15 ವರ್ಷ ಮೇಲ್ಪಟ್ಟ ವಾಹನಗಳನ್ನು ಸ್ಕ್ರ್ಯಾಪ್ ಮಾಡಿಸದ ಮಾಲೀಕರಿಗೆ ಕಾದಿದೆ ಶಾಕಿಂಗ್ ಸುದ್ದಿ..!

ಹೆಚ್ಚುತ್ತಿರುವ ಮಾಲಿನ್ಯ ತಡೆಗಾಗಿ ಕೇಂದ್ರ ಸರ್ಕಾರವು ಶೀಘ್ರದಲ್ಲೇ 15 ವರ್ಷ ಮೇಲ್ಪಟ್ಟ ಹಳೆಯ ವಾಹನಗಳಿಗೆ ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ತರಲು ಸಿದ್ದತೆ ನಡೆಸಿದ್ದು, ಹೊಸ ನೀತಿಯಡಿ ಸ್ಕ್ರ್ಯಾಪ್ ಮಾಡಿಸದ ವಾಹನ ಮಾಲೀಕರಿಗೆ ಕೇಂದ್ರ ಸರ್ಕಾರವು ಹೊಸ ಶಾಕಿಂಗ್ ಸುದ್ದಿಯೊಂದನ್ನು ನೀಡಲು ಮುಂದಾಗಿದೆ.

15 ವರ್ಷ ಮೇಲ್ಪಟ್ಟ ವಾಹನಗಳನ್ನು ಸ್ಕ್ರ್ಯಾಪ್ ಮಾಡಿಸದ ಮಾಲೀಕರಿಗೆ ಕಾದಿದೆ ಶಾಕಿಂಗ್ ಸುದ್ದಿ..!

ಹೊಸ ವಾಹನಗಳ ಮಾರಾಟದಲ್ಲಿ ಸತತ ಕುಸಿತದಿಂದಾಗಿ ಕಂಗೆಟ್ಟಿರುವ ವಾಹನ ಉತ್ಪಾದನಾ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಕಡ್ಡಾಯ ಸ್ಕ್ರ್ಯಾಪಿಂಗ್ ನೀತಿಯು ಸಾಕಷ್ಟು ಹೊಸ ಅವಕಾಶಗಳನ್ನು ತೆರೆಯಲಿದ್ದು, ಮಾಲಿನ್ಯ ಉತ್ಪಾದನೆಯನ್ನು ತಡೆಯುವುದಲ್ಲದೇ ಹೊಸ ವಾಹನಗಳ ಉತ್ಪಾದನೆಯೂ ಮತ್ತಷ್ಟು ಚುರುಕುಗೊಳ್ಳಲಿದೆ. ಹೀಗಾಗಿ ಸ್ಕ್ರ್ಯಾಪಿಂಗ್ ಹೊಸ ನೀತಿ ಶೀಘ್ರದಲ್ಲೇ ಜಾರಿಗೆ ತರಲು ಯೋಜಿಸಿರುವ ಕೇಂದ್ರ ಸರ್ಕಾರವು 15 ವರ್ಷ ಮೇಲ್ಪಟ್ಟ ಹಳೆಯ ವಾಹನಗಳ ಮರು ನೋಂದಣಿ ಮತ್ತು ಎಫ್‌ಸಿ(ಫಿಟ್‌ನೆಸ್ ಸರ್ಟಿಫಿಕೆಟ್) ಶುಲ್ಕದಲ್ಲಿ ಭಾರೀ ಬದಲಾವಣೆ ಮುಂದಾಗಿದೆ.

15 ವರ್ಷ ಮೇಲ್ಪಟ್ಟ ವಾಹನಗಳನ್ನು ಸ್ಕ್ರ್ಯಾಪ್ ಮಾಡಿಸದ ಮಾಲೀಕರಿಗೆ ಕಾದಿದೆ ಶಾಕಿಂಗ್ ಸುದ್ದಿ..!

