ಬಿ‍ಎಸ್6 ಎಂಜಿನ್‍‍ನಲ್ಲಿ ಬಿಡುಗಡೆಯಾಗಲಿದೆ ಮಾರುತಿ ಸುಜುಕಿ ಇಕೊ

ಭಾರತೀಯ ಮೂಲದ ಆಟೋಮೊಬೈಲ್ ಕಂಪನಿಯಾದ ಮಾರುತಿ ಸುಜುಕಿ ತನ್ನ ಪ್ರಮುಖ ಎಂ‍‍ಪಿವಿಯಾದ ಇಕೊ ಕಾರ್ ಅನ್ನು ಬಿ‍ಎಸ್ 6 ಎಂಜಿನ್‍‍ನೊಂದಿಗೆ ಬಿಡುಗಡೆಗೊಳಿಸಲಿದೆ. ಆಟೋ ಕಾರ್ ಇಂಡಿಯಾ ವರದಿ ಮಾಡಿರುವಂತೆ ಹೊಸ ಎಂ‍‍ಪಿವಿಯು ಸುಧಾರಿತ ಕ್ರಾಶ್ ಪ್ರೊಟೆಕ್ಷನ್ ಹೊಂದಿರಲಿದೆ.

ಬಿ‍ಎಸ್6 ಎಂಜಿನ್‍‍ನಲ್ಲಿ ಬಿಡುಗಡೆಯಾಗಲಿದೆ ಮಾರುತಿ ಸುಜುಕಿ ಇಕೊ

ಸದ್ಯಕ್ಕೆ ಮಾರುಕಟ್ಟೆಯಲ್ಲಿರುವ ಇಕೊ ಕಾರು 1.2 ಲೀಟರಿನ ಜಿ ಸರಣಿಯ ಪೆಟ್ರೋಲ್ ಎಂಜಿನ್ ಹೊಂದಿದೆ. ಆದ ಕಾರಣ ಮಾರುತಿ ಕಂಪನಿಯು ಹೊಸ ಇಕೊ ಕಾರ್ ಅನ್ನು ಬಿ‍ಎಸ್ 6 ಎಂಜಿನ್‍‍ನೊಂದಿಗೆ ಬಿಡುಗಡೆಗೊಳಿಸಲಿದೆ.

ಬಿ‍ಎಸ್6 ಎಂಜಿನ್‍‍ನಲ್ಲಿ ಬಿಡುಗಡೆಯಾಗಲಿದೆ ಮಾರುತಿ ಸುಜುಕಿ ಇಕೊ

ಇಕೊ ಎಂ‍‍ಪಿವಿ ರೇರ್ ವ್ಹೀಲ್ ಡ್ರೈವ್ ಆಗಿದ್ದು, ಮಾರುತಿ ಸುಜುಕಿ ಕಂಪನಿಯ ಆಧುನಿಕ ಕೆ ಸರಣಿಯ ಯಾವುದೇ ಎಂಜಿನ್‍‍ಗಳು ರೇರ್ ವ್ಹೀಲ್ ಡ್ರೈವ್‍‍ಗೆ ಹೊಂದಿಕೊಳ್ಳುವುದಿಲ್ಲ. ಹೊಸ ತಲೆಮಾರಿನ ಇಕೊ ಕಾರ್ ಅನ್ನು ಅಕ್ಟೋಬರ್ 1ರಿಂದ ಜಾರಿಗೆ ಬಂದಿರುವ ಹೊಸ ಕ್ರಾಶ್ ನಿಯಮಗಳಿಗೆ ಅನುಗುಣವಾಗಿ ತಯಾರಿಸಲಾಗಿದೆ.

ಬಿ‍ಎಸ್6 ಎಂಜಿನ್‍‍ನಲ್ಲಿ ಬಿಡುಗಡೆಯಾಗಲಿದೆ ಮಾರುತಿ ಸುಜುಕಿ ಇಕೊ

ಈ ಕಾರಿನಲ್ಲಿ ಹೊಸ ಸೈಡ್ ಕ್ರಾಶ್ ಪ್ರೊಟೆಕ್ಷನ್ ಹಾಗೂ ಪೆಡೆಸ್ಟ್ರಿಯನ್ ಪ್ರೊಟೆಕ್ಷನ್ ಫೀಚರ್‍‍ಗಳನ್ನು ಅಳವಡಿಸಲಾಗಿದೆ. ಮಾರುಕಟ್ಟೆಯಲ್ಲಿರುವ ಮಾರುತಿ ಇಕೊ 1.2 ಲೀಟರಿನ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಈ ಎಂಜಿನ್ 72 ಬಿ‍‍ಹೆಚ್‍‍ಪಿ ಪವರ್ ಹಾಗೂ 101 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಬಿ‍ಎಸ್6 ಎಂಜಿನ್‍‍ನಲ್ಲಿ ಬಿಡುಗಡೆಯಾಗಲಿದೆ ಮಾರುತಿ ಸುಜುಕಿ ಇಕೊ

