ಹೊಸ ಅಪ್ಡೇಟ್ ಪಡೆಯುತ್ತಿರುವ ಕವಾಸಕಿ ನಿಂಜಾ ಝಡ್‍ಎಕ್ಸ್-25‍‍ಆರ್

ಕವಾಸಕಿ ಕಂಪನಿಯು 250ಸಿಸಿ ಯ 4 ಸಿಲಿಂಡರ್ ಎಂಜಿನ್ ಅಭಿವೃದ್ಧಿಪಡಿಸುತ್ತಿದೆ. ಈ 250 ಸಿಸಿಯ ಎಂಜಿನ್ 45 ಬಿಹೆಚ್‍‍ಪಿ ಉತ್ಪಾದಿಸಿ, ಕ್ವಾರ್ಟರ್ ಲೀಟರ್ ಮೋಟಾರ್‍‍ಸೈಕಲ್ ಸೆಗ್‍‍ಮೆಂಟನ್ನು ಬೇರೊಂದು ಹಂತಕ್ಕೆ ಕೊಂಡೊಯ್ಯಲಿದೆ.

ಹೊಸ ಅಪ್ಡೇಟ್ ಪಡೆಯುತ್ತಿರುವ ಕವಾಸಕಿ ನಿಂಜಾ ಝಡ್‍ಎಕ್ಸ್-25‍‍ಆರ್

ಈ ಮಾಹಿತಿಯನ್ನು ಅಧಿಕೃತವಾಗಿ ಖಚಿತಪಡಿಸಿಲ್ಲ, ಆದರೆ ಈ ಮಾಹಿತಿಯನ್ನು ಗ್ರಿಡೊಟೊದಲ್ಲಿ, ಪ್ರಕಟಿಸಲಾಗಿದೆ. ಕಡಿಮೆ ಸಾಮರ್ಥ್ಯದ ಹೆಚ್ಚು ಪರ್ಫಾರ್ಮೆನ್ಸ್ ಮೋಟಾರ್‍‍ಸೈಕಲ್‍‍ಗಳು 1980 ಮತ್ತು 1990ರ ದಶಕದಲ್ಲಿ ಜನಪ್ರಿಯವಾಗಿದ್ದವು.

ಜಪಾನಿನ ನಾಲ್ಕು ದೊಡ್ಡ ಮೋಟಾರ್‍‍ಸೈಕಲ್ ತಯಾರಕ ಕಂಪನಿಗಳಾದ - ಕವಾಸಕಿ, ಹೋಂಡಾ, ಸುಜುಕಿ ಮತ್ತು ಯಮಹಾ - ಈ ಸೆಗ್‍‍ಮೆಂಟಿನಲ್ಲಿ ತೀವ್ರ ಪೈಪೋಟಿ ನೀಡಿದ್ದವು. ಈ ಮೋಟಾರ್‍‍ಸೈಕಲ್‍‍ಗಳು ಹೆಚ್ಚು ಶಬ್ದ ಮಾಡುತ್ತಿದ್ದವು ಮತ್ತು ವೇಗವಾಗಿದ್ದವು.

ಹೊಸ ಅಪ್ಡೇಟ್ ಪಡೆಯುತ್ತಿರುವ ಕವಾಸಕಿ ನಿಂಜಾ ಝಡ್‍ಎಕ್ಸ್-25‍‍ಆರ್

ಇದಕ್ಕೆ ಅವುಗಳ ಎಂಜಿನ್ ಹೆಚ್ಚು ಪರಿಷ್ಕೃತವಾಗಿದ್ದೇ ಕಾರಣ. ಈ ಬೈಕ್‍‍ಗಳು, ಟ್ವಿನ್ ಸಿಲಿಂಡರ್ ಮತ್ತು ಸಿಂಗಲ್ ಸಿಲಿಂಡರ್ ಎಂಜಿನ್‍‍ಗಳನ್ನು ಹೊಂದಿದ್ದವು. ಹೆಚ್ಚು ಇಂಧನ ಬಳಸುತ್ತಿದ್ದರಿಂದ, ಕಡಿಮೆ ಪವರ್ ಹೊಂದಿದ್ದರಿಂದ ಮತ್ತು ನಿರ್ವಹಣೆಯ ಖರ್ಚು ಹೆಚ್ಚಾಗಿದ್ದರಿಂದ ಇವುಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಯಿತು.

