ಆಕಾಶ್ ಅಂಬಾನಿಯ ಲ್ಯಾಂಬೋರ್ಗಿನಿ ಉರುಸ್ ಕಾರು ಚಲಾಯಿಸಿದ ರಣಬೀರ್ ಕಪೂರ್

ಭಾರತದ ಅತಿ ದೊಡ್ಡ ಶ್ರೀಮಂತ ಕುಟುಂಬವಾದ ಅಂಬಾನಿ ಕುಟುಂಬದಲ್ಲಿ ಅನೇಕ ಐಷಾರಾಮಿ ಕಾರುಗಳಿವೆ. ಅಂಬಾನಿಯವರ ಗ್ಯಾರೇಜ್ ನಲ್ಲಿರುವ ಲಗ್ಷುರಿ ಕಾರುಗಳಿಗಂತೂ ಬರವೇ ಇಲ್ಲ. ಅಂಬಾನಿ ಕುಟುಂಬಕ್ಕೂ ಬಾಲಿವುಡ್ ಸ್ಟಾರ್ ಗಳಿಗೂ ನಡುವೆ ನಂಟಿದ್ದು,ಅಂಬಾನಿ ಕುಟುಂಬದಲ್ಲಿ ನಡೆಯುವ ಬಹುತೇಕ ಕಾರ್ಯಕ್ರಮಗಳಲ್ಲಿ ಬಾಲಿವುಡ್ ದಿಗ್ಗಜರ ದಂಡೇ ನೆರೆದಿರುತ್ತದೆ. ಇದರಿಂದ ಕಪೂರ್ ಕುಟುಂಬದ ಕುಡಿ ರಣಬೀರ್ ಕಪೂರ್ ಸಹ ಹೊರತಾಗಿಲ್ಲ. ಇವರು ಮುಖೇಶ್ ಅಂಬಾನಿಯವರ ಪುತ್ರ ಆಕಾಶ್ ಅಂಬಾನಿಯವರ ಆಪ್ತ ಸ್ನೇಹಿತರಾಗಿದ್ದಾರೆ. ಇತ್ತೀಚಿಗೆ ರಣಬೀರ್ ಕಪೂರ್ ರವರು ಆಕಾಶ್ ಅಂಬಾನಿಯವರ ಲ್ಯಾಂಬೋರ್ಗಿನಿ ಕಾರನ್ನು ಚಲಾಯಿಸುತ್ತಿರುವುದನ್ನು ವೀಡಿಯೋದಲ್ಲಿ ಸೆರೆ ಹಿಡಿಯಲಾಗಿದೆ.

ಈ ವೀಡಿಯೋವನ್ನು ಮೊಬೈಲ್ ಫೋನ್ ನಲ್ಲಿ ಸೆರೆ ಹಿಡಿಯಲಾಗಿದ್ದು, ಇದರಲ್ಲಿ ರಣಬೀರ್ ಕಪೂರ್ ಮತ್ತು ಆಕಾಶ್ ಅಂಬಾನಿ ಜೊತೆಯಲ್ಲಿ ಕುಳಿತಿರುವುದನ್ನು ಕಾಣಬಹುದು. ರಣಬೀರ್ ಕಪೂರ್ ಲ್ಯಾಂಬೋರ್ಗಿನಿ ಕಾರನ್ನು ಚಲಾಯಿಸುತ್ತಿದ್ದರೆ, ಆಕಾಶ್ ಅಂಬಾನಿ ಅವರ ಪಕ್ಕದಲ್ಲಿ ಕುಳಿತಿರುವುದನ್ನು ಕಾಣಬಹುದು. ಪ್ಯಾಪರಾಜಿ ಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ಯಾವುದೇ ಭದ್ರತೆಯನ್ನು ತೆಗೆದುಕೊಳ್ಳದೇ ಇವರಿಬ್ಬರೇ ಕಾರಿನಲ್ಲಿ ಹೋಗುತ್ತಿರುವ ದೃಶ್ಯವನ್ನು ಕಾಣಬಹುದು.

ಆಕಾಶ್ ಅಂಬಾನಿಯ ಲ್ಯಾಂಬೋರ್ಗಿನಿ ಉರುಸ್ ಕಾರು ಚಲಾಯಿಸಿದ ರಣಬೀರ್ ಕಪೂರ್

ಅಂಬಾನಿ ಕುಟುಂಬದ ಎಲ್ಲಾ ಸದಸ್ಯರಿಗೂ ಝಡ್ + ಸೆಕ್ಯೂರಿಟಿ ಒದಗಿಸಲಾಗಿದ್ದು, ಸಾಮಾನ್ಯವಾಗಿ ಇವರುಗಳು ಓಡಾಡುವ ಲ್ಯಾಂಡ್ ರೋವರ್ ಡಿಸ್ಕವರಿ, ಲ್ಯಾಂಡ್ ರೋವರ್ ರೇಂಜ್ ರೋವರ್, ಬಿಎಂಡಬ್ಲೂ ಎಕ್ಸ್5, ಫೋರ್ಡ್ ಎಂಡಿವರ್ ಮತ್ತು ಮಹೀಂದ್ರಾ ಸ್ಕಾರ್ಪಿಯೋ ವಾಹನಗಳಿಗೆ ಬಿಗಿ ಭದ್ರತೆಯನ್ನು ಒದಗಿಸಲಾಗಿರುತ್ತದೆ.

