Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ಆವೃತ್ತಿಯಲ್ಲಿ ಅನಾವರಣಗೊಂಡ ಹೋಂಡಾ ಬಿಆರ್-ವಿ
ಹೋಂಡಾ ಕಂಪನಿಯು ಇಂಡೋನೇಷ್ಯಾ ದಲ್ಲಿ ನಡೆಯುತ್ತಿರುವ ಅಂತರ್‍ರಾಷ್ಟ್ರೀಯ ಮೋಟಾರ್ ಶೋನಲ್ಲಿ ಹೊಸ ಅವೃತ್ತಿಯ ಬಿಆರ್-ವಿಯನ್ನು ಅನಾವರಣಗೊಳಿಸಿದೆ. ಈಗಿರುವ ಹೋಂಡಾ ಬಿಆರ್-ವಿ ಯನ್ನು 2015ರಲ್ಲಿ ಬಿಡುಗಡೆ ಮಾಡಲಾಗಿದ್ದರೂ ಯಾವುದೇ ಅಪ್ ಡೇಟ್ ಗಳನ್ನು ಮಾಡಲಾಗಿರಲಿಲ್ಲ.

ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಅಂತರ್‍ರಾಷ್ಟ್ರೀಯ ಮೋಟಾರ್ ಶೋನಲ್ಲಿ ಹೊಸ ಆವೃತ್ತಿಯನ್ನು ಅನಾವರಣಗೊಳಿಸಿದ ನಂತರ ಹೋಂಡಾ ಮೋಟಾರ್ಸ್ ತನ್ನ ಮಾರಾಟದಲ್ಲಿ ಚೇತರಿಕೆ ಕಾಣಬಹುದೆಂಬ ಆಶಾ ಭಾವನೆಯಲ್ಲಿದೆ. ಹೋಂಡಾ ಬಿಆರ್-ವಿ ಹೊಸ ಆವೃತ್ತಿಯ ಕಾರಿನ ಲುಕ್ ನಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದ್ದು, ಒಟ್ಟಾರೆ ಡಿಸೈನ್ ಅನ್ನು ಹೋಂಡಾದ ಡಿಸೈನ್ ನಿಯಮಕ್ಕೆ ಅನುಸಾರವಾಗಿ ಮಾಡಲಾಗಿದೆ.

ಮುಂಭಾಗದಲ್ಲಿ ಹೊಸ ಬಂಪರ್ ಅನ್ನು ಅಳವಡಿಸಲಾಗಿದ್ದು, ಬ್ರಷ್ಡ್ ಅಲ್ಯುಮಿನಿಯಂ ಫಾಕ್ಸ್ ಸ್ಕಿಡ್ ಪ್ಲೇಟ್ ಗಳನ್ನು ಅಳವಡಿಸಲಾಗಿದೆ. ಫಾಗ್ ಲ್ಯಾಂಪ್ ಗಳಿಗೆ ಕ್ರೋಮ್ ನೊಂದಿಗೆ ಹೊಸ ಹೌಸಿಂಗ್ ಗಳನ್ನು ಅಳವಡಿಸಲಾಗಿದೆ. ಇನ್ನೂ ಒಳಭಾಗದಲ್ಲಿರುವ ಫಾಸ್ಕಿಯಾ ಹೊಸ ಬಿಆರ್-ವಿ ಗೆ ಟಿಪಿಕಲ್ ಹೋಂಡಾ ದ ಸ್ಟೈಲ್ ನೀಡುತ್ತದೆ.

ಇನ್ನೂ ಕ್ರೋಮ್ ಹೆಬ್ಬೆರಿಳಿನಂತೆ ಕಾಣುತ್ತದೆ. ಆದರೆ ಹೊಸ ಆವೃತ್ತಿಯು ಇಂಡೋನೇಷ್ಯಾ ಮಾರುಕಟ್ಟೆಗೆ ಸೀಮಿತವಾಗುವ ಸಾಧ್ಯತೆಯಿದ್ದು, ಭಾರತದಲ್ಲಿ ಬಿಡುಗಡೆಯಾದಾಗ ಬೇರೆ ಆವೃತ್ತಿಯನ್ನು ಅನಾವರಣಗೊಳಿಸುವ ಸಂಭವವಿದೆ.

ಈ ಎಂಪಿವಿ ಹಗಲು ಹೊತ್ತಿನಲ್ಲೂ ಬೆಳಗುವ ಲೈಟ್ ಗಳನ್ನು ಮತ್ತು ರಿ-ಡಿಸೈನ್ ಮಾಡಿರುವ ಹೆಡ್ ಲ್ಯಾಂಪ್ ಗಳನ್ನು ಒಳಗೊಂಡಿದೆ. ಇನ್ನು ಹೊರಭಾಗವು ಈಗಿರುವ ಹೊಂಡಾ ಆವೃತ್ತಿಯನ್ನೇ ಹೊಂದಿದ್ದು, ಯಾವುದೇ ಬದಲಾವಣೆಗಳಿರುವುದಿಲ್ಲ. ಸೈಡಿನಲ್ಲಿರುವ ಕ್ಲಾಡಿಂಗ್ ಗಳಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿದ್ದು, ಕ್ರೋಮ್ ಸ್ಟ್ರಿಪ್ ಗಳನ್ನು ಅಳವಡಿಸಲಾಗಿದೆ. ಡೈಮಂಡ್ ಶೇಪಿನಲ್ಲಿರುವ ಅಲಾಯ್ ವ್ಹೀಲ್ ಗಳನ್ನು ನೀಡಲಾಗಿದೆ.