ಹೊಸ ಅಪ್ಡೇಟ್ ಪಡೆಯುತ್ತಿರುವ ಕವಾಸಕಿ ನಿಂಜಾ ಝಡ್‍ಎಕ್ಸ್-25‍‍ಆರ್

2018ರಿಂದ ಕ್ವಾರ್ಟರ್ ಲೀಟರ್ ಮೋಟಾರ್‍‍ಸೈಕಲ್‍‍ಗಳಲ್ಲಿ 4 ಸಿಲಿಂಡರ್‍‍ಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ವದಂತಿಗಳಿದ್ದವು. ಆದರೆ ಈ ವದಂತಿಗಳನ್ನು ನಂಬಲು ಈಗ ಚಿತ್ರಗಳು ಲಭ್ಯವಾಗಿವೆ. ಪೋಸ್ಟರ್‍‍ಗಳ ಪ್ರಕಾರ ಈ ಮೋಟಾರ್‍‍ಸೈಕಲ್‍‍ಗೆ ಕವಾಸಕಿ ನಿಂಜಾ ಝಡ್‍ಎಕ್ಸ್-25ಆರ್ ಎಂಬ ಹೆಸರಿಡಲಾಗಿದೆ.

ಹೊಸ ಅಪ್ಡೇಟ್ ಪಡೆಯುತ್ತಿರುವ ಕವಾಸಕಿ ನಿಂಜಾ ಝಡ್‍ಎಕ್ಸ್-25‍‍ಆರ್

ಕವಾಸಕಿ ಈ ಹಿಂದೆ ಟ್ವಿನ್ ಸಿಲಿಂಡರ್ ಹೊಂದಿದ್ದ ನಿಂಜಾ 250 ಬೈಕುಗಳನ್ನು ಬಿಡುಗಡೆ ಮಾಡಿ ಯಶಸ್ವಿಯಾಗಿತ್ತು. ಜಪಾನ್ ಮೂಲದ ಕಂಪನಿಯು ಈಗ ನಿಂಜಾ 300 ಮತ್ತು ನಿಂಜಾ 400 ಗಳನ್ನು ಸಹ ಮಾರಾಟ ಮಾಡಲಿದೆ. ಈ ಎರಡೂ ಬೈಕುಗಳು ಟ್ವಿನ್ ಸಿಲಿಂಡರ್ ಎಂಜಿನ್‍‍ಗಳನ್ನು ಹೊಂದಿವೆ. ಕವಾಸಕಿಯು ಈ ಸೆಗ್ಮೆಂ‍‍ಟಿನಲ್ಲಿ ಹೆಚ್ಚು ಪರ್ಫಾಮೆನ್ಸ್ ನೀಡಬೇಕಿದ್ದರೆ ಅದು ಝಡ್‍ಎಕ್ಸ್ ಪ್ರಿಫಿಕ್ಸ್ ಮತ್ತು ಆರ್‍‍ಸಫಿಕ್ಸ್ ಗಳನ್ನು ಹೊಂದಿರಬೇಕು.

