ಬ್ರೇಕ್ ಫೇಲ್ ಆದಾಗ ಜೀವ ಉಳಿಸಿಕೊಳ್ಳಲು ಈ ಟಿಪ್ಸ್ ಖಂಡಿತ ನಿಮ್ಮ ಸಹಾಯಕ್ಕೆ ಬರುತ್ತೆ..!

By Manoj B.k

ಕಾರು ಚಾಲನೆ ವೇಳೆ ಸಡನ್ ಆಗಿ ಬ್ರೇಕ್ ಫೇಲ್ ಆಗಿ ಕೆಲವೊಮ್ಮೆ ದೊಡ್ಡ ದುರಂತಗಳಿಗೆ ಕಾರಣವಾಗಬಹುದು. ಯಾವುದೇ ಮುನ್ಸೂಚನೆ ಇಲ್ಲದೇ ಎದುರಾಗುವ ಬ್ರೇಕ್ ಫೇಲ್ ಸಮಸ್ಯೆಯಿಂದಾಗಿ ಪ್ರತಿವರ್ಷ ದೇಶಾದ್ಯಂತ ಸಾವಿರಾರು ಜನ ಪ್ರಾಣಕಳೆದುಕೊಳ್ಳುತ್ತಿದ್ದು, ನಾವಿಂದು ಬ್ರೇಕ್ ಫೇಲ್ ಸಮಸ್ಯೆಯಿಂದ ಆಗಬಹುದಾದ ದುರಂತಗಳನ್ನು ತಪ್ಪಿಸಲು ಕೆಲವು ಮಹತ್ವದ ಸಲಹೆಗಳನ್ನು ನೀಡಲಿದ್ದೇವೆ.

ಬ್ರೇಕ್ ಫೇಲ್ ಆದಾದ ಜೀವ ಉಳಿಸಿಕೊಳ್ಳಲು ಈ ಟಿಪ್ಸ್ ಖಂಡಿತ ನಿಮ್ಮ ಸಹಾಯಕ್ಕೆ ಬರುತ್ತೆ..!

ವಾಹನ ಚಾಲನೆಗೂ ಮುನ್ನ ತಾಂತ್ರಿಕ ಅಂಶಗಳ ಬಗೆಗೆ ಸರಿಯಾಗಿ ಗಮನಹರಿಸುವ ಹವ್ಯಾಸ ಬೆಳಸಿಕೊಳ್ಳುವುದು ಒಳಿತು. ಕೆಲವೊಮ್ಮೆ ನಮಗೆ ಗೊತ್ತಿಲ್ಲದಂತೆಯೇ ಆಗುವ ಸಣ್ಣಪುಟ್ಟ ತಪ್ಪುಗಳೇ ಜೀವಕ್ಕೆ ಕುತ್ತು ತರಬಹುದು. ಇದರಲ್ಲಿ ಬ್ರೇಕ್ ಫೇಲ್ ಸಮಸ್ಯೆ ಕೂಡಾ ಒಂದಾಗಿದ್ದು, ವೇಗದ ಚಾಲನೆ ವೇಳೆ ಡಿಢೀರ್ ಅಂತಾ ಕಾರನ್ನು ಹತೋಟಿಗೆ ತರುವುದು ಅಷ್ಟು ಸುಲಭವಲ್ಲ ಎನ್ನುವುದು ಬಹುತೇಕರಿಗೆ ಗೊತ್ತಿರುವ ವಿಚಾರ.

ಬ್ರೇಕ್ ಫೇಲ್ ಆದಾದ ಜೀವ ಉಳಿಸಿಕೊಳ್ಳಲು ಈ ಟಿಪ್ಸ್ ಖಂಡಿತ ನಿಮ್ಮ ಸಹಾಯಕ್ಕೆ ಬರುತ್ತೆ..!

