ಮಹೀಂದ್ರಾ ಕಾರುಗಳ ಮೇಲೆ ಮೇ ಅವಧಿಯಲ್ಲಿನ ಭರ್ಜರಿ ಆಫರ್‍ಗಳು
ಈ ಬೇಸಿಗೆಯಲ್ಲಿ ಬಹುತೇಕ ಕಾರು ತಯಾರಕ ಕಂಪನಿಗಳ ಮಾರಾಟದಲ್ಲಿ ಕುಸಿತ ಉಂಟಾಗಿದೆ. ಮಾರಾಟಕ್ಕೆ ಚೇತರಿಕೆ ನೀಡುವ ಸಲುವಾಗಿ ಬಹುತೇಕ ಕಾರು ತಯಾರಕರು ಭಾರೀ ಪ್ರಮಾಣದಲ್ಲಿ ರಿಯಾಯಿತಿಗಳನ್ನು ನೀಡುತ್ತಿದ್ದಾರೆ.

ಇದರಿಂದ ಮಹೀಂದ್ರಾ ಆಂಡ್ ಮಹೀಂದ್ರಾ ಕಂಪನಿಯು ಹೊರತಾಗಿಲ್ಲ. ತನ್ನ ಹೊಸ ಉತ್ಪನ್ನಗಳಾದ ಎಕ್ಸ್ ಯುವಿ 300 ಮತ್ತು ಅಲ್ಟುರಾಸ್ ಜಿ4 ಹೊರತುಪಡಿಸಿ, ತನ್ನ ಬೇರೆಲ್ಲಾ ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿಗಳನ್ನು ನೀಡುತ್ತಿದೆ. ಮಹೀಂದ್ರಾ ಕಂಪನಿಯು ಮೇ ತಿಂಗಳಿನಲ್ಲಿ ನೀಡಲಿರುವ ರಿಯಾಯಿತಿಗಳ ಬಗ್ಗೆ ತಿಳಿದುಕೊಳ್ಳೊಣ.
ಮಹೀಂದ್ರಾ ಕೆಯುವಿ 100
ಮಹೀಂದ್ರಾ ಕಂಪನಿಯ ಎಂಟ್ರಿ ಲೆವೆಲ್ ಪ್ಯಾಸೆಂಜರ್ ವಾಹನವಾದ ಕೆಯುವಿ100, ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಬಗೆಯ ಎಂಜಿನ್‍ಗಳಲ್ಲಿ ದೊರೆಯುತ್ತದೆ. ಮೈಕ್ರೊ ಎಸ್‍ಯುವಿ ನಂತೆ ವಿನ್ಯಾಸಗೊಳಿಸಲಾಗಿರುವ ಈ ವಾಹನವು ಜನರ ಗಮನವನ್ನು ತನ್ನತ್ತ ಸೆಳೆಯುವ ಸಾಮರ್ಥ್ಯ ಹೊಂದಿದೆ. ಇದು ವಿವಿಧ ಬಗೆಯ ಗಾತ್ರಗಳಲ್ಲಿ ದೊರೆಯಲಿದೆ.

ಗಾತ್ರಕ್ಕೆ ತಕ್ಕಂತೆ ರಿಯಾಯಿತಿ ದೊರೆಯಲಿದೆ. ಮೂಲ ಮಾದರಿಯಾದ ಕೆ2 ವಾಹನದ ಮೇಲೆ 20,000ರೂ.ಗಳ ರಿಯಾಯಿತಿ ಮತ್ತು ಕೆ4 ಗಾತ್ರದ ಮೇಲೆ 26,000ರೂ.ಗಳ ರಿಯಾಯಿತಿ ದೊರೆಯಲಿದೆ. ಟಾಪ್ ಮಾದರಿಯ ಕೆ6 ಮತ್ತು ಕೆ8 ವಾಹನಗಳ ಮೇಲೆ 40,000ರೂ.ಗಳ ರಿಯಾಯಿತಿ ದೊರೆಯಲಿದೆ. ಇದರ ಜೊತೆಗೆ ಮಹೀಂದ್ರಾ ವಿನಿಮಯಕ್ಕಾಗಿ 29,000 ರೂ.ಗಳ ಹೆಚ್ಚುವರಿ ರಿಯಾಯಿತಿ ನೀಡುತ್ತದೆ.

ಮಹೀಂದ್ರಾ ಟಿಯುವಿ 300
ಮಹೀಂದ್ರಾ, ಇತ್ತೀಚಿಗೆ ಪರಿಷ್ಕೃತ ಆವೃತ್ತಿಯ ಟಿಯುವಿ300 ವಾಹನವನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ, ಆದರೆ ಹೊಸ ಆವೃತ್ತಿಗಿಂತ ಮುಂಚೆಯಿದ್ದ ಟಿಯುವಿ300 ವಾಹನಗಳಿಗೆ ಮಾತ್ರ ರಿಯಾಯಿತಿ ದೊರೆಯಲಿದೆ. ಮಹೀಂದ್ರಾ 63,000ರೂ.ಗಳಷ್ಟು ಭಾರೀ ರಿಯಾಯಿತಿಯನ್ನು ಟಿಯುವಿ300 ಮಾದರಿಯ ಎಲ್ಲಾ ಮಾದರಿಯ ವಾಹನಗಳ ಮೇಲೆ ನೀಡಲಿದೆ.

