ಬಲೆನೋ ಕಾರುಗಳ ದರ ಏರಿಕೆ ಮಾಡಿದ ಮಾರುತಿ ಸುಜುಕಿ
ಮಾರುತಿ ಸುಜುಕಿ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿರುವ ತನ್ನ ಪ್ರೀಮಿಯಂ ಹ್ಯಾಚ್ ಬ್ಯಾಕ್ ಬಲೆನೋ ಡೀಸೆಲ್ ಮತ್ತು ಆರ್‍ಎಸ್ ವೆರಿಯಂಟ್ ಗಳ ದರವನ್ನು ರೂ 12,000 ದಿಂದ 20,000 ಗಳವರೆಗೆ ಏರಿಕೆ ಮಾಡಿದೆ.

ಮಾರುತಿ ಸುಜುಕಿ ತನ್ನ ಬಲೆನೋ ಪೆಟ್ರೋಲ್ ಮಾದರಿಯಲ್ಲಿ ಹೈಬ್ರಿಡ್ ಸಿಸ್ಟಂ ಗಳನ್ನು ಅಳವಡಿಸಿದ ಕೆಲವೇ ದಿನಗಳಲ್ಲಿ ಈ ಬೆಲೆ ಏರಿಕೆಯನ್ನು ಮಾಡಿದೆ. ಬಲೆನೋ ಡೀಸೆಲ್ ಮಾದರಿಯಲ್ಲಿನ ಸಿಗ್ಮಾ ವೆರಿಯಂಟ್ ನ ಬೆಲೆಯು ಈಗ ರೂ 6.74 ಲಕ್ಷಗಳಾಗಲಿದ್ದರೆ, ಟಾಪ್ ಮಾದರಿಯಾದ ಆಲ್ಫಾ ವೆರಿಯಂಟ್ ನ ಬೆಲೆಯು ರೂ 8.73 ಲಕ್ಷಗಳಾಗಲಿದೆ. ಬಲೆನೋ ಆರ್‍ಎಸ್ ನ ಬೆಲೆಯು ರೂ 8.89 ಲಕ್ಷಗಳಾಗಲಿದೆ. ಈ ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ದರದಂತೆ ಇರಲಿವೆ.

ಮಾರುತಿ ಜನವರಿ 2019ರಲ್ಲಿ ಬಲೆನೋ ಮಾದರಿಯನ್ನು ಮಿಡ್ ಲೈಫ್ ಆವೃತ್ತಿಯಲ್ಲಿ ಅಪ್ ಡೇಟ್ ಮಾಡಿತ್ತು. ಮಾರುತಿ ಬಲೆನೋ ಹೊಸ ಆವೃತ್ತಿಯು ಹೊಸ ಬ್ಲಾಕ್ ಬ್ಲೂ ಕಲರ್ ಇಂಟಿರಿಯರ್ ಥೀಮ್ ಅನ್ನು ಒಳಗೊಂಡಿರಲಿದೆ. ಹೊಸ ಆವೃತ್ತಿಯ ಬಲೆನೋ ಕಾರಿನಲ್ಲಿ ಅಪಲ್ ಕಾರ್ ಪ್ಲೇ ಮತ್ತು ಆಂಡ್ರಾಯಿಡ್ ಆಟೋ ಇರುವ ಸ್ಮಾರ್ಟ್ ಪ್ಲೇ ಇನ್ಫೊಟೈನ್ ಮೆಂಟ್ ಸಿಸ್ಟಂ ಅನ್ನುಅಳವಡಿಸಲಾಗಿದೆ.

1ನೇ ಏಪ್ರಿಲ್ 2019ರಿಂದ ಜಾರಿಗೆ ಬಂದಿರುವ ಸಂಚಾರಿ ಸುರಕ್ಷಾ ನಿಯಮಗಳನ್ನು ಹೊಸ ಆವೃತ್ತಿಯ ಮಾರುತಿ ಕಾರಿನಲ್ಲಿ ಅಳವಡಿಸಿಕೊಳ್ಳಲಾಗಿದ್ದು, ಇಬಿಡಿ ಜೊತೆಯಲ್ಲಿರುವ ಎಬಿಎಸ್ , ಏರ್ ಬ್ಯಾಗ್, ಸೀಟ್ ಬೆಲ್ಟ್ ರಿಮೈಂಡರ್, ಹೈ ಸ್ಪೀಡ್ ಅಲರ್ಟ್ ಮತ್ತು ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ಗಳನ್ನು ಅಳವಡಿಸಲಾಗಿದೆ.