ಹೊಸ ಅಪ್ಡೇಟ್ ಪಡೆಯುತ್ತಿರುವ ಕವಾಸಕಿ ನಿಂಜಾ ಝಡ್‍ಎಕ್ಸ್-25‍‍ಆರ್

ಚಿತ್ರದಲ್ಲಿರುವಂತೆ ಈ ಮೋಟಾರ್‍‍ಸೈಕಲ್ ನಿರ್ಮಾಣ ಹಂತದಲ್ಲಿದ್ದು, ಅದೇ ಅಂತಿಮವಾಗುವ ಸಾಧ್ಯತೆಗಳಿವೆ. ಈ ಚಿತ್ರವು ಮೋಟಾರ್ ಸೈಕಲ್‍‍‍‍ನ ನಿರ್ಮಾಣದ ವಾಸ್ತವವಾಗಿದ್ದು, ವದಂತಿ ಎಂಬುದನ್ನು ಅಲ್ಲಗಳೆಯುತ್ತದೆ. ಮುಂಭಾಗದಲ್ಲಿರುವ ಹೆಡ್‍‍ಲ್ಯಾಂಪ್‍‍‍ನ ಡಿಸೈನ್ ಲೀಟರ್ ಕ್ಲಾಸಿನ ಝಡ್‍ಎಕ್ಸ್ - 10ಆರ್‍‍ನ ಪ್ರೇರಣೆಯಾಗಿದೆ.

ಹೊಸ ಅಪ್ಡೇಟ್ ಪಡೆಯುತ್ತಿರುವ ಕವಾಸಕಿ ನಿಂಜಾ ಝಡ್‍ಎಕ್ಸ್-25‍‍ಆರ್

ಬಾಡಿ, ಫ್ಯೂಯಲ್ ಮತ್ತು ಹಿಂಭಾಗದ ಕೌಲಿಂಗ್‍‍ಗಳನ್ನು ನಿಂಜಾ ಹೆಚ್‍2‍ಆರ್ ಮಾದರಿಯಿಂದ ಪಡೆಯಲಾಗಿದೆ. ಝಡ್‍ಎಕ್ಸ್-25‍ಆರ್ ಬ್ಯಾಡ್ಜ್ ಅನ್ನು ಫ್ಯೂಯಲ್ ಟ್ಯಾಂಕ್‍‍ನ ಕೆಳಗೆ ಅಳವಡಿಸಲಾಗಿದೆ. ಎಂಜಿನ್‍‍ನ ಗಾತ್ರವು 4 ಸಿಲಿಂಡರ್‍‍ನ 250 ಸಿಸಿ ಮೋಟಾರ್‍‍ಸೈಕಲ್‍‍ಗೆ ತಕ್ಕಂತೆ ಇರಲಿದೆ. ಹೆಡರ್ ಮತ್ತು ಡೌನ್‍‍ಪೈಪ್‍‍ಗಳನ್ನು ಅಚ್ಚುಕಟ್ಟಾಗಿ ಅಳವಡಿಸಲಾಗಿದೆ. ಎಕ್ಸಾ‍‍ಸ್ಟ್ ಪೈಪ್‍‍ಗಳನ್ನು ಎಂಜಿನ್ ಕೆಳಗೆ ಅಳವಡಿಸಲಾಗಿದ್ದು, ಸೀಟುಗಳ ಕೆಳಗೆ, ಬಲಭಾಗದಲ್ಲಿ ಹಾದು ಹೋಗುತ್ತವೆ. 4 ಸಿಲಿಂಡರಿನ 250 ಸಿಸಿ ಬೈಕುಗಳು ಯಾವಾಗಲೂ ಪರ್ಫಾಮೆನ್ಸ್ ಗೆ ಹೆಸರುವಾಸಿಯಾಗಿವೆ.

MOST READ: ನಕಲಿ ಕಾರು ಮಾರಿ ಟೋಪಿ ಹಾಕಿದ ಡೀಲರ್...!!