ಆದ್ರೆ ಕೆಲವು ಟಿಪ್ಸ್ ಬಳಸಿ ಬ್ರೇಕ್ ಫೇಲ್ ಆದ ಕಾರುಗಳನ್ನು ಕೆಲವೇ ಸೇಕೆಂಡುಗಳಲ್ಲಿ ಕಂಟ್ರೋಲ್ ಮಾಡಬಹುದಾಗಿದ್ದು, ಹ್ಯಾಂಡಲ್ ಬ್ರೇಕ್ ಮತ್ತು ಮ್ಯಾನುವಲ್ ಗೇರ್‌ಬಾಕ್ಸ್ ಸೌಲಭ್ಯವನ್ನು ಸರಿಯಾದ ಕ್ರಮದಲ್ಲಿ ಬಳಕೆ ಮಾಡಿದ್ದಲ್ಲಿ ನೀವು ಖಂಡಿತವಾಗಿಯೂ ಆಗಬಹುದಾದ ಅನಾಹುತವನ್ನು ತಪ್ಪಿಸಬಹುದು.

ಬ್ರೇಕ್ ಫೇಲ್ ಆದಾದ ಜೀವ ಉಳಿಸಿಕೊಳ್ಳಲು ಈ ಟಿಪ್ಸ್ ಖಂಡಿತ ನಿಮ್ಮ ಸಹಾಯಕ್ಕೆ ಬರುತ್ತೆ..!

ಹೌದು, ತುರ್ತು ಸಂದರ್ಭಗಳಲ್ಲಿ ಹ್ಯಾಂಡಲ್ ಬ್ರೇಕ್ ನಿಮ್ಮ ಸಹಾಯಕ್ಕೆ ಬರಲಿದ್ದು, ಬ್ರೇಕ್ ಫೇಲ್ ಆಗಿದೆ ಎಂದು ನಿಮ್ಮ ಗಮನಕ್ಕೆ ಬಂದಾಕ್ಷಣವೇ ಯಾವುದೇ ಭಯಕ್ಕೆ ಒಳಗಾಗದೇ ಈ ಕೆಳಗಿನ ಟಿಪ್ಸ್ ಬಳಸಬಹುದಾಗಿದೆ.

ಬ್ರೇಕ್ ಫೇಲ್ ಆದಾದ ಜೀವ ಉಳಿಸಿಕೊಳ್ಳಲು ಈ ಟಿಪ್ಸ್ ಖಂಡಿತ ನಿಮ್ಮ ಸಹಾಯಕ್ಕೆ ಬರುತ್ತೆ..!

ಜೀವ ಉಳಿಸುತ್ತೆ ಹ್ಯಾಂಡಲ್‌ಬ್ರೇಕ್..!

ನೀವು ಒಂದು ವೇಳೆ ನಿಮ್ಮ ಕಾರನ್ನು ಗಂಟೆಗೆ ಸರಾಸರಿಯಾಗಿ 70 ರಿಂದ 80 ವೇಗ ಚಾಲನೆ ಮಾಡುತ್ತಿದ್ದೀರಿ ಎಂದಿಟ್ಟುಕೊಳ್ಳೋಣ. ಆಗ ತಕ್ಷಣಕ್ಕೆ ಬ್ರೇಕ್ ಫೇಲ್ ಆಗಿದೆ ಎಂದು ನಿಮ್ಮ ಗಮನಕ್ಕೆ ಬಂದ ನಂತರ ನಿಧಾನವಾಗಿ ಹ್ಯಾಂಡಲ್ ಬ್ರೇಕ್ ಒತ್ತುತ್ತಾಗಿ ಹೋಗಿ.

ಬ್ರೇಕ್ ಫೇಲ್ ಆದಾದ ಜೀವ ಉಳಿಸಿಕೊಳ್ಳಲು ಈ ಟಿಪ್ಸ್ ಖಂಡಿತ ನಿಮ್ಮ ಸಹಾಯಕ್ಕೆ ಬರುತ್ತೆ..!

ಹ್ಯಾಂಡಲ್ ಬ್ರೇಕ್ ಅರ್ಧಕ್ಕೆ ಬಂದ ನಂತರ ಕಾರಿನ ವೇಗವನ್ನು ತಗ್ಗಿಸಲು ಗೇರ್‌ ಪ್ರಮಾಣವವನ್ನು ನಾಲ್ಕರಿಂದ ಎರಡಕ್ಕೆ ಇಳಿಕೆ ಮಾಡಿಕೊಳ್ಳಬೇಕಾಗಿದ್ದು, ತದನಂತರ ಮತ್ತೆ ಇನ್ನುಳಿದ ಹ್ಯಾಂಡಲ್ ಬ್ರೇಕ್ ಪ್ರಮಾಣವನ್ನು ಪೂರ್ಣ ಒತ್ತಿದಲ್ಲಿ ಕಾರಿನ ವೇಗವು ಹಿಡಿತಕ್ಕೆ ಬರುವುದು.

