ಬಿಎಸ್-6 ಜಾರಿಗೆ ದಿನಗಣನೆ- ಮಾರುತಿ ಸುಜುಕಿ ಎರ್ಟಿಗಾ ಮತ್ತು ಎಸ್ ಕ್ರಾಸ್ ಕಾರುಗಳಿಗೆ ಹೊಸ ಎಂಜಿನ್..!

ಮುಂಬರುವ 2020 ಏಪ್ರಿಲ್ 1ರಿಂದ ದೇಶಾದ್ಯಂತ ಬಿಎಸ್-6 ಪ್ರೇರಣೆಯ ಹೊಸ ವಾಹನಗಳು ರಸ್ತೆಗಿಳಿಯಲು ಸಜ್ಜಾಗುತ್ತಿದ್ದು, ಮಾರುತಿ ಸುಜುಕಿ ಸಂಸ್ಥೆಯು ಸಹ ತನ್ನ ಜನಪ್ರಿಯ ಕಾರುಗಳ ಎಂಜಿನ್ ತಂತ್ರಜ್ಞಾನದಲ್ಲಿ ಮಹತ್ವದ ಬದಲಾವಣೆಗಳನ್ನು ತರಲು ಬೃಹತ್ ಯೋಜನೆ ರೂಪಿಸಿದೆ.

ಬಿಎಸ್-6 ಜಾರಿಗೆ ದಿನಗಣನೆ- ಮಾರುತಿ ಸುಜುಕಿ ಎರ್ಟಿಗಾ ಮತ್ತು ಎಸ್ ಕ್ರಾಸ್ ಕಾರುಗಳಿಗೆ ಹೊಸ ಎಂಜಿನ್..!

ಈ ಹಿಂದೆ 2017ರ ಏಪ್ರಿಲ್ 1ರಂದು ಭಾರತದಲ್ಲಿ ಪರಿಚಯಿಸಲಾಗಿದ್ದ ಬಿಎಸ್ 4(ಭಾರತ್ ಸ್ಟೇಜ್) ನಿಯಮವು ಮುಂದಿನ 2020ರ ಮಾರ್ಚ್ 31ಕ್ಕೆ ಕೊನೆಗೊಳ್ಳಲಿದ್ದು, ಏಪ್ರಿಲ್ 1ರಿಂದಲೇ ಬಿಎಸ್ 6 ನಿಯಮದಂತೆ ಹೊಸ ವಾಹನಗಳ ಮಾರಾಟ ಪ್ರಕ್ರಿಯೆ ಆರಂಭವಾಗಲಿದೆ. ಹೀಗಾಗಿ ಆಟೋ ಉತ್ಪಾದನಾ ಸಂಸ್ಥೆಗಳು ಹೊಸ ನಿಯಮ ಅನ್ವಯ ಹೊಸ ವಾಹನಗಳನ್ನು ಮಾರಾಟ ಮಾಡಬೇಕಿದ್ದು, ನಿಯಮ ಪಾಲಿಸಲು ಸಾಧ್ಯವಾಗದ ವಾಹನಗಳು ಮಾರುಕಟ್ಟೆಯಿಂದ ನಿಷೇಧಗೊಳ್ಳಲಿವೆ.

ಬಿಎಸ್-6 ಜಾರಿಗೆ ದಿನಗಣನೆ- ಮಾರುತಿ ಸುಜುಕಿ ಎರ್ಟಿಗಾ ಮತ್ತು ಎಸ್ ಕ್ರಾಸ್ ಕಾರುಗಳಿಗೆ ಹೊಸ ಎಂಜಿನ್..!

ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್ ಸೂಚನೆಯೆಂತೆ 2020ರ ಏಪ್ರಿಲ್ 1ರಿಂದ ಬಿಎಸ್-4 ವಾಹನಗಳ ಉತ್ಪಾದನೆ ಮತ್ತು ಮಾರಾಟ ಮೇಲೆ ನಿಷೇಧ ಹೇರುವುದು ಖಚಿತವಾಗಿದ್ದು, ಬಿಎಸ್-6 ವಾಹನಗಳು ಮತ್ತು ಅದಕ್ಕೂ ಹೆಚ್ಚಿನ ಮಟ್ಟದ ವಾಹನ ಮಾದರಿಗಳಿಗೆ ಮಾತ್ರವೇ ಅವಕಾಶ ನೀಡಲಿದೆ.

