ಬಿ‍ಎಸ್6ಗೆ ಅಪ್‍‍ಗ್ರೇಡ್ ಆಗಲಿದೆ ಟಿ‍‍ವಿ‍ಎಸ್ ಎಕ್ಸ್ಎಲ್

ಟಿ‍‍ವಿ‍ಎಸ್ ಮೋಟಾರ್ ಕಂಪನಿಯು ಬಿ‍ಎಸ್ 6 ಮಾಲಿನ್ಯ ನಿಯಮಗಳು ಜಾರಿಗೆ ಬಂದ ನಂತರವೂ ಟಿ‍‍ವಿ‍ಎಸ್ ಎಕ್ಸ್ಎಲ್ ವಾಹನಗಳ ಮಾರಾಟವನ್ನು ಮುಂದುವರೆಸುವುದಾಗಿ ಸ್ಪಷ್ಟಪಡಿಸಿದೆ. ಭಾರತದಲ್ಲಿ ಮಾರಾಟವಾಗುತ್ತಿರುವ ಏಕೈಕ ಮೋಪೆಡ್ ಟಿ‍‍ವಿ‍ಎಸ್ ಎಕ್ಸ್ಎಲ್ ಆಗಿದ್ದು, ಗ್ರಾಮೀಣ ಭಾಗಗಳಲ್ಲಿ ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ.

ಬಿ‍ಎಸ್6ಗೆ ಅಪ್‍‍ಗ್ರೇಡ್ ಆಗಲಿದೆ ಟಿ‍‍ವಿ‍ಎಸ್ ಎಕ್ಸ್ಎಲ್

ಬಿ‍ಎಸ್6 ನಿಯಮಗಳನ್ನು ಅಳವಡಿಸಿದ ನಂತರ ಎಕ್ಸ್ಎಲ್ ವಾಹನವನ್ನು ನಿಲ್ಲಿಸಬಹುದೆಂಬ ವದಂತಿಗಳಿದ್ದವು. ಆದರೆ ಟಿ‍‍ವಿ‍ಎಸ್ ಕಂಪನಿ ಆ ವದಂತಿಗಳನ್ನೆಲ್ಲಾ ತಳ್ಳಿ ಹಾಕಿದೆ. ಟಿ‍‍ವಿ‍ಎಸ್ ಎಕ್ಸ್ಎಲ್ ಭಾರತದಲ್ಲಿ ಮಾರಾಟವಾಗುತ್ತಿರುವ ಕಡಿಮೆ ಬೆಲೆಯ ದ್ವಿಚಕ್ರವಾಹನವಾಗಿದೆ. ಈ ವಾಹನವು ಒರಟುತನಕ್ಕೆ, ಬಾಳಿಕೆಗೆ, ವಿಶ್ವಾಸಾರ್ಹತೆಗೆ ಹೆಸರುವಾಸಿಯಾಗಿದೆ. ಟಿ‍‍ವಿ‍ಎಸ್ ಎಕ್ಸ್ಎಲ್ ವಾಹನವು ಹುಲ್ಲಿನ ರಾಶಿಯೇ ಆಗಲಿ, ಅಕ್ಕಿಯ ಮೂಟೆಯೇ ಆಗಲಿ, ಹಣ್ಣು, ತರಕಾರಿಗಳೆ ಆಗಲಿ, ಎಷ್ಟೇ ತೂಕವಿರುವ ವಸ್ತುಗಳನ್ನೇ ಆಗಲಿ ಹೊತ್ತೊಯ್ಯಲಿದೆ.

ಬಿ‍ಎಸ್6ಗೆ ಅಪ್‍‍ಗ್ರೇಡ್ ಆಗಲಿದೆ ಟಿ‍‍ವಿ‍ಎಸ್ ಎಕ್ಸ್ಎಲ್

ಈ ವಾಹನವು ಈಗಲೂ ಅನೇಕ ರೈತರ ಮತ್ತು ಕಾರ್ಮಿಕರ ಸಂಗಾತಿಯಾಗಿದೆ. ಬಿ‍ಎಸ್6 ನಿಯಮಗಳನ್ನು ಅಳವಡಿಸಿದ ನಂತರ ಟಿ‍‍ವಿ‍ಎಸ್ ಎಕ್ಸ್ಎಲ್ ವಾಹನವನ್ನು ಸ್ಥಗಿತಗೊಳಿಸಲಾಗುವುದೆಂಬ ಊಹಾಪೋಹಗಳಿದ್ದವು.