ಆಕಾಶ್ ಅಂಬಾನಿಯ ಲ್ಯಾಂಬೋರ್ಗಿನಿ ಉರುಸ್ ಕಾರು ಚಲಾಯಿಸಿದ ರಣಬೀರ್ ಕಪೂರ್

ಆದರೆ ಲ್ಯಾಂಬೋರ್ಗಿನಿಯ ಉರುಸ್ ಕಾರಿಗೆ ಯಾವುದೇ ಭದ್ರತೆಯನ್ನು ನೀಡಲಾಗಿಲ್ಲ. ಲ್ಯಾಂಬೋರ್ಗಿನಿ ಉರುಸ್ ಕಾರು ಇತ್ತೀಚಿಗೆ ಅಂಬಾನಿಯವರ ಗ್ಯಾರೇಜ್ ಸೇರಿದೆ. ಈಗಾಗಲೇ ಈ ಗ್ಯಾರೇಜ್ ನಲ್ಲಿ ಲ್ಯಾಂಡ್ ರೋವರ್ ರೇಂಜ್ ರೋವರ್ ಎಸ್‍ವಿಆರ್, 2 ಬೆಂಟ್ಲಿ ಬೆಂಟಾಯ್ಗಾ, ರೋಲ್ಸ್ ರಾಯ್ಸ್ ಫ್ಯಾಂಟಮ್ ಡಿಹೆಚ್‍ಸಿ ಮತ್ತು ರೋಲ್ಸ್ ರಾಯ್ಸ್ ಕಲಿನನ್ ಕಾರುಗಳಿವೆ.

ಆಕಾಶ್ ಅಂಬಾನಿಯ ಲ್ಯಾಂಬೋರ್ಗಿನಿ ಉರುಸ್ ಕಾರು ಚಲಾಯಿಸಿದ ರಣಬೀರ್ ಕಪೂರ್

ರಣಬೀರ್ ಕಪೂರ್ ಸಹ ಕಾರುಗಳ ಬಗ್ಗೆ ಕ್ರೇಜ್ ಹೊಂದಿದ್ದು ಮರ್ಸಿಡಿಸ್ ಎಎಂಜಿ ಜಿ63 ಎಸ್‍ಯುವಿ, ಲ್ಯಾಂಡ್ ರೋವರ್ ರೇಂಜ್ ರೋವರ್ ಆಟೋಬಯೋಗ್ರಾಫಿ, ಆಡಿ ಎ8 ಎಲ್, ಆಡಿ ಆರ್8 ಮುಂತಾದ ಅನೇಕ ಐಷಾರಾಮಿ ಕಾರುಗಳ ಒಡೆಯರಾಗಿದ್ದಾರೆ. ರಣಬೀರ್ ಕಪೂರ್ ಸಹ ಉರುಸ್ ಕಾರಿನ ಒಡೆಯರಾಗುವ ಸಾಧ್ಯತೆಗಳಿದ್ದು, ಅದಕ್ಕಾಗಿಯೇ ತನ್ನ ಆಪ್ತ ಸ್ನೇಹಿತನ ಬಳಿಯಿರುವ ಉರುಸ್ ಕಾರನ್ನು ಚಾಲನೆ ಮಾಡಿದ್ದಾರೆ.

ಆಕಾಶ್ ಅಂಬಾನಿಯ ಲ್ಯಾಂಬೋರ್ಗಿನಿ ಉರುಸ್ ಕಾರು ಚಲಾಯಿಸಿದ ರಣಬೀರ್ ಕಪೂರ್

ಲ್ಯಾಂಬೋರ್ಗಿನಿ ಉರುಸ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗುತ್ತಿದ್ದು, ಬಹಳಷ್ಟು ಉರುಸ್ ಕಾರುಗಳನ್ನು ಭಾರತದ ರಸ್ತೆಗಳಲ್ಲಿ ಕಾಣಬಹುದಾಗಿದೆ. ಭಾರತದಲ್ಲಿ ಮಾತ್ರವಲ್ಲದೇ ಉರುಸ್ ಪ್ರಪಂಚದ ಅನೇಕ ಭಾಗಗಳಲ್ಲಿ ಜನಪ್ರಿಯವಾಗಿದೆ. ಭಾರತದ ಎಕ್ಸ್ ಶೋರೂಂ ದರದಲ್ಲಿರುವಂತೆ ಈ ಕಾರಿಗೆ ರೂ 3 ಕೋಟಿ ಬೆಲೆಯನ್ನು ನಿಗದಿಪಡಿಸಲಾಗಿದ್ದು, ಪ್ರಪಂಚದ ಅತಿ ದುಬಾರಿ ಕಾರುಗಳಲ್ಲಿ ಒಂದಾಗಿದೆ.