ಬ್ರೇಕ್ ಫೇಲ್ ಆದಾದ ಜೀವ ಉಳಿಸಿಕೊಳ್ಳಲು ಈ ಟಿಪ್ಸ್ ಖಂಡಿತ ನಿಮ್ಮ ಸಹಾಯಕ್ಕೆ ಬರುತ್ತೆ..!

ಈ ವೇಳೆ ಯಾವುದೇ ರೀತಿ ಗೊಂದಲಕ್ಕೆ ಒಳಗಾಗದೆ ಹಂತ ಹಂತವಾಗಿ ಹ್ಯಾಂಡಲ್‌ಬ್ರೇಕ್ ಮತ್ತು ಗೇರ್‌ಬಾಕ್ಸ್ ಬಳಕೆ ಮಾಡಿಕೊಳ್ಳಬೇಕಿದ್ದು, ಯಾವುದೇ ಕಾರಣಕ್ಕೂ ಸಡನ್ ಆಗಿ ಕಾರು ನಿಲುಗಡೆ ಮಾಡುವ ಉದ್ದೇಶದಿಂದ ಹ್ಯಾಂಡಲ್ ಬ್ರೇಕ್ ಸಂಪೂರ್ಣವಾಗಿ ಒತ್ತಬಾರದು.

ಬ್ರೇಕ್ ಫೇಲ್ ಆದಾದ ಜೀವ ಉಳಿಸಿಕೊಳ್ಳಲು ಈ ಟಿಪ್ಸ್ ಖಂಡಿತ ನಿಮ್ಮ ಸಹಾಯಕ್ಕೆ ಬರುತ್ತೆ..!

ಕಾರು ವೇಗದಲ್ಲಿರುವ ಹ್ಯಾಂಡಲ್‌ಬ್ರೇಕ್ ಅನ್ನು ಒಂದೇ ಬಾರಿಗೆ ಪೂರ್ಣವಾಗಿ ಒತ್ತಿದ್ದಲ್ಲಿ ಕಾರು ಪಲ್ಟಿ ಹೊಡೆಯುವ ಸಾಧ್ಯತೆಗಳಿದ್ದು, ಈ ಹಿನ್ನೆಲೆಯಲ್ಲಿ ಹ್ಯಾಂಡಲ್‌ಬ್ರೇಕ್ ಮೇಲೆ ನಿಧಾನವಾಗಿ ಹಿಡಿತಕ್ಕೆ ತಂದಲ್ಲಿ ಯಾವುದೇ ಅಪಾಯವಿಲ್ಲದೆ ಕಾರು ನಿಲುಗಡೆಯಾಗುತ್ತೆ.

MOST READ: ಟ್ಯೂಬ್‍‍ಲೆಸ್ ಟಯರ್ ಟ್ರೆಂಡ್ ಮುಗಿತು, ಇನ್ನು ಏರ್‍‍ಲೆಸ್ ಟಯರ್ ಸದ್ದು ಶುರು

ಬ್ರೇಕ್ ಫೇಲ್ ಆದಾದ ಜೀವ ಉಳಿಸಿಕೊಳ್ಳಲು ಈ ಟಿಪ್ಸ್ ಖಂಡಿತ ನಿಮ್ಮ ಸಹಾಯಕ್ಕೆ ಬರುತ್ತೆ..!

ಕೇವಲ 8 ಸೇಕೆಂಡು ಸಾಕು..!

ಬ್ರೇಕ್ ಫೇಲ್ ಆದಾಗ ಜೀವ ಉಳಿಸಲುಕೊಳ್ಳಲು ಒಂದೊಂದು ಸೆಕೇಂಡು ಕೂಡಾ ಮುಖ್ಯವಾಗಿರುತ್ತೆ. ಆದ್ರೆ ಹ್ಯಾಂಡಲ್ ‌ಬ್ರೇಕ್ ಅನ್ನು ಸರಿಯಾದ ಸಮಯಕ್ಕೆ ಬಳಕೆ ಮಾಡಿದರೆ ಕೇವಲ 8 ರಿಂದ 10 ಸೇಕೆಂಡುಗಳಲ್ಲಿ ಕಾರಿನ ವೇಗವನ್ನು 80 ಕಿ.ಮಿ ವೇಗದಿಂದ ಸೊನ್ನೆಗೆ ತರುಬಹುದು.

