ಜೀಪ್ ಕಂಪಾಸ್ ಕಾರಿನ ರಿಪೇರಿ ಬಿಲ್ ಕೇಳಿ ಮಾಲೀಕ ಕಕ್ಕಾಬಿಕ್ಕಿ..!

ಜೀಪ್ ಕಂಪಾಸ್ ಕಾರು ಮಾಲೀಕರೊಬ್ಬರು ಅಪಘಾತವಾಗಿದ್ದ ತಮ್ಮ ಕಾರನ್ನು ಅಧಿಕೃತ ಡೀಲರ್ಸ್ ಬಳಿ ರಿಪೇರಿಗೆ ತೆರಳಿದ್ದರು. ಈ ವೇಳೆ ರಿಪೇರಿ ಮೊತ್ತವನ್ನು ಕೇಳಿದ ಕಾರು ಮಾಲೀಕನು ಅಧಿಕೃತ ಡೀಲರ್ಸ್ ವಿರುದ್ಧ ತಿರುಗಿಬಿದ್ದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಧಿಕೃತ ಡೀಲರ್ಸ್ ಮಾಡಿದ ಮೋಸದ ವ್ಯವಹಾರವನ್ನು ಬಿಚ್ಚಿಟ್ಟಿದ್ದಾರೆ.

ಜೀಪ್ ಕಂಪಾಸ್ ಕಾರಿನ ರಿಪೇರಿ ಬಿಲ್ ಕೇಳಿ ಮಾಲೀಕ ಕಕ್ಕಾಬಿಕ್ಕಿ..!

ಹೊಸ ಕಾರು ಖರೀದಿಗಿಂತಲೂ ಅವುಗಳ ನಿರ್ವಹಣೆ ಮಾಡುವುದು ಅಷ್ಟು ಸುಲಭವಲ್ಲ ಎನ್ನುವುದು ಬಹುತೇಕ ಕಾರು ಮಾಲೀಕರಿಗೆ ಗೊತ್ತಿರುವ ವಿಚಾರ. ಯಾವುದಾದರೂ ಒಂದು ಸಣ್ಣಪುಟ್ಟ ರಿಪೇರಿ ಇದ್ದರೂ ಸಹ ಅಧಿಕೃತ ಡೀಲರ್ಸ್ ಬಳಿ ತೆರಬೇಕಾದ ಅನಿವಾರ್ಯತೆ ಇದ್ದೆ ಇರುತ್ತೆ. ಹೀಗಿರುವಾಗ ಇದನ್ನೇ ಬಂಡವಾಳ ಮಾಡಿಕೊಳ್ಳುವ ಅಧಿಕೃತ ಡೀಲರ್ಸ್‌ಗಳು ಬ್ರಾಂಡ್ ಬಿಡಿಭಾಗಗಳ ಹೆಸರಿನಲ್ಲಿ ಹೊಸ ವಾಹನಕ್ಕಿಂತಲೂ ರಿಪೇರಿಗಾಗಿಯೇ ಹೆಚ್ಚು ವಸೂಲಿ ಮಾಡುತ್ತಾರೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.

ಜೀಪ್ ಕಂಪಾಸ್ ಕಾರಿನ ರಿಪೇರಿ ಬಿಲ್ ಕೇಳಿ ಮಾಲೀಕ ಕಕ್ಕಾಬಿಕ್ಕಿ..!

ಹೌದು, ಜೀಪ್ ಕಂಪಾಸ್ ಎಸ್‌ಯುವಿ ಮಾಲೀಕರೊಬ್ಬರು ಅಪಘಾತವಾಗಿದ್ದ ಕಾರನ್ನು ರಿಪೇರಿಗೆ ಅಂತಾ ಅಧಿಕೃತ ಡೀಲರ್ಸ್ ಬಳಿ ಬಿಟ್ಟಿದ್ದರು. ಆದ್ರೆ ಸಣ್ಣಪುಟ್ಟ ರಿಪೇರಿಗಳಿದ್ದ ಕಾರಿನ ಬಿಡಿಭಾಗಗಳ ಸೇವೆಗೆ ಹಾಕಲಾಗಿರುವ ಲಕ್ಷಾಂತರ ರೂಪಾಯಿ ಬಿಲ್ ನೋಡಿ ಮಾಲೀಕ ಕಂಗಾಲಾಗಿದ್ದಾನೆ.

ಜೀಪ್ ಕಂಪಾಸ್ ಕಾರಿನ ರಿಪೇರಿ ಬಿಲ್ ಕೇಳಿ ಮಾಲೀಕ ಕಕ್ಕಾಬಿಕ್ಕಿ..!

ಅಪಘಾತದಲ್ಲಿ ಕಾರಿನ ಮುಂಭಾಗದ ಬಂಪರ್ ಬಳಿ ಹಾನಿಗಿಡಾಗಿದ್ದ ಬಿಡಿಭಾಗಗಳನ್ನು ಬದಲಾಯಿಸಲು ಬರೋಬ್ಬರಿ ರೂ. 2.76 ಲಕ್ಷ ಬಿಲ್ ಮಾಡಿದ್ದು, ಬಿಲ್ ನೋಡಿದ ಕಾರು ಮಾಲೀಕನು ಅಧಿಕೃತ ಡೀಲರ್ಸ್ ವಿರುದ್ಧ ತಿರುಗಿಬಿದ್ದಿದ್ದಾರೆ.