ಬಿಎಸ್-6 ಜಾರಿಗೆ ದಿನಗಣನೆ- ಮಾರುತಿ ಸುಜುಕಿ ಎರ್ಟಿಗಾ ಮತ್ತು ಎಸ್ ಕ್ರಾಸ್ ಕಾರುಗಳಿಗೆ ಹೊಸ ಎಂಜಿನ್..!

ಹೀಗಾಗಿ ಕೇಂದ್ರ ಸರ್ಕಾರದ ಡೆಡ್‌ಲೈನ್‌ಗೂ ಮುನ್ನವೇ ಬಿಎಸ್ 6 ವೈಶಿಷ್ಟ್ಯತೆಯುಳ್ಳ ಎಂಜಿನ್ ಪ್ರೇರಿತ ಕಾರು ಮಾದರಿಗಳನ್ನು ಬಿಡುಗಡೆಗೊಳಿಸಲು ನಿರ್ಧರಿಸಿರುವ ಮಾರುತಿ ಸುಜುಕಿ ಸಂಸ್ಥೆಯು, ಈ ಮೂಲಕ ಮಾಲಿನ್ಯ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ಬಹುದೊಡ್ಡ ಬದಲಾವಣೆ ಮಾಡುತ್ತಿದೆ.

ಬಿಎಸ್-6 ಜಾರಿಗೆ ದಿನಗಣನೆ- ಮಾರುತಿ ಸುಜುಕಿ ಎರ್ಟಿಗಾ ಮತ್ತು ಎಸ್ ಕ್ರಾಸ್ ಕಾರುಗಳಿಗೆ ಹೊಸ ಎಂಜಿನ್..!

ಕೆಲವು ಮೂಲಗಳ ಪ್ರಕಾರ, ಮಾರುತಿ ಸುಜುಕಿ ಸಂಸ್ಥೆಯು ಸದ್ಯ ಎರ್ಟಿಗಾ ಮತ್ತು ಎಸ್-ಕ್ರಾಸ್ ಕಾರುಗಳಲ್ಲಿ ಜೋಡಣೆ ಮಾಡಲಾಗುತ್ತಿರುವ 1.3-ಲೀಟರ್ ಡೀಸೆಲ್ ಎಂಜಿನ್ ಅನ್ನು ಸ್ಥಗಿತಗೊಳಿಸಿ 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ಪರಿಚಯಿಸುತ್ತಿದ್ದು, ಸಿಯಾಜ್ 2019ರ ಮಾದರಿಯಲ್ಲಿ ಈಗಾಗಲೇ 1.5-ಲೀಟರ್ ಎಂಜಿನ್ ಅನ್ನು ಜೋಡಣೆ ಮಾಡಿ ನಿನ್ನೆಯಷ್ಟೇ ಬಿಡುಗಡೆ ಮಾಡಲಾಗಿದೆ.

ಬಿಎಸ್-6 ಜಾರಿಗೆ ದಿನಗಣನೆ- ಮಾರುತಿ ಸುಜುಕಿ ಎರ್ಟಿಗಾ ಮತ್ತು ಎಸ್ ಕ್ರಾಸ್ ಕಾರುಗಳಿಗೆ ಹೊಸ ಎಂಜಿನ್..!

ಫಿಯೆಟ್‌ ಸಂಸ್ಥೆಯಿಂದ ಎರವಲು ಪಡೆಯಲಾಗಿರುವ 1.5-ಲೀಟರ್ ಡಿಡಿಐಎಸ್225 ಫೋರ್ ಸಿಲಿಂಡರ್ ಎಂಜಿನ್ ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ 1.3-ಲೀಟರ್ ಡೀಸೆಲ್ ಎಂಜಿನ್‌ಗಿಂತಲೂ ಹೆಚ್ಚು ಪರ್ಫಾಮೆನ್ಸ್ ಮತ್ತು ಇಂಧನ ದಕ್ಷತೆಯನ್ನು ಪಡೆದುಕೊಂಡಿದ್ದು, ಇಂಗಾಲ ಹೊರಸೂಸುವಿಕೆ ಪ್ರಮಾಣವು ಸಹ ಪರಿಣಾಮಕಾರಿಯಾಗಿ ತಗ್ಗಿರುವುದನ್ನ ನಾವಿಲ್ಲಿ ಗಮನಿಸಬಹುದು.

MOST READ: ಅಪಘಾತದಲ್ಲಿ ಹ್ಯಾರಿಯರ್ ಕಾರು ಪುಡಿಪುಡಿಯಾದ್ರು ಪ್ರಯಾಣಿಕರಿಗೆ ಏನೂ ಆಗಲಿಲ್ಲ..!

