2020ರ ಆಟೋ ಎಕ್ಸ್‌ಪೋದಲ್ಲಿ ಸದ್ದು ಮಾಡಲಿವೆ ಈ ಹೊಸ ಎಸ್‌ಯುವಿ ಕಾರುಗಳು..!

2020ರ ಆಟೋ ಎಕ್ಸ್‌ಪೋ ಮುಂದಿನ ವರ್ಷದ ಫೆಬ್ರವರಿಯಲ್ಲಿ ಭಾರತದಲ್ಲಿ ನಡೆಯಲಿದೆ. ಈ ಆಟೋ ಎಕ್ಸ್‌ಪೋದಲ್ಲಿ ಹಲವು ಹೊಸ ವಾಹನಗಳನ್ನು ಬಿಡುಗಡೆಗೊಳಿಸಿದರೆ, ಇನ್ನೂ ಹಲವಾರು ವಾಹನಗಳನ್ನು ಅನಾವರಣಗೊಳಿಸಲಾಗುವುದು.

2020ರ ಆಟೋ ಎಕ್ಸ್‌ಪೋದಲ್ಲಿ ಸದ್ದು ಮಾಡಲಿವೆ ಈ ಹೊಸ ಎಸ್‌ಯುವಿ ಕಾರುಗಳು..!

ವಿವಿಧ ವಾಹನ ತಯಾರಕ ಕಂಪನಿಗಳು ತಮ್ಮ ಹೊಸ ವಾಹನಗಳನ್ನು ಭಾರತದ ಈ ಅತಿದೊಡ್ಡ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಿದ್ದಾರೆ. ಹಾಗಾದರೆ 2020ರ ಆಟೋ ಎಕ್ಸ್‌ಪೋದಲ್ಲಿ ಯಾವ ಎಲ್ಲಾ ಕಾರುಗಳನ್ನು ನೀವು ನಿರೀಕ್ಷಿಸಬಹುದು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

2020ರ ಆಟೋ ಎಕ್ಸ್‌ಪೋದಲ್ಲಿ ಸದ್ದು ಮಾಡಲಿವೆ ಈ ಹೊಸ ಎಸ್‌ಯುವಿ ಕಾರುಗಳು..!

ಹ್ಯುಂಡೈ ಕ್ರೆಟಾ

ಹ್ಯುಂಡೈ ಕ್ರೆಟಾ ದೇಶಿಯ ಮಾರುಕಟ್ಟೆಯಲ್ಲಿರುವ ಅತ್ಯಂತ ಯಶಸ್ವಿ ಕಾರುಗಳಲ್ಲಿ ಒಂದಾಗಿದೆ. ಆದರೆ ಹೊಸ ಕಿಯಾ ಸೆಲ್ಟೋಸ್‌ ಬಿಡುಗಡೆಯಾದ ನಂತರ ದೇಶಿಯ ಮಾರುಕಟ್ಟೆಯಲ್ಲಿರುವ ಮಧ್ಯಮ ಗಾತ್ರದ ಎಸ್‍‍ಯುವಿಗಳ ಮಾರಾಟದ ಮೇಲೆ ಪರಿಣಾಮ ಬೀರಿದೆ.

2020ರ ಆಟೋ ಎಕ್ಸ್‌ಪೋದಲ್ಲಿ ಸದ್ದು ಮಾಡಲಿವೆ ಈ ಹೊಸ ಎಸ್‌ಯುವಿ ಕಾರುಗಳು..!

ಹ್ಯುಂಡೈ ಈಗಾಗಲೇ ದೇಶಿಯ ಮಾರುಕಟ್ಟೆಗಾಗಿ ಹೊಸ ಕ್ರೆಟಾವನ್ನು ಪರೀಕ್ಷಿಸುತ್ತಿದೆ. ಹೊಸ ಕ್ರೆಟಾ ಚೀನಾದ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಮಾದರಿಯನ್ನು ಹೋಲುತ್ತದೆ. ಹೊಸ ಕ್ರೆಟಾಗಳು ಕಿಯಾ ಸೆಲ್ಟೋಸ್‌ನಲ್ಲಿರುವಂತಹ ಎಂಜಿನ್ ಹೊಂದಿರಲಿದೆ. ಈ ವಿಭಾಗದಲ್ಲಿ ತೀವ್ರ ಸ್ಪರ್ಧೆ ಇದೆ ಎಂದು ಸಾಬೀತುಪಡಿಸುತ್ತದೆ.

