ಸ್ಥಗಿತಗೊಂಡ ಮಹೀಂದ್ರಾ ಎಕ್ಸ್‌ಯುವಿ 500ನ ಎಡಬ್ಲ್ಯುಡಿ ಪೆಟ್ರೋಲ್, ಡೀಸೆಲ್ ಆವೃತ್ತಿ
ಮಹೀಂದ್ರಾ ಎಕ್ಸ್‌ಯುವಿ 500 ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಯಲ್ಲಿ ಆಲ್-ವ್ಹೀಲ್-ಡ್ರೈವ್(ಎಡಬ್ಲ್ಯುಡಿ) ಆಟೋಮ್ಯಾಟಿಕ್ ರೂಪಾಂತರವನ್ನು ಸ್ಥಗಿತಗೊಳಿಸಲಾಗಿದೆ. ಪೆಟ್ರೋಲ್ ಎಂಜಿನ್ ಮಾದರಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.

ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಆಯ್ಕೆಯಲ್ಲಿ ಈಗ ಡೀಸೆಲ್ ಎಂಜಿನ್ ಮತ್ತು ಫ್ರಂಟ್-ವ್ಹೀಲ್-ಡ್ರೈವ್ ಕಾನ್ಪಿಗರೇಶನ್‍ನೊಂದಿಗೆ ಮಾತ್ರ ಲಭ್ಯವಿದೆ. ಎಕ್ಸ್‌ಯುವಿ 500 ಕಾರಿನ ಎಲ್ಲಾ ರೂಪಾಂತರದ ದರವನ್ನು ಹೆಚ್ಚಿಸಲಾಗಿದೆ. ಭಾರತದ ಎಕ್ಸ್ ಶೋ ರೂಂ ದರದಂತೆ ಮೂಲ ರೂಪಾಂತರದ ಎಸ್‍ಯುವಿ ಕಾರಿನ ಬೆಲೆಯು ರೂ.12.31 ಲಕ್ಷವಾಗಿದೆ. ಈ ಕಾರಿನ ಬೆಲೆ ರೂ. 8,000 ಹೆಚ್ಚಿಸಲಾಗಿದ್ದರೆ, ಉಳಿದೆಲ್ಲಾ ರೂಪಾಂತರಗಳ ಬೆಲೆಯನ್ನು ರೂ.1,000 ನಿಂದ 2,000ದವರೆಗೆ ಏರಿಕೆಯಾಗಿದೆ.

ಎಕ್ಸ್‌ಯುವಿ 500 ಪೆಟ್ರೋಲ್ ರೂಪಾಂತರವನ್ನು ಕೇವಲ ಟಾಪ್-ಸ್ಪೆಕ್ ಜಿ ಎಟಿ ರೂಪಾಂತರದಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ. ಈ ಕಾರು 2.2 ಲೀಟರ್ ಟಾರ್ಬೋಜಾಜ್ಡ್ 4- ಸಿಲಿಂಡರ್ ಯುನಿಟ್ ಎಂಜಿನ್ ಹೊಂದಿದ್ದು, 139 ಬಿಎಚ್‍ಪಿ ಪವರ್ ಮತ್ತು 320 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಫವರ್‍ಫುಲ್ ಪೆಟ್ರೋಲ್ ಎಂಜಿನ್ ಹೊಂದಿರುವ ಈ ಕಾರು 7 ಸೀಟ್ ಅನ್ನು ಹೊಂದಿದೆ. ಪೆಟ್ರೋಲ್ ಎಂಜಿನ್ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ಹೊಂದಿದೆ.

