ಮಾರುತಿ ಸುಜುಕಿ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ
ಭಾರತದ ಜನಪ್ರಿಯ ಕಾರು ಉತ್ಪಾದನಾ ಕಂಪನಿಯಾದ ಮಾರುತಿ ಸುಜುಕಿ ತನ್ನ ಪ್ರಮುಖ ಮಾದರಿಯ ಕಾರುಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಮಾರುತಿ ಸುಜುಕಿ ಕಂಪನಿಯ ಸಿಯಾಜ್, ಎಸ್-ಕ್ರಾಸ್, ಇಗ್ನಿಸ್ ಮತ್ತು ಬಲೆನೊ ಕಾರುಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಸಿದೆ.

ಸಿಯಾಜ್
ಮಾರುತಿ ಸುಜುಕಿ ಕಂಪನಿಯು ಮೊದಲ ಬಾರಿಗೆ 2014ರಲ್ಲಿ ಸಿಯಾಜ್ ಅನ್ನು ಬಿಡುಗಡೆಗೊಳಿಸಿತ್ತು. ಸಿಯಾಜ್ ಕಾರ್ ಅನ್ನು 1.5 ಲೀಟರ್ ಪೆಟ್ರೋಲ್ ಮತ್ತು 1.3 ಡೀಸೆಲ್ ಎಂಜಿನ್‍ಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಎರಡು ಎಂಜಿನ್‍ಗಳೊಂದಿಗೆ ಮ್ಯಾನುವಲ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಪೆಟ್ರೋಲ್ ಎಂಜಿನ್‍ನಲ್ಲಿ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಆಯ್ಕೆಯನ್ನು ನೀಡಲಾಗಿದೆ.

ಸಿಗ್ಮಾ ಮತ್ತು ಡೆಲ್ಟಾ(ಪೆಟ್ರೋಲ್ ಎಂಟಿ) ಮಾದರಿಗಳ ಮೇಲೆ ರೂ.70,000ಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ. ಸಿಯಾಜ್ ಟಾಪ್ ಲೈನ್ ಮಾದರಿಗಳಿಗೆ ರೂ.60,000 ರಿಯಾಯಿತಿ ಮತ್ತು ಆಟೋಮ್ಯಾಟಿಕ್ ರೂಪಾಂತರಗಳಿಗೆ ರೂ.60,000ಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ.

ಡೀಸೆಲ್ ಮಾದರಿಗಳಿಗೆ ಭರ್ಜರಿ ರಿಯಾಯಿತಿ ಘೋಷಿಸಿದೆ. 1.5 ಲೀಟರ್ ಎಂಜಿನ್ ಹೊಂದಿರುವ ಮಾದರಿಗೆ ರೂ.70,000ಗಳವರೆಗೆ ಮತ್ತು 1.3 ಲೀಟರ್ ಮಾದರಿಗೆ ರೂ.1 ಲಕ್ಷಗಳವರೆಗೆ ರಿಯಾಯಿತಿಯನ್ನು ನೀಡಿದೆ. ಖರೀದಿದಾರರಿಗೆ ಉಚಿತ ಐದು ವರ್ಷ ವಾರಂಟಿಯನ್ನು ಕೂಡ ನೀಡಲಿದೆ.

ಎಸ್-ಕ್ರಾಸ್
ಮಾರುತಿ ಸುಜುಕಿ ಕಂಪನಿಯು ಎಸ್-ಕ್ರಾಸ್ ಮಾದರಿಯನ್ನು ನೆಕ್ಸಾ ಡೀಲರ್ ಮೂಲಕ ಮಾರಾಟ ಮಾಡುತ್ತದೆ. ಎಸ್-ಕ್ರಾಸ್ 1.3 ಲೀಟರ್ ಡೀಸೆಲ್ ಎಂಜಿನ್ 90 ಬಿಹೆಚ್‍ಪಿ ಪವರ್ ಮತ್ತು 200 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನಲ್ಲಿ 5 ಸ್ಪೀಡ್ ಮ್ಯಾನುವಲ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಸಿಗ್ಮಾ ಮತ್ತು ಡೆಲ್ಟಾ ಮಾದರಿಗಳಿಗೆ ರೂ.95,000ಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ. ಟಾಪ್ ಸ್ಪೆಕ್ ಮಾದರಿಗಳಿಗೆ ರೂ.85,000ಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ.

