ವಿನೂತನ ತಾಂತ್ರಿಕ ಸೌಲಭ್ಯದೊಂದಿಗೆ ಬರಲಿದೆ ಮಹೀಂದ್ರಾ ಎಕ್ಸ್‌ಯುವಿ500 ಫೇಸ್‌ಲಿಫ್ಟ್

ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಅಧಿಪತ್ಯ ಸಾಧಿಸಿರುವ ಮಹೀಂದ್ರಾ ಸಂಸ್ಥೆಯು ಸ್ಕಾರ್ಪಿಯೋ, ಎಕ್ಸ್‌ಯುವಿ500 ಮತ್ತು ಥಾರ್ ಕಾರುಗಳ ಮೂಲಕ ಭಾರೀ ಜನಪ್ರಿಯತೆ ಗಳಿಸಿದ್ದು, ಕೆಲವೇ ದಿನಗಳಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಹೊಸ ವಿನ್ಯಾಸ ಮತ್ತು ಬಲಿಷ್ಠ ಎಂಜಿನ್ ಪ್ರೇರಿತ ಸ್ಕಾರ್ಪಿಯೋ, ಎಕ್ಸ್‌ಯುವಿ500 ಮತ್ತು ಥಾರ್ ನ್ಯೂ ಜನರೇಷನ್ ಆವೃತ್ತಿಗಳು ಮತ್ತಷ್ಟು ಸದ್ದು ಮಾಡುವ ನೀರಿಕ್ಷೆಯಲ್ಲಿವೆ.

ವಿನೂತನ ತಾಂತ್ರಿಕ ಸೌಲಭ್ಯದೊಂದಿಗೆ ಬರಲಿದೆ ಮಹೀಂದ್ರಾ ಎಕ್ಸ್‌ಯುವಿ500 ಫೇಸ್‌ಲಿಫ್ಟ್

ಹೌದು, ಮಹೀಂದ್ರಾ ಸಂಸ್ಥೆಯು ಸದ್ಯ ಸ್ಕಾರ್ಪಿಯೋ, ಎಕ್ಸ್‌ಯುವಿ500 ಮತ್ತು ಥಾರ್ ನ್ಯೂ ಜನರೇಷನ್ ಆವೃತ್ತಿಗಳನ್ನು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಉನ್ನತಿಕರಿಸುತ್ತಿದ್ದು, ಸ್ಪಾಟ್ ಟೆಸ್ಟಿಂಗ್ ಪ್ರಕ್ರಿಯೆಗಳಿಗೆ ಚಾಲನೆ ನೀಡಿದೆ. ಹೀಗಾಗಿ ಸದ್ಯ ಮಾರುಕಟ್ಟೆಯಲ್ಲಿರುವ ಸ್ಕಾರ್ಪಿಯೋ, ಎಕ್ಸ್‌ಯುವಿ500, ಎಕ್ಸ್‌ಯುವಿ300 ಮತ್ತು ಥಾರ್ ಕಾರುಗಳಿಂತಲೂ ನ್ಯೂ ಜನರೇಷನ್ ಆವೃತ್ತಿಗಳು ಸಾಕಷ್ಟು ಸುಧಾರಿತ ಗುಣಮಟ್ಟದ ಬಿಡಿಭಾಗಗಳು, ಎಂಜಿನ್ ಸೌಲಭ್ಯ ಮತ್ತು ಪರ್ಫಾಮೆನ್ಸ್‌ನಲ್ಲಿ ಗ್ರಾಹಕರ ಆಕರ್ಷಣೆಗೆ ಕಾರಣವಾಗಲಿವೆ.

ವಿನೂತನ ತಾಂತ್ರಿಕ ಸೌಲಭ್ಯದೊಂದಿಗೆ ಬರಲಿದೆ ಮಹೀಂದ್ರಾ ಎಕ್ಸ್‌ಯುವಿ500 ಫೇಸ್‌ಲಿಫ್ಟ್

ದೇಶಾದ್ಯಂತ ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ಹೊಸ ವಾಹನಗಳ ಎಂಜಿನ್‌ ತಂತ್ರಜ್ಞಾನದಲ್ಲಿ ಮಹತ್ವದ ಬದಲಾವಣೆ ತರುತ್ತಿರುವ ಕೇಂದ್ರ ಸರ್ಕಾರವು ಆಟೋ ಉತ್ಪಾದನಾ ಸಂಸ್ಥೆಗಳಿಗೆ ಕೆಲವು ಕಡ್ಡಾಯ ನಿಯಮಗಳನ್ನು ಜಾರಿ ತರುತ್ತಿದೆ. ಭಾರತದಲ್ಲಿ ಸದ್ಯ ಬಿಎಸ್-4(ಭಾರತ್ ಸ್ಟೇಜ್) ವೈಶಿಷ್ಟ್ಯತೆಯುಳ್ಳ ವಾಹನಗಳು ಮಾತ್ರ ಮಾರಾಟಗೊಳ್ಳುತ್ತಿದ್ದು, ಇದು ಕೂಡಾ ಮುಂಬರುವ 2020ರ ಏಪ್ರಿಲ್ 1ರಿಂದ ನಿಷೇಧಗೊಂಡು ಬಿಎಸ್-6 ನಿಯಮವು ಜಾರಿಗೆ ಬರಲಿದೆ.