ಜೀಪ್ ಕಂಪಾಸ್ ಕಾರಿನ ರಿಪೇರಿ ಬಿಲ್ ಕೇಳಿ ಮಾಲೀಕ ಕಕ್ಕಾಬಿಕ್ಕಿ..!

ಕೇರಳ ಕೊಚ್ಚಿಯಲ್ಲಿರುವ ಜೀಪ್ ಡೀಲರ್ಸ್ ಕಡೆಯಿಂದ ಈ ರೀತಿ ಮೋಸವಾಗಿದೆ ಆರೋಪಿಸಿರುವ ಕಾರು ಮಾಲೀಕ ಕೃಷ್ಣಪ್ರಸಾದ್ ಗೋಪಿನಾಥ್ ಅವರು, ಹಾನಿಯಾಗಿರುವ ಬಿಡಿಭಾಗಗಳ ಜೊತೆ ಅನಾವಶ್ಯಕವಾಗಿ ಇತರೆ ಹೊಸ ಬೀಡಿಭಾಗಗಳನ್ನು ಜೋಡಣೆ ಮಾಡಿ ಲಕ್ಷಾಂತರ ರೂಪಾಯಿ ಬಿಲ್ ಮಾಡಿರುವ ಬಗ್ಗೆ ಕಾರು ಡೀಲರ್ಸ್ ಜೊತೆಗೆ ಇನ್ಸುರೆನ್ಸ್ ಸಂಸ್ಥೆಯನ್ನು ಸಹ ಪ್ರಶ್ನೆ ಮಾಡಿದ್ದಾರೆ.

ಜೀಪ್ ಕಂಪಾಸ್ ಕಾರಿನ ರಿಪೇರಿ ಬಿಲ್ ಕೇಳಿ ಮಾಲೀಕ ಕಕ್ಕಾಬಿಕ್ಕಿ..!

ಅಪಘಾತವಾದ ಕಾರಿಗೆ ವಿಮೆ ಪಡೆದುಕೊಳ್ಳುವ ಸಂಬಂಧ ವಿಮಾ ಸಂಸ್ಥೆಯ ಪ್ರತಿನಿಧಿಯೊಂದಿಗೆ ಬೀಡಿಭಾಗಗಗಳನ್ನು ಬದಲಿಸಿರುವ ಅಧಿಕೃತ ಕಾರು ಡೀಲರ್ಸ್‌ಗಳು ಕಾರು ಮಾಲೀಕನಿಗೂ ಗೊತ್ತಿಲ್ಲದಂತೆ ರೂ. 2.76 ಲಕ್ಷ ಬಿಲ್ ಮಾಡಿದ್ದಾರೆ.

ಜೀಪ್ ಕಂಪಾಸ್ ಕಾರಿನ ರಿಪೇರಿ ಬಿಲ್ ಕೇಳಿ ಮಾಲೀಕ ಕಕ್ಕಾಬಿಕ್ಕಿ..!

ಇದರಿಂದ ಕೆರಳಿದ ಕಾರು ಮಾಲೀಕ ಕೃಷ್ಣಪ್ರಸಾದ್ ಗೋಪಿನಾಥ್ ಅವರು ಸಂಬಂಧಪಟ್ಟ ಜೀಪ್ ಸಂಸ್ಥೆಯ ಹಿರಿಯ ಅಧಿಕಾರಿಗಳಿಗೆ ಇ-ಮೇಲ್ ಮೂಲಕ ದೂರುದಾಖಲಿಸಿದ್ದು, ಸಣ್ಣ-ಪುಟ್ಟ ರಿಪೇರಿಗಾಗಿ ಈ ಪ್ರಮಾಣದಲ್ಲಿ ಬೋಗಸ್ ಬಿಲ್ ಸೃಷ್ಠಿಸಿರುವುದಕ್ಕೆ ಸಿಡಿಮಿಡಿಗೊಂಡಿದ್ದಾರೆ.

ಜೀಪ್ ಕಂಪಾಸ್ ಕಾರಿನ ರಿಪೇರಿ ಬಿಲ್ ಕೇಳಿ ಮಾಲೀಕ ಕಕ್ಕಾಬಿಕ್ಕಿ..!

