ಶೀಘ್ರದಲ್ಲೇ ಅನಾವರಣಗೊಳ್ಳಲಿದೆ ಮಹೀಂದ್ರಾ ಥಾರ್ ಸಿಗ್ನೇಚರ್

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ಹೊಸ ಥಾರ್ ಸಿಗ್ನೇಚರ್ ಆವೃತ್ತಿಯನ್ನು ಬಿಡುಗಡೆ ಮಾಡಿ ಈಗಿನ ತಲೆಮಾರಿನ ಮಹೀಂದ್ರಾ ಥಾರ್ ಆವೃತ್ತಿಯ ಉತ್ಪಾದನೆಯನ್ನು ನಿಲ್ಲಿಸಲಿದೆ. ವದಂತಿಗಳ ಪ್ರಕಾರ ಸಿಗ್ನೇಚರ್ ಆವೃತ್ತಿಯು ಚಾಲ್ತಿಯಲ್ಲಿರುವ ಮಾದರಿಗೆ ಗುಡ್ ಬೈ ಹೇಳಲಿದೆ.

ಶೀಘ್ರದಲ್ಲೇ ಅನಾವರಣಗೊಳ್ಳಲಿದೆ ಮಹೀಂದ್ರಾ ಥಾರ್ ಸಿಗ್ನೇಚರ್

ಆಟೋ ಕಾರ್ ಇಂಡಿಯಾ ಸುದ್ದಿ ಸಂಸ್ಥೆಯ ವರದಿಗಳ ಪ್ರಕಾರ, ಮಹೀಂದ್ರಾ ಥಾರ್ ಸಿಗ್ನೇಚರ್ ಆವೃತ್ತಿಯನ್ನು, 5 ಸ್ಪೀಡಿನ ಮ್ಯಾನುವಲ್ ಟ್ರಾನ್ಸ್ ಮಿಷನ್ ಹೊಂದಿರುವ 2.5 ಲೀಟರಿನ ಸಿಆರ್‍‍ಡಿಇ (ಕಾಮನ್ ರೇಲ್ ಡೀಸೆಲ್ ಎಂಜಿನ್) ಎಂಜಿನ್ ನೊಂದಿಗೆ ಬಿಡುಗಡೆ ಮಾಡಲಾಗುವುದು. ಈ ಆವೃತ್ತಿಯಲ್ಲಿ 140 ಬಿಹೆಚ್‍ಪಿ ಅಥವಾ 120 ಬಿಹೆಚ್‍ಪಿಯ ಎಂಜಿನ್ ನೀಡಲಾಗುವುದು, ಮುಂಬರುವ ದಿನಗಳಲ್ಲಿ ಮಹೀಂದ್ರಾ ಕಂಪನಿಯು ಪೆಟ್ರೋಲ್ ಮಾದರಿಯನ್ನು ಬಿಡುಗಡೆ ಮಾಡುವ ಆಲೋಚನೆಯಲ್ಲಿದೆ.

ಶೀಘ್ರದಲ್ಲೇ ಅನಾವರಣಗೊಳ್ಳಲಿದೆ ಮಹೀಂದ್ರಾ ಥಾರ್ ಸಿಗ್ನೇಚರ್

ಸಿಗ್ನೇಚರ್ ಆವೃತ್ತಿಯಲ್ಲಿ ಬಾನೆಟ್ ಮೇಲೆ ಬ್ಲಾಕ್ ಡೆಕಾಲ್ ಅಳವಡಿಸಲಾಗುವುದು. ಮುಂಭಾಗದ ಬಂಪರ್ ಮೇಲೆ ಸಿಲ್ವರ್ ಫಿನಿಷಿಂಗ್ ಮಾಡಲಾಗಿದೆ. ಫೆಂಡರ್ ಗಳ ಮೇಲೆ ಆನಂದ್ ಮಹೀಂದ್ರಾರವರ ಸಹಿ ಹೊಂದಿರುವ ಸಿಗ್ನೇಚರ್ ಎಡಿಷನ್ ಎಂಬ ಬ್ಯಾಡ್ಜ್ ಅಳವಡಿಸಲಾಗುವುದು. ಆನಂದ್ ಮಹೀಂದ್ರಾ ರವರು ಮಹೀಂದ್ರಾ ಗ್ರೂಪಿನ ಅಧ್ಯಕ್ಷರಾಗಿದ್ದಾರೆ.

ಶೀಘ್ರದಲ್ಲೇ ಅನಾವರಣಗೊಳ್ಳಲಿದೆ ಮಹೀಂದ್ರಾ ಥಾರ್ ಸಿಗ್ನೇಚರ್

ಮಹೀಂದ್ರಾ ಸ್ಕಾರ್ಪಿಯೋ ಮತ್ತು ಮಾರ್ಕ್ಸ್ ಮನ್ ಗಳಲ್ಲಿ ಅಳವಡಿಸಲಾಗಿದ್ದ 5 ಸ್ಪೋಕ್ ನ 15 ಇಂಚಿನ ಅಲಾಯ್ ವ್ಹೀಲ್ ಗಳನ್ನು ಈ ವಾಹನದಲ್ಲೂ ಅಳವಡಿಸಲಾಗಿದೆ. ಥಾರ್ ಸಿಗ್ನೇಚರ್ ಆವೃತ್ತಿಯ ಒಳ ಭಾಗವು ಹೆಚ್ಚು ಕ್ಯಾಬಿನ್ ಸ್ಪೇಸ್ ಹೊಂದಿದ್ದು, ಮುಂದೆ ಮುಖ ಮಾಡಿರುವ ರೇರ್ ಸೀಟುಗಳನ್ನು, ಲೆದರ್ ನ ಸೀಟ್ ಕವರ್ ಗಳನ್ನು ಹೊಂದಿವೆ.