ಈ ವಾಹನದಲ್ಲಿ ಗರಿಷ್ಠ 100 ಬಿಹೆಚ್‍ಪಿ ಉತ್ಪಾದಿಸುವ 1.5 ಲೀಟರಿನ ಡೀಸೆಲ್ ಎಂಜಿನ್ ಇದೆ. ವಿನಿಮಯಕ್ಕಾಗಿ 15,000ರೂ.ಗಳ ಹೆಚ್ಚುವರಿ ಬೋನಸ್ ನೀಡಲಾಗುವುದು.
ಮಹೀಂದ್ರಾ ಟಿಯುವಿ300 ಪ್ಲಸ್

ಮಹೀಂದ್ರಾ 7 ಸೀಟರ್‍ನ ಎಕ್ಸ್ ಟೆಂಡೆಡ್ ವ್ಹೀಲ್ ಬೇಸ್ ಆವೃತ್ತಿಯಾದ ಟಿಯುವಿ300 ವಾಹನವನ್ನು ಸಹ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ, ಈ ವಾಹನಕ್ಕೆ ಟಿಯುವಿ 300 ಪ್ಲಸ್ ಎಂಬ ಹೆಸರೂ ಸಹ ಇದೆ. ಈ ವಾಹನದ ಮೇಲೆ 40,000 ರೂ.ಗಳ ರಿಯಾಯಿತಿ ಮತ್ತು ವಿನಿಮಯಕ್ಕೆ 25,000 ರೂ.ಗಳ ಹೆಚ್ಚುವರಿ ರಿಯಾಯಿತಿ ನೀಡಲಾಗುತ್ತದೆ. ಮಹೀಂದ್ರ ಪರಿಷ್ಕೃತ ಆವೃತ್ತಿಯ ಟಿಯುವಿ300 ಪ್ಲಸ್ ವಾಹನವನ್ನು ಇನ್ನೂ ಬಿಡುಗಡೆ ಮಾಡಿಲ್ಲ.

ಮಹೀಂದ್ರಾ ಬೊಲೆರೋ ಪವರ್ ಪ್ಲಸ್
ಮಹೀಂದ್ರಾ ಬೊಲೆರೋ ಭಾರತೀಯ ಕಾರು ಮಾರುಕಟ್ಟೆಯಲ್ಲಿ ತನ್ನದೇ ಆದ ಹೆಸರು ಹೊಂದಿದ್ದು, ಒಮ್ಮೆ ಅತಿ ಹೆಚ್ಚು ಮಾರಾಟವಾಗುವ ಯುಟಿಲಿಟಿ ವಾಹನವೆಂಬ ಖ್ಯಾತಿಯನ್ನು ಪಡೆದಿತ್ತು. ಇದು ದೇಶಿಯ ಮಾರುಕಟ್ಟೆಯಲ್ಲಿ ಈಗಲೂ ಜನಪ್ರಿಯವಾಗಿದೆ. ಮಹೀಂದ್ರಾ ಕಂಪನಿಯು, ಬೊಲೆರೋ ಪವರ್ ಪ್ಲಸ್ ವಾಹನದ ಮೇಲೆ 15,000 ರೂ.ಗಳ ರಿಯಾಯಿತಿ ಮತ್ತು 10,000 ರೂ.ಗಳ ಹೆಚ್ಚುವರಿ ರಿಯಾಯಿತಿಗಳನ್ನು ವಿನಿಮಯಕ್ಕಾಗಿ ನೀಡುತ್ತದೆ.

ಮಹೀಂದ್ರಾ ಮರಜೋ
ಮಾರುತಿ ಸುಜುಕಿ ಕಂಪನಿಯ ಎರ್ಟಿಗಾ ವಾಹನಕ್ಕೆ ಪೈಪೋಟಿ ನೀಡಲು ಮಹೀಂದ್ರಾ ಕಂಪನಿಯು ಹೊಸ ಮರಜೋ ವಾಹನವನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ವಾಹನದಲ್ಲಿ 1.5 ಲೀಟರಿನ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಇದು ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯತೆಯನ್ನು ಪಡೆದಿದ್ದರೂ ಎರ್ಟಿಗಾ ವಾಹನದಷ್ಟು ಜನಪ್ರಿಯವಾಗಿಲ್ಲ. ಈಗ ಈ ವಾಹನದ ಮೇಲೆ ಮೊದಲ ವರ್ಷದ ಇನ್ಶೂರೆನ್ಸ್ ಅನ್ನು ಉಚಿತವಾಗಿ ನೀಡಲಾಗುತ್ತಿದೆ. ಜೊತೆಗೆ ವಿನಿಮಯಕ್ಕಾಗಿ 15,000 ರೂ. ಹೆಚ್ಚುವರಿ ರಿಯಾಯಿತಿ ನೀಡಲಾಗುವುದು.