ಸ್ಕ್ರ್ಯಾಪಿಂಗ್ ನೀತಿ ಜಾರಿ ನಂತರವೂ ಓಡಾಡುವ ವಾಹನಗಳ ಫಿಟ್‌ನೆಟ್ ಪ್ರಮಾಣಪತ್ರದ ಶುಲ್ಕದಲ್ಲಿ ಹೆಚ್ಚಳ ಮಾಡಿರುವುದಲ್ಲದೇ ವರ್ಷಕ್ಕೆ ಎರಡು ಬಾರಿಗೆ ಪ್ರಮಾಣ ಪತ್ರ ಪಡೆಯುವ ಅವಶ್ಯಕತೆಯಿದ್ದು, ಇದು ವಾಹನ ನಿರ್ವಹಣಾ ವೆಚ್ಚವನ್ನು ಮತ್ತಷ್ಟು ಹೆಚ್ಚಿಸಲಿದೆ.

15 ವರ್ಷ ಮೇಲ್ಪಟ್ಟ ವಾಹನಗಳನ್ನು ಸ್ಕ್ರ್ಯಾಪ್ ಮಾಡಿಸದ ಮಾಲೀಕರಿಗೆ ಕಾದಿದೆ ಶಾಕಿಂಗ್ ಸುದ್ದಿ..!

ಹಾಗೆಯೇ ಜಿಎಸ್‌ಟಿ ಕೌನ್ಸಿಲ್ ಸದ್ಯ ಜಾರಿಯಲ್ಲಿರುವ ಹಳೆಯ ವಾಹನಗಳ ನೋಂದಣಿ ಶುಲ್ಕವನ್ನು ಸಹ 25 ಪಟ್ಟ ಹೆಚ್ಚಿಸಲು ಶಿಫಾರಸ್ಸು ಮಾಡಿದ್ದು, ಹೊಸ ಸ್ಕ್ರ್ಯಾಪಿಂಗ್ ನೀತಿಯು 2020ರ ಜುಲೈನಿಂದ ಅಧಿಕೃತವಾಗಿ ಜಾರಿಗೆ ತರುವ ಸುಳಿವು ನೀಡಿದೆ.

15 ವರ್ಷ ಮೇಲ್ಪಟ್ಟ ವಾಹನಗಳನ್ನು ಸ್ಕ್ರ್ಯಾಪ್ ಮಾಡಿಸದ ಮಾಲೀಕರಿಗೆ ಕಾದಿದೆ ಶಾಕಿಂಗ್ ಸುದ್ದಿ..!

ಸದ್ಯ 15 ವರ್ಷ ಮೇಲ್ಪಟ್ಟ ವ್ಯಯಕ್ತಿಕ ಬಳಕೆಯ ನಾಲ್ಕು ಚಕ್ರದ ವಾಹನಗಳಿಗೆ ರೂ.600 ಮತ್ತು ವಾಣಿಜ್ಯ ಬಳಕೆಯ ನಾಲ್ಕು ಚಕ್ರದ ವಾಹನಗಳಿಗೆ ರೂ.1 ಸಾವಿರ ಮರು ನೋಂದಣಿ ಶುಲ್ಕುವಿದ್ದು, ಇದು 25 ಪಟ್ಟು ಹೆಚ್ಚಳವಾದಲ್ಲಿ ರೂ.600 ಇದ್ದ ಶುಲ್ಕದ ಮೊತ್ತವು ರೂ. 15 ಸಾವಿರಕ್ಕೆ ಮತ್ತು ರೂ.1 ಸಾವಿರ ಇದ್ದ ಶುಲ್ಕವು ರೂ.20 ಸಾವಿರಕ್ಕೆ ಹೆಚ್ಚಳವಾಗಲಿದೆ. ಇದರೊಂದಿಗೆ ಭಾರೀ ಗಾತ್ರದ ವಾಣಿಜ್ಯ ವಾಹನಗಳ ಮರು ನೋಂದಣಿ ಶುಲ್ಕವು ರೂ. 1,500ರಿಂದ ರೂ. 40 ಸಾವಿರಕ್ಕೆ ಹೆಚ್ಚಳ ಮಾಡುವ ಪ್ರಾಸ್ತಾವನೆ ಸಲ್ಲಿಸಲಾಗಿದೆ.

