ಹಾಸನದ ಬಳಿ ಬರೋಬ್ಬರಿ 300ಕಿ.ಮೀ ಸ್ಪೀಡ್‌ನಲ್ಲಿ ಬೈಕ್ ರೈಡ್ ಮಾಡಿದ ಯುವಕ
ದೇಶಾದ್ಯಂತ ಸಂಚಾರಿ ನಿಯಮಗಳ ಉಲ್ಲಂಘನೆಯಿಂದಾಗಿ ದಿನಂಪ್ರತಿ ನೂರಾರು ಅಪಘಾತ ಪ್ರಕರಣಗಳನ್ನು ದಾಖಲಾಗುತ್ತಿದ್ದು, ಇದರಲ್ಲಿ ತಪ್ಪು ಮಾಡಿದವರಿಗಿಂತ ಅಮಾಯಕರೇ ಹೆಚ್ಚು ಜೀವ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸುಜುಕಿ ಹಯಾಬುಸ ಬೈಕ್ ಸವಾರನೊಬ್ಬ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಬರೋಬ್ಬರಿ 300 ಕಿ.ಮೀ ವೇಗದಲ್ಲಿ ಬೈಕ್ ಚಾಲನೆ ಮಾಡಿದ್ದಾನೆ.

ಪರ್ಫಾಮೆನ್ಸ್ ಉದ್ದೇಶಕ್ಕಾಗಿ ಇತ್ತೀಚೆಗೆ ಸೂಪರ್ ಬೈಕ್‌ಗಳ ಖರೀದಿ ಹೆಚ್ಚುತ್ತಿದ್ದು, ಟ್ರ್ಯಾಕ್‌ಗಳನ್ನು ಹೊರತುಪಡಿಸಿ ಸಾಮಾನ್ಯ ರಸ್ತೆಗಳಲ್ಲಿ ಮಿತಿಮೀರಿದ ಸ್ಪೀಡ್ ರೈಡಿಂಗ್‌ಗೆ ದಂಡವಿಧಿಸಲಾಗುತ್ತಿದ್ದರೂ ಸಹ ಕೆಲವರು ಹಠಕ್ಕೆ ಬಿದ್ದವರಂತೆ ವೇಗದ ಚಾಲನೆಗೆ ಮುಂದಾಗುತ್ತಿದ್ದಾರೆ. ಈ ವೇಳೆ ಅತಿವೇಗವೂ ಅನಾಹುತಗಳಿಗೆ ಎಡೆಮಾಡಿಕೊಡುತ್ತವೆ.

ಹಾಸನದ ಸಮೀಪದ ಹಳ್ಳಿಯೊಂದರ ಬಳಿ ಸುಜುಕಿ ಹಯಾಬುಸ ಬೈಕ್ ಸವಾರರ ಸಹ ಬೈಕಿನ ಟಾಪ್ ಸ್ಪೀಡ್ ಕ್ರಾಸ್ ಮಾಡಬೇಕೆಂಬ ಗುರಿಯೊಂದಿಗೆ ಗಂಟೆಗೆ 300ಕಿ.ಮೀ ಸ್ಪೀಡ್ ಬೈಕ್ ರೈಡ್ ಮಾಡಿದ್ದು, ಅದೃಷ್ಟವಶಾತ್ ಆ ವೇಳೆ ಯಾವುದೇ ರೀತಿ ತೊಂದರೆಗಳಾಗಿಲ್ಲ.

ಆದರೂ ಕೂಡಾ ಹೈವೇ ಗಳಲ್ಲಿ ಓವರ್ ಸ್ಪೀಡ್ ಕೆಲವು ಸಂದರ್ಭಗಳಲ್ಲಿ ದೊಡ್ಡ ದುರಂತಗಳಿಗೆ ಎಡೆಮಾಡಿಕೊಡುತ್ತಲ್ಲವೇ ಹೆದ್ದಾರಿಗಳಲ್ಲಿ ಬರುವ ಹಳ್ಳಿಗಳ ಬಳಿ ಹೀಗೆ ಮಾಡುವುದು ಖಡಿಂತವಾಗಿಯೂ ತಪ್ಪು. ಯಾಕೆಂದ್ರೆ ಇದು ರಸ್ತೆ ದಾಟುವ ಪಾದಾಚಾರಿಗಳ ಜೀವ ತೆಗೆಯೆದೇ ಇರಲಾರದು.