MOST READ: ಗ್ರಾಹಕರಿಗೆ ಉಟ ಕೊಡುವ ಧಾವಂತವಲ್ಲಿ ಈ ಡೆಲಿವರಿ ಬಾಯ್ ಮಾಡಿದ ತಪ್ಪುಗಳು ಎಷ್ಟು ಗೊತ್ತಾ?

ಬ್ರೇಕ್ ಫೇಲ್ ಆದಾದ ಜೀವ ಉಳಿಸಿಕೊಳ್ಳಲು ಈ ಟಿಪ್ಸ್ ಖಂಡಿತ ನಿಮ್ಮ ಸಹಾಯಕ್ಕೆ ಬರುತ್ತೆ..!

ಕೆಲವರಿಗೆ ಇನ್ನು ಕೆಲವು ಗೊಂದಲದ ಪ್ರಶ್ನೆಗಳು ಮೂಡಬಹುದು. ನೀವು ಹೇಳಿದ್ದು ಮ್ಯಾನುವಲ್ ಗೇರ್‌ಬಾಕ್ಸ್ ಕಾರುಗಳಿಗೆ ಮಾತ್ರ ಅನ್ವಯಿಸುತ್ತೆ. ಆದ್ರೆ ಆಟೋಮ್ಯಾಟಿಕ್ ಕಾರುಗಳಲ್ಲಿ ಹೇಗೆ ನಿಯಂತ್ರಣ ಮಾಡುವುದು ಅಂತಾ ಕೇಳಬಹುದು. ನಿಜ, ಅದಕ್ಕೂ ಪರಿಹಾರವಿದೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಬ್ರೇಕ್ ಫೇಲ್ ಆದಾದ ಜೀವ ಉಳಿಸಿಕೊಳ್ಳಲು ಈ ಟಿಪ್ಸ್ ಖಂಡಿತ ನಿಮ್ಮ ಸಹಾಯಕ್ಕೆ ಬರುತ್ತೆ..!

ಪ್ರತಿಕಾರಿನಲ್ಲೂ ಗೇರ್‌ಬಾಕ್ಸ್ ಸೌಲಭ್ಯ ಮಾತ್ರ ಆಟೋಮ್ಯಾಟಿಕ್ ಮತ್ತು ಮ್ಯಾನುವಲ್‌ನಲ್ಲಿರುತ್ತೆ. ಆದ್ರೆ ಹ್ಯಾಂಡಲ್‌ಬ್ರೇಕ್ ಪ್ರತಿಕಾರಿನಲ್ಲೂ ಮ್ಯಾನುವಲ್ ಆಗಿ ಬಳಕೆ ಮಾಡಲಾಗುತ್ತೆ. ಹೀಗಾಗಿ ಮ್ಯಾನುವಲ್ ಕಾರು ಮಾದರಿಯಲ್ಲೇ ಆಟೋಮ್ಯಾಟಿಕ್ ಕಾರುಗಳನ್ನು ಸಹ ಮೇಲಿನ ಸಲಹೆಯೆಂತೆ ನಿಯಂತ್ರಣ ಮಾಡಬಹುದು.

ಬ್ರೇಕ್ ಫೇಲ್ ಆದಾದ ಜೀವ ಉಳಿಸಿಕೊಳ್ಳಲು ಈ ಟಿಪ್ಸ್ ಖಂಡಿತ ನಿಮ್ಮ ಸಹಾಯಕ್ಕೆ ಬರುತ್ತೆ..!

ಇನ್ನು ಬ್ರೇಕ್ ಫೇಲ್ ಸಮಸ್ಯೆ ಎದುರಾಗುವುದಕ್ಕೂ ಮುನ್ನ ಕಂಡುಬರುವ ಕೆಲವು ಗುಣಲಕ್ಷಣಗಳು ನಿಮ್ಮ ಕಾರು ಬ್ರೇಕ್ ಫೇಲ್ ಸಮಸ್ಯೆ ತುತ್ತಾಗಬಹುದು ಎನ್ನುವ ಸೂಚನೆಗಳನ್ನು ನೀಡಲಿದ್ದು, ನಾವು ಹೇಳುವ ಕೆಲವು ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಿಮ್ಮ ಅರಿವಿಗೆ ಬರಬಹುದು.

