6 ಸೀಟರ್ ಸೌಲಭ್ಯದೊಂದಿಗೆ ಬರಲಿದೆ ಮಾರುತಿ ಸುಜುಕಿ ಹೊಸ ಎರ್ಟಿಗಾ

ಬಹುಬಳಕೆಯ ಕಾರುಗಳ ಮಾರಾಟ ವಿಭಾಗದಲ್ಲಿ ಈಗಾಗಲೇ ಜನಪ್ರಿಯತೆ ಸಾಧಿಸಿರುವ ಮಾರುತಿ ಸುಜುಕಿ ಎರ್ಟಿಗಾ ಕಾರುಗಳು ಕಳೆದ ನವೆಂಬರ್‌ನಲ್ಲಿ ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಮರುಬಿಡುಗಡೆಯಾಗಿತ್ತು. ಇದೀಗ ಬಂದ ಮಾಹಿತಿಗಳ ಪ್ರಕಾರ 7 ಆಸನ ಸೌಲಭ್ಯವುಳ್ಳ ಎರ್ಟಿಗಾದಲ್ಲಿ ಮತ್ತೊಂದು ಹೊಸ ಆವೃತ್ತಿಯನ್ನು ಬಿಡುಗಡೆಗೊಳಿಸುತ್ತಿರುವ ಬಗ್ಗೆ ಮಾರುತಿ ಸುಜುಕಿ ಸುಳಿವು ಕೊಟ್ಟಿದೆ.

6 ಸೀಟರ್ ಸೌಲಭ್ಯದೊಂದಿಗೆ ಬರಲಿದೆ ಮಾರುತಿ ಸುಜುಕಿ ಹೊಸ ಎರ್ಟಿಗಾ

ಹೌದು, ಸದ್ಯ ಮಾರಾಟವಾಗುತ್ತಿರುವ 7 ಸೀಟರ್ ಎರ್ಟಿಗಾದಲ್ಲೇ ಮತ್ತೊಂದು ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಲಾಗುತ್ತಿದ್ದು, ಹೊಸ ಆವೃತ್ತಿಯು 6 ಸೀಟರ್ ಸೌಲಭ್ಯದೊಂದಿಗೆ ಲಗ್ಷುರಿ ವೈಶಿಷ್ಟ್ಯತೆಗಳನ್ನು ಹೊತ್ತುಬರಲಿದೆ. 7 ಸೀಟರ್ ಮಾದರಿಯ ಜೊತೆಗೆ 6 ಸೀಟರ್ ಆವೃತ್ತಿ ಕೂಡಾ ಮಾರಾಟವಾಗಲಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ವಿವಿಧ ಆವೃತ್ತಿಗಳನ್ನು ಖರೀದಿ ಮಾಡಬಹುದಾಗಿದೆ.

6 ಸೀಟರ್ ಸೌಲಭ್ಯದೊಂದಿಗೆ ಬರಲಿದೆ ಮಾರುತಿ ಸುಜುಕಿ ಹೊಸ ಎರ್ಟಿಗಾ

7 ಸೀಟರ್ ಮಾದರಿಯ ಎರ್ಟಿಗಾ ಕಾರು ಟೂರಿಸ್ಟ್ ಬಳಕೆಗೆ ಮತ್ತು ಕುಟುಂಬಸ್ಥರು ಒಟ್ಟಿಗೆ ಪಯಣಿಸಲು ಅನೂಕಲಕರವಾದ ಸೌಲಭ್ಯ ಹೊಂದಿದ್ದು, ಹಾಗೆಯೇ ಬರಲಿರುವ 6 ಸೀಟರ್ ಮಾದರಿಯು ಕಾರ್ಪೊರೆಟ್ ಕ್ಷೇತ್ರದ ಉದ್ಯಮಿಗಳ ಬಳಕೆಗೆ ವಿಷೇಶವಾಗಿ ನಿರ್ಮಾಣಗೊಳಿಸಲಾಗುತ್ತಿದೆ.

