ್‌ ತಂತ್ರಜ್ಞಾನದಲ್ಲಿ ಮಹತ್ವದ ಬದಲಾವಣೆ ತರುತ್ತಿರುವ ಕೇಂದ್ರ ಸರ್ಕಾರವು ಆಟೋ ಉತ್ಪಾದನಾ ಸಂಸ್ಥೆಗಳಿಗೆ ಕೆಲವು ಕಡ್ಡಾಯ ನಿಯಮಗಳನ್ನು ಜಾರಿ ತಂದಿರುವುದು ಮಹೀಂದ್ರಾ ನೆಕ್ಸ್ಟ್ ಜನರೇಷನ್ ಮತ್ತು ಫೇಸ್‌ಲಿಫ್ಟ್ ಭಾರೀ ಬದಲಾವಣೆ ಹೊಂದಿರಲಿವೆ.

MOST READ: 2020ರ ಆಟೋ ಎಕ್ಸ್‌ಪೋದಲ್ಲಿ ಸದ್ದು ಮಾಡಲಿವೆ ಈ ಹೊಸ ಎಸ್‌ಯುವಿ ಕಾರುಗಳು..!

ದೀಪಾವಳಿ ಸಂಭ್ರಮದಲ್ಲಿ ಭರ್ಜರಿ ಕಾರು ಮಾರಾಟ ಮಾಡಿದ ಮಹೀಂದ್ರಾ

ಇದರಲ್ಲಿ ಮಹೀಂದ್ರಾ ನಿರ್ಮಾಣದ ಫೇಸ್‌ಲಿಫ್ಟ್ ಮಾದರಿಗಳಾದ ಟಿಯುವಿ300 ಪ್ಲಸ್, ಎಕ್ಸ್‌ಯುವಿ300, ನ್ಯೂ ಜನರೇಷನ್ ಕಾರು ಮಾದರಿಗಳಾದ ಸ್ಕಾರ್ಪಿಯೋ, ಎಕ್ಸ್‌ಯುವಿ500, ಥಾರ್ ಕಾರುಗಳು ಹೊಸ ಮಾದರಿಯ ಬಿಎಸ್-6 ಎಂಜಿನ್ ಸೌಲಭ್ಯದೊಂದಿಗೆ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದ್ದು, ಮಾಹಿತಿಗಳ ಪ್ರಕಾರ ಮಹೀಂದ್ರಾ ಬಿಎಸ್-6 ಕಾರುಗಳು ಮುಂದಿನ ನಾಲ್ಕೈದು ತಿಂಗಳ ಅವಧಿಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿವೆ.

MOST READ: ನೀರು ಮತ್ತು ಆಲ್ಕೋಹಾಲ್‍‍ನಿಂದ ಚಲಿಸಲಿದೆ ಈ ಎಂಜಿನ್..!

ದೀಪಾವಳಿ ಸಂಭ್ರಮದಲ್ಲಿ ಭರ್ಜರಿ ಕಾರು ಮಾರಾಟ ಮಾಡಿದ ಮಹೀಂದ್ರಾ

ಸ್ಕಾರ್ಪಿಯೋ, ಎಕ್ಸ್‌ಯುವಿ500, ಎಕ್ಸ್‌ಯುವಿ300, ಟಿಯುವಿ300 ಪ್ಲಸ್ ಮತ್ತು ಥಾರ್ ನ್ಯೂ ಜನರೇಷನ್ ಕಾರುಗಳಲ್ಲಿ ಬಿಎಸ್-6 ಎಂಜಿನ್ ಅಳವಡಿಸಿರುವುದು ಮಾಲಿನ್ಯ ತಡೆಯುವಲ್ಲಿ ಸಾಕಷ್ಟು ಸಹಕಾರಿಯಾಗಲಿದ್ದು, ಶೇ.25ರಷ್ಚು ಹೊಗೆ ಉಗುಳುವ ಪ್ರಮಾಣ ಕಡಿಮೆಯಾಗಿದ್ದಲ್ಲಿ ಶೇ. 10ರಷ್ಟು ಮೈಲೇಜ್ ಪ್ರಮಾಣದಲ್ಲೂ ಏರಿಕೆಯಾಗಲಿದೆ.

ದೀಪಾವಳಿ ಸಂಭ್ರಮದಲ್ಲಿ ಭರ್ಜರಿ ಕಾರು ಮಾರಾಟ ಮಾಡಿದ ಮಹೀಂದ್ರಾ

ಇದರೊಂದಿಗೆ ಹೊಸ ಕಾರುಗಳ ಬೆಲೆಯಲ್ಲೂ ತುಸು ಏರಿಕೆಯಾಗಲಿದ್ದು, ಬಿಎಸ್-4 ಕಾರುಗಳ ಬೆಲೆಗಳಿಂತಲೂ ಬಿಎಸ್-6 ಕಾರುಗಳ ಬೆಲೆಯು ತಾಂತ್ರಿಕ ಸೌಲಭ್ಯಗಳ ಅಳವಡಿಕೆಯ ಆಧಾರದ ಮೇಲೆ ರೂ. 1.50 ಲಕ್ಷದಿಂದ ರೂ.2.50 ಲಕ್ಷದ ತನಕ ಹೆಚ್ಚಿನ ಬೆಲೆ ಪಡೆದುಕೊಳ್ಳಬಹುದು ಎಂದು ನೀರಿಕ್ಷಿಸಲಾಗಿದೆ.

More from DriveSpark

Article Published On: Tuesday, October 29, 2019, 10:53 [IST]
English summary
Mahindra Delivers 13,500 Vehicles In A Single Day On Dhanteras. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+