ಮಾರುತಿ ಸುಜುಕಿ ಬಲೆನೊ ಆರ್‌ಎಸ್ ಖರೀದಿ ಮೇಲೆ ರೂ. 1 ಲಕ್ಷ ಡಿಸ್ಕೌಂಟ್

ಮಾರುತಿ ಸುಜುಕಿ ಸಂಸ್ಥೆಯು ಕೇಂದ್ರ ಸರ್ಕಾರ ಕಾರ್ಪೊರೇಟ್ ತೆರಿಗೆ ಕಡಿತಗೊಳಿಸಿದ ಬೆನ್ನಲ್ಲೇ ತನ್ನ ಪ್ರಮುಖ ಕಾರುಗಳ ಬೆಲೆಯನ್ನು ಇಳಿಕೆ ಮಾಡಿ ಹೊಸ ದರ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಬಲೆನೊ ಆರ್‌ಎಸ್ ಆವೃತ್ತಿಯ ಮೇಲೆ ಭರ್ಜರಿ ಡಿಸ್ಕೌಂಟ್ ನೀಡಿದೆ.

ಮಾರುತಿ ಸುಜುಕಿ ಬಲೆನೊ ಆರ್‌ಎಸ್ ಖರೀದಿ ಮೇಲೆ ರೂ. 1 ಲಕ್ಷ ಡಿಸ್ಕೌಂಟ್

ಸತತ ಕುಸಿತದಿಂದ ಕಂಗೆಟ್ಟಿರುವ ಆಟೋ ಉತ್ಪಾದನಾ ಸಂಸ್ಥೆಗಳಿಗೆ ಕೇಂದ್ರ ಸರ್ಕಾರವು ಕಾರ್ಪೊರೇಟ್ ತೆರಿಗೆ ಹೊರೆ ಇಳಿಕೆ ಮಾಡಿರುವುದು ಮಹತ್ವದ ಬದಲಾವಣೆಗೆ ಕಾರಣವಾಗಿದ್ದು, ಮಾರುತಿ ಸುಜುಕಿ ಸಂಸ್ಥೆಯು ತನ್ನ ಜನಪ್ರಿಯ ಕಾರುಗಳ ಬೆಲೆಯಲ್ಲಿ ಇಳಿಕೆ ಮಾಡಿದೆ. ಕೇಂದ್ರ ಸರ್ಕಾರವು ಅಕ್ಟೋಬರ್ 1ರಿಂದ ಅನ್ವಯವಾಗುವಂತೆ ಕಾರ್ಪೊರೇಟ್ ತೆರಿಗೆ ಪ್ರಮಾಣವನ್ನು ಶೇ.21.55ರಿಂದ ಶೇ.17.16ಕ್ಕೆ ಇಳಿಕೆ ಮಾಡಲಾಗಿದ್ದು, ಇದು ವಿದೇಶಿ ಮಾರುಕಟ್ಟೆಗಳಿಂದ ಆಮದು ಮಾಡಿಕೊಳ್ಳುವ ಆಟೋ ಬಿಡಿಭಾಗಗಳ ಬೆಲೆ ಇಳಿಕೆ ಸಾಕಷ್ಟು ಸಹಕಾರಿಯಾಗಿದೆ.

ಮಾರುತಿ ಸುಜುಕಿ ಬಲೆನೊ ಆರ್‌ಎಸ್ ಖರೀದಿ ಮೇಲೆ ರೂ. 1 ಲಕ್ಷ ಡಿಸ್ಕೌಂಟ್

ಹೀಗಾಗಿ ಕೇಂದ್ರ ಸರ್ಕಾರವು ನೀಡುತ್ತಿರುವ ತೆರಿಗೆ ವಿನಾಯ್ತಿಯ ಲಾಭವನ್ನು ಗ್ರಾಹಕರಿಗೂ ನೀಡುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು ಆಯ್ದ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿರುವುದು ಕಾರು ಖರೀದಿಗೆ ಸುರ್ವಣಾವಕಾಶ ಎನ್ನಬಹುದು.