15 ವರ್ಷ ಮೇಲ್ಪಟ್ಟ ವಾಹನಗಳನ್ನು ಸ್ಕ್ರ್ಯಾಪ್ ಮಾಡಿಸದ ಮಾಲೀಕರಿಗೆ ಕಾದಿದೆ ಶಾಕಿಂಗ್ ಸುದ್ದಿ..!

ಹೊಸ ಯೋಜನೆಯಿಂದ ಹೆಚ್ಚುತ್ತಿರುವ ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿರುವ ಹಳೆಯ ವಾಹನಗಳ ಸಂಖ್ಯೆಯನ್ನು ತಗ್ಗಿಸುವುದೇ ಪ್ರಮುಖ ಉದ್ದೇಶವಾಗಿದ್ದು, ಒಂದು ವೇಳೆ ಹೊಸ ಸ್ಕ್ರ್ಯಾಪಿಂಗ್ ನೀತಿ ಜಾರಿ ನಂತರವೂ ಹಳೆಯ ವಾಹನವನ್ನೇ ಬಳಕೆ ಮಾಡುವ ಉದ್ದೇಶವಿದ್ದಲ್ಲಿ ಭಾರೀ ಮೊತ್ತದ ಶುಲ್ಕುಗಳನ್ನು ಪಾವತಿಸಬೇಕಾದ ಅನಿವಾರ್ಯತೆ ಎದುರಾಗಲಿದೆ.

15 ವರ್ಷ ಮೇಲ್ಪಟ್ಟ ವಾಹನಗಳನ್ನು ಸ್ಕ್ರ್ಯಾಪ್ ಮಾಡಿಸದ ಮಾಲೀಕರಿಗೆ ಕಾದಿದೆ ಶಾಕಿಂಗ್ ಸುದ್ದಿ..!

ವಾಹನ ವಿಮೆ, ಮಾಸಿಕ ನಿರ್ವಹಣೆ, ಎಮಿಷನ್ ಟೆಸ್ಟಿಂಗ್ ಜೊತೆಗೆ ಫಿಟ್‌ನೆಸ್ ಪ್ರಮಾಣ ಪತ್ರವು ವಾಹನ ಮಾಲೀಕರಿಗೆ ಮತ್ತಷ್ಟು ಆರ್ಥಿಕ ಹೊರೆಯಾಗಲಿದ್ದು, ದುಬಾರಿ ವೆಚ್ಚ ನಿರ್ವಹಣೆ ಮಾಡಬೇಕು ಇಲ್ಲವೇ ಹಳೆಯ ವಾಹನವನ್ನು ಗುಜರಿಗೆ ಹಾಕಿ ಹೊಸ ವಾಹನ ಖರೀದಿ ಮಾಡಬೇಕೆಂಬುವುದೇ ಈ ಹೊಸ ನೀತಿಯ ಮೂಲ ಉದ್ದೇಶವಾಗಿದೆ.

MOST READ: ಕೇಂದ್ರದಿಂದ ತೆರಿಗೆ ಇಳಿಕೆ ಬೆನ್ನಲ್ಲೇ ಕಾರುಗಳ ಬೆಲೆ ಇಳಿಕೆ ಮಾಡಿ ನಿರ್ಧಾರ ಪ್ರಕಟಿಸಿದ ಮಾರುತಿ ಸುಜುಕಿ..!

15 ವರ್ಷ ಮೇಲ್ಪಟ್ಟ ವಾಹನಗಳನ್ನು ಸ್ಕ್ರ್ಯಾಪ್ ಮಾಡಿಸದ ಮಾಲೀಕರಿಗೆ ಕಾದಿದೆ ಶಾಕಿಂಗ್ ಸುದ್ದಿ..!