2020ರ ಆಟೋ ಎಕ್ಸ್‌ಪೋದಲ್ಲಿ ಸದ್ದು ಮಾಡಲಿವೆ ಈ ಹೊಸ ಎಸ್‌ಯುವಿ ಕಾರುಗಳು..!

ಟಾಟಾ ಬಜಾರ್ಡ್ / ಕ್ಯಾಸಿನಿ

ಜಿನೀವಾ ಮೋಟಾರ್ ಶೋದಲ್ಲಿ ಅನಾವರಣಗೊಂಡ ಟಾಟಾ ಬಜಾರ್ಡ್ ಮುಂದಿನ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಟಾಟಾ ಮೋಟಾರ್ಸ್ 2020ರ ಆಟೋ ಎಕ್ಸ್‌ಪೋದಲ್ಲಿ ಕಾರಿನ ಉತ್ಪಾದನಾ ಆವೃತ್ತಿಯನ್ನು ಪ್ರದರ್ಶಿಸಲಿದೆ.

2020ರ ಆಟೋ ಎಕ್ಸ್‌ಪೋದಲ್ಲಿ ಸದ್ದು ಮಾಡಲಿವೆ ಈ ಹೊಸ ಎಸ್‌ಯುವಿ ಕಾರುಗಳು..!

ಹೊಸ ಬಜಾರ್ಡ್ ಅನೇಕ ರೀರಿಯಲ್ಲಿ ಹ್ಯಾರಿಯರ್ ಕಾರ್ ಅನ್ನು ಹೋಲುತ್ತದೆ. ಇದರ ಜೊತೆಗೆ ಆ ಕಾರಿನಲ್ಲಿರುವಂತಹ ಎಂಜಿನ್‌ ಕೂಡ ಹೊಂದಿದೆ. ಆದರೆ ಬಜಾರ್ಡ್, 7 ಸೀಟುಗಳ ವಾಹನವಾಗಿದೆ. ಇದು ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಕಂಪನಿಯು ಮಾರಾಟ ಮಾಡಲಿರುವ ಅತ್ಯಂತ ದುಬಾರಿಯಾದ ವಾಹನವಾಗಲಿದೆ.

2020ರ ಆಟೋ ಎಕ್ಸ್‌ಪೋದಲ್ಲಿ ಸದ್ದು ಮಾಡಲಿವೆ ಈ ಹೊಸ ಎಸ್‌ಯುವಿ ಕಾರುಗಳು..!

ಟಾಟಾ ಹಾರ್ನ್‍‍ಬಿಲ್

ಈ ವರ್ಷದ ಆರಂಭದಲ್ಲಿ ನಡೆದಿದ್ದ ಜಿನೀವಾ ಮೋಟಾರ್ ಶೋನಲ್ಲಿ ಎಚ್ 2 ಎಕ್ಸ್ ಅನ್ನು ಪ್ರದರ್ಶಿಸಲಾಗಿತ್ತು. ಉತ್ಪಾದನಾ ಹಂತದಲ್ಲಿರುವ ಈ ವಾಹನವನ್ನು 2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಗುತ್ತದೆ. ಹಾರ್ನ್‌ಬಿಲ್ ಎಂಬ ಕೋಡ್‍‍ನೇಮ್ ಹೊಂದಿರುವ ಈ ವಾಹನವು ಮೈಕ್ರೊ ಎಸ್‍‍ಯುವಿ ಸೆಗ್‍‍ಮೆಂಟಿನಲ್ಲಿರಲಿದೆ.

MOST READ: ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

2020ರ ಆಟೋ ಎಕ್ಸ್‌ಪೋದಲ್ಲಿ ಸದ್ದು ಮಾಡಲಿವೆ ಈ ಹೊಸ ಎಸ್‌ಯುವಿ ಕಾರುಗಳು..!

