ಸ್ಥಗಿತಗೊಂಡ ದೇಶದ ಮೊದಲ ಎಲೆಕ್ಟ್ರಿಕ್ ಕಾರಿನ ಉತ್ಪಾದನೆ..! ಮಹೀಂದ್ರಾ ಇ2ಒ ಇನ್ನು ನೆನಪು ಮಾತ್ರ

ದೇಶದ ಮೊದಲ ಜಿರೋ ಎಮಿಷನ್ ಖ್ಯಾತಿಯ ಇ2ಒ ಎಲೆಕ್ಟ್ರಿಕ್ ಕಾರಿನ ಉತ್ಪಾದನೆಯನ್ನು ಮಹೀಂದ್ರಾ ಸಂಸ್ಥೆಯು ಸ್ಥಗಿತಗೊಳಿಸಿದ್ದು, ಇದಕ್ಕೆ ಕಾರಣ ಕಳಪೆ ಮಾರಾಟದಿಂದ ಎಂದು ಹೆಳಲಾಗಿದೆ. ಎಲೆಕ್ಟ್ರಿಕ್ ವಾಹನಗಳಲ್ಲಿ ಹೊಸ ಸಂಚಲನವನು ಸೃಷ್ಠಿಸಿದ್ದ ಮಹೀಂದ್ರಾ ಇ2ಇ ಇವಿ ಇದೀಗ ಬರಿ ನೆನಪು ಮಾತ್ರ.

ಸ್ಥಗಿತಗೊಂಡ ದೇಶದ ಮೊದಲ ಎಲೆಕ್ಟ್ರಿಕ್ ಕಾರಿನ ಉತ್ಪಾದನೆ..! ಮಹೀಂದ್ರಾ ಇ2ಒ ಇನ್ನು ನೆನಪು ಮಾತ್ರ

ಒಂಬತ್ತು ವರ್ಷಗಳ ಹಿಂದೆ ರೇವಾ ಎಲೆಕ್ಟ್ರಿಕ್ ಕಾರ್ ಕೋ (ಆರ್ಇಸಿಸಿ) ಯಲ್ಲಿ ಮಹೀಂದ್ರಾದ ಎಲೆಕ್ಟ್ರಿಕ್ ಡಿವಿಷನ್ ನಿಯಂತ್ರಣಾ ಹಕ್ಕನ್ನು ಖರೀದಿಸಿತು. ಮಹೀಂದಾ ಇ2ಒ ಎಲೆಕ್ಟ್ರಿಕ್ ಕಾರು ದೇಶಿಯ ಮಾರುಕಟ್ಟೆಯಲ್ಲಿ ಸ್ಥಗಿತಗೊಂಡಿದ್ದು, ನೆಪಾಲ್ ಮಾರುಕಟ್ಟೆಯಲ್ಲಿ ಇನ್ನು ಮಾರಾಟಕ್ಕೆ ದೊರೆಯಲಿದೆ. ಮಹೀಂದ್ರಾ ಇ20 ಕಾರಿನ ಸ್ಥಾನವನ್ನು ಸಂಸ್ಥೆಯು ಶೀಘವೇ ಬಿಡುಗಡೆ ಮಾಡಲಿರುವ ಕೆಯುವಿ100 ಮೈಕ್ರೋ ಎಸ್‍ಯುವಿ ಪಡೆದುಕೊಳ್ಳಲಿದೆ.

ಸ್ಥಗಿತಗೊಂಡ ದೇಶದ ಮೊದಲ ಎಲೆಕ್ಟ್ರಿಕ್ ಕಾರಿನ ಉತ್ಪಾದನೆ..! ಮಹೀಂದ್ರಾ ಇ2ಒ ಇನ್ನು ನೆನಪು ಮಾತ್ರ