ಮಾರುತಿ ಸುಜುಕಿ ಬಲೆನೊ ಆರ್‌ಎಸ್ ಖರೀದಿ ಮೇಲೆ ರೂ. 1 ಲಕ್ಷ ಡಿಸ್ಕೌಂಟ್

ಭಾರತೀಯ ಆಟೋ ಉತ್ಪಾದನಾ ಸಂಸ್ಥೆಗಳು ಹೆಚ್ಚಾಗಿ ವಿದೇಶಿ ಮಾರುಕಟ್ಟೆಗಳಿಂದ ಲೀಥಿಯಂ ಅಯಾನ್ ಬ್ಯಾಟರಿ, ಏರ್‌ಬ್ಯಾಗ್, ಸೆನ್ಸಾರ್ ಮತ್ತು ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಬಿಡಿಭಾಗಗಳನ್ನು ಆಮದು ಮಾಡಿಕೊಳ್ಳುತ್ತಿದ್ದು, ಆಮದು ಬಿಡಿಭಾಗಗಳ ಮೇಲೆ ವಿಧಿಸಲಾಗುತ್ತಿದ್ದ ಕಾರ್ಪೊರೇಟ್ ತೆರಿಗೆ ಇಳಿಕೆಯಿಂದಾಗಿ ವಾಹನಗಳ ಬೆಲೆಯಲ್ಲೂ ಕಡಿತಗೊಳ್ಳಬಹುದು ಎಂದು ನೀರಿಕ್ಷಿಸಲಾಗಿತ್ತು.

ಮಾರುತಿ ಸುಜುಕಿ ಬಲೆನೊ ಆರ್‌ಎಸ್ ಖರೀದಿ ಮೇಲೆ ರೂ. 1 ಲಕ್ಷ ಡಿಸ್ಕೌಂಟ್

ನೀರಿಕ್ಷೆಯಂತೆ ಮಾರುತಿ ಸುಜುಕಿ ಸಂಸ್ಥೆಯು ತನ್ನ ಜನಪ್ರಿಯ ಕಾರು ಮಾದರಿಗಳಾದ ಆಲ್ಟೋ 800, ಆಲ್ಟೋ ಕೆ10, ಸ್ವಿಫ್ಟ್ ಡೀಸೆಲ್, ಬಲೆನೊ ಡೀಸೆಲ್, ಇಗ್ನಿಸ್, ಡಿಜೈರ್ ಡೀಸೆಲ್, ಟೂರ್ ಎಸ್ ಡೀಸೆಲ್, ಎಸ್-ಕ್ರಾಸ್ ಮತ್ತು ಬಲೆನೊ ಆರ್‍‌ಎಸ್ ಕಾರುಗಳ ಎಕ್ಸ್‌ಶೋರೂಂ ದರಗಳನ್ನು ಕಡಿತಗೊಳಿಸಲಾಗಿದೆ. ಇದರಲ್ಲಿ ಆಲ್ಟೋ 800, ಆಲ್ಟೋ ಕೆ10, ಸ್ವಿಫ್ಟ್ ಡೀಸೆಲ್, ಬಲೆನೊ ಡೀಸೆಲ್, ಇಗ್ನಿಸ್, ಡಿಜೈರ್ ಡೀಸೆಲ್, ಟೂರ್ ಎಸ್ ಡೀಸೆಲ್, ಎಸ್-ಕ್ರಾಸ್ ಕಾರುಗಳ ಬೆಲೆ ರೂ. 5 ಸಾವಿರ ಇಳಿಕೆ ಮಾಡಿದ್ದಲ್ಲಿ ಬಲೆನೊ ಆರ್‍‌ಎಸ್ ರೂ.1 ಲಕ್ಷ ಡಿಸ್ಕೌಂಟ್ ನೀಡಲಾಗಿದೆ.

ಮಾರುತಿ ಸುಜುಕಿ ಬಲೆನೊ ಆರ್‌ಎಸ್ ಖರೀದಿ ಮೇಲೆ ರೂ. 1 ಲಕ್ಷ ಡಿಸ್ಕೌಂಟ್

ಅಕ್ಬೋಬರ್ 1ರಿಂದ ಕಾರ್ಪೊರೇಟ್ ತೆರಿಗೆ ಹೊಸ ಆದೇಶ ಜಾರಿಗೆ ಮುನ್ನವೇ ಮಾರುತಿ ಸುಜುಕಿ ತನ್ನ ಕಾರುಗಳ ಬೆಲೆ ಕಡಿತಗೊಳಿಸಿದ್ದು, ನಷ್ಟದಲ್ಲಿರುವ ಆಟೋ ಉದ್ಯಮ ಸುಧಾರಣೆಗೆ ಕೇಂದ್ರ ಸರ್ಕಾರದ ನಿರ್ಧಾರವು ಮಹತ್ವ ಪೂರ್ಣವಾಗಿದೆ.

ಮಾರುತಿ ಸುಜುಕಿ ಬಲೆನೊ ಆರ್‌ಎಸ್ ಖರೀದಿ ಮೇಲೆ ರೂ. 1 ಲಕ್ಷ ಡಿಸ್ಕೌಂಟ್

ಕಳೆದ ಹತ್ತು ತಿಂಗಳಿನಿಂದ ಸತತವಾಗಿ ಕಾರು ಮಾರಾಟದಲ್ಲಿ ತೀವ್ರ ಹಿನ್ನಡೆ ಅನುಭವಿಸುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು ಶೇ.34 ರಷ್ಟು ಹೊಸ ವಾಹನಗಳ ಮಾರಾಟದಲ್ಲಿ ಕುಸಿತ ಕಂಡಿದ್ದು, ನಷ್ಟದಲ್ಲಿರುವ ಆಟೋ ಉದ್ಯಮ ಸುಧಾರಣೆಗಾಗಿ ಕೇಂದ್ರ ಸರ್ಕಾರವು ಮಧ್ಯಪ್ರವೇಶಿಸುವಂತೆ ಒತ್ತಡ ಹಾಕಿತ್ತು.