ಹಾರ್ನ್‌ಬಿಲ್ ಸಬ್ 4 ಮೀಟರ್ ಎಸ್‍‍ಯುವಿಯ ಕೆಳಗಿನ ಸ್ಥಾನದಲ್ಲಿರಲಿದೆ. ಹ್ಯಾಚ್‍‍ಬ್ಯಾಕ್ ಕಾರುಗಳಿಗೆ ಪರ್ಯಾಯವಾದ ಕಾರುಗಳನ್ನು ಬಯಸುವವರಿಗೆ ಈ ಕಾರ್ ಅನ್ನು ನೀಡಲಾಗುವುದು. ಈ ಕಾರ್ ಅನ್ನು ಟಾಟಾದ ಇಂಪ್ಯಾಕ್ಟ್ 2.0 ಡಿಸೈನ್ ಫಿಲಾಸಫಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದ್ದು, ಆಲ್ಫಾ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗುವುದು.

MOST READ: ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?

2020ರ ಆಟೋ ಎಕ್ಸ್‌ಪೋದಲ್ಲಿ ಸದ್ದು ಮಾಡಲಿವೆ ಈ ಹೊಸ ಎಸ್‌ಯುವಿ ಕಾರುಗಳು..!

ಕಿಯಾ ಕ್ಯೂ‍‍ವೈ‍ಐ

ಸೆಲ್ಟೋಸ್ ಕಾರ್ ಅನ್ನು ಯಶಸ್ವಿಯಾಗಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ ನಂತರ ಕಿಯಾ ಕಂಪನಿಯು ಕಾರ್ನಿವಲ್ ಎಂಪಿವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. 2020ರ ಆಟೋ ಎಕ್ಸ್‌ಪೋದಲ್ಲಿ ಕಿಯಾ ಕಂಪನಿಯು ಹೊಸ ಕ್ಯೂವೈಐ ಸಬ್ -4 ಮೀಟರ್ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಪ್ರದರ್ಶಿಸಲಿದೆ.

MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ಕಾರಣವೇನು?

2020ರ ಆಟೋ ಎಕ್ಸ್‌ಪೋದಲ್ಲಿ ಸದ್ದು ಮಾಡಲಿವೆ ಈ ಹೊಸ ಎಸ್‌ಯುವಿ ಕಾರುಗಳು..!

ಈ ಎಸ್‍‍ಯುವಿಯು ಬಿಡುಗಡೆಯಾದ ನಂತರ ಫೋರ್ಡ್ ಇಕೋಸ್ಪೋರ್ಟ್, ಹ್ಯುಂಡೈ ವೆನ್ಯೂಗಳಿಗೆ ಪೈಪೋಟಿ ನೀಡಲಿದೆ. ಈ ಎಸ್‍‍ಯುವಿಯನ್ನು 2020ರ ಆಗಸ್ಟ್ ವೇಳೆಗೆ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಈ ಎಸ್‍‍ಯುವಿಯಲ್ಲಿ ಹ್ಯುಂಡೈ ವೆನ್ಯೂವಿನಲ್ಲಿರುವಂತಹ 1.0 ಲೀಟರ್ ಎಂಜಿನ್‌ ಅಳವಡಿಸುವ ಸಾಧ್ಯತೆಗಳಿವೆ.

2020ರ ಆಟೋ ಎಕ್ಸ್‌ಪೋದಲ್ಲಿ ಸದ್ದು ಮಾಡಲಿವೆ ಈ ಹೊಸ ಎಸ್‌ಯುವಿ ಕಾರುಗಳು..!

ರೆನಾಲ್ಟ್ ಹೆಚ್‍‍ಬಿ‍‍ಸಿ

ರೆನಾಲ್ಟ್ ಹೆಚ್‌ಬಿಸಿ, ಸಿಎಮ್‌ಎಫ್ ಎ ಪ್ಲಸ್ ಆಧಾರಿತ ಎಸ್‍‍ಯುವಿಯಾಗಿದೆ. ಈ ಎಸ್‍‍ಯುವಿಯನ್ನು 2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಗುವುದು. ಈ ಹೊಸ ಕಾರು ದೇಶಿಯ ಮಾರುಕಟ್ಟೆಯಲ್ಲಿ ಫೋರ್ಡ್ ಇಕೋಸ್ಪೋರ್ಟ್ ಹಾಗೂ ಮಾರುತಿ ಸುಜುಕಿ ವಿಟಾರಾ ಬ್ರಿಝಾ ಕಾರುಗಳಿಗೆ ಪೈಪೋಟಿ ನೀಡುತ್ತದೆ.