ಮಹೀಂದ್ರಾ ಥಾರ್
ಮಹೀಂದ್ರಾ ಥಾರ್ ವಾಹನವು ಅತಿ ಜನಪ್ರಿಯ ವಾಹನವಾಗಿದ್ದು, ಮಾಸ್ ಸೆಗ್ ಮೆಂಟಿನ ಖರೀದಿದಾರರು ಈ ವಾಹನವನ್ನು ಹೆಚ್ಚು ಖರೀದಿಸುವುದಿಲ್ಲ. ಮಹೀಂದ್ರಾ ಈ ವಾಹನದ ಮೇಲೆ ಯಾವಾಗಲೂ ರಿಯಾಯಿತಿಗಳನ್ನು ನೀಡುವುದಿಲ್ಲ. ಈಗ ಲಭ್ಯವಿರುವ ಹೊಸ ಲಿಮಿಟೆಡ್ ಎಡಿಷನ್ ವಾಹನವನ್ನು ಅತಿ ಶೀಘ್ರದಲ್ಲಿಯೇ ಬಿಡುಗಡೆ ಮಾಡಲಿದೆ ಹಾಗೂ ಈಗಿರುವ ಮಾದರಿಯನ್ನು 2020ರ ಹೊತ್ತಿಗೆ ಪೂರ್ತಿಯಾಗಿ ಬದಲಾಯಿಸಲಿದೆ. ಈ ವಾಹನದ ಮೇಲೆ ರೂ. 6,000 ಗಳ ಕಾರ್ಪೊರೇಟ್ ರಿಯಾಯಿತಿ ನೀಡಲಾಗುವುದು.

ಮಹೀಂದ್ರಾ ಸ್ಕಾರ್ಪಿಯೋ
ಮಹೀಂದ್ರಾ ಸ್ಕಾರ್ಪಿಯೋ ಒಂದು ದಂತಕಥೆಯಾಗಿದೆ. ಇದು ದೇಶಿಯ ಮಾರುಕಟ್ಟೆಯಲಿ ಐಕಾನಿಕ್ ವಾಹನವಾಗಿದ್ದು, ಅನೇಕ ವರ್ಷಗಳಿಂದ ಮಾರುಕಟ್ಟೆಯಲ್ಲಿ ಲಭ್ಯವಿದೆ. ಸ್ಕಾರ್ಪಿಯೋದ ಎಲ್ಲಾ ಮಾದರಿಗಳ ಮೇಲೆ 30,000 ರೂ.ಗಳ ರಿಯಾಯಿತಿ ಮತ್ತು 25,000 ರೂ.ಗಳ ಹೆಚ್ಚುವರಿ ರಿಯಾಯಿತಿಯನ್ನು ವಿನಿಮಯದ ಮೇಲೆ ನೀಡಲಾಗುವುದು.
MOST READ: ಬಿಎಸ್6ಗೆ ಅಪ್‍ಗ್ರೇಡ್ ಆಗಲಿದೆ ಟಿವಿಎಸ್ ಎಕ್ಸ್ಎಲ್

ಮಹೀಂದ್ರಾ ಎಕ್ಸ್ ಯುವಿ500
ಮಹೀಂದ್ರಾ ಎಕ್ಸ್ ಯುವಿ 500 ಆಕರ್ಷಕ ಲುಕ್ ಆಗಿದ್ದು, ಫ್ಯಾಮಿಲಿ ಕಾರಾಗಿದ್ದು, ಈ ಸೆಗ್‍ಮೆಂಟಿನಲ್ಲಿ ಜನಪ್ರಿಯವಾಗಿದೆ. ಮಹೀಂದ್ರಾ ಹೊಸ ತಲೆಮಾರಿನ ಎಕ್ಸ್ ಯುವಿ500 ಅಭಿವೃದ್ದಿಯಲ್ಲಿ ತೊಡಗಿದ್ದು, ಈಗಿನ ಆವೃತ್ತಿಯ ಮೇಲೆ 36,000 ರೂ.ಗಳ ರಿಯಾಯಿತಿ ಮತ್ತು 25,000 ರೂ.ಗಳ ಹೆಚ್ಚುವರಿ ರಿಯಾಯಿತಿಯನ್ನು ವಿನಿಮಯಗಳ ಮೇಲೆ ನೀಡುತ್ತದೆ.


Click it and Unblock the Notifications