ಕ್ಲಾಡಿಂಗ್, ಹಿಂಭಾಗದಲ್ಲಿರುವ ಫಾಕ್ಸ್ ಸ್ಕಿಡ್ ಪ್ಲೇಟ್ ಹೊಂದಿರುವ ಬಂಪರ್ ಗಳವರೆಗೆ ಚಾಚಿಕೊಂಡಿದೆ. ಇನ್ನೂ ಟೇಲ್ ಲ್ಯಾಂಪ್ ಗಳು ಈಗಿರುವ ಮಾಡೆಲ್ ನಲ್ಲಿರುವಂತೆಯೇ ಇದ್ದು, ಯಾವುದೇ ಬದಲಾವಣೆಗಳಾಗಿರುವುದಿಲ್ಲ. ಒಳಭಾಗದಲ್ಲಿರುವ ವಿನ್ಯಾಸದಲ್ಲೂ ಯಾವುದೇ ಬದಲಾವಣೆಗಳಾಗಿಲ್ಲ. ಹೊಸ ಆವೃತ್ತಿಯು ಗ್ರೇ ಬಣ್ಣ ಹೊಂದಿದ್ದು, ಟಾಪ್ ಮಾದರಿಗಳಲ್ಲಿ ಸೀಟುಗಳಿಗೆ ಮತ್ತು ಸೆಂಟರ್ ಆರ್ಮ್ ರೆಸ್ಟ್ ಗಳಿಗೆ ಕೆಂಪು ಬಣ್ಣವನ್ನು ನೀಡಲಾಗಿದೆ.

ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಹೋಂಡಾ ಬಿಆರ್ ವಿ 1.5 ಲೀಟರಿನ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ನಲ್ಲಿ ಮಾತ್ರ ದೊರೆಯುತ್ತದೆ. ಡೀಸೆಲ್ ಎಂಜಿನ್ ದೊರೆಯುವುದಿಲ್ಲ. ಆದರೆ ಭಾರತೀಯ ಮಾರುಕಟ್ಟೆಯಲ್ಲಿ 1.5 ಲೀಟರಿನ ಡೀಸೆಲ್ ಎಂಜಿನ್ ಸಹ ದೊರೆಯುತ್ತದೆ.
MUST READ: ಬಿಡುಗಡೆಗೆ ಸಿದ್ಧವಾಗಿರುವ ಹೊಸ ತಲೆಮಾರಿನ ಬಿಎಂಡಬ್ಲ್ಯು ಎಕ್ಸ್5

ಪೆಟ್ರೋಲ್ ಎಂಜಿನ್ ಹೆಚ್ಚು ಪವರ್ ಔಟ್ ಪುಟ್ ಆದ 119 ಬಿಹೆಚ್‍ಪಿ ಮತ್ತು 145 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಡೀಸೆಲ್ ಎಂಜಿನ್ 100 ಬಿಹೆಚ್‍ಪಿ ಮತ್ತು 200 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಡೀಸೆಲ್ ಎಂಜಿನ್ 6 ಸ್ಪೀಡಿನ ಮ್ಯಾನುವಲ್ ಟ್ರಾನ್ಸ್ ಮಿಷನ್ ಅನ್ನು ಮಾತ್ರ ಹೊಂದಿದ್ದರೆ, ಪೆಟ್ರೋಲ್ ಎಂಜಿನ್ ಸಿವಿಟಿ ಆಟೋ ಮ್ಯಾಟಿಕ್ ಗೇರ್ ಬಾಕ್ಸ್ ಸಹ ಹೊಂದಿದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಹೋಂಡಾ ಬಿಆರ್-ವಿಯ ಹೊಸ ಆವೃತ್ತಿಯು ಬಹು ದಿನಗಳ ನಂತರ ಬರುತ್ತಿದ್ದು, ಈ ಎಂಪಿವಿಯು ಸುಮಾರು 4 ವರ್ಷಗಳ ಕಾಲ ಯಾವುದೇ ಅಪ್ ಡೇಟ್ ಹೊಂದಿರಲಿಲ್ಲವಾದ್ದರಿಂದ ಬದಲಾವಣೆಗಳು ಬೇಕಾಗಿದ್ದವು. ಈ ಸೆಗ್ ಮೆಂಟಿನಲ್ಲಿ ಮಾರಾಟವು ನಿರಾಶಾದಾಯಕವಾಗಿದ್ದು, ಹೊಸ ಆವೃತ್ತಿಯು ಬಿಡುಗಡೆಯಾದ ನಂತರ ಚೇತರಿಕೆ ಕಾಣುವ ನಿರೀಕ್ಷೆಗಳಿವೆ. ಹೋಂಡಾ ಕಂಪನಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಬಗ್ಗೆ ಯಾವುದೇ ಮಾಹಿತಿಯನ್ನು ನೀಡದೇ ಇದ್ದರೂ, ಭಾರತದಲ್ಲೂ ಸಹ ಹೋಂಡಾ ಬಿಆರ್-ವಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.