ವಿಶೇಷ ವಿನ್ಯಾಸವುಳ್ಳ ನೆಕ್ಸ್ಟ್ ಜನರೇಷನ್ ಮಹೀಂದ್ರಾ ಥಾರ್ ಬಿಡುಗಡೆಗೆ ದಿನಗಣನೆ
ಮಹೀಂದ್ರಾ ಸಂಸ್ಥೆಯು ಇದೇ ಮೊದಲ ಬಾರಿಗೆ ಥಾರ್ ಆಫ್-ರೋಡ್ ಕಾರು ಮಾದರಿಯನ್ನು ನೆಕ್ಸ್ಟ್ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೊಳಿಸುತ್ತಿದ್ದು, ಇದಕ್ಕಾಗಿ ವಿವಿಧ ಹಂತದ ಸ್ಪಾಟ್ ಟೆಸ್ಟಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತಿದೆ.

ದೇಶಿಯ ವಾಹನ ತಯಾರಕ ಸಂಸ್ಥೆಯಾಗಿರುವ ಮಹೀಂದ್ರಾ ಸಂಸ್ಥೆಯು 2010ರಲ್ಲಿ ಮೊದಲ ಬಾರಿಗೆ ಒಂದನೇ ತಲೆಮಾರಿನ ಥಾರ್ ಕಾರನ್ನು ಬಿಡುಗಡೆಗೊಳಿಸಿದ್ದು, ಅಂದಿನಿಂದಲೂ ಈ ಕಾರು ಯಾವುದೇ ಬದಲಾವಣೆಯನ್ನು ಪಡೆದಿಲ್ಲ. ಈ ನಿಟ್ಟಿನಲ್ಲಿ ಮಹೀಂದ್ರಾ ಸಂಸ್ಥೆಯು ಇದೀಗ ನೆಕ್ಸ್ಟ್ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಥಾರ್ ಕಾರಿನಲ್ಲಿ ಹೆಚ್ಚಿನ ನವೀಕರಣ ತರಲು ಸಜ್ಜುಗೊಂಡಿದೆ.

ಮಹೀಂದ್ರಾ ಸಂಸ್ಥೆಯು ಬಿಡುಗಡೆಗೊಳಿಸಲಿರುವ ನೆಕ್ಸ್ಟ್ ಜನರೇಶನ್ ಥಾರ್ ಕಾರಿನ ಚಿತ್ರಗಳು ಸೋರಿಕೆಯಾಗಿದ್ದು, ಈ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸೋರಿಕೆಯಾದ ಚಿತ್ರಗಳಲ್ಲಿ ಥಾರ್ ಕಾರಿನ ವಿನ್ಯಾಸಗಳ ಕುರಿತಾಗಿ ಅಷ್ಟಾಗಿ ಮಾಹಿತಿ ಇಲ್ಲವಾದರೂ ಸಹ ಹಿಂದಿನ ಮಾದರಿಗಿಂತ ಹೊಸ ಕಾರು ಗಾತ್ರದಲ್ಲಿ ದೊಡ್ಡದಿರುವುದು ಸ್ಪಷ್ಟವಾಗಿದೆ.

ಹೊಸ ತಲೆಮಾರಿನ ಥಾರ್ ಕಾರಿನಲ್ಲಿ ಮಹೀಂದ್ರಾ ಸಂಸ್ಥೆಯು ಇತ್ತೀಚೆಗೆ ಬಿಡುಗಡೆಗೊಳಿಸಿದ ಮರಾಜೊ ಕಾರಿನಲ್ಲಿ ಬಳಸಲಾದ ಅಗಲವಾದ ಲ್ಯಾಡರ್ ಫ್ರೇಮ್ ಅನ್ನು ಈ ಕಾರಿನಲ್ಲಿಯು ಬಳಸಲಾಗಿದ್ದು, ಹೆಚ್ಚಿನದಾಗಿ ಆಧುನಿಕ ಲುಕ್ ಮತ್ತು ಮರುವಿನ್ಯಾಸಗೊಳಿಸಲಾದ ವಿನ್ಯಾಸವನ್ನು ಪಡೆದುಕೊಂಡಿರಲಿದೆ.

ಹೊಸ ಮಹೀಂದ್ರಾ ಥಾರ್ ಕಾರನ್ನು ಪ್ರಸ್ತುತ ಆಫ್-ರೋಡಿಂಗ್ ಕೌಶಲ್ಯವನ್ನು ಪರೀಕ್ಷಿಸಲು ಕಾರು ಉತ್ಪಾದನಾ ಘಟಕದಿಂದ ಹೊರತೆಗೆಯಲಾಗಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಹೊಸ ಕಾರಿನ ಮಾಹಿತಿಗಳನ್ನು ಮಹೀಂದ್ರಾ ಸಂಸ್ಥೆಯು ಬಹಿರಂಗಗೊಳಿಸಲಿದೆ.