ಮಾರುತಿ ಡೀಸೆಲ್ ಬಲೆನೋ ಕಾರಿನಲ್ಲಿ 1.3 ಲೀಟರಿನ ಫಿಯಟ್ ಸೋರ್ಸ್ ನ 4 ಸಿಲಿಂಡರ್ ಎಂಜಿನ್ ಇದ್ದು, 73 ಬಿಹೆಚ್‍ಪಿ ಮತ್ತು 200 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 5 ಸ್ಪೀಡಿನ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿದೆ. ಮಾರುತಿ ಬಲೆನೋ ಆರ್‍ಎಸ್ 1.0 ಲೀಟರಿನ ಬೂಸ್ಟರ್ ಜೆಟ್ 3 ಸಿಲಿಂಡರ್ ಎಂಜಿನ್ ಹೊಂದಿದೆ. ವರದಿಗಳ ಪ್ರಕಾರ ಮಾರುತಿ ಕಂಪನಿಯು 2020ರ ವೇಳೆಗೆ ಡೀಸೆಲ್ ವಾಹನಗಳ ಉತ್ಪಾದನೆಯನ್ನು ಸಂಪೂರ್ಣವಾಗಿ ನಿಲ್ಲಿಸಲಿದೆ.
MUST READ: ಹೊಸ ಆವೃತ್ತಿಯಲ್ಲಿ ಅನಾವರಣಗೊಂಡ ಹೋಂಡಾ ಬಿಆರ್-ವಿ

ಬಿಎಸ್-4 ಮಾಲಿನ್ಯ ನಿಯಮಗಳ ಆಗಮನದ ಹಿನ್ನೆಲೆಯಲ್ಲಿ ಮಾರುತಿ ಸುಜುಕಿಯು 1ನೇ ಏಪ್ರಿಲ್ 2020ರಿಂದ ಡೀಸೆಲ್ ಕಾರುಗಳ ಉತ್ಪಾದನೆಯನ್ನು ನಿಲ್ಲಿಸಲಿದೆ. ಬಿಎಸ್-4 ರ ಮಾಲಿನ್ಯ ನಿಯಮಗಳಿಗೆ ಅನ್ವಯವಿಸುವಂತೆ ಡೀಸೆಲ್ ಎಂಜಿನ್ ಗಳನ್ನು ಅಭಿವೃದ್ಧಿ ಪಡಿಸಲು ಬೇಕಾಗಿರುವ ಬಂಡವಾಳವು ಪೆಟ್ರೋಲ್ ಎಂಜಿನ್ ಗಳಿಗೆ ಹೋಲಿಸಿದರೆ ತುಂಬಾ ದುಬಾರಿಯಾಗುವುದರಿಂದ ಕಂಪನಿಯು ಡೀಸೆಲ್ ಕಾರುಗಳ ಉತ್ಪಾದನೆಯನ್ನು ನಿಲ್ಲಿಸಲಿದೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಮಾರುತಿ ಸುಜುಕಿ ಕಂಪನಿಯು ತನ್ನ ಬಲೆನೋ ಡೀಸೆಲ್ ಮಾದರಿಯ ಕಾರುಗಳ ಬೆಲೆಯನ್ನು ಹೆಚ್ಚಿಸಿದೆ. ಮಾರುತಿಯು ತನ್ನ ಬಲೆನೋ ಡೀಸೆಲ್ ಮಾದರಿಯಲ್ಲಿ ತಾನೇ ಅಭಿವೃದ್ಧಿ ಪಡಿಸಿದ್ದ ಎಂಜಿನ್ ಗಳನ್ನು ಬಳಸಲು ಉದ್ದೇಶಿಸಿತ್ತು. ಆದರೆ ಹೊಸ ವಾಯು ಮಾಲಿನ್ಯಕ್ಕೆ ಸಂಬಂಧಪಟ್ಟ ಸುರಕ್ಷಾ ನಿಯಮಗಳ ಹಿನ್ನೆಲೆಯಲ್ಲಿ ಡೀಸೆಲ್ ಮಾದರಿಯ ಕಾರುಗಳ ಉತ್ಪಾದನೆಯನ್ನು ನಿಲ್ಲಿಸಲು ಚಿಂತಿಸಿದೆ.


Click it and Unblock the Notifications