ಈ ಎಂಜಿನ್ ಪವರ್ ಅನ್ನು 5 ಸ್ಪೀಡ್ ಟ್ರಾನ್ಸ್ ಮಿಷನ್ ಯುನಿಟ್‍‍ನ ಸಹಾಯದಿಂದ ರೇರ್ ವ್ಹೀಲ್‍‍ಗಳಿಗೆ ಕಳುಹಿಸುತ್ತದೆ. ಇಕೊ ಕಾರ್ ಅನ್ನು ಸಿ‍ಎನ್‍ಜಿ ಆಯ್ಕೆಯೊಂದಿಗೂ ಮಾರಾಟ ಮಾಡಲಾಗುತ್ತಿದೆ. ಇಕೊ ಸಿಎನ್‍‍ಜಿ ಎಂಜಿನ್ 62 ಬಿ‍‍ಹೆಚ್‍‍ಪಿ ಪವರ್ ಹಾಗೂ 85 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಬಿ‍ಎಸ್6 ಎಂಜಿನ್‍‍ನಲ್ಲಿ ಬಿಡುಗಡೆಯಾಗಲಿದೆ ಮಾರುತಿ ಸುಜುಕಿ ಇಕೊ

ಪೆಟ್ರೋಲ್ ಎಂಜಿನ್ ಎ‍ಆರ್‍ಎ‍ಐ ಪ್ರಮಾಣಪತ್ರದಂತೆ ಪ್ರತಿ ಲೀಟರಿಗೆ 15.37 ಕಿ.ಮೀ ಮೈಲೇಜ್ ನೀಡುತ್ತದೆ. ಸಿ‍ಎನ್‍‍ಜಿ ಎಂಜಿನ್ ಪ್ರತಿ ಕೆ.ಜಿಗೆ 21.94 ಕಿ.ಮೀ ಮೈಲೇಜ್ ನೀಡುತ್ತದೆ. ಬಿಡುಗಡೆಯಾಗಲಿರುವ ಹೊಸ ಇಕೊ ಸಹ ಮಾರುಕಟ್ಟೆಯಲ್ಲಿರುವ ಕಾರು ನೀಡುತ್ತಿರುವ ಮೈಲೇಜ್ ಅನ್ನು ನೀಡುವ ಸಾಧ್ಯತೆಗಳಿವೆ.

ಬಿ‍ಎಸ್6 ಎಂಜಿನ್‍‍ನಲ್ಲಿ ಬಿಡುಗಡೆಯಾಗಲಿದೆ ಮಾರುತಿ ಸುಜುಕಿ ಇಕೊ

ಮಾರುತಿ ಸುಜುಕಿ ಕಂಪನಿಯು ಇಕೊ ಎಂ‍‍ಪಿ‍‍ವಿಯನ್ನು ಇತ್ತೀಚಿಗಷ್ಟೇ ಹಲವಾರು ಸುರಕ್ಷಾ ಫೀಚರ್‍‍ಗಳೊಂದಿಗೆ ಅಪ್‍‍ಡೇಟ್‍‍ಗೊಳಿಸಿದೆ. ಇದರಲ್ಲಿ ಸ್ಟಾಂಡರ್ಡ್ ಫಿಟ್ ಡ್ರೈವರ್ ಸೈಡ್ ಏರ್‍‍ಬ್ಯಾಗ್, ಎ‍‍ಬಿ‍ಎಸ್ ಹಾಗೂ ರೇರ್ ಪಾರ್ಕಿಂಗ್ ಸೆನ್ಸಾರ್‍‍ಗಳು ಸೇರಿವೆ.

MOST READ: 35 ಸಾವಿರಕ್ಕೆ ಸಿಗಲಿದೆ ಮ್ಯಾಂಟಿಸ್ ಎಲೆಕ್ಟ್ರಿಕ್ ಬೈಕ್

ಬಿ‍ಎಸ್6 ಎಂಜಿನ್‍‍ನಲ್ಲಿ ಬಿಡುಗಡೆಯಾಗಲಿದೆ ಮಾರುತಿ ಸುಜುಕಿ ಇಕೊ

ಇಕೊ ಕಾರಿನಲ್ಲಿರುವ ಇಂಟಿರಿಯರ್‍‍ನಲ್ಲಿರುವ ಡ್ಯಾಶ್ ಬೋರ್ಡ್‍‍ನಲ್ಲಿ ಏರ್ ಕಂಡೀಷನಿಂಗ್ ಕಂಟ್ರೋಲ್‍‍ಗಳನ್ನು ನೀಡಲಾಗಿದೆ. ಮಾರುಕಟ್ಟೆಯಲ್ಲಿರುವ ಇಕೊ ಕಾರಿನಲ್ಲಿ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಅಳವಡಿಸಲಾಗಿಲ್ಲ.