ವಿನೂತನ ತಾಂತ್ರಿಕ ಸೌಲಭ್ಯದೊಂದಿಗೆ ಬರಲಿದೆ ಮಹೀಂದ್ರಾ ಎಕ್ಸ್‌ಯುವಿ500 ಫೇಸ್‌ಲಿಫ್ಟ್

ಹೀಗಾಗಿ ಕೇಂದ್ರ ಸರ್ಕಾರದ ಹೊಸ ನಿಯಮದಂತೆ ಮಹೀಂದ್ರಾ ಸೇರಿದಂತೆ ಬಹುತೇಕ ಸಂಸ್ಥೆಗಳು 2019ರ ಕೊನೆಯಲ್ಲಿ ಇಲ್ಲವೇ 20202ರ ಆರಂಭದಲ್ಲಿ ಬಿಎಸ್-6 ಎಂಜಿನ್ ಪ್ರೇರಿತ ವಾಹನಗಳನ್ನು ಬಿಡುಗಡೆಗೊಳಿಸುತ್ತಿವೆ. ಇದರಲ್ಲಿ ಮಹೀಂದ್ರಾ ನ್ಯೂ ಜನರೇಷನ್ ಸ್ಕಾರ್ಪಿಯೋ, ಎಕ್ಸ್‌ಯುವಿ500, ಎಕ್ಸ್‌ಯುವಿ300 ಮತ್ತು ಥಾರ್ ಕಾರುಗಳು ಹೊಸ ಮಾದರಿಯ ಬಿಎಸ್-6 ಎಂಜಿನ್ ಸೌಲಭ್ಯದೊಂದಿಗೆ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದ್ದು, ಮಾಹಿತಿಗಳ ಪ್ರಕಾರ ಮಹೀಂದ್ರಾ ಹೊಸ ಕಾರುಗಳು ಮುಂದಿನ ನಾಲ್ಕು ತಿಂಗಳಲ್ಲಿ ಅವಧಿಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿವೆ ಎನ್ನಲಾಗಿದೆ.

ವಿನೂತನ ತಾಂತ್ರಿಕ ಸೌಲಭ್ಯದೊಂದಿಗೆ ಬರಲಿದೆ ಮಹೀಂದ್ರಾ ಎಕ್ಸ್‌ಯುವಿ500 ಫೇಸ್‌ಲಿಫ್ಟ್

ಬಿಎಸ್-6 ವೈಶಿಷ್ಟ್ಯತೆಗಳಿಂದಾಗಿ ಹೊಸ ಕಾರುಗಳಲ್ಲಿ ಹಲವಾರು ಹೊಸ ಸುರಕ್ಷಾ ಸೌಲಭ್ಯಗಳನ್ನು ನೀಡಲಾಗಿದ್ದು, ಸ್ಕಾರ್ಪಿಯೋ, ಎಕ್ಸ್‌ಯುವಿ500, ಎಕ್ಸ್‌ಯುವಿ300 ಮತ್ತು ಥಾರ್ ಕಾರುಗಳಲ್ಲಿ ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಎಬಿಎಸ್ ಜೊತೆ ಇಬಿಡಿ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೊಲ್ ಸಿಸ್ಟಂ, ಸ್ಪೀಡ್ ಅಲರ್ಟ್, ಸೀಟ್ ಬೆಲ್ಟ್ ರಿಮೆಂಡರ್ ಸೌಲಭ್ಯಗಳಿವೆ.

ವಿನೂತನ ತಾಂತ್ರಿಕ ಸೌಲಭ್ಯದೊಂದಿಗೆ ಬರಲಿದೆ ಮಹೀಂದ್ರಾ ಎಕ್ಸ್‌ಯುವಿ500 ಫೇಸ್‌ಲಿಫ್ಟ್

ಹಾಗೆಯೇ 6 ಏರ್‌ಬ್ಯಾಗ್‌ಗಳು, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಆಯ್ದ ವೆರಿಯೆಂಟ್‌ಗಳಲ್ಲಿ ಸನ್‌ರೂಫ್, ರೂಫ್ ರೈಲ್ಸ್, ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಫಾಗ್ ಲ್ಯಾಂಪ್, ಟರ್ನ್ ಇಂಡಿಕೇಟಕ್ ಲೈಟ್, ಸಿಲ್ವರ್ ಸ್ಕೀಡ್ ಪ್ಲೇಟ್, ರಿಯರ್ ಎಸಿ ವೆಂಟ್ಸ್, ಲೆದರ್ ಸೀಟುಗಳು, 6 ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಡ್ರೈವರ್ ಸೀಟು ಮತ್ತು ಒಂದೇ ಸೂರಿನಡಿ ವಿವಿಧ ಮಾಹಿತಿಗಳನ್ನು ನೀಡಬಲ್ಲ ಟಚ್ ಸ್ಕ್ರಿನ್ ಇನ್ಪೋಟೈನ್‌ಟೆಂಟ್ ಸಿಸ್ಟಂ ಜೋಡಣೆ ಮಾಡಲಾಗಿದೆ.