ಹೌದು, ಎಲೆಕ್ಟ್ರಿಕ್ ಕಾರುಗಳ ನಿರ್ಮಾಣದಲ್ಲಿ ಈಗಾಗಲೇ ಮುಂಚೂಣಿ ಸಾಧಿಸಿರುವ ದೇಶದ ಏಕೈಕ ಸಂಸ್ಥೆಯಾದ ಮಹೀಂದ್ರಾ ಸದ್ಯದಲ್ಲೇ ಮತ್ತೊಂದು ವಿನೂತನ ಎಲೆಕ್ಟ್ರಿಕ್ ಕಾರನ್ನು ಹೊರತರುವ ಯೋಜನೆಯಲ್ಲಿದ್ದು, ದಕ್ಷಿಣ ಕೊರಿಯಾದ ಆಟೋ ಉತ್ಪಾದನಾ ಸಂಸ್ಥೆಯಾದ ಸ್ಯಾಂಗ್‌ಯಾಂಗ್ ಜೊತೆಗೂಡಿ ಹೊಸ ಮಾದರಿಯ ಎಲೆಕ್ಟ್ರಿಕ್ ಕಾರನ್ನು ಸಿದ್ದಗೊಳಿಸಿದೆ.

ಸ್ಥಗಿತಗೊಂಡ ದೇಶದ ಮೊದಲ ಎಲೆಕ್ಟ್ರಿಕ್ ಕಾರಿನ ಉತ್ಪಾದನೆ..! ಮಹೀಂದ್ರಾ ಇ2ಒ ಇನ್ನು ನೆನಪು ಮಾತ್ರ

ಮಹೀಂದ್ರಾ ಮತ್ತು ಸ್ಯಾಂಗ್‌ಯಾಂಗ್ ಸಂಸ್ಥೆಯು ಸದ್ಯ ಹೊಸ ಕಾರಿನ ಹೆಸರನ್ನು ಬಹಿರಂಗ ಮಾಡಿಲ್ಲವಾದರೂ ಹೊಸ ಕಾರಿಗೆ ಎಸ್201 ಎನ್ನುವ ಕೋಡ್‍‌ನೆಮ್ ಆಧಾರ ಮೇಲೆ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದ್ದು, ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ.

ಸ್ಥಗಿತಗೊಂಡ ದೇಶದ ಮೊದಲ ಎಲೆಕ್ಟ್ರಿಕ್ ಕಾರಿನ ಉತ್ಪಾದನೆ..! ಮಹೀಂದ್ರಾ ಇ2ಒ ಇನ್ನು ನೆನಪು ಮಾತ್ರ

ಸದ್ಯ ಮಹೀಂದ್ರಾ ಸಂಸ್ಥೆಯು ಇ ವೆರಿಟೊ ಸೆಡಾನ್ ಮತ್ತು e2o ಪ್ಲಸ್ ಹ್ಯಾಚ್‌ಬ್ಯಾಕ್ ಎಲೆಕ್ಟ್ರಿಕ್ ಕಾರುಗಳನ್ನು ಮಾತ್ರ ಭಾರತದಲ್ಲಿ ಮಾರಾಟ ಮಾಡುತ್ತಿದ್ದು, ಮುಂಬರುವ 5 ವರ್ಷಗಳಲ್ಲಿ 10ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಗೊಳಿಸುವ ಯೋಜನೆಯಲ್ಲಿದೆಯೆಂತೆ.

ಸ್ಥಗಿತಗೊಂಡ ದೇಶದ ಮೊದಲ ಎಲೆಕ್ಟ್ರಿಕ್ ಕಾರಿನ ಉತ್ಪಾದನೆ..! ಮಹೀಂದ್ರಾ ಇ2ಒ ಇನ್ನು ನೆನಪು ಮಾತ್ರ

ಇದರಲ್ಲಿ ಮೊದಲ ಬಾರಿಗೆ ಎಸ್‌ಯುವಿ ಆವೃತ್ತಿಯನ್ನು ಎಲೆಕ್ಟ್ರಿಕ್ ಮಾದರಿಯಾಗಿಸಲು ಯೋಜನೆ ರೂಪಿಸಿರುವ ಮಹೀಂದ್ರಾ ಸಂಸ್ಥೆಯು ಕೆಯುವಿ100 ನಂತರ ಸ್ಯಾಂಗ್‌ಯಾಂಗ್ ಎಸ್201 ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗಾಗಿ ಆಯ್ದುಕೊಂಡಿದ್ದು, 5 ಸೀಟರ್ ಮಾದರಿಯಲ್ಲಿ ಹೊಸ ಕಾರಿನ ಕ್ಯಾಬಿನ್ ಅಭಿವೃದ್ಧಿ ಮಾಡಿದೆ.