ಬ್ರೇಕ್ ಫೇಲ್ ಆದಾದ ಜೀವ ಉಳಿಸಿಕೊಳ್ಳಲು ಈ ಟಿಪ್ಸ್ ಖಂಡಿತ ನಿಮ್ಮ ಸಹಾಯಕ್ಕೆ ಬರುತ್ತೆ..!

ಬ್ರೇಕ್ ಫೇಲ್ ಆಗುವುದಕ್ಕೂ ಮುನ್ನ..!

ಕಾರು ಅಥವಾ ಬೈಕ್‍‍ಗಳಲ್ಲಿ ಅತಿ ವೇಗದಲ್ಲಿ ಪ್ರಯಾಣಿಸುವುದು ಕಷ್ಟವೇನಲ್ಲ. ಆದ್ರೆ ಆ ವೇಗವನ್ನು ಸರಿಯಾದ ರೀತಿ ನಿಯಂತ್ರಣ ಮಾಡುವ ಚಾಲನಾ ಕೌಶಲ್ಯ ನಿಮ್ಮಲ್ಲಿ ಇರಬೇಕು. ಹೀಗಾಗಿ ವೇಗದ ಚಾಲನೆಯಲ್ಲಿರುವಾಗ ಬ್ರೇಕ್ ಫೇಲ್ ಆಗಬಹುದಾದ ಗುಣಲಕ್ಷಣಗಳನ್ನು ತಿಳಿದುಕೊಂಡು ಆಗಬಹುದಾದ ದುರಂತಗಳನ್ನು ತಪ್ಪಿಸಬಹುದು.

ಬ್ರೇಕ್ ಫೇಲ್ ಆದಾದ ಜೀವ ಉಳಿಸಿಕೊಳ್ಳಲು ಈ ಟಿಪ್ಸ್ ಖಂಡಿತ ನಿಮ್ಮ ಸಹಾಯಕ್ಕೆ ಬರುತ್ತೆ..!

ಕರ್ಕಶ ಶಬ್ದ ಬರುವುದು..!

ವಾಹನದಲ್ಲಿ ಬ್ರೇಕ್ ಹಿಡಿದಾಗ ಕರ್ಕಶವಾದ ಶಬ್ದ ಬಂದಲ್ಲಿ ಅದು ನಿಮ್ಮ ವಾಹನದ ಬ್ರೇಕ್ ಫೈಲ್ಯೂರ್ ಆಗುತ್ತಿದೆ ಎಂಬುವುದರ ಸಂಕೇತ. ನಿಜಕ್ಕೆ ಹಲವು ಕಂಪನಿಗಳಲ್ಲಿ ಸುರಕ್ಷತೆಗಾಗಿ ಈ ಶಬ್ದ ಬರುವ ಹಾಗೆ ವಾಹನಗಳಲ್ಲಿ ನೀಡಿರುತ್ತಾರೆ. ಬ್ರೇಕ್‍‍ಗಳನ್ನು ಕೊನೆಯವರೆಗು ಪ್ರೆಸ್ ಮಾಡಿದ್ದಲ್ಲಿ, ವೆಹಿಕಲ್ ನಿಲ್ಲದಿದ್ದರೆ ಚಾಲನೆಯಲ್ಲಿರುವ ಎರಡು ಭಾಗಗಳು ಒಂದರನ್ನೊಂದು ಅಂಟಿಕೊಂಡಾಗ ಇಂತಹ ಕರ್ಕಶ ಶಬ್ದ ಬರುತ್ತದೆ. ಅಂದರೇ ಬ್ರೇಕ್‍‍ಗಳನ್ನು ರಿಪೇರಿ ಮಾಡಿಸಬೇಕೆಂದು ಇದು ಸೂಚನೆ.