ಶೀಘ್ರದಲ್ಲೇ ಅನಾವರಣಗೊಳ್ಳಲಿದೆ ಮಹೀಂದ್ರಾ ಥಾರ್ ಸಿಗ್ನೇಚರ್

ಈ ವಾಹನದಲ್ಲಿ ಎಬಿಎಸ್ ಅನ್ನು ಸ್ಟಾಂಡರ್ಡ್ ಆಗಿ ನೀಡಲಾಗುತ್ತದೆ. ಉತ್ತಮವಾದ ಎನ್‍ವಿಹೆಚ್ ಲೆವೆಲ್ ಗಳನ್ನು ಸಹ ನೀಡಲಾಗುವುದು. ಈಗಿರುವ ರೆಗ್ಯುಲರ್ ಥಾರ್ ವಾಹನಕ್ಕಿಂತ ಅಧಿಕ ಫೀಚರ್ ಗಳನ್ನು ಹೊಸ ಮಹೀಂದ್ರಾ ಥಾರ್ ನಲ್ಲಿ ನೀಡಲಾಗುತ್ತದೆ. ಮಹೀಂದ್ರಾ ಕೇವಲ 700 ವಾಹನಗಳನ್ನು ಉತ್ಪಾದಿಸಲಿದ್ದು, ನಪೋಲಿ ಬ್ಲಾಕ್ ಮತ್ತು ಆಕ್ವಾ ಮರೀನ್ ಎಂಬ ಎರಡು ಬಣ್ಣಗಳಲ್ಲಿ ಮಾರಾಟ ಮಾಡಲಿದೆ. ಬೆಲೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ನೀಡದೇ ಇದ್ದರೂ, ಭಾರತದಲ್ಲಿನ ಎಕ್ಸ್ ಶೋರೂಂ ದರದಂತೆ ಬೆಲೆಯು ರೂ.10 ಲಕ್ಷದಿಂದ ರೂ.13 ಲಕ್ಷದವರೆಗೆ ಇರಲಿದೆ.

ಶೀಘ್ರದಲ್ಲೇ ಅನಾವರಣಗೊಳ್ಳಲಿದೆ ಮಹೀಂದ್ರಾ ಥಾರ್ ಸಿಗ್ನೇಚರ್

ಥಾರ್ ಸಿಗ್ನೇಚರ್ ಆವೃತ್ತಿಯ ಜೊತೆಗೆ ಮಹೀಂದ್ರಾ ಎರಡನೇ ತಲೆಮಾರಿನ ಥಾರ್ ಉತ್ಪಾದನೆಯತ್ತ ಗಮನ ಹರಿಸಿದ್ದು, ಈ ವಾಹನವನ್ನು 2019ರ ಆಟೋ ಎಕ್ಸ್ ಪೋ ನಲ್ಲಿ ಅನಾವರಣಗೊಳಿಸುವ ಸಾಧ್ಯತೆಗಳಿವೆ. ಈಗಿನ ತಲೆಮಾರಿನ ಮಹೀಂದ್ರಾ ಥಾರ್ ನ ಉತ್ಪಾದನೆಯನ್ನು 2010ರಿಂದ ಮಾಡಲಾಗುತ್ತಿದೆ. ಈ ವಾಹನವು 3 ಮಾದರಿಗಳಲ್ಲಿ ಮತ್ತು 5 ಬಣ್ಣಗಳಲ್ಲಿ ಲಭ್ಯವಿದೆ. ಈ ವಾಹನಗಳ ಬೆಲೆಯು ಭಾರತದಲ್ಲಿನ ಎಕ್ಸ್ ಶೋ ರೂಂ ದರದಂತೆ 6.72 ಲಕ್ಷಗಳಿಂದ ರೂ.9.49 ಲಕ್ಷಗಳಾಗಿದೆ.

MOST READ: ಆಕಾಶ್ ಅಂಬಾನಿಯ ಲ್ಯಾಂಬೋರ್ಗಿನಿ ಉರುಸ್ ಕಾರು ಚಲಾಯಿಸಿದ ರಣಬೀರ್ ಕಪೂರ್

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಸಿಗ್ನೇಚರ್ ಆವೃತ್ತಿಯ ವಾಹನವನ್ನು, ಥಾರ್ ಮಾದರಿಯ ಕಾರುಗಳನ್ನು ಇಷ್ಟಪಡುವ ಜನರಿಗಾಗಿಯೇ ಹೇಳಿ ಮಾಡಿಸಿದಂತಿದೆ. ಈ ಆವೃತ್ತಿಯ ಕಾರು ಹೆಚ್ಚು ಫೀಚರ್ ಗಳನ್ನು ಹೊಂದಿದ್ದರೂ ಒಳಗೆ ಕುಳಿತಿರುವಾಗ ಆಫ್ ರೋಡ್ ವಾಹನದಲ್ಲಿ ಕುಳಿತಿರುವಂತೆ ಭಾಸವಾಗುತ್ತದೆ.

More from DriveSpark

Article Published On: Saturday, May 4, 2019, 15:15 [IST]
English summary
Mahindra Thar Signature Edition Unveiling Soon — Signed By The Man - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+