ಇಗ್ನಿಸ್
ಮಾರುತಿ ಸುಜುಕಿ ಕಂಪನಿಯ ಸರಣಿಯಲ್ಲಿ ಇಗ್ನಿಸ್ ವಿಭಿನ್ನವಾದ ವಿನ್ಯಾಸವನ್ನು ಹೊಂದಿದೆ. ಇಗ್ನಿಸ್ ಕಾರ್ ಅನ್ನು ಏಳು ಮಾದರಿ ಹಾಗೂ ನಾಲ್ಕು ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು. ಈ ಎಲ್ಲಾ ಮಾದರಿಗಳು ಪೆಟ್ರೋಲ್ ಎಂಜಿನ್‍ಗಳಾಗಿವೆ.

ಇಗ್ನಿಸ್ ಹ್ಯಾಚ್‍ಬ್ಯಾಕ್ 1.2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 82ಬಿಹೆಚ್‍ಪಿ ಪವರ್ ಮತ್ತು 113 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಕಂಪನಿಯು ಇಗ್ನಿಸ್ ಕಾರಿಗೆ ಬರೊಬ್ಬರಿ ರೂ.60,000 ರಿಯಾಯಿತಿಯನ್ನು ಘೋಷಿಸಿದೆ.
MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಬಲೆನೊ
ಬಲೆನೊ ಪ್ರೀಮಿಯಂ ಹ್ಯಾಚ್‍ಬ್ಯಾಕ್ ಅನ್ನು ಕಂಪನಿಯ ನೆಕ್ಸಾ ಡೀಲರ್ ಮೂಲಕ ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ. ಈ ಕಾರು 14 ರೂಪಾಂತರಗಳು ಮತು ಆರು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಬಲೆನೊ ಕಾರಿನಲ್ಲಿ 1.2 ಲೀಟರ್ ಪೆಟ್ರೋಲ್ ಎಂಜಿನ್ 83 ಬಿಹೆಚ್‍ಪಿ ಪವರ್ ಮತ್ತು 115 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಪೆಟ್ರೋಲ್ ಎಂಜಿನ್ ಮೈಲ್ಡ್ ಹೈಬ್ರಿಡ್ ರೂಪಾಂತರದಲ್ಲಿ ಲಭ್ಯವಿದೆ, ಹೈಬ್ರಿಡ್ ಎಂಜಿನ್ 90 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ.
MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಬಲೆನೊ 1.3 ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 74 ಬಿಹೆಚ್‍ಪಿ ಪವರ್ ಮತ್ತು 190 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಬಲೆನೊ 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 102 ಬಿಹೆಚ್‍ಪಿ ಪವರ್ ಮತ್ತು 150 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍ನೊಂದಿದೆ 5 ಸ್ಪೀಡ್ ಮ್ಯಾನುವಲ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ.
MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಬಿಎಸ್-6 ಪೆಟ್ರೋಲ್ ಮಾದರಿಗಳಿಗೆ ರೂ.40,000ಗಳವರೆಗೆ ರಿಯಾಯಿತಿಯನ್ನು ನೀಡಿದೆ. ಬಿಎಸ್-4 ಮಾದರಿಗಳಿಗೆ ರೂ.55,000, ಡೀಸೆಲ್ ಮಾದರಿಗಳಿಗೆ ರೂ.50,000 ರಿಯಾಯಿತಿ ಮತ್ತು ಬಲೆನೊ ಆರ್‍ಎಸ್ ಮಾದರಿಗಳಿಗೆ ರೂ.75,000ಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ.

ಮಾರುತಿ ಸುಜುಕಿ ಕಂಪನಿಯ ಸಿಯಾಜ್, ಎಸ್-ಕ್ರಾಸ್, ಇಗ್ನಿಸ್ ಮತ್ತು ಬಲೆನೊ ಮಾದರಿಗಳಿಗೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಈ ಕಾರುಗಳನ್ನು ಖರೀದಿಬೇಕೆಂದು ಬಯಸುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಮಾರುತಿ ಸುಜುಕಿಯು ಮಧ್ಯಮ ವರ್ಗದ ಜನರ ಮೆಚ್ಚಿನ ಬ್ರ್ಯಾಂಡ್ ಆಗಿದೆ.


Click it and Unblock the Notifications