ಬ್ರೇಕ್ ಫೇಲ್ ಆದಾದ ಜೀವ ಉಳಿಸಿಕೊಳ್ಳಲು ಈ ಟಿಪ್ಸ್ ಖಂಡಿತ ನಿಮ್ಮ ಸಹಾಯಕ್ಕೆ ಬರುತ್ತೆ..!

ಗರಗರ ಎನಿಸುವ ಶಬ್ದ ಬರುವುದು..!

ಬ್ರೇಕ್ ಅನ್ನು ಅಪ್ಲೈ ಮಾಡಿದ್ದಲ್ಲಿ ಚಕ್ರಗಳ ನಡುವೆ ಇರುವ ಬ್ರೇಕ್ ಷೂ ಡ್ರಮ್ ಅನ್ನು ಗಟ್ಟಿಯಾಗಿ ಹಿಡಿದಿರುತ್ತದೆ. ಈ ಎರಡರ ಮಧ್ಯೆ ಬ್ರೇಕ್ ಲೈನಿಂಗ್ ಇರುತ್ತದೆ. ಅಧಿಕ ಕಾಲದವರೆಗೆ ಬ್ರೆಕ್ ಲೈನಿಂಗ್‍ಗಳನ್ನು ಬದಲಾಯಿಸದಿದ್ದಲ್ಲಿ, ಬ್ರೇಕ್ ಷೂ ಡ್ರಮ್‍‍ಗೆ ಅಂಟಿಕೊಳ್ಳುವುದಕ್ಕೆ ಕಾರಣವಾಗುತ್ತದೆ. ಆಗ ಗರಗರ ಎಂಬ ಶಬ್ದವು ಬರುತ್ತದೆ. ಇಂತಹ ಸಂದರ್ಭದಲ್ಲಿ ಬ್ರೇಕ್ ಷೂ ಕರಗಿ ಹೋದರೆ ಬ್ರೇಕ್ ಫೈಲ್ಯೂರ್ ಆಗುವುದು ಖಚಿತ. ಆದ್ದರಿಂದ ಬ್ರೇಕ್‍‍ಗಳನ್ನು ಒತ್ತಿದಾಗ ಇಂತಹ ಶಬ್ದವು ಬಂದರೇ ಸಮೀಪದಲ್ಲಿರುವ ಮೆಕಾನಿಕ್ ಹತ್ತಿರ ತಕ್ಷಣವೇ ಚೆಕ್ ಮಾಡಿಸಿ.

MOST READ: ಹೈವೆನಲ್ಲಿ ದರೋಡೆ ಮಾಡುತ್ತಿದ್ದ ಖದೀಮರಿಗೆ ಡಿಸಿಪಿ ಅಣ್ಣಾಮಲೈ ಮಾಸ್ಟರ್ ಸ್ಟ್ರೋಕ್..!

ಬ್ರೇಕ್ ಫೇಲ್ ಆದಾದ ಜೀವ ಉಳಿಸಿಕೊಳ್ಳಲು ಈ ಟಿಪ್ಸ್ ಖಂಡಿತ ನಿಮ್ಮ ಸಹಾಯಕ್ಕೆ ಬರುತ್ತೆ..!

ಬ್ರೇಕ್ ಒತ್ತಿದಾಗ ವೈಬ್ರೇಟ್ ಆಗುವುದು..!

ಇದರಲ್ಲಿ ಎರಡು ಬಗೆಯಾದ ವೈಬ್ರೇಷನ್‍‍ಗಳಿರುತ್ತವೆ.

1. ಬ್ರೇಕ್ ಅಪ್ಲೈ ಮಾಡಿದಾಗ ಬ್ರೇಕ್ ಪೆಡಲ್ ವೈಬ್ರೇಟ್ ಆಗುವುದು, ಅಂದರೇ ಬ್ರೇಕ್‍‍ನಲ್ಲಿ ಸಮಸ್ಯೆ ಇದೆ ಎಂದು ಅರ್ಥ.

2. ಬ್ರೇಕ್ ಅಪ್ಲೈ ಮಾಡಿದಾಗ ಸಂಪೂರ್ಣ ವಾಹನವು ವೈಬ್ರೇಟ್ ಆಗುವುದು, ಅಂದರೇ ಬ್ರೇಕ್‍‍ಗಳು ದೊಡ್ಡ ಸಮಸ್ಯೆಗೆ ತುತ್ತಾಗಿದೆ ಎಂದು ಅರ್ಥ

ಬ್ರೇಕ್ ಫೇಲ್ ಆದಾದ ಜೀವ ಉಳಿಸಿಕೊಳ್ಳಲು ಈ ಟಿಪ್ಸ್ ಖಂಡಿತ ನಿಮ್ಮ ಸಹಾಯಕ್ಕೆ ಬರುತ್ತೆ..!

