ಟಾಟಾ ಹ್ಯಾರಿಯರ್‌ಗೆ ಪ್ರತಿಸ್ಪರ್ಧಿಯಾಗಿ ಮಹೀಂದ್ರಾ ಎಕ್ಸ್‌ಯುವಿ 500 ಡಬ್ಲ್ಯು3
ಮಧ್ಯಮದ ಗಾತ್ರದ ಎಸ್‌ಯುವಿ ಆವೃತ್ತಿಗಳಲ್ಲಿ ಭಾರೀ ಬೇಡಿಕೆ ಹೊಂದಿರುವ ಮಹೀಂದ್ರಾ ಎಕ್ಸ್‌ಯುವಿ 500 ಮಾದರಿಯು ಮುಂದಿನ ಕೆಲವೇ ದಿನಗಳಲ್ಲಿ ಮತ್ತಷ್ಟು ಅಗ್ಗದ ಬೆಲೆಗಳಲ್ಲಿ ಲಭ್ಯವಾಗಲಿದ್ದು, ಟಾಟಾ ಹ್ಯಾರಿಯರ್‌ಗೆ ಪ್ರತಿಸ್ಪರ್ಧಿಯಾಗಿ ಡಬ್ಲ್ಯು3 ಆರಂಭಿಕ ಆವೃತ್ತಿಯನ್ನು ಬಿಡುಗಡೆ ಮಾಡಲು ಸಿದ್ದತೆ ನಡೆಸಲಾಗುತ್ತಿದೆ.

ಸದ್ಯ ಮಾರುಕಟ್ಟೆಯಲ್ಲಿ ಎಕ್ಸ್‌ಯುವಿ 500 ಮಾದರಿಗೆ ತೀವ್ರ ಪೈಪೋಟಿ ನೀಡುತ್ತಿರುವ ಟಾಟಾ ಹ್ಯಾರಿಯರ್ ಬೇಡಿಕೆಗೆ ಬ್ರೇಕ್ ಹಾಕಲು ಮುಂದಾಗಿರುವ ಮಹೀಂದ್ರಾ ಸಂಸ್ಥೆಯು ಎಕ್ಸ್‌ಯುವಿ 500 ಮಾದರಿಯಲ್ಲಿ ಆರಂಭಿಕ ಆವೃತ್ತಿಯಾಗಿ ಡಬ್ಲ್ಯು3 ಆವೃತ್ತಿಯನ್ನು ಬಿಡುಗಡೆಗೊಳಿಸುತ್ತಿದ್ದು, ಹ್ಯಾರಿಯರ್ ಕಾರಿಗಿಂತಲೂ ಕಡಿಮೆ ಬೆಲೆ ಜೊತೆಗೆ ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳೊಂದಿಗೆ ಹೊಸ ಕಾರನ್ನು ಬಿಡುಗಡೆಗಾಗಿ ಸಜ್ಜುಗೊಳಿಸಲಾಗುತ್ತಿದೆ.

ಎಕ್ಸ್‌ಯುವಿ 500 ಡಬ್ಲ್ಯು3 ಮಾದರಿಯು ಈಗಾಗಲೇ ದೇಶದ ಪ್ರಮುಖ ಡೀಲರ್ಸ್ ಯಾರ್ಡ್‌ಗಳನ್ನು ತಲುಪುತ್ತಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಹೊಸ ಆವೃತ್ತಿಯು ಗ್ರಾಹಕರ ಕೈ ಸೇರುವುದು ಪಕ್ಕಾ ಆಗಿದೆ.

ಟಾಟಾ ಹ್ಯಾರಿಯರ್ ಆರಂಭಿಕ ಆವೃತ್ತಿಗಿಂತ ಬೆಲೆಯಲ್ಲಿ ರೂ. 70 ಸಾವಿರದಿಂದ ರೂ.90 ಸಾವಿರ ಕಡಿಮೆ ಬೆಲೆ ಹೊಂದಲಿರುವ ಡಬ್ಲ್ಯ3 ಆವೃತ್ತಿಯು ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಡಬ್ಲ್ಯು5 ಮಾದರಿಗಿಂತ ಕೆಳದರ್ಜೆಯಲ್ಲಿ ಮಾರಾಟವಾಗಲಿದೆ.