6 ಸೀಟರ್ ಸೌಲಭ್ಯದೊಂದಿಗೆ ಬರಲಿದೆ ಮಾರುತಿ ಸುಜುಕಿ ಹೊಸ ಎರ್ಟಿಗಾ

ಹೀಗಾಗಿ ಈಗಿರುವ 7 ಸೀಟರ್ ಎರ್ಟಿಗಾ ಕಾರಿಗಿಂತಲೂ 6 ಎರ್ಟಿಗಾ ಕಾರು ತುಸು ಐಷಾರಾಮಿ ಸೌಲಭ್ಯಗಳೊಂದಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಹೊಂದಲಿದ್ದು, ಟಾಪ್ ಎಂಡ್ ಮಾದರಿಗಿಂತಲೂ ಇದು ತುಸು ದುಬಾರಿಯಾಗಿರಲಿದೆ.

6 ಸೀಟರ್ ಸೌಲಭ್ಯದೊಂದಿಗೆ ಬರಲಿದೆ ಮಾರುತಿ ಸುಜುಕಿ ಹೊಸ ಎರ್ಟಿಗಾ

ಇನ್ನು ಹೊಸ ಎರ್ಟಿಗಾ ಕಾರು ದೆಹಲಿಯ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.44 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ.10.90 ಲಕ್ಷ ಬೆಲೆ ಹೊಂದಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಒಟ್ಟು 10 ವೆರಿಯೆಂಟ್‌ಗಳಲ್ಲಿ ಎರ್ಟಿಗಾ ಕಾರುಗಳನ್ನು ಆಯ್ಕೆ ಮಾಡಬಹುದಾಗಿದೆ.

6 ಸೀಟರ್ ಸೌಲಭ್ಯದೊಂದಿಗೆ ಬರಲಿದೆ ಮಾರುತಿ ಸುಜುಕಿ ಹೊಸ ಎರ್ಟಿಗಾ

ನೆಕ್ಸ್ಟ್ ಜನರೇಷನ್ ಮಾರುತಿ ಸುಜುಕಿ ಎರ್ಟಿಗಾ ಕಾರು ವಿಶ್ವದರ್ಜೆ ಕಾರು ಉತ್ಪಾದನಾ ಮಾದರಿಯಾದ 'ಹಾರ್ಟ್‍ಟೆಕ್ಟ್' ಪ್ಲಾಟ್‍‍ಫಾರ್ಮ್‍ನ ಅಡಿಯಲ್ಲಿ ವಿನ್ಯಾಸ ಮಾಡಲಾಗಿದ್ದು, ಮೂರನೇ ಸಾಲಿನಲ್ಲಿ ಕೂರುವ ಪ್ರಯಾಣಿಕರ ಆಸನ ವಿನ್ಯಾಸವನ್ನು ಈ ಬಾರಿ ತುಸು ವಿಸ್ತರಿಸಲಾಗಿದೆ.

6 ಸೀಟರ್ ಸೌಲಭ್ಯದೊಂದಿಗೆ ಬರಲಿದೆ ಮಾರುತಿ ಸುಜುಕಿ ಹೊಸ ಎರ್ಟಿಗಾ

ನೆಕ್ಸ್ಟ್ ಜನರೇಷನ್ ಎರ್ಟಿಗಾ ಎಂ‍ಪಿವಿ ಕಾರಿನ ಮುಂಭಾಗದಲ್ಲಿ ಕ್ರೋಮ್ ಸ್ಟ್ರಿಪ್‍‍ನೊಂದಿಗೆ ಜೋಡಿಸಲಾದ ಹೊಸ ಗ್ರಿಲ್ ಮತ್ತು ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್‍‍ಗಳನ್ನು ಪಡೆದುಕೊಂಡಿದ್ದು, ಹಾಗೆಯೇ ಕಾರಿನ ಸೈಡ್‍‍ನಲ್ಲಿ ಫ್ಲೋಟಿಂಗ್ ರೂಫ್ ವಿನ್ಯಾಸ, 15-ಇಂಚಿನ ಅಲಾಯ್ ಚಕ್ರಗಳು ಮತ್ತು ಕಾರಿನ ಹಿಂಭಾಗದಲ್ಲಿ 'ಎಲ್' ಆಕಾರದ ಟೈಲ್ ಲೈಟ್ ಅನ್ನು ಪಡೆದಿದೆ.

