ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಬಲೆನೊ ಹೊಸ ಮೈಲಿಗಲ್ಲು..!

ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಬಲೆನೊ ಮಾದರಿಯು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಅತಿಹೆಚ್ಚು ಬೇಡಿಕೆ ಪಡೆದುಕೊಂಡ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಮೊದಲ ಬಾರಿಗೆ ಬಿಡುಗಡೆಗೊಂಡ ನಂತರ ಕೇವಲ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಬರೋಬ್ಬರಿ 6 ಲಕ್ಷ ಬಲೆನೊ ಕಾರುಗಳು ಮಾರಾಟವಾಗಿವೆ.

ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಬಲೆನೊ ಹೊಸ ಮೈಲಿಗಲ್ಲು..!

2015ರ ಅಕ್ಟೋಬರ್‌ನಲ್ಲಿ ಮೊದಲ ಬಾರಿಗೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿದ್ದ ಬಲೆನೊ ಹ್ಯಾಚ್‌ಬ್ಯಾಕ್ ಕಾರು ಮಾದರಿಯು ಪ್ರತಿ ತಿಂಗಳು ಸರಾಸರಿಯಾಗಿ 13,636 ಯುನಿಟ್‌ಗಳು ಮಾರಾಟವಾಗಿದ್ದು, ಕಳೆದ ಮೂರು ವರ್ಷಗಳಿಂದ ಟಾಪ್ 10ರ ಕಾರು ಮಾರಾಟ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡು ಬಂದಿದೆ.

ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಬಲೆನೊ ಹೊಸ ಮೈಲಿಗಲ್ಲು..!

ಭಾರತದಲ್ಲಿ ಅಷ್ಟೇ ಅಲ್ಲದೇ ಅಂತರಾಷ್ಟ್ರೀಯ ಮಾರುಕಟ್ಟೆಗಳಾದ ಜಪಾನ್, ಆಸ್ಟ್ರೇಲಿಯಾ, ಲ್ಯಾಟಿನ್ ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳಿಗೂ ರಫ್ತುಗೊಳ್ಳುತ್ತಿರುವ ಬಲೆನೊ ಕಾರು ಮಾದರಿಯು ಕೈಗೆಟುಕುವ ಬೆಲೆಯಲ್ಲಿ ಅತ್ಯುತ್ತಮ ಪ್ರೀಮಿಯಂ ಫೀಚರ್ಸ್ ಹೊಂದಿರುವುದೇ ಈ ಕಾರಿನ ಪ್ರಮುಖ ಆಕರ್ಷಣೆಯಾಗಿದೆ.

ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಬಲೆನೊ ಹೊಸ ಮೈಲಿಗಲ್ಲು..!

ಇನ್ನೊಂದು ವಿಶೇಷ ಅಂದ್ರೆ, ಮೆಡ್ ಇನ್ ಇಂಡಿಯಾ ಖ್ಯಾತಿಯ ಬಲೆನೊ ಕಾರುಗಳು ಮೊದಲ ಬಾರಿಗೆ ಜಪಾನ್ ಮಾರುಕಟ್ಟೆಯಲ್ಲೂ ಮಾರಾಟವಾಗುತ್ತಿರುವ ಮೊದಲ ಹ್ಯಾಚ್‌ಬ್ಯಾಕ್ ಮಾದರಿಯಾಗಿದ್ದು, ಪ್ರೀಮಿಯಂ ವಿನ್ಯಾಸಗಳಿಂದಾಗಿ ಯುವ ಗ್ರಾಹಕರ ನೆಚ್ಚಿನ ಆಯ್ಕೆಯಾಗಿ ಹೊರಹೊಮ್ಮಿದೆ.

ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಬಲೆನೊ ಹೊಸ ಮೈಲಿಗಲ್ಲು..!

ಎಂಜಿನ್ ಸಾಮರ್ಥ್ಯ

1.2-ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ 1.3-ಲೀಟರ್ ಟರ್ಬೋಚಾರ್ಜ್ಡ್ ಡಿಸೇಲ್ ಎಂಜಿನ್ ಹೊಂದಿರುವ ಬಲೆನೊ ಕಾರುಗಳು, ಪೆಟ್ರೋಲ್ ಆವೃತ್ತಿಯ ಮೂಲಕ 83-ಬಿಎಚ್‌ಪಿ, 115-ಟಾರ್ಕ್ ಮತ್ತು ಡಿಸೇಲ್ ಆವೃತ್ತಿ ಮೂಲಕ 75-ಬಿಎಚ್‌ಪಿ, 190-ಎನ್ಎಂ ಟಾರ್ಕ್ ಉತ್ಪಾದನಾ ಸಾಮರ್ಥ್ಯ ಪಡೆದಿವೆ.

ಗ್ರಾಹಕರ ಬೇಡಿಕೆಗೆ ತಕ್ಕಂತೆ ಸಿಗ್ಮಾ, ಡೆಲ್ಟಾ, ಜೆಟ್ಟಾ ಮತ್ತು ಅಲ್ಫಾ ಎನ್ನುವ ಪ್ರಮುಖ ನಾಲ್ಕು ವೆರಿಯೆಂಟ್‌ಗಳಲ್ಲಿ ಲಭ್ಯವಿರುವ ಬಲೆನೊ ಕಾರುಗಳು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಆಯ್ಕೆ ಮಾಡಬಹುದಾಗಿದೆ.

ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಬಲೆನೊ ಹೊಸ ಮೈಲಿಗಲ್ಲು..!

ಇದರ ಜೊತೆಗೆ ಆಕರ್ಷಕ ದರಗಳಲ್ಲಿ ಲಭ್ಯವಿರುವ ಬಲೆನೊ ಕಾರುಗಳು ಕೈಗೆಟುವಕ ಬೆಲೆಗಳಲ್ಲಿ ಇತರೆ ಕಾರುಗಳಿಂತಲೂ ಉತ್ತಮವಾಗಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ಆರಂಭಿಕವಾಗಿ ರೂ.5.58 ಲಕ್ಷದಿಂದ ಟಾಪ್ ವೆರಿಯೆಂಟ್‌ಗಳು ರೂ.8.73 ಲಕ್ಷ ಬೆಲೆ ಹೊಂದಿವೆ.

ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಬಲೆನೊ ಹೊಸ ಮೈಲಿಗಲ್ಲು..!

ಇದರ ಜೊತೆಯಲ್ಲಿ ಮಾರುತಿ ಸುಜುಕಿ ಸಂಸ್ಥೆಯು ಬಲೆನೊ ಕಾರು ಮಾರಾಟದಲ್ಲಿ ಮತ್ತಷ್ಟು ಸಂಚಲನ ಮೂಡಿಸಲು ಸ್ಮಾರ್ಟ್ ಹೈಬ್ರಿಡ್ ಆಯ್ಕೆಯನ್ನು ಪರಿಚಯಿಸಿದ್ದು, ಕಡಿಮೆ ಮಾಲಿನ್ಯ ಉತ್ಪತ್ತಿ ಜೊತೆ ಹೆಚ್ಚಿನ ಮಟ್ಟದ ಮೈಲೇಜ್ ನೀಡುವಲ್ಲಿ ಇವು ಸಹಕಾರಿಯಾಗಿದೆ.

ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಬಲೆನೊ ಹೊಸ ಮೈಲಿಗಲ್ಲು..!

ಬಿಎಸ್-6 ಎಂಜಿನ್ ಹೊಂದಿರುವ ಹೊಸ ಬಲೆನೊ ಸ್ಮಾರ್ಟ್ ಹೈಬ್ರಿಡ್ ಕಾರು ಈ ಹಿಂದಿನ ಆವೃತ್ತಿಗಿಂತ ಶೇ.25ರಷ್ಟು ಮಾಲಿನ್ಯ ಹೊರಸೂಸುವಿಕೆ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಕಾರಿನ ಎಂಜಿನ್ ದಕ್ಷತೆ ಮತ್ತು ಮೈಲೇಜ್ ಪ್ರಮಾಣದಲ್ಲಿ ಶೇ.15ರಷ್ಟು ಹೆಚ್ಚಳವಾಗಿರುವುದು ಗ್ರಾಹಕರ ಆಯ್ಕೆಯನ್ನು ಮತ್ತಷ್ಟು ಹೆಚ್ಚಿಸಲು ನೆರವಾಗಲಿದೆ.

MOST READ: ಜೀಪ್ ಕಂಪಾಸ್ ಕಾರಿನ ರಿಪೇರಿ ಬಿಲ್ ಕೇಳಿ ಮಾಲೀಕ ಕಕ್ಕಾಬಿಕ್ಕಿ..!

ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಬಲೆನೊ ಹೊಸ ಮೈಲಿಗಲ್ಲು..!

ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನವನ್ನು ಬಲೆನೊ ಆವೃತ್ತಿಯಲ್ಲಿ ಕೇವಲ ಎರಡು ಮಾದರಿಗಳಲ್ಲಿ ಮಾತ್ರ ಆಯ್ಕೆಗೆ ಲಭ್ಯವಿದ್ದು, ಹೊಸ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಡೆಲ್ಟಾ ಪೆಟ್ರೋಲ್ ಆವೃತ್ತಿಯು ಲೀಟರ್‍‌ಗೆ 21.4ಕಿ.ಮಿ ಮೈಲೇಜ್ ನೀಡಿದ್ದಲ್ಲಿ ಜೆಟಾ ಪೆಟ್ರೋಲ್ ಆವೃತ್ತಿಯು ಪ್ರತಿ ಲೀಟರ್‌ಗೆ 23.87ಕಿ.ಮಿ ಮೈಲೇಜ್ ನೀಡುವುದಲ್ಲದೇ ಇವು ಸಾಮಾನ್ಯ ಆವೃತ್ತಿಗಳಿಂತ ರೂ.89 ಸಾವಿರದಷ್ಟು ದುಬಾರಿಯಾಗಿರಲಿವೆ.

Most Read Articles

Kannada
English summary
Maruti Suzuki Baleno crosses 6 lakh sales milestone. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X