2020ರ ಆಟೋ ಎಕ್ಸ್‌ಪೋದಲ್ಲಿ ಸದ್ದು ಮಾಡಲಿವೆ ಈ ಹೊಸ ಎಸ್‌ಯುವಿ ಕಾರುಗಳು..!

ಹೆಚ್‌ಬಿಸಿಯ ಉತ್ಪಾದನಾ ಆವೃತ್ತಿಯಲ್ಲಿರುವ ಇಂಟಿರಿಯರ್ ರೆನಾಲ್ಟ್ ಟ್ರೈಬರ್‌ ಅನ್ನು ಹೋಲುತ್ತದೆ. ಟ್ರೈಬರ್‍‍ನಲ್ಲಿರುವಂತಹ ಫೀಚರ್‍‍ಗಳನ್ನು ಈ ಕಾರಿನಲ್ಲಿಯೂ ನೀಡಲಾಗುವುದು. ಹೆಚ್‌ಬಿಸಿಯಲ್ಲಿ ಟ್ರೈಬರ್‌ನಲ್ಲಿರುವಂತಹ ಎಂಜಿನ್ ಅಳವಡಿಸಲಾಗುವುದು.

2020ರ ಆಟೋ ಎಕ್ಸ್‌ಪೋದಲ್ಲಿ ಸದ್ದು ಮಾಡಲಿವೆ ಈ ಹೊಸ ಎಸ್‌ಯುವಿ ಕಾರುಗಳು..!

ಟಾಟಾ ನೆಕ್ಸಾನ್

ಟಾಟಾ ಕಂಪನಿಯು ಸದ್ಯಕ್ಕೆ ನೆಕ್ಸಾನ್ ಕಾರಿನ ಫೇಸ್‌ಲಿಫ್ಟೆಡ್ ಆವೃತ್ತಿಯನ್ನು ಪರೀಕ್ಷಿಸುತ್ತಿದೆ. ಫೇಸ್‍ಲಿಫ್ಟ್ ಕಾರಿನಲ್ಲಿ ಬಿಎಸ್ 6 ಎಂಜಿನ್‌ ಅಳವಡಿಸಲಿದೆ. ಸಂಪೂರ್ಣವಾಗಿ ನವೀಕರಿಸಲ್ಪಡುವುದರ ಜೊತೆಗೆ ನೆಕ್ಸಾನ್ ಕಾರು ಹೊಸ ಮುಂಭಾಗವನ್ನು ಹೊಂದಲಿದೆ.

2020ರ ಆಟೋ ಎಕ್ಸ್‌ಪೋದಲ್ಲಿ ಸದ್ದು ಮಾಡಲಿವೆ ಈ ಹೊಸ ಎಸ್‌ಯುವಿ ಕಾರುಗಳು..!

ಹೊಸ ಮುಂಭಾಗವು ಮಾರುಕಟ್ಟೆಯಲ್ಲಿರುವ ಕಾರಿನ ಮುಂಭಾಗಕ್ಕಿಂತ ವಿಭಿನ್ನವಾಗಿರಲಿದೆ. ಹೊಸ ನೆಕ್ಸಾನ್ ಕಾರಿನ ಕ್ಯಾಬಿನ್‍‍ನಲ್ಲಿ ಹಲವು ಹೊಸ ಫೀಚರ್‍‍ಗಳನ್ನು ಅಳವಡಿಸಲಾಗುವುದು. ಟಾಟಾ ಕಂಪನಿಯು 2020ರ ಆಟೋ ಎಕ್ಸ್‌ಪೋದಲ್ಲಿ ನೆಕ್ಸಾನ್‌ನ ಎಲೆಕ್ಟ್ರಿಕ್ ಆವೃತ್ತಿಯನ್ನು ಸಹ ಪ್ರದರ್ಶಿಸಲಿದೆ.