ಎಕ್ಸ್‌ಯುವಿ 500 ಡೀಸೆಲ್ ಆವೃತ್ತಿಯು 2.2 ಲೀಟರ್ 4-ಸಿಲಿಂಡರ್ ಎಂಜಿನ್ ಹೊಂದಿದ್ದು, 153 ಬಿಎಚ್‍ಪಿ ಪವರ್ ಮತ್ತು 360 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಕ್ಸ್‌ಯುವಿ 500 ಡೀಸೆಲ್ ಆವೃತ್ತಿಯಲ್ಲಿ ಮಲ್ಟಿಪಲ್ ಆಯ್ಕೆಯನ್ನು ಹೊಂದಿದೆ. ಮೊದಲನೆ ಆಯ್ಕೆ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅಥವಾ 6-ಸ್ಪೀಡ್ ಮ್ಯಾನುವಲ್ ಗೇರ್‍ಬಾಕ್ಸ್ ನೊಂದಿಗೆ 4-ವ್ಹೀಲ್-ಡ್ರೈವ್ ಸಿಸ್ಟಮ್ ಇರುವುದು ಮತ್ತು ಇಲ್ಲದಿರುವುದು ಕೂಡ ಇದೆ.

ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಆಯ್ಕೆಗಳಲ್ಲಿ ಟಾಪ್-ಸ್ಪೆಕ್ ರೂಪಾಂತರವನ್ನು ಹೊಂದಿರುವ ಕೆಲವೇ ವಾಹನಗಳಲ್ಲಿ ಮಹೀಂದ್ರಾ ಎಕ್ಸ್‌ಯುವಿ 500 ಕೂಡ ಒಂದಾಗಿದೆ. ಮುಂದಿನ ವರ್ಷ ಬಿಎಸ್-6 ಮಾಲಿನ್ಯ ನಿಯಮ ಜಾರಿಯಾಗುವುದರಿಂದ ಮಹೀಂದ್ರಾ ಎಕ್ಸ್‌ಯುವಿ 500 ಕಾರು ಕೂಡ ಶೀಘ್ರದಲ್ಲೇ ಬಿಎಸ್-6 ಪ್ರೇರಿತ ಎಂಜಿನ್ ಅನ್ನು ಪರಿಚಯಿಸಲಿದೆ. ಕಂಪನಿಯು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‍ನಲ್ಲಿ ಎಡಬ್ಲ್ಯುಡಿ ಮಾದರಿಯಿಂದ ಮಾರಾಟದಲ್ಲಿ ಕುಸಿತ ಕಂಡಿರುವುದು ಎಂದು ಕಂಪನಿ ನಂಬಿದೆ. ಇದೇ ಕಾರಣದಿಂದ ಕಂಪನಿ ಎಡಬ್ಲ್ಯುಡಿಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.

ಹೊಸ ಜನರೇಷನ್ ಎಕ್ಸ್‌ಯುವಿ 500 ಉತ್ಪಾದನೆಯಲ್ಲಿ ತೊಡಗಿದ್ದಾರೆ. ಹೊಸ ಎಕ್ಸ್‌ಯುವಿ 500 ಹೊಸ ಅಪ್‍ಡೇಟ್‍ಗಳೊಂದಿಗೆ ಬರಲಿದೆ. ಇದು ಮಾರುಕಟ್ಟೆಯಲ್ಲಿ ಮಾರಾಟದ ಸಂಖ್ಯೆಯನ್ನು ಹೆಚ್ಚಿಸುದಕ್ಕೆ ಸಹಾಯ ಮಾಡುತ್ತದೆ. ನೆಕ್ಸ್ಟ್ ಜನರೇಷನ್ ಎಕ್ಸ್‌ಯುವಿ 500 ಕಾರು ಕಿಯಾ ಸೆಲ್ಟೋಸ್,ಎಂಜಿ ಹೆಕ್ಟರ್, ಜೀಪ್ ಕ್ಯಾಂಪಸ್ ಮತ್ತು ಟಾಟಾ ಹ್ಯಾರಿಯರ್ ಕಾರುಗಳಿಗೆ ಪೈಪೋಟಿ ನೀಡಲಿದೆ.