ಬ್ರೇಕ್ ಪೆಡಲ್‍‍ನ ಮೇಲೆ ಮತ್ತು ಕಾರು ಪೂರ್ಣವಾಗಿ ವೈಬ್ರೇಷನ್ ಬರುತ್ತಿದೆ ಎಂದರೇ ಬ್ರೇಕ್‍‍ಗಳ ತೊಂದರೆಯು ಅಧಿಕವಾಗಿದೆ ಎಂದು ಅರ್ಥ ಮತ್ತು ಬ್ರೇಕನ್ನು ಬದಲಾಯಿಸಿ ಬಹಳ ಕಾಲ ಆಗಿರುತ್ತದೆ. ಪರಿಮಿತ ವೇಗದ ನಂತರ ಇಂತಹ ವೈಬ್ರೇಷನ್ ಬರುತ್ತಿರುವುದಾದರೆ ತಕ್ಷಣವೇ ಮೆಕಾನಿಕ್ ಅನ್ನು ಸಂಪರ್ಕಿಸಿ.

ಬ್ರೇಕ್ ಫೇಲ್ ಆದಾದ ಜೀವ ಉಳಿಸಿಕೊಳ್ಳಲು ಈ ಟಿಪ್ಸ್ ಖಂಡಿತ ನಿಮ್ಮ ಸಹಾಯಕ್ಕೆ ಬರುತ್ತೆ..!

ಬ್ರೇಕ್ ಪೆಡಲ್ ಅನ್ನು ಧೀರ್ಘಕಾಲ ಪ್ರೆಸ್ ಮಾಡುತ್ತಿದ್ದೀರಾ..?

ವಾಹನದ ವೇಗವನ್ನು ಪೂರ್ತಿಯಾಗಿ ಕಡಿಮೆಗೊಳಿಸಲು ಬ್ರೇಕ್ ಪೆಡಲ್ ಅನ್ನು ಧೀರ್ಘಕಾಲದ ವರೆಗು ಪ್ರೆಸ್ ಮಾಡುತ್ತಿದ್ದೀರಾ.? ಆದರೆ, ಆ ಬ್ರೇಕ್‍‍ಗಳು ಖಚಿತವಾಗಿಯು ಫೈಲ್ಯೂರ್ ಆಗುತ್ತದೆ. ಬ್ರೇಕ್ ಫ್ಲುಯ್ಡ್ ಕಡಿಮೆಯಾದಾಗ ಹೀಗಾಗುತ್ತದೆ. ನಿಜಕ್ಕೆ ಬ್ರೇಕ್ ಆಯಿಲ್ ಆವಿಯಾಗುವ ಅವಕಾಶಗಳು ಬಹಳ ಕಡಿಮೆ. ಆದ್ದರಿಂದ ಬ್ರೇಕ್ ಆಯಿಲ್ ಲೀಕ್ ಆಗುತ್ತಿದೆಯೇ ಎಂದು ಪರೀಕ್ಷಿಸಿಕೊಳ್ಳಿ. ಒಂದು ವೇಳೆ ಲೀಕ್ ಆಗುತ್ತಿದ್ದರೆ ತಕ್ಷಣವೇ ಸಮೀಪದಲ್ಲಿರುವ ಮೆಕಾನಿಕ್ ಅನ್ನು ಸಂಪರ್ಕಿಸಿ. ಬ್ರೇಕ್ ಫ್ಲೂಯ್ಡ್ ಇಲ್ಲದ ವಾಹನವನ್ನು ಚಲಾಯಿಸುವುದು ಪ್ರಾಣದ ಜೊತೆ ಆಟವಾಡಿದಂತೆ.

ಬ್ರೇಕ್ ಫೇಲ್ ಆದಾದ ಜೀವ ಉಳಿಸಿಕೊಳ್ಳಲು ಈ ಟಿಪ್ಸ್ ಖಂಡಿತ ನಿಮ್ಮ ಸಹಾಯಕ್ಕೆ ಬರುತ್ತೆ..!