6 ಸೀಟರ್ ಸೌಲಭ್ಯದೊಂದಿಗೆ ಬರಲಿದೆ ಮಾರುತಿ ಸುಜುಕಿ ಹೊಸ ಎರ್ಟಿಗಾ

ತಾಂತ್ರಿಕ ವೈಶಿಷ್ಟ್ಯತೆಗಳು

ಮಾರುತಿ ಸುಜುಕಿ ಡಿಜೈರ್ ಕಾರಿನಲ್ಲಿರುವ 7-ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಹೊಸ ಎರ್ಟಿಗಾದಲ್ಲೂ ಬಳಕೆ ಮಾಡಲಾಗಿದ್ದು, ಆಂಡ್ರಾಯ್ಡ್ ಆಟೋ, ಆ್ಯಪಲ್ ಕಾರ್ ಪ್ಲೇ ಮತ್ತು ಬ್ಲೂಟೂಥ್ ಕನೆಕ್ಟಿವಿಟಿಯನ್ನು ಸಪೋರ್ಟ್ ಮಾಡುತ್ತದೆ. ಇದಲ್ಲದೇ ಕಪ್ ಹೋಲ್ಡರ್ಸ್ ಅನ್ನೂ ಕೂಡಾ ನೀಡಲಾಗುತ್ತಿದ್ದು, ಇನ್ಫೋಟೈನ್ಮೆಂಟ್ ಸಿಸ್ಟಮ್‍‍‍ಗೆ ಸಹಾಯವಾಗುವ ಹಲವಾರು ಬಟನ್‍‍ಗಳೊಂದಿಗೆ ಲೆದರ್‍ ಹೊದಿಕೆಯಿಂದ ಸಜ್ಜುಗೊಂಡ ಸ್ಟೀರಿಂಗ್ ವ್ಹೀಲ್ ಜೋಡಿಸಲಾಗಿದೆ.

6 ಸೀಟರ್ ಸೌಲಭ್ಯದೊಂದಿಗೆ ಬರಲಿದೆ ಮಾರುತಿ ಸುಜುಕಿ ಹೊಸ ಎರ್ಟಿಗಾ

ಸುರಕ್ಷಾ ವೈಶಿಷ್ಟ್ಯತೆಗಳು

ಹೊಸ ಎರ್ಟಿಗಾ ಕಾರಿನಲ್ಲಿ ಈ ಬಾರಿ ಪ್ರಯಾಣಿಕರ ಸುರಕ್ಷತೆಗಾಗಿ ಹೆಚ್ಚಿನ ಒತ್ತು ನೀಡಲಾಗಿದ್ದು, ಎಬಿಎಸ್, ಇಬಿಡಿ, ಐಎಸ್‍ಓಫಿಕ್ಸ್ ಚೈಲ್ಡ್ ಸೀಟ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಕಾರಿನ ಎಲ್ಲಾ ಮಾದರಿಗಳಲ್ಲಿ ನೀಡಲಾಗಿದೆ. ಇದಲ್ಲದೆ ಹೈ ಎಂಡ್ ಮಾದರಿಗಳಲ್ಲಿ ಸೇಫ್ಟಿ ಸೀಟ್ ಬೆಲ್ಟ್ ರಿಮೈಂಡರ್, ಸ್ಪೀಡ್ ವಾರ್ನಿಂಗ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್ ಅನ್ನು ಒದಗಿಸಲಾಗಿದೆ.