ಬಿಎಸ್-6 ಜಾರಿಗೆ ದಿನಗಣನೆ- ಮಾರುತಿ ಸುಜುಕಿ ಎರ್ಟಿಗಾ ಮತ್ತು ಎಸ್ ಕ್ರಾಸ್ ಕಾರುಗಳಿಗೆ ಹೊಸ ಎಂಜಿನ್..!

ಜೊತೆಗೆ ಬಿಎಸ್-6 ನಿಯಮ ಅನುಸಾರವೇ ಸಿದ್ದಗೊಂಡಿರುವ ಹೊಸ ಎಂಜಿನ್ ಮಾದರಿಯು ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಪಡೆದುಕೊಂಡಿದ್ದು, 95-ಬಿಎಚ್‌ಪಿ ಮತ್ತು 225-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಪ್ರತಿ ಲೀಟರ್ ಡೀಸೆಲ್‌ಗೆ ಇದು 26.82 ಕಿ.ಮಿ ಮೈಲೇಜ್ ಹಿಂದಿರುಗಿಸಬಲ್ಲದು.

ಬಿಎಸ್-6 ಜಾರಿಗೆ ದಿನಗಣನೆ- ಮಾರುತಿ ಸುಜುಕಿ ಎರ್ಟಿಗಾ ಮತ್ತು ಎಸ್ ಕ್ರಾಸ್ ಕಾರುಗಳಿಗೆ ಹೊಸ ಎಂಜಿನ್..!

ಇದರಿಂದ ಮಾರುತಿ ಸುಜುಕಿ ಕಾರುಗಳು ಮುಂಬರುವ ದಿನಗಳಲ್ಲಿ ಬಲಿಷ್ಠ ಎಂಜಿನ್ ಜೊತೆಗೆ ಅತ್ಯುತ್ತಮ ಇಂಧನ ದಕ್ಷತೆಯೊಂದಿಗೆ ಮತ್ತಷ್ಟು ಗ್ರಾಹಕರನ್ನು ಸೆಳೆಯುವ ನೀರಿಕ್ಷೆಯಲ್ಲಿದ್ದು, ಹೊಗೆಯ ಪ್ರಮಾಣವನ್ನು ತಗ್ಗಿಸುವಲ್ಲಿ ನೆರವಾಗಲಿರುವ ಹೊಸ ಎಂಜಿನ್‌ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿರುವ ಬೆಲೆಗಿಂತ ತುಸು ದುಬಾರಿಯಾಗಿರಲಿದೆ.

MOST READ: ರಾಂಗ್ ಸೈಡ್‌ನಲ್ಲಿ ಬಂದ ಕಾರು ಚಾಲಕನಿಗೆ ಬೆವರಿಳಿಸಿದ ಬೈಕ್ ರೈಡರ್..!

ಬಿಎಸ್-6 ಜಾರಿಗೆ ದಿನಗಣನೆ- ಮಾರುತಿ ಸುಜುಕಿ ಎರ್ಟಿಗಾ ಮತ್ತು ಎಸ್ ಕ್ರಾಸ್ ಕಾರುಗಳಿಗೆ ಹೊಸ ಎಂಜಿನ್..!

ನಿನ್ನೆಯಷ್ಟೇ ಬಿಡುಗಡೆಯಾಗಿರುವ ಸಿಯಾಜ್ ಕಾರಿನ ಬೆಲೆ ಕೂಡಾ ಈ ಹಿಂದೆ ಇದ್ದ ಆರಂಭಿಕ ಬೆಲೆ ರೂ. 8.19 ಲಕ್ಷ ಬೆಲೆಯು ಇದೀಗ ರೂ. 9.97 ಲಕ್ಷಕ್ಕೆ ಏರಿಕೆಯಾಗಿದ್ದು, ಹೊಸ ನಿಯಮ ಪಾಲನೆ ಮಾಡುತ್ತಿರುವ ಬಹುತೇಕ ಕಾರುಗಳ ಬೆಲೆಯು ಸದ್ಯದಲ್ಲೇ ರೂ.1.50 ಲಕ್ಷದಿಂದ ರೂ.3 ಲಕ್ಷಕ್ಕೆ ಏರಿಕೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

Article Published On: Friday, March 29, 2019, 13:25 [IST]
English summary
Maruti Ertiga And S-Cross To Receive New 1.5-Litre Diesel Engine Soon. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+