ಆಕಾಶ್ ಅಂಬಾನಿಯ ಲ್ಯಾಂಬೋರ್ಗಿನಿ ಉರುಸ್ ಕಾರು ಚಲಾಯಿಸಿದ ರಣಬೀರ್ ಕಪೂರ್

ಲ್ಯಾಂಬೋರ್ಗಿನಿ ಉರುಸ್ 4.0 ಲೀಟರಿನ ಟ್ವಿನ್ ಟರ್ಬೊಚಾರ್ಜ್ ಎಂಜಿನ್ ಹೊಂದಿದ್ದು, ಅತಿ ಹೆಚ್ಚಿನ 641 ಪಿಎಸ್ ಪವರ್ ಮತ್ತು 850 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 8 ಸ್ಪೀಡಿನ ಟ್ರಾನ್ಸ್ ಮಿಷನ್ ಹೊಂದಿದ್ದು ಎಲ್ಲಾ 4 ವ್ಹೀಲ್ ಗಳಿಗೆ ಪವರ್ ನೀಡುತ್ತದೆ. ಬ್ಲೂ ಅಸ್ಟ್ರಾಯಿಸ್ ಬಣ್ಣದಲ್ಲಿರುವ ಉರುಸ್ ಕಾರು ಅತ್ಯಾಕರ್ಷಕವಾಗಿ ಕಾಣುತ್ತದೆ.

ಆಕಾಶ್ ಅಂಬಾನಿಯ ಲ್ಯಾಂಬೋರ್ಗಿನಿ ಉರುಸ್ ಕಾರು ಚಲಾಯಿಸಿದ ರಣಬೀರ್ ಕಪೂರ್

ಕಾರಿನ ನಂಬರ್ ಪ್ಲೇಟ್ ನಿಂದ ಈ ಕಾರು ಎಕ್ಸಾಟಿಕ್ ಕಾರು ಕಂಪನಿಗೆ ರಿಜಿಸ್ಟರ್ ಆಗಿರುವ ಬಗ್ಗೆ ತಿಳಿದು ಬರುತ್ತದೆ. ಅಂಬಾನಿಯವರ ಬಳಿಯಿರುವ ರೋಲ್ಸ್ ರಾಯ್ಸ್ ಕಲಿನನ್ ಕಾರಿನ ನಂಬರ್ ಪ್ಲೇಟ್ ನಲ್ಲೂ ಇದೇ ಕಂಪನಿಯ ಹೆಸರಿದೆ. ತಮ್ಮ ಐಡೆಂಟಿಟಿಯನ್ನು ಮರೆಮಾಡುವ ಉದ್ದೇಶದಿಂದ ಕಾರುಗಳನ್ನು ರಿಜಿಸ್ಟರ್ ಮಾಡಿಸಲೆಂದೇ ಹೊಸ ಕಂಪನಿಯನ್ನು ಶುರು ಮಾಡಿರುವ ಸಾಧ್ಯತೆಗಳಿವೆ. ಅಂಬಾನಿಯವರ ಗ್ಯಾರೇಜ್ ನಲ್ಲಿ ಬೆಂಟ್ಲಿ ಬೆಂಟಾಯ್ಗಾ ವಿ12, ಬೆಂಟ್ಲಿ ಬೆಂಟಾಯ್ಗಾ ವಿ8, ಲ್ಯಾಂಡ್ ರೋವರ್ ರೇಂಜ್ ರೋವರ್ ಆಟೋಬಯೋಗ್ರಾಫಿ, ಲ್ಯಾಂಡ್ ರೋವರ್ ರೇಂಜ್ ರೋವರ್ ಎಸ್‍ವಿಆರ್, ಮರ್ಸಿಡಿಸ್ ಬೆಂಜ್ ಜಿ-ವ್ಯಾಗನ್ ಮೊದಲಾದ ಕಾರುಗಳಿವೆ. ಬಹುತೇಕ ಕಾರುಗಳನ್ನು ಅಂಬಾನಿಯವರ ಅಧಿಕೃತ ನಿವಾಸದಲ್ಲಿ ನಿಲ್ಲಿಸಲಾಗಿದೆ.

MOST READ: ಎಕ್ಸ್ ಟ್ರೀಮ್ 200ಎಸ್ V/s ಪಲ್ಸರ್ ಆರ್‍ಎಸ್ 200 - ಯಾವುದು ಬೆಸ್ಟ್?

More from DriveSpark

Article Published On: Friday, May 3, 2019, 16:59 [IST]
English summary
Ranbir Kapoor driving Akash Ambani’s Lamborghini Urus super SUV - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+