MOST READ: ಹಾಸನದ ಬಳಿ ಬರೋಬ್ಬರಿ 300ಕಿ.ಮೀ ಸ್ಪೀಡ್‌‌ನಲ್ಲಿ ಬೈಕ್ ರೈಡ್ ಮಾಡಿದ ಯುವಕ

6 ಸೀಟರ್ ಸೌಲಭ್ಯದೊಂದಿಗೆ ಬರಲಿದೆ ಮಾರುತಿ ಸುಜುಕಿ ಹೊಸ ಎರ್ಟಿಗಾ

ಎಂಜಿನ್ ಸಾಮರ್ಥ್ಯ

ಹೊಸ ಎರ್ಟಿಗಾ ಕಾರಿನಲ್ಲಿ ಪ್ರಮುಖ ಎರಡು ಎಂಜಿನ್ ಆಯ್ಕೆಗಳನ್ನು ನೀಡಲಾಗಿದ್ದು, ಈ ಹಿಂದಿನ 1.4-ಲೀಟರ್ ಪೆಟ್ರೋಲ್ ಎಂಜಿನ್ ಬದಲಾಗಿ 1.5-ಲೀಟರ್ ಕೆ-ಸೀರಿಸ್ ಪೆಟ್ರೋಲ್ ಎಂಜಿನ್ ಜೋಡಿಸಲಾಗಿದೆ. ಹಾಗೆಯೇ ಡೀಸೆಲ್ ಕಾರು 1.3-ಲೀಟರ್ ಎಂಜಿನ್ ಪಡೆದಿದ್ದು, ಇಂಧನ ದಕ್ಷತೆ ಹೆಚ್ಚಿಸಲು ಎಸ್‍‍ಹೆಚ್‍‍ವಿಎಸ್ ಮೈಲ್ಡ್-ಹೈಬ್ರಿಡ್ ಟೆಕ್ನಾಲಜಿ ಬಳಕೆ ಮಾಡಲಾಗಿದೆ. ಜೊತೆಗೆ ಬೇಡಿಕೆಗೆ ಅನುಗುಣವಾಗಿ 4-ಸ್ಪೀಡ್ ಆಟೋಮ್ಯಾಟಿಕ್ ಮತ್ತು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಪಡೆದಿದೆ.

6 ಸೀಟರ್ ಸೌಲಭ್ಯದೊಂದಿಗೆ ಬರಲಿದೆ ಮಾರುತಿ ಸುಜುಕಿ ಹೊಸ ಎರ್ಟಿಗಾ

ಇದರಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ಎಂಜಿನ್ ಮಾತ್ರವೇ 6 ಸೀಟರ್ ಮಾದರಿಯಲ್ಲಿ ಖರೀದಿಗೆ ಲಭ್ಯವಿರಲಿದ್ದು, ಇನ್ನುಳಿದಂತೆ ವಿವಿಧ ಮಾಡೆಲ್‌ಗಳು ಎರಡು ಮಾದರಿಯನ್ನು ಖರೀದಿಗೆ ಲಭ್ಯವಿರಲಿವೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಟೊಯೊಟಾ ಕೂಡಾ ಇನೋವಾದಲ್ಲಿ ಇದೇ ತಂತ್ರವನ್ನು ಅನುಸರಿಸುತ್ತಿದ್ದು, ಮಾರುತಿ ಸುಜುಕಿ ಹೊಸ ಪ್ಲ್ಯಾನ್ ಹೇಗೆ ವರ್ಕೌಟ್ ಆಗುತ್ತದೆಯೇ ಮುಂದೆ ಕಾಯ್ದುನೋಡಬೇಕು.

Article Published On: Wednesday, January 23, 2019, 10:49 [IST]
English summary
Maruti Ertiga To Come In A Luxury-Focussed 6-Seater Format. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+