2020ರ ಆಟೋ ಎಕ್ಸ್‌ಪೋದಲ್ಲಿ ಸದ್ದು ಮಾಡಲಿವೆ ಈ ಹೊಸ ಎಸ್‌ಯುವಿ ಕಾರುಗಳು..!

ಮಹೀಂದ್ರಾ ಥಾರ್

ಮಹೀಂದ್ರಾ ಹೊಸ ಥಾರ್ ಅನ್ನು ಅಭಿವೃದ್ಧಿಪಡಿಸುತ್ತಿದ್ದು, ಸ್ಪಾಟ್ ಟೆಸ್ಟ್ ನಡೆಸುತ್ತಿದೆ. ಹೊಸ ಥಾರ್ ಹೆಚ್ಚು ದೊಡ್ಡದಾಗಿದ್ದು, ಮಾರುಕಟ್ಟೆಯಲ್ಲಿರುವ ಆವೃತ್ತಿಗಿಂತ ಹೆಚ್ಚು ಆರಾಮದಾಯಕವಾಗಿರುವ ನಿರೀಕ್ಷೆಗಳಿವೆ.

2020ರ ಆಟೋ ಎಕ್ಸ್‌ಪೋದಲ್ಲಿ ಸದ್ದು ಮಾಡಲಿವೆ ಈ ಹೊಸ ಎಸ್‌ಯುವಿ ಕಾರುಗಳು..!

ಹೊಸ ಥಾರ್ ಅನ್ನು ಹಾರ್ಡ್‌ಟಾಪ್ ಹಾಗೂ ಸಾಫ್ಟ್ ಟಾಪ್ ಎಂಬ ಎರಡು ಮಾದರಿಗಳಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದು. ಮಹೀಂದ್ರಾ ಕಂಪನಿಯು ಅಭಿವೃದ್ಧಿಯಲ್ಲಿರುವ ಹೊಸ ತಲೆಮಾರಿನ 2.0 ಲೀಟರ್ ಡೀಸೆಲ್ ಎಂಜಿನ್‌ ಅನ್ನು ಹೊಸ ಥಾರ್‍‍ನಲ್ಲಿ ಅಳವಡಿಸಲಿದೆ.

2020ರ ಆಟೋ ಎಕ್ಸ್‌ಪೋದಲ್ಲಿ ಸದ್ದು ಮಾಡಲಿವೆ ಈ ಹೊಸ ಎಸ್‌ಯುವಿ ಕಾರುಗಳು..!

ಮಹೀಂದ್ರಾ ಸ್ಕಾರ್ಪಿಯೊ

ಮಹೀಂದ್ರಾ ಕಂಪನಿಯು ಹೊಸ ಸ್ಕಾರ್ಪಿಯೋವನ್ನು ಅಭಿವೃದ್ಧಿ ಪಡಿಸುತ್ತಿದೆ. ಈ ಕಾರನ್ನು ಹಲವಾರು ಬಾರಿ ಮರೆಮಾಚಿ ಸ್ಪಾಟ್ ಟೆಸ್ಟ್ ಮಾಡಲಾಗಿದೆ. ಹೊಸ ಸ್ಕಾರ್ಪಿಯೋ ಮಾರುಕಟ್ಟೆಯಲ್ಲಿರುವ ಕಾರಿಗಿಂತ ವಿಭಿನ್ನವಾದ ಶೇಪ್ ಅನ್ನು ಪಡೆಯಲಿದೆ.

2020ರ ಆಟೋ ಎಕ್ಸ್‌ಪೋದಲ್ಲಿ ಸದ್ದು ಮಾಡಲಿವೆ ಈ ಹೊಸ ಎಸ್‌ಯುವಿ ಕಾರುಗಳು..!

ಹೊಸ 2.0 ಲೀಟರ್ ಎಂಜಿನ್‌ ಹೊಂದಿ ಮತ್ತಷ್ಟು ಬಲಶಾಲಿಯಾಗಲಿದೆ. ಹೊಸ ಸ್ಕಾರ್ಪಿಯೊವನ್ನು ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಿ, ನಂತರದ ದಿನಗಳಲ್ಲಿ ಬಿಡುಗಡೆಗೊಳಿಸಲಾಗುವುದು.