ಮಾರುತಿ ಸುಜುಕಿ ಬಲೆನೊ ಆರ್‌ಎಸ್ ಖರೀದಿ ಮೇಲೆ ರೂ. 1 ಲಕ್ಷ ಡಿಸ್ಕೌಂಟ್

ಆದರೆ ಜಿಎಸ್‌ಟಿ ಇಳಿಕೆ ನೀರಿಕ್ಷೆಯಲ್ಲಿದ್ದ ವಾಹನ ಉತ್ಪಾದನಾ ಸಂಸ್ಥೆಗಳಿಗೆ ಕಾರ್ಪೊರೇಟ್ ತೆರಿಗೆಯಲ್ಲಿ ಇಳಿಕೆ ಮಾಡುವ ಮೂಲಕ ಉತ್ಪಾದನಾ ವೆಚ್ಚವನ್ನು ತಗ್ಗಿಸಿದ್ದು, ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿವೆ.

MOST READ: ಭಾರೀ ದಂಡಕ್ಕೆ ಬ್ರೇಕ್ ಹಾಕಿದ ಸಚಿವ ನಿತಿನ್ ಗಡ್ಕರಿ..!

ಮಾರುತಿ ಸುಜುಕಿ ಬಲೆನೊ ಆರ್‌ಎಸ್ ಖರೀದಿ ಮೇಲೆ ರೂ. 1 ಲಕ್ಷ ಡಿಸ್ಕೌಂಟ್

ಇದಲ್ಲದೇ ಸ್ಥಳೀಯವಾಗಿ ಲೀಥಿಯಂ ಅಯಾನ್ ಬ್ಯಾಟರಿ ಉತ್ಪಾದನಾ ಘಟಕ ನಿರ್ಮಾಣ ಮಾಡುವ ಸಂಸ್ಥೆಗಳಿಗೆ ಕಾರ್ಪೊರೇಟ್ ತೆರಿಗೆ ಇಳಿಕೆ ಹೆಚ್ಚಿನ ಅನುಕೂಲವಿದ್ದು, ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಮೇಲೆ ಬೃಹತ್ ಪ್ರಮಾಣದ ಬಂಡವಾಳ ಹೂಡಿಕೆ ಮಾಡುತ್ತಿರುವ ಆಟೋ ಉತ್ಪಾದನಾ ಸಂಸ್ಥೆಗಳನ್ನು ಮತ್ತಷ್ಟು ಆಕರ್ಷಿಸಲಿದೆ.

MOST READ: 15 ವರ್ಷ ಮೇಲ್ಪಟ್ಟ ವಾಹನಗಳನ್ನು ಸ್ಕ್ರ್ಯಾಪ್ ಮಾಡಿಸದ ಮಾಲೀಕರಿಗೆ ಕಾದಿದೆ ಶಾಕಿಂಗ್ ಸುದ್ದಿ..!

ಮಾರುತಿ ಸುಜುಕಿ ಬಲೆನೊ ಆರ್‌ಎಸ್ ಖರೀದಿ ಮೇಲೆ ರೂ. 1 ಲಕ್ಷ ಡಿಸ್ಕೌಂಟ್

ಹೊಸ ತೆರಿಗೆ ಪದ್ದತಿಯಿಂದ ಇಂಧನ ಆಧರಿತ ವಾಹನಗಳಿಂತ ಎಲೆಕ್ಟ್ರಿಕ್ ವಾಹನ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲು ಮಹತ್ವದ ಕ್ರಮ ಕೈಗೊಳ್ಳಲಾಗಿದ್ದು, ವಿದೇಶಿ ಆಟೋ ಉತ್ಪಾದನಾ ಸಂಸ್ಥೆಗಳು ಸ್ಥಳೀಯವಾಗಿಯೇ ಬಿಡಿಭಾಗಗಳನ್ನು ಉತ್ಪಾದನೆಯನ್ನು ಉತ್ತೇಜಿಸಲು ಈ ಕ್ರಮ ಅಗತ್ಯವಾಗಿತ್ತು.

Article Published On: Friday, September 27, 2019, 18:34 [IST]
English summary
Maruti suzuki Baleno RS ex-showroom price slashed by Rs 1 lakh. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+