ವಿನೂತನ ತಾಂತ್ರಿಕ ಸೌಲಭ್ಯದೊಂದಿಗೆ ಬರಲಿದೆ ಮಹೀಂದ್ರಾ ಎಕ್ಸ್‌ಯುವಿ500 ಫೇಸ್‌ಲಿಫ್ಟ್

ಇದರೊಂದಿಗೆ ಕಾರು ಕಳ್ಳತನಗಳಿಗೆ ಬ್ರೇಕ್ ಹಾಕಲು ಜಿಯೋ ಫೆನ್ಸ್ ಅಲರ್ಟ್ ಸೇರಿದಂತೆ ಸೆಂಟರ್ ಲಾಕಿಂಗ್ ಸಿಸ್ಟಂ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಒಟ್ಟಿನಲ್ಲಿ ಪ್ರಯಾಣಿಕರ ಸುರಕ್ಷೆತೆಗಾಗಿ ಗರಿಷ್ಠ ಮಟ್ಟದಲ್ಲಿ ಸುರಕ್ಷಾ ಸೌಲಭ್ಯ ಗಳನ್ನು ಅಳವಡಿಸಿರುವುದೇ ಹೊಸ ಕಾರುಗಳ ಪ್ರಮುಖ ಆಕರ್ಷಣೆಯಾಗಲಿದೆ.

ವಿನೂತನ ತಾಂತ್ರಿಕ ಸೌಲಭ್ಯದೊಂದಿಗೆ ಬರಲಿದೆ ಮಹೀಂದ್ರಾ ಎಕ್ಸ್‌ಯುವಿ500 ಫೇಸ್‌ಲಿಫ್ಟ್

ಅದಕ್ಕಿಂತಲೂ ಮುಖ್ಯವಾಗಿ ಸ್ಕಾರ್ಪಿಯೋ, ಎಕ್ಸ್‌ಯುವಿ500, ಎಕ್ಸ್‌ಯುವಿ300 ಮತ್ತು ಥಾರ್ ನ್ಯೂ ಜನರೇಷನ್ ಕಾರುಗಳಲ್ಲಿ ಬಿಎಸ್-6 ಎಂಜಿನ್ ಅಳವಡಿಸಿರುವುದು ಮಾಲಿನ್ಯ ತಡೆಯುವಲ್ಲಿ ಸಾಕಷ್ಟು ಸಹಕಾರಿಯಾಗಲಿದ್ದು, ಶೇ.25ರಷ್ಚು ಹೊಗೆ ಉಗುಳುವ ಪ್ರಮಾಣ ಕಡಿಮೆಯಾಗಿದ್ದಲ್ಲಿ ಶೇ. 10ರಷ್ಟು ಮೈಲೇಜ್ ಪ್ರಮಾಣದಲ್ಲೂ ಏರಿಕೆಯಾಗಲಿದೆ.

MOST READ: ಅಪಘಾತದ ವೇಳೆ ಏರ್‌ಬ್ಯಾಗ್ ಇದ್ರು ಫ್ಲಾಪ್- ಟೊಯೊಟಾ ವಿರುದ್ಧ ಕಾರು ಮಾಲೀಕನ ಆಕ್ರೋಶ..!

ವಿನೂತನ ತಾಂತ್ರಿಕ ಸೌಲಭ್ಯದೊಂದಿಗೆ ಬರಲಿದೆ ಮಹೀಂದ್ರಾ ಎಕ್ಸ್‌ಯುವಿ500 ಫೇಸ್‌ಲಿಫ್ಟ್

ಇದರೊಂದಿಗೆ ಹೊಸ ಕಾರುಗಳ ಬೆಲೆಯಲ್ಲೂ ತುಸು ಏರಿಕೆಯಾಗಲಿದ್ದು, ಬಿಎಸ್-4 ಕಾರುಗಳ ಬೆಲೆಗಳಿಂತಲೂ ಬಿಎಸ್-6 ಕಾರುಗಳ ಬೆಲೆಯು ತಾಂತ್ರಿಕ ಸೌಲಭ್ಯಗಳ ಅಳವಡಿಕೆಯ ಆಧಾರದ ಮೇಲೆ ರೂ. 1.50 ಲಕ್ಷದಿಂದ ರೂ.2.50 ಲಕ್ಷದ ತನಕ ಹೆಚ್ಚಿನ ಬೆಲೆ ಪಡೆದುಕೊಳ್ಳಬಹುದು ಎಂದು ನೀರಿಕ್ಷಿಸಲಾಗಿದೆ.

Article Published On: Tuesday, June 25, 2019, 12:57 [IST]
English summary
Mahindra XUV500 BS-VI Seen Testing — Expected Launch Early 2020. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+