ಎಂಜಿನ್ ಸಾಮರ್ಥ್ಯ
ಹೊಸ ತಲೆಮಾರಿನ ಮಹೀಂದ್ರಾ ಥಾರ್ ಕಾರು ಹೊಸ ಡೀಸೆಲ್ ಎಂಜಿನ್ ಅನ್ನು ಪಡೆಯಬಹುದಾಗಿದ್ದು, ಪ್ರಸ್ತುತ ಇರುವ 2.5 ಲೀಟರ್ ಡೀಸೆಲ್ ಎಂಜಿನ್ 2020ರ ಏಪ್ರಿಲ್1 ರಿಂದ ಜಾರಿಯಾಗಲಿರುವ ಹೊಸ ಎಮಿಷನ್ ನಿಬಂಧನೆಗಳಿಗೆ ಅನುಗುಣವಾಗಿ ಜೋಡಣೆ ಮಾಡಬಹುದಾಗಿದೆ.

ಹಾಗೆಯೇ ಪ್ರಯಾಣಿಕರ ಸುರಕ್ಷತೆಗಾಗಿ ನೆಕ್ಟ್ಟ್ ಜನರೇಷನ್ ಥಾರ್ ಕಾರಿನಲ್ಲಿ ಈ ಬಾರಿ ಡ್ಯುಯಲ್ ಏರ್‍ಬ್ಯಾಗ್, ಬ್ರೇಕ್ ಅಸಿಸ್ಟ್, ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್), ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ (ಎಬಿಡಿ)ಯನ್ನು ಸ್ಟ್ಯಾಂಡರ್ಡ್ ಆಗಿ ನೀಡಿರಲಿದೆ.

ಇದರ ಜೊತೆಗೆ ರಿವರ್ಸ್ ಪಾರ್ಕಿಂಗ್ ಸೆನ್ಸಾರ್ಸ್, ಐಎಸ್ಒಫಿಕ್ಸ್ ಚೈಲ್ಡ್ ಸೀಟ್ ಮೌಂಟ್ಸ್, ಕ್ರಂಪಲ್ ಜೋನ್ ಮತ್ತು ಸೀಟ್ ಬೆಲ್ಟ್ ರಿಮೈಂಡರ್ ಎಂಬ ಸೇಫ್ಟಿ ಫೀಚರ್‍ಗಳನ್ನು ವಿಶೇಷವಾಗಿದ್ದು, ಸುಗಮ ಸವಾರಿಗೆ ನಾಲ್ಕು ಚಕ್ರಗಳಲ ಡಿಸ್ಕ್ ಬ್ರೇಕ್ ಪಡೆದುಕೊಳ್ಳಲಿವೆ.

ಅಂತೆಯೇ ಮಹೀಂದ್ರಾ ಥಾರ್ ಕಾರಿನಲ್ಲಿ ಎಂದಿನಂತೆಯೇ 4 ಡಬ್ಲ್ಯೂಡಿ ಸಿಸ್ಟಂ ಅನ್ನು ಹೊಂದಿರಲಿದ್ದು, ಹಳೆಯ ಥಾರ್ ಕಾರಿಗಿಂತ ಹೊಸ ಥಾರ್ ಕಾರಿನ ಬೆಲೆಯಲ್ಲಿ ಮಾರ್ಪಾಡುಗಳನ್ನು ಕೂಡಾ ಮಾಡಲು ಮಹೀಂದ್ರಾ ಸಂಸ್ಥೆಯು ಎದುರು ನೋಡುತ್ತಿದೆ.
MOST READ: ಭಾರತ್‌ಮಾಲಾ 2ನೇ ಹಂತದ ಯೋಜನೆಯಲ್ಲಿ ಕರ್ನಾಟಕಕ್ಕೆ ಮತ್ತೊಂದು ಸಿಹಿಸುದ್ದಿ..!

ಪ್ರಸ್ತುತ ತಲೆಮಾರಿನ ಥಾರ್ ಕಾರು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 9.29 ಲಕ್ಷದ ಮಾರಾಟವನ್ನು ಪಡೆದುಕೊಂಡಿದ್ದು, ಹೊಸ ಫೀಚರ್ಸ್ ಪಡೆಯಲಿರುವ ಹೊಸ ಥಾರ್ ಕಾರುಗಳು ಕನಿಷ್ಠ ಅಂದ್ರು ರೂ. 1.50 ಲಕ್ಷದಿಂದ ರೂ.2.50 ಲಕ್ಷ ಹೆಚ್ಚುವರಿ ಬೆಲೆ ಪಡೆಯಲಿವೆ.

ಇನ್ನು ಹೊಸ ತಲೆಮಾರಿನ ಥಾರ್ ಕಾರು ಬಿಡುಗಡೆಗೊಂಡಲ್ಲಿ ಮಾರುಕಟ್ಟೆಯಲ್ಲಿರುವ ಫೋರ್ಸ್ ಗೂರ್ಖಾ ಮತ್ತು ಮಾರುತಿ ಸುಜುಕಿ ಸಂಸ್ಥೆಯು ಪರಿಚಯಿಸಲಿರುವ ಹೊಸ ಜಿಮ್ನಿ ಕಾರುಗಳಿಗೆ ಪೈಪೋಟಿ ನೀಡಲಿದ್ದು, ಆಫ್ ರೋಡ್ ಪ್ರಿಯರಿಗೆ ಹೊಸ ಥಾರ್ ಮತ್ತಷ್ಟು ಹೊಸ ಅನುಭವ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.


Click it and Unblock the Notifications