ದೆಹಲಿ ಎಕ್ಸ್‌ಶೋರೂಂ ಪ್ರಕಾರ ಮಹೀಂದ್ರಾ ಎಕ್ಸ್‌ಯುವಿ 500 ಕಾರುಗಳು ಆರಂಭಿಕವಾಗಿ ರೂ. 12.09 ಲಕ್ಷದಿಂದ ಟಾಪ್ ಎಂಡ್ ಆವೃತ್ತಿಯು ರೂ. 19.72 ಲಕ್ಷ ಬೆಲೆ ಹೊಂದಿದ್ದು, ಹೊಸದಾಗಿ ಬಿಡುಗಡೆಯಾಗುತ್ತಿರುವ ಡಬ್ಲ್ಯು3 ಮಾದರಿಯು ರೂ.11.69 ಲಕ್ಷದಿಂದ ರೂ.11.80 ಲಕ್ಷ ಬೆಲೆ ಹೊಂದುವ ಸಾಧ್ಯತೆಗಳಿವೆ.

ತಾಂತ್ರಿಕವಾಗಿ ಡಬ್ಲ್ಯ5 ಮಾದರಿಯಲ್ಲೇ ಹಲವಾರು ಫೀಚರ್ಸ್‌ಗಳನ್ನು ಹೊಂದಿರುವ ಡಬ್ಲ್ಯು3 ಕಾರು ಮಾದರಿಯು ಟಾಟಾ ಹ್ಯಾರಿಯರ್ ಆರಂಭಿಕ ಆವೃತ್ತಿ ಎಕ್ಸ್‌ಇ(ರೂ.12.69 ಲಕ್ಷ) ಕಾರಿಗಿಂತಲೂ ತಾಂತ್ರಿಕವಾಗಿ ಬಲಿಷ್ಠವಾಗಿದ್ದು, ಬೆಲೆ ಕಡಿತ ಮಾಡಲು ಕೆಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಕಡಿತ ಮಾಡಲಾಗಿದ್ದರೂ ಸಹ ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಬಹುತೇಕ ಸೌಲಭ್ಯಗಳನ್ನು ನೀಡಲಾಗಿದೆ.

ಡೀಲರ್ಸ್ ಯಾರ್ಡ್‌ನಲ್ಲಿ ಕಂಡು ಬಂದ ಡಬ್ಲ್ಯು3 ಮತ್ತು ಡಬ್ಲ್ಯ5 ಮಾದರಿಯೊಂದಿಗೆ ಹೋಲಿಕೆ ಮಾಡಿದಾಗ ಬೆಲೆ ಇಳಿಕೆಯ ಸಂಬಂಧ ಡಬ್ಲ್ಯ3 ಕಾರಿನಲ್ಲಿ ಕೆಲವು ಫೀಚರ್ಸ್‌ಗಳನ್ನು ತಗೆದುಹಾಕಲಾಗಿದ್ದು, ಕ್ರೋಮ್ ಬಳಕೆಯಿಲ್ಲದ ಫ್ರಂಟ್ ಫಾಸಿಯಾ, ಗ್ರೀಲ್ ಕೆಳಭಾಗದಲ್ಲಿ ಸಿಲ್ವರ್ ಬದಲು ಪ್ಲಾಸಿಕ್ ಕ್ಲ್ಯಾಡ್ ಮತ್ತು ಎಲ್‌ಡಿಡಿ ಫಾಗ್ ಲ್ಯಾಂಪ್ ಸೌಲಭ್ಯ ತೆಗೆದುಹಾಕಲಾಗಿದೆ.
MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಹಾಗೆಯೇ ಕಾರಿನ ಒಳಭಾಗದ ವಿನ್ಯಾಸದಲ್ಲೂ ಕೆಲವು ಬದಲಾವಣೆಗಳನ್ನು ಮಾಡಿರುವ ಮಹೀಂದ್ರಾ ಸಂಸ್ಥೆಯು ಡಬ್ಲ್ಯು5 ಗಿಂತಲೂ ಕೆಳದರ್ಜೆಯ ಆಸನ ಸೌಲಭ್ಯ ಹೊಂದಿದ್ದು, ಬೆಲೆ ಕಡಿತದ ಭಾಗವಾಗಿ ಆಟೋಮ್ಯಾಟಿಕ್ ಸೌಲಭ್ಯಗಳಾದ ಕ್ಲೈಮೆಟ್ ಕಂಟ್ರೋಲರ್ ಮತ್ತು ಟೈರ್ ಪ್ಲೆಷರ್ ಮಾನಿಟರ್ ಸಿಸ್ಟಂ ಅನ್ನು ಕೈಬಿಡಲಾಗಿದೆ.