ಕಾರಿನ ಡ್ಯಾಶ್‍‍ಬೋರ್ಡ್‍‍ನಲ್ಲಿ ಬ್ರೇಕ್ ವಾರ್ನಿಂಗ್ ಲೈಟ್ ಇರ್ರುತ್ತದೆಯೆ.?

ಹೌದು., ಈಗ ಬರುತ್ತಿರುವ ಬಹುತೇಕ ಕಾರುಗಳಲ್ಲಿ ಬ್ರೇಕ್ ವಾರ್ನಿಂಗ್ ಲೈಟ್‍‍ಗಳನ್ನು ಅಳವಡಿಸಿರುತ್ತಾರೆ. ಕಾರನಿಲ್ಲಿರುವ ಭದ್ರತಾ ವೈಶಿಷ್ಟ್ಯತೆಗಳ ಆಧಾರವಾಗಿ ಇವುಗಳನ್ನು ಸಂಸ್ಥೆಗಳು ಅಳವಡಿಸುತ್ತಾರೆ. ಒಂದು ಭಾಗದಲ್ಲಿ ಆ‍್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್, ಮತ್ತೊಂದು ಕಡೆ ಬ್ರೇಕ್ ಸಿಸ್ಟಮ್ ಲೈಟ್‍‍ಗಳು ಇರುತ್ತವೆ.

ಬ್ರೇಕ್ ಫೇಲ್ ಆದಾದ ಜೀವ ಉಳಿಸಿಕೊಳ್ಳಲು ಈ ಟಿಪ್ಸ್ ಖಂಡಿತ ನಿಮ್ಮ ಸಹಾಯಕ್ಕೆ ಬರುತ್ತೆ..!

ವೆಹಿಕಲ್ ಮೂವಿಂಗ್‍‍ನಲ್ಲಿರುವಾಗ ಬ್ರೇಕ್ ಅಪ್ಲೈ ಮಾಡದ್ರೆ ಎಬಿಎಸ್ ಬ್ರೇಕಿಂಗ್ ಸಿಸ್ಟಮ್ ಆಕ್ಟಿವೇಟ್ ಆಗಿದ್ದಾಗ ಎಬಿಎಸ್ ಲೈಟ್ ಆನ್ ಆಗುತ್ತದೆ. ಬ್ರೇಕಿಂಗ್ ಮತ್ತು ಎಬಿಎಸ್ ವ್ಯವಸ್ಥೆಯಲ್ಲಿ ಲೋಪದೋಶವಿದ್ದರೇ ಬ್ರೇಕ್ ವಾರ್ನಿಂಗ್ ಲೈಟ್‍‍ಗಳು ಮಿನುಗುತ್ತವೆ.

ಬ್ರೇಕ್ ಫೇಲ್ ಆದಾದ ಜೀವ ಉಳಿಸಿಕೊಳ್ಳಲು ಈ ಟಿಪ್ಸ್ ಖಂಡಿತ ನಿಮ್ಮ ಸಹಾಯಕ್ಕೆ ಬರುತ್ತೆ..!

ಹೀಗಾಗಿ ವಾಹನಗಳ ಚಾಲನೆ ವೇಳೆ ತೊಂದರೆ ಇದೆ ಅಂತಾ ಗೊತ್ತಾದ ಮೇಲೂ ಹುಚ್ಚುಸಾಹಸ ಮಾಡಿ ವಾಹನ ಚಾಲನೆಗೆ ಮುಂದಾಗಬೇಡಿ. ಯಾಕೆಂದ್ರೆ ವೇಗಕ್ಕಿಂತ ಪ್ರಾಣ ದೊಡ್ಡದು ಎನ್ನುವುದು ಅರಿತು ಚಾಲನೆ ಮಾಡಿದ್ದಲ್ಲಿ ಎಂತದ್ದೆ ಸಮಸ್ಯೆ ಇದ್ದರೂ ಪರಿಹರಿಸಬಹುದು.

ಹ್ಯಾಪಿ & ಸೇಫ್ ಜರ್ನಿ..

Most Read Articles

Kannada
English summary
How to stop a car Brake failure in just 8 seconds?: Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X