ಬಿ‍ಎಸ್6ಗೆ ಅಪ್‍‍ಗ್ರೇಡ್ ಆಗಲಿದೆ ಟಿ‍‍ವಿ‍ಎಸ್ ಎಕ್ಸ್ಎಲ್

ಬಿ‍ಎಸ್ 6 ನಿಯಮಗಳಿಂದಾಗಿ ಟಾಟಾ ನ್ಯಾನೋ, ಹೋಂಡಾ ಬ್ರಿಯೋ, ಹ್ಯುಂಡೈ ಇಯಾನ್, ಹೋಂಡಾ ಕ್ಲಿಕ್, ಹೋಂಡಾ ನೆವಿ ಮುಂತಾದ ವಾಹನಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ. ಟಿ‍‍ವಿ‍ಎಸ್ ಎಕ್ಸ್ಎಲ್ ಸಹ ಇದೇ ಹಾದಿಯನ್ನು ಹಿಡಿಯಬಹುದೆಂಬ ಊಹಾಪೋಹಗಳಿದ್ದವು.

ಬಿ‍ಎಸ್6ಗೆ ಅಪ್‍‍ಗ್ರೇಡ್ ಆಗಲಿದೆ ಟಿ‍‍ವಿ‍ಎಸ್ ಎಕ್ಸ್ಎಲ್

ಟಿ‍‍ವಿ‍ಎಸ್ ಕಂಪನಿ, ಟಿವಿ‍ಎಸ್ ಎಕ್ಸ್ಎಲ್ ವಾಹನವನ್ನು ಬಿ‍ಎಸ್6 ನಿಯಮಗಳಿಗೆ ಅನುಗುಣವಾಗಿ ಅಪ್‍‍ಡೇಟ್ ಮಾಡಲಾಗುವುದು ಎಂದು ಸ್ಪಷ್ಟನೆ ನೀಡಿದೆ. ಟಿ‍‍ವಿ‍ಎಸ್ ಮೋಟಾರ್ ಕಂಪನಿಯ ಸಿ‍ಇ‍ಒ ಮತ್ತು ಪೂರ್ಣಾವಧಿ ನಿರ್ದೇಶಕರಾದ ಕೆ.ಎನ್.ರಾಧಾಕೃಷನ್ ರವರ ಮಾತುಗಳನ್ನು ಉಲ್ಲೇಖಿಸಿ ಮನಿಕಂಟ್ರೋಲ್ ನೀಡಿರುವ ವರದಿಯ ಪ್ರಕಾರ, ನಮ್ಮ ಮೋಪೆಡ್‍‍ಗಳು ಬಿ‍ಎಸ್6 ನಿಯಮಗಳನ್ನು ಮುಟ್ಟಲಿವೆ. ಈ ಮೊದಲಿದ್ದ ವಾಹನಗಳನ್ನು 2 ಸ್ಟ್ರೋಕ್‍‍ನಿಂದ 4 ಸ್ಟ್ರೋಕ್‍‍ಗೆ ಬದಲಾಯಿಸಲಾಯಿತು, ಎಲೆಕ್ಟ್ರಿಕ್ ಮೋಪೆಡ್‍‍ಗಳನ್ನು ಸಹ ಉತ್ಪಾದಿಸಲಾಯಿತು.

ಬಿ‍ಎಸ್6ಗೆ ಅಪ್‍‍ಗ್ರೇಡ್ ಆಗಲಿದೆ ಟಿ‍‍ವಿ‍ಎಸ್ ಎಕ್ಸ್ಎಲ್

ನಾವು ನಮ್ಮದೇ ಆದ ವಿಶೇಷತೆಯನ್ನು ಹೊಂದಿದ್ದು, ಎಕ್ಸ್ಎಲ್ ವಾಹನವನ್ನು ಬಿ‍ಎಸ್ 6 ಅಪ್‍‍ಗ್ರೇಡ್‍‍ನೊಂದಿಗೆ ಮುಂದುವರೆಸಲಿದ್ದೇವೆ ಎಂದು ತಿಳಿಸಿದ್ದಾರೆ.

ಬಿ‍ಎಸ್6ಗೆ ಅಪ್‍‍ಗ್ರೇಡ್ ಆಗಲಿದೆ ಟಿ‍‍ವಿ‍ಎಸ್ ಎಕ್ಸ್ಎಲ್

2016ರಲ್ಲಿ ಟಿವಿ‍ಎಸ್ ವಾಹನಗಳನ್ನು 2 ಸ್ಟ್ರೋಕ್ ಎಂಜಿನ್‍‍ನಿಂದ 4 ಸ್ಟ್ರೋಕ್ ಎಂಜಿನ್‍‍ಗೆ ಬದಲಾಯಿಸಲಾಯಿತು. ಟಿವಿ‍ಎಸ್ ಮುಖ್ಯಸ್ಥರ ಹೇಳಿಕೆ ಪ್ರಕಾರ ಈಗಿರುವ ಎಂಜಿನ್‍‍ನನ್ನೇ ಬಿ‍ಎಸ್6 ಮಾದರಿಗೆ ಹೊಂದಿಕೊಳ್ಳುವಂತೆ ಮಾರ್ಪಡಿಸಲಾಗುವುದು. ಆದರೆ ಬಿ‍ಎಸ್ 4 ನಿಂದ ಬಿ‍ಎಸ್ 6 ಗೆ ಮಾರ್ಪಡಿಸಲು ಅನೇಕ ಬದಲಾವಣೆಗಳನ್ನು ಮಾಡಬೇಕಾಗುತ್ತದೆ.