ಜೊತೆಗೆ ಟಾಪ್ ಎಂಡ್ ಮಾದರಿಯಲ್ಲಿ ಲಭ್ಯವಿರುವ ವಿವಿಧ ಡ್ರೈವ್ ಮೋಡ್‌ಗಳನ್ನು ಡಬ್ಲ್ಯು3 ನಲ್ಲಿ ತೆಗೆದು ಹಾಕಲಾಗಿದ್ದು, ಇತರೆ ಮಾದರಿಗಳಲ್ಲಿ ಲಭ್ಯಲಿರುವಂತೆ ಕಾರಿನ ಅಂಚುಗಳಲ್ಲಿ ವಿವಿಧ ಬಣ್ಣಗಳ ಆಯ್ಕೆಯನ್ನು ಸಹ ತೆಗೆದುಹಾಕಲಾಗಿದೆ.
MOST READ: ಕಾರು ಖರೀದಿಯ ಚಿಂತೆ ಬೇಡವೇ ಬೇಡ- ಇನ್ಮುಂದೆ ಲೀಸ್‌ಗೆ ಸಿಗಲಿವೆ ಮಹೀಂದ್ರಾ ಕಾರುಗಳು..!!
ಒಟ್ಟಿನಲ್ಲಿ ಕಾರಿನಲ್ಲಿ ಪ್ರೀಮಿಯಂ ಸೌಲಭ್ಯಗಳನ್ನು ಕಡಿತ ಮಾಡಿ ಎಸ್‌ಯುವಿ ಪ್ರಿಯರನ್ನು ಸೆಳೆಯಲು ಅಗ್ಗದ ಬೆಲೆಯಲ್ಲಿ ಡಬ್ಲ್ಯು3 ಆವೃತ್ತಿಯನ್ನು ಸಿದ್ದಪಡಿಸಿರುವ ಮಹೀಂದ್ರಾ ಸಂಸ್ಥೆಯು ಹ್ಯಾರಿಯರ್ ಆವೃತ್ತಿಗೆ ಭರ್ಜರಿ ಪೈಪೋಟಿ ನೀಡುವ ತವಕದಲ್ಲಿದೆ.

ಇನ್ನು ಡಬ್ಲ್ಯು3 ಮಾದರಿಯು ಇತರೆ ಆವೃತ್ತಿಗಳಂತೆಯೇ 2.2-ಲೀಟರ್ ಎಮ್‍ಹ್ವಾಕ್ ಡೀಸೆಲ್ ಎಂಜಿನ್ ಸಹಾಯದಿಂದ 155-ಬಿಹೆಚ್‍ಪಿ ಹಾಗು 360-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು 6 ಸ್ಪೀಡ್ ಮ್ಯಾನುವಲ್‌ನೊಂದಿಗೆ ಆಲ್ ವೀಲ್ಹ್ ಡಿಸ್ಕ್ ಬ್ರೇಕ್, 4 ಏರ್‌ಬ್ಯಾಗ್‌ಗಳು, 17-ಇಂಚಿನ ಸ್ಟೀಲ್ ಅಲಾಯ್ ವೀಲ್ಹ್‌ಗಳು, ಫ್ರಂಟ್ ಪಾರ್ಕಿಂಗ್ ಸೆನ್ಸಾರ್ ಮತ್ತು ರಿಯರ್ ಪಾರ್ಕಿಂಗ್ ಕ್ಯಾಮೆರಾ ಇದರಲ್ಲಿದೆ.


Click it and Unblock the Notifications