ಎಕ್ಸಿ‍‍ಕ್ಯೂಟಿವ್ ಸೆಡಾನ್‍‍ಗಳ ಮಾರಾಟದಲ್ಲಿ ಹ್ಯುಂಡೈ ವರ್ನಾ ವಾಹನವೇ ಕಿಂಗ್

ದೇಶಿಯ ಮಾರುಕಟ್ಟೆಯಲ್ಲಿರುವ ಎಕ್ಸಿ‍‍ಕ್ಯೂಟಿವ್ ಸೆಡಾನ್ ಸೆಗ್‍‍ಮೆಂಟಿನಲ್ಲಿ ಮಾರುತಿ ಸುಜುಕಿ ಮತ್ತು ಹೋಂಡಾ ಸಿಟಿ ವಾಹನಗಳ ಮಧ್ಯೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಎರಡೂ ಸೆಡಾನ್‍‍ಗಳು ಈ ಸೆಗ್‍‍ಮೆಂಟಿನಲ್ಲಿ ಮುಂಚೆ ಅಗ್ರಸ್ಥಾನದಲ್ಲಿದ್ದವು.

ಎಕ್ಸಿ‍‍ಕ್ಯೂಟಿವ್ ಸೆಡಾನ್‍‍ಗಳ ಮಾರಾಟದಲ್ಲಿ ಹ್ಯುಂಡೈ ವರ್ನಾ ವಾಹನವೇ ಕಿಂಗ್

2019ರ ಏಪ್ರಿಲ್ ತಿಂಗಳ ಮಾರಾಟದಲ್ಲಿ 16.7% ಏರಿಕೆ ಕಂಡ ಹ್ಯುಂಡೈ ಕಂಪನಿಯ ವರ್ನಾ ವಾಹನವು ಅಗ್ರ ಸ್ಥಾನಕ್ಕೇರಿದ್ದು, ಸಿಯಾಜ್ ಮತ್ತು ಸಿಟಿ ವಾಹನಗಳು, ಮಾರಾಟದಲ್ಲಿ ಕುಸಿತ ಕಂಡಿವೆ. ಆಟೋಪಂಡಿತ್ಸ್ ವರದಿಯ ಪ್ರಕಾರ, ಎಕ್ಸಿಕ್ಯೂಟಿವ್ ಸೆಗ್‍‍ಮೆಂಟಿನಲ್ಲಿ, ಏಪ್ರಿಲ್ 2019ರ ಅವಧಿಯಲ್ಲಿ, ಏಪ್ರಿಲ್ 2018ರ ಅವಧಿಗೆ ಹೋಲಿಸಿದರೆ 38% ನಷ್ಟು ಕುಸಿತವಾಗಿದೆ. ವಾಹನ ತಯಾರಕ ಕಂಪನಿಗಳು ಎಕ್ಸಿಕ್ಯೂಟಿವ್ ಸೆಡಾನ್ ಸೆಗ್‍‍ಮೆಂಟಿನಲ್ಲಿ ಒಟ್ಟಾರೆಯಾಗಿ 9,617 ವಾಹನಗಳನ್ನು ಏಪ್ರಿಲ್ 2019ರ ಅವಧಿಯಲ್ಲಿ ಮಾರಾಟ ಮಾಡಿವೆ.

ಎಕ್ಸಿ‍‍ಕ್ಯೂಟಿವ್ ಸೆಡಾನ್‍‍ಗಳ ಮಾರಾಟದಲ್ಲಿ ಹ್ಯುಂಡೈ ವರ್ನಾ ವಾಹನವೇ ಕಿಂಗ್

ಏಪ್ರಿಲ್ 2018ರ ಅವಧಿಯಲ್ಲಿ 15,555 ಎಕ್ಸಿಕ್ಯೂಟಿವ್ ಸೆಡಾನ್ ವಾಹನಗಳನ್ನು ಮಾರಾಟ ಮಾಡಲಾಗಿತ್ತು. ಒಟ್ಟಾರೆಯಾಗಿ ಈ ಬಾರಿ 5,938 ವಾಹನಗಳನ್ನು ಕಡಿಮೆ ಮಾರಾಟ ಮಾಡಲಾಗಿದೆ. ಎಕ್ಸಿಕ್ಯೂಟಿವ್ ಸೆಡಾನ್ ಸೆಗ್‍‍ಮೆಂಟಿನಲ್ಲಿ ಫಿಯಟ್ ಲಿನಿಯಾವನ್ನು ಹೊರತುಪಡಿಸಿ (ಈ ವಾಹನದ ಮಾರಾಟವು 125% ನಷ್ಟು ಏರಿಕೆ ಕಂಡಿದೆ.

ಎಕ್ಸಿ‍‍ಕ್ಯೂಟಿವ್ ಸೆಡಾನ್‍‍ಗಳ ಮಾರಾಟದಲ್ಲಿ ಹ್ಯುಂಡೈ ವರ್ನಾ ವಾಹನವೇ ಕಿಂಗ್

ಏಪ್ರಿಲ್ 2018ರಲ್ಲಿ 5 ವಾಹನಗಳನ್ನು ಮಾರಾಟ ಮಾಡಲಾಗಿದ್ದರೆ, ಈ ಬಾರಿ 9 ವಾಹನಗಳನ್ನು ಮಾರಾಟ ಮಾಡಲಾಗಿದೆ). ಉಳಿದ ಎಲ್ಲಾ ಕಂಪನಿಗಳು ಮಾರಾಟದಲ್ಲಿ ಕುಸಿತ ಕಂಡಿವೆ. ಟೊಯೊಟಾದ ಯಾರೀಸ್ ವಾಹನದ ಮಾರಾಟ ಪ್ರಮಾಣದಲ್ಲಿ ಸುಮಾರು 78% ನಷ್ಟು ನಷ್ಟ ಉಂಟಾಗಿದೆ.