ಬಿ‍ಎಸ್6ಗೆ ಅಪ್‍‍ಗ್ರೇಡ್ ಆಗಲಿದೆ ಟಿ‍‍ವಿ‍ಎಸ್ ಎಕ್ಸ್ಎಲ್

ರಾಧಾಕೃಷ್ಣ‍‍ನ್ ರವರು ಮಾತನಾಡಿ, ಈ ಮೋಪೆಡ್ ಗ್ರಾಹಕರನ್ನು ಆಕರ್ಷಿಸುವ ಗುಣಗಳನ್ನು ಹೊಂದಿವೆ. ಮೋಪೆಡ್ ಮೆಚ್ಚುವ ಗ್ರಾಹಕರಿಗೆ ಎಲೆಕ್ಟ್ರಿಕ್ ವಾಹನಗಳು ಸೂಕ್ತವಾಗಿವೆ. ಈ ಕೆಟಗರಿಯಲ್ಲಿರುವ 90% ವಾಹನಗಳು ಎಲೆಕ್ಟ್ರಿಕ್ ಸ್ಟಾರ್ಟ್ ಹೊಂದಿವೆ ಎಂದು ತಿಳಿಸಿದರು.

MOST READ: ಎಕ್ಸಿ‍‍ಕ್ಯೂಟಿವ್ ಸೆಡಾನ್‍‍ಗಳ ಮಾರಾಟದಲ್ಲಿ ಹ್ಯುಂಡೈ ವರ್ನಾ ವಾಹನವೇ ಕಿಂಗ್

ಬಿ‍ಎಸ್6ಗೆ ಅಪ್‍‍ಗ್ರೇಡ್ ಆಗಲಿದೆ ಟಿ‍‍ವಿ‍ಎಸ್ ಎಕ್ಸ್ಎಲ್

ಟಿವಿ‍ಎಸ್ ಎಕ್ಸ್ಎಲ್ ವಾಹನದ ಕಿಕ್ ಸ್ಟಾರ್ಟ್ ಹೊಂದಿರುವ ಮೂಲ ಮಾದರಿಯ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.30,000ಗಳಿಂದ ರೂ.38,000 ಗಳಾಗಿದೆ. ಏರ್ ಕೂಲರ್ ಹೊಂದಿರುವ 99.7 ಸಿಸಿ ಎಂಜಿನ್‍ ಹೊಂದಿದ್ದು 4.3 ಬಿಹೆಚ್‍‍ಪಿ ಮತ್ತು 6.5 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಬಿ‍ಎಸ್6ಗೆ ಅಪ್‍‍ಗ್ರೇಡ್ ಆಗಲಿದೆ ಟಿ‍‍ವಿ‍ಎಸ್ ಎಕ್ಸ್ಎಲ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಬಿ‍ಎಸ್ 6 ನಿಯಮಗಳಿಂದಾಗಿ ಭಾರತದ ಆಟೋಮೋಬೈಲ್ ಇಂಡಸ್ಟ್ರಿಯ ಚಿತ್ರಣವೇ ಬದಲಾಗಲಿದೆ. ಇಂಧನದ ಎಂಜಿನ್‍‍ನಿಂದ ವಾಹನಗಳವರೆಗೆ ಪೂರ್ತಿಯಾಗಿ ಬದಲಾವಣೆಯಾಗಲಿದೆ. ಬಿ‍ಎಸ್6 ನಿಯಮಗಳಿಂದಾಗಿ ಅನೇಕ ವಾಹನಗಳ ಉತ್ಪಾದನೆಯನ್ನೇ ಸ್ಥಗಿತಗೊಳಿಸಲಾಗಿದೆ. ಟಿ‍‍ವಿ‍ಎಸ್ ಎಕ್ಸ್ಎಲ್ ಹೊಸ ನಿಯಮಗಳಿಗೆ ಅನುಸಾರವಾಗಿ ತನ್ನ ವಾಹನವನ್ನು ಅಪ್‍‍ಗ್ರೇಡ್ ಮಾಡುತ್ತಿರುವುದು ಶ್ಲಾಘನೀಯ.

Most Read Articles

Kannada
English summary
TVS XL To Get The BS-VI Upgrade — India’s Much-Loved Moped Set For A Run In The BS-VI Era - Read in kannada
Story first published: Thursday, May 9, 2019, 10:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X