ಸದ್ಯ ಕಾರಿನ ರೀಪೆರಿ ಮೇಲೆ ಶೇ.80 ರಷ್ಟು ಇನ್ಸುರೆನ್ಸ್ ಸಂಸ್ಥೆಯೇ ಬಿಲ್ ಪಾವತಿಸಿದರೂ ಸಹ ಉಳಿದ ಹಣವನ್ನು ಕಾರು ಮಾಲೀಕರೇ ಪಾವತಿಸಬೇಕಿರುವುದು ಜೀಪ್ ಕಂಪಾಸ್ ಮಾಲೀಕರಿಗೆ ಆರ್ಥಿಕ ಹೊರೆಯಾಗಿ ಪರಿಣಮಿಸಿದ್ದು, ಬ್ರಾಂಡ್ ಬಿಡಿಭಾಗಗಳ ಹೆಸರಿನಲ್ಲಿ ನಡೆಸುವ ಮಾಹಾಮೋಸವಕ್ಕೆ ಕಾರು ಮಾಲೀಕನು ಬೇಸತ್ತು ಹೋಗಿದ್ದಾನೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಜೀಪ್ ಕಂಪಾಸ್ ಕಾರಿನ ರಿಪೇರಿ ಬಿಲ್ ಕೇಳಿ ಮಾಲೀಕ ಕಕ್ಕಾಬಿಕ್ಕಿ..!

ಇನ್ನು ಅಮೆರಿಕದ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾದ ಕ್ಲೈಸರ್ ಅಧೀನದಲ್ಲಿರುವ ಜೀಪ್ ಬ್ರಾಂಡ್ ಭಾರತದಲ್ಲಿ ಉತ್ತಮ ಬೇಡಿಕೆ ಹೊಂದಿದ್ದರೂ ಸಹ ಗ್ರಾಹಕರ ಸೇವೆಯಲ್ಲಿ ಆಗಾಗ ವಿವಾದಕ್ಕೆ ಒಳಾಗುತ್ತಿದ್ದು, ಕಳೆದ ಕೆಲ ದಿನಗಳಿಂದ ಒಂದಿಲ್ಲಾ ರೀತಿಯಲ್ಲಿ ಗ್ರಾಹಕರಿಗೆ ಮೋಸ ಮಾಡುತ್ತಿರುವ ದೂರುಗಳು ದಾಖಲಾಗಿವೆ.

ಜೀಪ್ ಕಂಪಾಸ್ ಕಾರಿನ ರಿಪೇರಿ ಬಿಲ್ ಕೇಳಿ ಮಾಲೀಕ ಕಕ್ಕಾಬಿಕ್ಕಿ..!

ಅದರಲ್ಲೂ ಕಂಪಾಸ್ ಕಾರುಗಳ ಮಾಲೀಕರಿಗೆಯೇ ಹೆಚ್ಚಾಗಿ ಇಂತಹ ತೊಂದರೆಗಳು ಎದುರಾಗಿದ್ದು, ಬಿಡಿಭಾಗಗಳ ಸೇವೆಗಳ ವಿಚಾರವಾಗಿ ಈ ಹಿಂದೆಯೂ ಇಂತಹದ್ದೆ ಪ್ರಕರಣವು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿಲ್ಲದೇ ಕೋರ್ಟ್ ಮೆಟ್ಟಿಲೆರಿತ್ತು.

MOST READ: ಹೊಸ ಕಾರು ವಿತರಣೆಯಲ್ಲಿ ವಿಳಂಬ- ಜೀಪ್ ಡೀಲರ್ಸ್‌ಗೆ ಬಿತ್ತು ರೂ. 50 ಸಾವಿರ ದಂಡ..!

ಜೀಪ್ ಕಂಪಾಸ್ ಕಾರಿನ ರಿಪೇರಿ ಬಿಲ್ ಕೇಳಿ ಮಾಲೀಕ ಕಕ್ಕಾಬಿಕ್ಕಿ..!

ಹೀಗಾಗಿ ಯಾವುದೇ ಬ್ರಾಂಡ್ ಕಾರು ಇದ್ದರೂ ಸಹ ಅಪಘಾತದಂತಹ ಸಂದರ್ಭದಲ್ಲಿ ಮಿಮೆ ಕ್ಲೈಮ್ ಮಾಡುವಾಗ ಡೀಲರ್ಸ್‌ಗಳು ಮತ್ತು ಇನ್ಸುರೆನ್ಸ್ ಸಂಸ್ಥೆಯ ಸಿಬ್ಬಂದಿ ನಡೆಸುವ ಒಳಗುಟ್ಟಗಳ ಬಗ್ಗೆ ಅರಿತು ಮುಂದೆ ಸಾಗಬೇಕು. ಇಲ್ಲವಾದಲ್ಲಿ ಬಿಡಿಭಾಗಗಳ ಹೆಸರಿನಲ್ಲಿ ಬಿಲ್ ಹಾಕುವ ಡೀಲರ್ಸ್‌ಗಳು ವಿಮೆ ಕ್ಲೈಮ್ ಹೊರತುಪಡಿಸಿಯೂ ಹೆಚ್ಚಿನ ಹಣ ವಸೂಲಿ ಮಾಡುತ್ತಿರುತ್ತಾರೆ.

More from DriveSpark

Article Published On: Saturday, June 1, 2019, 15:53 [IST]
English summary
Minor Accident Leads To 2.76 Lakh Bill On Jeep Compass. Read in Kannada.
Read more on ಜೀಪ್ jeep
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+