ಮುಂದಿನ 2020 ರಲ್ಲಿ ಬರಲಿರುವ ಎಕ್ಸ್‌ಯುವಿ 500 ಕಾರು ಹೊಸ ವೈಶಿಷ್ಟ್ಯಗಳೊಂದಿಗೆ ಎಕ್ಸ್ಟಿರಿಯರ್ ಮತ್ತು ಇಂಟಿರಿಯರ್ ನಲ್ಲಿ ಹೊಸ ವಿನ್ಯಾಸದೊಂದಿಗೆ ಬರಲಿದೆ. ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಎಬಿಎಸ್ ಜೊತೆ ಇಬಿಡಿ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೊಲ್ ಸಿಸ್ಟಂ, ಸ್ಪೀಡ್ ಅಲರ್ಟ್, ಸೀಟ್ ಬೆಲ್ಟ್ ರಿಮೆಂಡರ್ ಸೌಲಭ್ಯಗಳು ಇರಲಿದೆ. ಇಂಟಿರಿಯರ್ ಕ್ಯಾಬಿನ್ ಹೆಚ್ಚು ಪ್ರೀಮಿಯಂ ಮತ್ತು ಮಾರ್ಡನ್ ಲುಕ್ ಹೊಂದಲಿದೆ.
MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಹೊಸ ಕಾರಿನಲ್ಲಿ 6 ಏರ್‌ಬ್ಯಾಗ್‌ಗಳು, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ರೇರ್ ಪಾರ್ಕಿಂಗ್ ಕ್ಯಾಮೆರಾ, ಸನ್‌ರೂಫ್, ರೂಫ್ ರೈಲ್ಸ್, ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಫಾಗ್ ಲ್ಯಾಂಪ್, ಟರ್ನ್ ಇಂಡಿಕೇಟಕ್ ಲೈಟ್, ಸಿಲ್ವರ್ ಸ್ಕೀಡ್ ಪ್ಲೇಟ್, ರಿಯರ್ ಎಸಿ ವೆಂಟ್ಸ್, ಲೆದರ್ ಸೀಟುಗಳು, 6 ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಡ್ರೈವರ್ ಸೀಟು ಮತ್ತು ವಿವಿಧ ಮಾಹಿತಿಗಳನ್ನು ನೀಡುವ ಟಚ್ ಸ್ಕ್ರಿನ್ ಇನ್ಪೋಟೈನ್‌ಟೆಂಟ್ ಸಿಸ್ಟಂ ಜೋಡಣೆ ಮಾಡಲಾಗಿದೆ.

ಮಹೀಂದ್ರಾ ಕಂಪನಿಯು ತನ್ನ ತಂತ್ರವನ್ನು ಬದಲಿಸಿದ್ದಾರೆ. ಯಾಕೆ ಅಂದರೆ ಕಳೆದ ತಿಂಗಳು ಕೇವಲ 968 ಎಕ್ಸ್‌ಯುವಿ 500 ಯುನಿಟ್‍ಗಳು ಮಾತ್ರ ಮಾರಾಟವಾಗಿತ್ತು. ಇದೇ ಕಾರಣದಿಂದಲೇ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಯಲ್ಲಿ ಎಡಬ್ಲ್ಯುಡಿಯನ್ನು ಸ್ಥಗಿತಗೊಳಿಸಿದ್ದಾರೆ. ಮುಂದಿನ ವರ್ಷದ ಏಪ್ರಿಲ್ ತಿಂಗಳಲ್ಲಿ ಬಿಎಸ್-6 ಮಾಲಿನ್ಯ ನಿಯಮ ಬರುವ ಕಾರಣದಿಂದ ಬಿಎಸ್-6 ಎಂಜಿನ್ ಅಪ್‍ಡೇಟ್ ಮಾಡಲು ನಿರ್ಧರಿಸಿದೆ. ಹೊಸ ಎಂಜಿನ್‍ನೊಂದಿಗೆ ಹಲವು ವೈಶಿಷ್ಟ್ಯಗಳನ್ನು ಅಪ್‍ಡೇಟ್ ಮಾಡಬಹುದು ಎಂದು ನಿರೀಕ್ಷಿಸುತ್ತೇವೆ.


Click it and Unblock the Notifications