ಇದರಿಂದ ಹೊಸ ಸ್ಕ್ರ್ಯಾಪಿಂಗ್ ನೀತಿಯಡಿ ಸುಮಾರು 3 ಕೋಟಿಗೂ ಅಧಿಕ ವಾಹನಗಳು ಗುಜುರಿ ಸೇರಲು ಸಿದ್ದವಾಗಿದ್ದು, ಕಾರು ಮಾಲೀಕರು ತಮ್ಮ ಹಳೆಯ ವಾಹನಗಳನ್ನು ಗುಜುರಿ ಹಾಕಿ ಹೊಸ ವಾಹನ ಖರೀದಿ ಮೇಲೆ ಶೇ.10ರಷ್ಟು ಜಿಎಸ್‌ಟಿ ವಿನಾಯ್ತಿ ಪಡೆಯಬಹುದಾಗಿದೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

15 ವರ್ಷ ಮೇಲ್ಪಟ್ಟ ವಾಹನಗಳನ್ನು ಸ್ಕ್ರ್ಯಾಪ್ ಮಾಡಿಸದ ಮಾಲೀಕರಿಗೆ ಕಾದಿದೆ ಶಾಕಿಂಗ್ ಸುದ್ದಿ..!

ಜೊತೆಗೆ ಹೊಸ ನೀತಿಯಿಂದಾಗಿ ಕೇಂದ್ರ ಸರ್ಕಾರಕ್ಕೆ ಪ್ರತಿ ವರ್ಷ 10 ಸಾವಿರ ಕೋಟಿಯಷ್ಟು ಆದಾಯ ಹರಿದುಬರಲಿದ್ದು, ಇದು ಆಟೋ ಉತ್ಪಾದನಾ ಸಂಸ್ಥೆಗಳಿಗೂ ವರದಾನವಾಗಲಿದೆ. ಹಾಗೆಯೇ ಸ್ಕ್ರ್ಯಾಪಿಂಗ್ ನೀತಿ ಅಡಿಯಲ್ಲಿ ಸಂಗ್ರಹವಾಗುವ ಬಿಡಿಭಾಗಗಳ ಮರುಬಳಕೆಗೂ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಇದು ಹೊಸ ವಾಹನಗಳ ಉತ್ಪಾದನಾ ವೆಚ್ಚವನ್ನು ಗಣನೀಯವಾಗಿ ತಗ್ಗಿಸುವುದಲ್ಲದೇ ಗ್ರಾಹಕರಿಗೂ ಬೆಲೆ ಏರಿಕೆಯ ಬಿಸಿ ತಗ್ಗಲು ಸಹಕಾರಿಯಾಗಲಿದೆ.

MOST READ: ಸುಳ್ಳು ಮಾಹಿತಿಯಿಂದ ಪೆಟ್ರೋಲ್‌ಗೆ ಲಕ್ಷ ಲಕ್ಷ ಖರ್ಚು- ಡೀಲರ್ಸ್ ವಿರುದ್ಧ ಕೇಸ್ ಜಡಿದ ಜೀಪ್ ಕಂಪಾಸ್ ಮಾಲೀಕ..!

15 ವರ್ಷ ಮೇಲ್ಪಟ್ಟ ವಾಹನಗಳನ್ನು ಸ್ಕ್ರ್ಯಾಪ್ ಮಾಡಿಸದ ಮಾಲೀಕರಿಗೆ ಕಾದಿದೆ ಶಾಕಿಂಗ್ ಸುದ್ದಿ..!

ಒಟ್ಟಿನಲ್ಲಿ ಸ್ಕ್ರ್ಯಾಪಿಂಗ್ ನೀತಿಯು ಆಟೋ ಉದ್ಯಮಕ್ಕೆ ಭಾರೀ ಪ್ರಮಾಣದ ಆದಾಯ ತಂದುಕೊಡುವ ನೀರಿಕ್ಷೆಯಿದ್ದು, ಹೊಸ ನೀತಿಯಡಿ ಸ್ಕ್ರ್ಯಾಪಿಂಗ್ ಮಾಡಿಸದ ವಾಹನ ಮಾಲೀಕರಿಗೆ ವಾಹನ ನಿರ್ವಹಣಾ ವೆಚ್ಚವು ಮತ್ತಷ್ಟು ಅಧಿಕಗೊಳ್ಳಲಿದೆ ಎನ್ನಬಹುದು.

Most Read Articles

Kannada
English summary
Scrappage policy to propose hike in re-registration fees of old vehicles. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X