ಅದರಲ್ಲೂ ಕೆಲವು ಕಡೆಗಳಲ್ಲಿ ಹೈವೇ ನಲ್ಲಿಯೇ ವಿರುದ್ದ ದಿಕ್ಕಿನಿಂದ ವಾಹನ ಚಾಲನೆ ಮಾಡಿಕೊಂಡುವ ಬರುವ ಪ್ರವೃತ್ತಿ ಹೆಚ್ಚುತ್ತಿದ್ದು, ನೀವು ಸರಿಯಾದ ಮಾರ್ಗದಲ್ಲೇ ಚಲಿಸುತ್ತಿದ್ದರೂ ಸಹ ಇಂತಹ ತಪ್ಪು ಚಾಲನಾ ಪ್ರವೃತ್ತಿಯಿಂದಾಗಿ ದುರಂತಗಳಿಗೆ ಕಾರಣವಾಗುತ್ತವೆ.

ಹೀಗಾಗಿ ಯಾವುದೇ ಕಾರಣಕ್ಕೂ ಸಾರ್ವಜನಿಕ ಬಳಕೆಯ ರಸ್ತೆಗಳಲ್ಲಿ ನಿಯಮ ಮೀರಿ ಚಾಲನೆ ಮಾಡಲೇಬೇಡಿ. ಒಂದು ವೇಳೆ ಹೈ ಸ್ಪೀಡ್‌ನಲ್ಲಿ ಬೈಕ್ ರೈಡ್ ಮಾಡಲೇಬೇಕು ಎನ್ನುವ ಆಸೆಯಿದ್ದಲ್ಲಿ ಟ್ರ್ಯಾಕ್ ಬಳಕೆ ಮಾಡುವುದು ಉತ್ತಮ. ಅದನ್ನು ಬಿಟ್ಟು ಇಲ್ಲಿ ಬೇರೆಯವರ ಜೀವ ತೆಗೆಯುವುದು ಸರಿಯಲ್ಲ.

ವಿಪಿನ್ ಮಾಬಿನ್ ಎನ್ನುವ ಯುಟ್ಯೂಬ್ ಚಾನೆಲ್‌ನಲ್ಲಿ ವೇಗವಾಗಿ ಚಲಿಸುತ್ತಿರುವ ಹಯಾಬುಸ ಬೈಕ್ ವಿಡಿಯೋ ಅಪ್‌ಲೋಡ್ ಮಾಡಲಾಗಿದ್ದು, ವಿಡಿಯೋದಲ್ಲಿ ಸೆರೆಯಾದ ದೃಶ್ಯಗಳ ಪ್ರಕಾರ ಹಾಸನದ ಗ್ರಾಮವೊಂದರ ಬಳಿ ಇದನ್ನು ಚಿತ್ರಿಕರಣ ಮಾಡಲಾಗಿದೆ.
ಹೆಲ್ಮೆಟ್ ಮೌಂಟೆಡ್ ಕ್ಯಾಮೆರಾದಲ್ಲಿ ಈ ವಿಡಿಯೋ ಸೆರೆಹಿಡಿಯಲಾಗಿದ್ದು, ಬಹುತೇಕರು ಓವರ್ ಸ್ಪೀಡ್ ಬೈಕ್ ಸವಾರಿಯ ಮಾಡಿದ ಯುವಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ರಸ್ತೆಗಳಲ್ಲಿ ಓವರ್ ಸ್ಪೀಡ್ ಹುಚ್ಚು ಬಿಟ್ಟು ಟ್ರ್ಯಾಕ್ ಮಾತ್ರ ನಿಮ್ಮ ಕೌಶಲ್ಯ ಪ್ರದರ್ಶನ ಮಾಡಿ ಅಂತಾ ಇನ್ನು ಕೆಲವರು ಸಲಹೆ ನೀಡಿದ್ದಾರೆ.

ಇನ್ನು ಹಯಾಬುಸ ಹೆಸರು ಕೇಳಿದ್ರೆ ಸಾಕು ಸೂಪರ್ ಬೈಕ್ ಪ್ರಿಯರ ಕಿವಿ ನೆಟ್ಟಗಾಗುತ್ತವೆ. ಕಳೆದ 20 ವರ್ಷಗಳಿಂದ ಜಾಗತಿಕವಾಗಿ ತನ್ನದೇ ಹವಾ ಸೃಷ್ಠಿಸಿರುವ ಹಯಾಬುಸ ಬೈಕ್‌ಗಳು ವೇಗದ ಸ್ಪೀಡ್‌ನಿಂದಾಗಿಯೇ ಜಗತ್ತಿನಾದ್ಯಂತ ತನ್ನದೇ ಜನಪ್ರಿಯತೆ ಪಡೆದುಕೊಂಡಿದೆ.
MOST READ: ಕಾರ್ ಬ್ರೇಕ್ ಫೇಲ್ ಆದ್ರೆ ಕೇವಲ 8 ಸೇಕೆಂಡುಗಳಲ್ಲಿ ಕಂಟ್ರೋಲ್ ಮಾಡುಬಹುದು ನೋಡಿ..!