MOST READ: ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ಬಿ‍ಎಸ್6 ಎಂಜಿನ್‍‍ನಲ್ಲಿ ಬಿಡುಗಡೆಯಾಗಲಿದೆ ಮಾರುತಿ ಸುಜುಕಿ ಇಕೊ

ಆದರೆ ಹೊಸ ತಲೆಮಾರಿನ ಇಕೊ ಕಾರಿನ ಇಂಟಿರಿಯರ್‍‍ನಲ್ಲಿ ಬ್ಲೂಟೂತ್ ಕನೆಕ್ಟಿವಿಟಿ ಹೊಂದಿರುವ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಸೇರಿದಂತೆ ಹಲವಾರು ಫೀಚರ್‍‍ಗಳನ್ನು ಅಳವಡಿಸಲಾಗುವುದು. ಒಟ್ಟಾರೆಯಾಗಿ ಮಾರುತಿ ಕಂಪನಿಯು ಈ ಎಂ‍‍ಪಿವಿಯಲ್ಲಿ ಆರಾಮದಾಯಕವೆನಿಸುವ ಕ್ಯಾಬಿನ್ ನೀಡಲಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಬಿ‍ಎಸ್6 ಎಂಜಿನ್‍‍ನಲ್ಲಿ ಬಿಡುಗಡೆಯಾಗಲಿದೆ ಮಾರುತಿ ಸುಜುಕಿ ಇಕೊ

ಸದ್ಯಕ್ಕೆ ಇಕೊ ಕಾರ್ ಅನ್ನು ಐದು ಹಾಗೂ ಏಳು ಸೀಟುಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಮಾರುಕಟ್ಟೆಯಲ್ಲಿರುವ ಇಕೊ ಕಾರಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ. 3.52ಲಕ್ಷಗಳಿಂದ ರೂ.4.86 ಲಕ್ಷಗಳಾಗಿದೆ. ಬಿ‍ಎಸ್ 6 ಎಂಜಿನ್‍‍ನೊಂದಿಗೆ ಬಿಡುಗಡೆಯಾಗಲಿರುವ ಹೊಸ ಇಕೊ ಕಾರಿನ ಬೆಲೆಯು ಹೆಚ್ಚಾಗುವ ಸಾಧ್ಯತೆಗಳಿವೆ.

ಬಿ‍ಎಸ್6 ಎಂಜಿನ್‍‍ನಲ್ಲಿ ಬಿಡುಗಡೆಯಾಗಲಿದೆ ಮಾರುತಿ ಸುಜುಕಿ ಇಕೊ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಮಾರುತಿ ಸುಜುಕಿ ಕಂಪನಿಯು ಇಕೊ ಕಾರ್ ಅನ್ನು ಮೊದಲ ಬಾರಿಗೆ 2010ರಲ್ಲಿ ಬಿಡುಗಡೆಗೊಳಿಸಿತ್ತು. ಕಂಪನಿಯ ಮತ್ತೊಂದು ಎಂ‍‍ಪಿವಿಯಾದ ವರ್ಸಾ ಕಾರಿನ ಆಧಾರದ ಮೇಲೆ ಇಕೊ ಎಂಪಿವಿಯನ್ನು ಅಭಿವೃದ್ಧಿಪಡಿಸಲಾಗಿತ್ತು.

ಬಿ‍ಎಸ್6 ಎಂಜಿನ್‍‍ನಲ್ಲಿ ಬಿಡುಗಡೆಯಾಗಲಿದೆ ಮಾರುತಿ ಸುಜುಕಿ ಇಕೊ

ವರ್ಸಾ ಕಾರು ಹೆಚ್ಚು ಮಾರಾಟವಾಗದೇ ಇದ್ದರೂ ಆ ಕಾರಿನ ಉತ್ತರಾಧಿಕಾರಿಯಂದೇ ಪರಿಗಣಿತವಾದ ಇಕೊ ಕಾರಿನ 5 ಲಕ್ಷಕ್ಕೂ ಹೆಚ್ಚಿನ ಯುನಿಟ್‍‍ಗಳು ಕಳೆದ ಒಂಭತ್ತು ವರ್ಷಗಳಲ್ಲಿ ಮಾರಾಟವಾಗಿವೆ. ಈಗ ಈ ಎಂಪಿವಿಯನ್ನು ನವೀಕರಿಸಿದ್ದು, ಬಿಡುಗಡೆಯಾಗಲಿರುವ ನವೀಕೃತ ಕಾರು ಸಹ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುವ ಸಾಧ್ಯತೆಗಳಿವೆ.

Most Read Articles

Kannada
English summary
Maruti Suzuki Eeco Is Expected To Receive A BS-VI Engine And With Improved Crash Protection Soon - Read in Kannada
Story first published: Thursday, October 3, 2019, 16:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X