ಎಕ್ಸಿ‍‍ಕ್ಯೂಟಿವ್ ಸೆಡಾನ್‍‍ಗಳ ಮಾರಾಟದಲ್ಲಿ ಹ್ಯುಂಡೈ ವರ್ನಾ ವಾಹನವೇ ಕಿಂಗ್

ಕಳೆದ ವರ್ಷದ ಇದೇ ಅವಧಿಯಲ್ಲಿ 1,585 ಯಾರೀಸ್ ವಾಹನಗಳನ್ನು ಮಾರಾಟ ಮಾಡಲಾಗಿದ್ದರೆ ಈ ಬಾರಿ ಕೇವಲ 354 ವಾಹನಗಳನ್ನು ಮಾರಾಟ ಮಾಡಲಾಗಿದೆ. ಸಂಖ್ಯೆಗಳಲ್ಲಿ ಹೇಳುವುದಾದರೆ, ಹೆಚ್ಚಿನ ಪ್ರಮಾಣದ ಕುಸಿತವನ್ನು ಮಾರುತಿ ಸಿಯಾಜ್ ದಾಖಲಿಸಿದೆ. ಏಪ್ರಿಲ್ 2018ರಲ್ಲಿ ಸಿಯಾಜ್‍‍ನ 5,116 ವಾಹನಗಳ ಮಾರಾಟವಾಗಿದ್ದರೆ, ಏಪ್ರಿಲ್ 2019ರಲ್ಲಿ 2,327 ವಾಹನಗಳ ಮಾರಾಟವಾಗಿ 2,789 ವಾಹನಗಳಷ್ಟು ನಷ್ಟ ಅನುಭವಿಸಿದೆ.

ಎಕ್ಸಿ‍‍ಕ್ಯೂಟಿವ್ ಸೆಡಾನ್‍‍ಗಳ ಮಾರಾಟದಲ್ಲಿ ಹ್ಯುಂಡೈ ವರ್ನಾ ವಾಹನವೇ ಕಿಂಗ್

ವರ್ನಾ ವಾಹನದ ಮಾರಾಟ ಪ್ರಮಾಣವು 28% ನಷ್ಟು ಕುಸಿತ ಕಂಡಿದ್ದರೂ, ಬೇರೆ ಕಂಪನಿಗಳ ವಾಹನಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿದೆ. ಏಪ್ರಿಲ್ 2018ರಲ್ಲಿ 4,077 ವರ್ನಾ ವಾಹನಗಳನ್ನು ಮಾರಾಟ ಮಾಡಲಾಗಿದ್ದರೆ, ಈ ಬಾರಿ 2,932 ವಾಹನಗಳನ್ನು ಮಾರಾಟ ಮಾಡಲಾಗಿದೆ. ಕಳೆದ ಬಾರಿಗೆ ಹೋಲಿಸಿದರೆ 1,145 ವಾಹನಗಳಷ್ಟು ಕುಸಿತ ಅನುಭವಿಸಿದೆ.

MOST READ: ಹೊಸ ಅಪ್ಡೇಟ್ ಪಡೆಯುತ್ತಿರುವ ಕವಾಸಕಿ ನಿಂಜಾ ಝಡ್‍ಎಕ್ಸ್-25‍‍ಆರ್

ಎಕ್ಸಿ‍‍ಕ್ಯೂಟಿವ್ ಸೆಡಾನ್‍‍ಗಳ ಮಾರಾಟದಲ್ಲಿ ಹ್ಯುಂಡೈ ವರ್ನಾ ವಾಹನವೇ ಕಿಂಗ್

ಹೋಂಡಾ ಸಿಟಿ ಕಂಪನಿಯು ಸಹ ಈ ಸೆಗ್‍‍ಮೆಂಟಿನ ವಾಹನಗಳ ಮಾರಾಟದಲ್ಲಿ ಭಾರೀ ಕುಸಿತ ಕಂಡಿದೆ. ಕಳೆದ ಬಾರಿಗಿಂತ ಈ ಬಾರಿ 972 ವಾಹನಗಳನ್ನು ಕಡಿಮೆ ಮಾರಾಟ ಮಾಡಿ 2,394 ವಾಹನಗಳನ್ನು ಮಾರಾಟ ಮಾಡಿ, 28% ನಷ್ಟು ಕುಸಿತ ಕಂಡಿದೆ. ಏಪ್ರಿಲ್ 2018ರಲ್ಲಿ 3,366 ವಾಹನಗಳನ್ನು ಮಾರಾಟ ಮಾಡಲಾಗಿತ್ತು.

More from DriveSpark

Article Published On: Wednesday, May 8, 2019, 19:03 [IST]
English summary
Hyundai Verna Outsells Maruti Ciaz & Honda City — New King Of The Executive Sedans - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+