ಹಯಾಬುಸ ಬೈಕ್‌ಗಳು 1998ರಲ್ಲಿ ಮೊದಲ ಬಾರಿಗೆ ಬಿಡುಗಡೆಯ ನಂತರ ಭಾರತದಲ್ಲೂ ಉತ್ತಮ ಮಾರಾಟ ಹೊಂದಿದ್ದು, 1,340 ಸಿಸಿ ಎಂಜಿನ್ ಸಾಮರ್ಥ್ಯದೊಂದಿಗೆ 197-ಬಿಎಚ್‌ಪಿ ಮತ್ತು 155-ಎನ್ಎಂ ಟಾರ್ಕ್ ಉತ್ಪಾದನಾ ಸಾಮರ್ಥ್ಯದ ಬಹುಬೇಡಿಕೆಯ ಸೂಪರ್ ಬೈಕ್ ಆವೃತ್ತಿಯಾಗಿದೆ.

ದೆಹಲಿ ಎಕ್ಸ್‌ಶೋರೂಂ ಪ್ರಕಾರ, 13.50 ಲಕ್ಷ ಬೆಲೆ ಹೊಂದಿರುವ ಹಯಾಬುಸ ಬೈಕ್ ಮಾದರಿಯು ಅತ್ಯುತ್ತಮ ಪರ್ಫಾಮೆನ್ಸ್ ಮಾದರಿಯಾಗಿದ್ದು, ಪ್ರತಿ ಗಂಟೆಗೆ 320 ಕಿ.ಮಿ ಟಾಪ್ ಸ್ಪೀಡ್ ಹೊಂದಿರುವ ಹಯಾಬುಸಾ ಬೈಕ್ ಮುಂದಿನ ಕೆಲವೇ ದಿನಗಳಲ್ಲಿ ಮಾರುಕಟ್ಟೆಯಿಂದ ಮರೆಯಾಗುತ್ತಿದೆ.
MOST READ: ಮಹೀಂದ್ರಾ ಅಲ್ಟುರಾಸ್ ಜಿ4 ಕಾರಿಗೆ ಹೊಸ ಹೆಸರು ನೀಡಿದ್ರೆ 2 ಕಾರು ಫ್ರೀ ಅಂತೆ..!

ಹಯಾಬುಸ ಬೈಕಿನಲ್ಲಿ ಎಂಜಿನ್ ಸಾಮರ್ಥ್ಯಕ್ಕೆ ತಕ್ಕಂತೆ ಸುರಕ್ಷತೆಗಳಿಲ್ಲದಿರುವ ಮತ್ತು ಅತಿಯಾದ ಮಾಲಿನ್ಯ ಹೊರಸೂಸುವಿಕೆಯ ಸಮಸ್ಯೆ ಎದುರಿಸುತ್ತಿದ್ದು, ಇದು ಯುರೋ-6 ಕಾಯ್ದೆಗೆ ಸಂಪೂರ್ಣ ವಿರುದ್ಧವಾಗಿದೆ ಎನ್ನಲಾಗಿದೆ.

ಸದ್ಯಕ್ಕೆ ಯುರೋಪ್ ಮಾರುಕಟ್ಟೆಯಲ್ಲಿ ಯುರೋ-6 ನಿಯಮದಂತೆ ಹಯಾಬುಸ ಮಾರಾಟಕ್ಕೆ ಬ್ರೇಕ್ ಬೀಳುತ್ತಿದ್ದು, ಇದರಿಂದಾಗಿ ಭಾರತದಲ್ಲಿ ಮಾತ್ರ ಹಯಾಬುಸ ಬೈಕ್‌ಗಳಿಗೆ ಮುಂದಿನ ಒಂದು ವರ್ಷದ ತನಕ ಕೊಂಚ ನಿರಾಳ ಎನ್ನಬಹುದು.

ಭಾರತದಲ್ಲಿ ಸದ್ಯ ಜಾರಿಯಲ್ಲಿರುವ ಬಿಎಸ್-4 ಕಾಯ್ದೆಯು 2020ರ ಮಾರ್ಚ್ 31ಕ್ಕೆ ಅಂತ್ಯಗೊಳ್ಳಲಿದ್ದು, ನಂತರ ಬಿಎಸ್-6 ಕಾಯ್ದೆಯು ಅನುಷ್ಠಾನಗೊಳ್ಳಲಿದೆ. ಆಗ ಹಯಾಬುಸ ಬೈಕಿಗೆ ದೇಶಿಯ ಮಾರಕಟ್ಟೆಯಲ್ಲೂ ತನ್ನ ನೆಲೆ ಕಳೆದುಕೊಳ್ಳುವುದು ಪಕ್ಕಾ ಆಗಿದೆ. ಆದ್ರೆ ಅದೆನೇ ಇರಲಿ ಸ್ಪೀಡ್ ರೈಡಿಂಗ್ ಮಾಡುವಾಗ ಎಚ್ಚರ ವಹಿಸುವುದು ಒಳಿತು.


Click it and Unblock the Notifications