ಹೊಸ ಅಪ್ಡೇಟ್ ಪಡೆಯುತ್ತಿರುವ ಕವಾಸಕಿ ನಿಂಜಾ ಝಡ್‍ಎಕ್ಸ್-25‍‍ಆರ್

1980 ಮತ್ತು 1990ರ ಕ್ವಾರ್ಟರ್ ಲೀಟರ್ ಪರ್ಫಾಮೆನ್ಸ್ ಬೈಕ್‍‍ಗಳ ಕಾಲದಲ್ಲಿಯೇ ಕವಾಸಕಿ ನಿಂಜಾ ಝಡ್‍ಎಕ್ಸ್ 250 ಆರ್ ತಯಾರು ಮಾಡಿತ್ತು. ಲಿಕ್ವಿಡ್ ಕೂಲರ್‍‍ನ ಇನ್‍‍ಲೈನ್ 4 ಸಿಲಿಂಡರ್‍‍ನ 250 ಎಂಜಿನ್ 45 ಬಿಹೆಚ್‍‍ಪಿ ಮತ್ತು 24.5 ಎನ್‍ಎಂ ಟಾರ್ಕ್ ಉತ್ಪಾದಿಸುತ್ತಿತ್ತು. ಅದಾಗಿ ಅನೇಕ ದಶಕಗಳೇ ಕಳೆದಿದ್ದು, ಟೆಕ್ನಾಲಜಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಬೆಳವಣಿಗೆ ಕಂಡಿದೆ.

ಹೊಸ ಅಪ್ಡೇಟ್ ಪಡೆಯುತ್ತಿರುವ ಕವಾಸಕಿ ನಿಂಜಾ ಝಡ್‍ಎಕ್ಸ್-25‍‍ಆರ್

ಆ ರೀತಿಯ ಮೋಟಾರ್‍‍ಸೈಕಲ್‍‍ಗಳನ್ನು 2019 ಅಥವಾ 2020ರಲ್ಲಿ ಬಿಡುಗಡೆಗೊಳಿಸಿದರೆ, ಬಿಹೆಚ್‍‍ಪಿ 50ಕ್ಕಿಂತ ಹೆಚ್ಚಿರಲಿದೆ. ಕಡಿಮೆ ಸಾಮರ್ಥ್ಯದ 4 ಸಿಲಿಂಡರ್ ಎಂಜಿನ್ 20,000 ಆರ್‍‍ಪಿ‍ಎಂ ಉತ್ಪಾದಿಸಲಿದೆ. ಕವಾಸಕಿಯ ನಿಂಜಾ ಝಡ್‍ಎಕ್ಸ್ 250 ಆರ್ 1980ರ ದಶಕದಲ್ಲಿಯೇ 19,000 ಆರ್‍‍ಪಿ‍ಎಂ ಉತ್ಪಾದಿಸುತ್ತಿತ್ತು.

ಹೊಸ ಅಪ್ಡೇಟ್ ಪಡೆಯುತ್ತಿರುವ ಕವಾಸಕಿ ನಿಂಜಾ ಝಡ್‍ಎಕ್ಸ್-25‍‍ಆರ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಈ ಮೋಟಾರ್‍‍ಸೈಕಲ್ ಉತ್ಪಾದನೆ ಮತ್ತು ಬಿಡುಗಡೆಯ ಬಗ್ಗೆ ಅನೇಕ ವದಂತಿಗಳಿವೆ. ಕವಾಸಕಿ ಕಂಪನಿಯು ಈ ಬಗ್ಗೆ ಮೌನ ತಾಳಿದೆ. 250 ಸಿಸಿಯ 4 ಸಿಲಿಂಡರ್ ಎಂಜಿನ್ ಮೋಟಾರ್ ಸೈಕಲ್ ಉತ್ಪಾದನೆ ಬಗ್ಗೆ ಸ್ಪಷ್ಟನೆಯನ್ನು ನೀಡಿಲ್ಲ ಅಥವಾ ನಿರಾಕರಿಸಿಯೂ ಇಲ್ಲ. ಆದ ಕಾರಣ ಬೈಕ್ ಪ್ರಿಯರು ಈ ಮೋಟಾರ್‍‍ಸೈಕಲ್ ಬಿಡುಗಡೆಯನ್ನು ಭವಿಷ್ಯದಲ್ಲಿ ನಿರೀಕ್ಷಿಸಬಹುದು.

Most Read Articles

Kannada
English summary
Kawasaki Ninja ZX-25R With Four-Cylinder 250cc Engine Under Development? - Read in kannada
Story first published: Wednesday, May 8, 2019, 17:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X