ಸ್ಥಗಿತಗೊಂಡ ದೇಶದ ಮೊದಲ ಎಲೆಕ್ಟ್ರಿಕ್ ಕಾರಿನ ಉತ್ಪಾದನೆ..! ಮಹೀಂದ್ರಾ ಇ2ಒ ಇನ್ನು ನೆನಪು ಮಾತ್ರ

ಬ್ಯಾಟರಿ ವೈಶಿಷ್ಟ್ಯತೆ

380ವಿ ಎಲೆಕ್ಟ್ರಿಕ್ ಬ್ಯಾಟರಿ ಸೌಲಭ್ಯ ಹೊಂದಿರುವ ಎಸ್201 ಕಾರು ಪ್ರತಿ ಚಾರ್ಜಿಂಗ್‌ಗೆ 250 ಕಿಮಿ ಮೈಲೇಜ್ ಹಿಂದಿರುಗಿಸಬಲ್ಲದು ಎನ್ನಲಾಗಿದ್ದು, ಹ್ಯುಂಡೈ ನಿರ್ಮಾಣದ ಕೊನಾ ಎಲೆಕ್ಟ್ರಿಕ್ ಕಾರುಗಳಿಗೆ ತ್ರೀವ ಪೈಪೋಟಿ ನೀಡುವ ಗುಣಲಕ್ಷಣಗಳನ್ನು ಹೊಂದಿದೆ.

ಸ್ಥಗಿತಗೊಂಡ ದೇಶದ ಮೊದಲ ಎಲೆಕ್ಟ್ರಿಕ್ ಕಾರಿನ ಉತ್ಪಾದನೆ..! ಮಹೀಂದ್ರಾ ಇ2ಒ ಇನ್ನು ನೆನಪು ಮಾತ್ರ

ಜೊತೆಗೆ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕಡಿಮೆ ಬೆಲೆಯಲ್ಲೂ ಎಸ್201 ಎಲೆಕ್ಟ್ರಿಕ್ ಕಾರುಗಳು ಅಭಿವೃದ್ದಿಯಾಗಲಿದ್ದು, ಇವು ಮೈಲೇಜ್ ಸಾಮರ್ಥ್ಯದಲ್ಲಿ ತುಸು ಕಡಿಮೆ ಉತ್ಪಾದನಾ ಗುಣಪಡೆದಿರುತ್ತವೆ ಎನ್ನಬಹುದು.

ಸ್ಥಗಿತಗೊಂಡ ದೇಶದ ಮೊದಲ ಎಲೆಕ್ಟ್ರಿಕ್ ಕಾರಿನ ಉತ್ಪಾದನೆ..! ಮಹೀಂದ್ರಾ ಇ2ಒ ಇನ್ನು ನೆನಪು ಮಾತ್ರ

ಕಾರು ಬಿಡುಗಡೆಯ ಅವಧಿ

ಮಹೀಂದ್ರಾ ಸಂಸ್ಥೆಯು ಮುಂಬರುವ 2019ರ ಮಾರ್ಚ್ ಹೊತ್ತಿಗೆ ಕೆಯುವಿ100 ಎಲೆಕ್ಟ್ರಿಕ್ ವರ್ಷನ್ ಬಿಡುಗಡೆಗೊಳಿಸಲು ನಿರ್ಧರಿಸಿದ್ದು, ತದನಂತರವಷ್ಟೇ ಎಸ್201 ಎಲೆಕ್ಟ್ರಿಕ್ ಕಾರುನ್ನು ಅನಾವರಣಗೊಳಿಸಿ 2019ರ ಅಂತ್ಯದಲ್ಲಿ ಬಿಡುಗಡೆ ಮಾಡಬಹುದು ಎನ್ನಲಾಗಿದೆ.

Source: business-standard

More from DriveSpark

Article Published On: Thursday, May 2, 2019, 12:58 [IST]
English summary
Mahindra Discontinued E20 Electric Car Ekuv100 To Be Replaced. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+