2020ರ ಆಟೋ ಎಕ್ಸ್‌ಪೋದಲ್ಲಿ ಸದ್ದು ಮಾಡಲಿವೆ ಈ ಹೊಸ ಎಸ್‌ಯುವಿ ಕಾರುಗಳು..!

ಎಂಜಿ ಝಡ್‍ಎಸ್ ಎಲೆಕ್ಟ್ರಿಕ್

ಎಂಜಿ ಮೋಟಾರ್ಸ್ ತನ್ನ ಮೊದಲ ಎಲೆಕ್ಟ್ರಿಕ್ ಎಸ್‍‍ಯುವಿಯಾದ ಝಡ್ಎಸ್ ಇವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಈ ಕಾರು ಹ್ಯುಂಡೈ ಕೋನಾಗೆ ಪೈಪೋಟಿ ನೀಡಲಿದೆ. ಒಂದು ಬಾರಿ ಚಾರ್ಜ್‌ ಮಾಡಿದರೆ ಈ ಕಾರು ಸುಮಾರು 300 ಕಿ.ಮೀ ಚಲಿಸಲಿದೆ.

2020ರ ಆಟೋ ಎಕ್ಸ್‌ಪೋದಲ್ಲಿ ಸದ್ದು ಮಾಡಲಿವೆ ಈ ಹೊಸ ಎಸ್‌ಯುವಿ ಕಾರುಗಳು..!

ಹ್ಯುಂಡೈ ಕ್ರೆಟಾ ಹಾಗೂ ಕಿಯಾ ಸೆಲ್ಟೋಸ್ ಕಾರುಗಳಿಗೆ ಪೈಪೋಟಿ ನೀಡಲು ಎಂಜಿ ಕಂಪನಿಯು ಝಡ್ಎಸ್ ಕಾರ್ ಅನ್ನು ಪೆಟ್ರೋಲ್ -ಡೀಸೆಲ್ ಎಂಜಿನ್‍‍ನಲ್ಲಿಯೂ ಸಹ ಬಿಡುಗಡೆಗೊಳಿಸಲಿದೆ.

2020ರ ಆಟೋ ಎಕ್ಸ್‌ಪೋದಲ್ಲಿ ಸದ್ದು ಮಾಡಲಿವೆ ಈ ಹೊಸ ಎಸ್‌ಯುವಿ ಕಾರುಗಳು..!

ಮಾರುತಿ ಸುಜುಕಿ ವಿಟಾರಾ

ಮಾರುತಿ ಸುಜುಕಿ ವಿಟಾರಾ ಕಾರ್ ಅನ್ನು ಭಾರತದಲ್ಲಿ ಮೊದಲ ಬಾರಿಗೆ ಸ್ಪಾಟ್ ಟೆಸ್ಟ್ ಮಾಡಲಾಗಿದೆ. ಈ ಹೊಸ ಎಸ್‌ಯುವಿ ದೇಶಿಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾ ಹಾಗೂ ಟಾಟಾ ಹ್ಯಾರಿಯರ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.

2020ರ ಆಟೋ ಎಕ್ಸ್‌ಪೋದಲ್ಲಿ ಸದ್ದು ಮಾಡಲಿವೆ ಈ ಹೊಸ ಎಸ್‌ಯುವಿ ಕಾರುಗಳು..!

ಇದು ಮಾರುತಿ ಸುಜುಕಿ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಿರುವ ದುಬಾರಿ ಬೆಲೆಯ ಕಾರ್ ಆಗಿರಲಿದೆ. ವಿಟಾರಾದಲ್ಲಿರುವ ಎಂಜಿನ್ ಬಗ್ಗೆ ಯಾವುದೇ ಮಾಹಿತಿ ದೊರೆತ್ತಿಲ್ಲವಾದರೂ, 1.5 ಲೀಟರಿನ ಪೆಟ್ರೋಲ್ ಎಂಜಿನ್ ಹೊಂದುವ ಸಾಧ್ಯತೆಗಳಿವೆ.

More from DriveSpark

Article Published On: Monday, October 28, 2019, 14:13 [IST]
English summary
SUVs to watch out for at the 2020 Auto Expo - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+