ಬಿಡುಗಡೆಗೊಂಡ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಟೀಸರ್
ಮಾರುತಿ ಸುಜುಕಿ ಕಂಪನಿಯು ಬಹುನಿರೀಕ್ಷಿತ ಎಸ್-ಪ್ರೆಸ್ಸೊ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಇದೇ ತಿಂಗಳು 30ಕ್ಕೆ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಇದೀಗ ಮಾರುತಿ ಸುಜುಕಿ ಕಂಪನಿಯು ಎಸ್-ಪ್ರೆಸ್ಸೊ ಕಾರಿನ ಮೊದಲ ಟೀಸರನ್ನು ಅಧಿಕೃತವಾಗಿ ಬಿಡುಗಡೆಗೊಳಿಸಲಾಗಿದೆ.

ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಕಾರನ್ನು ಭಾರತದಲ್ಲಿ ಹಲವು ಬಾರಿ ಸ್ಪಾಟ್ ಟೆಸ್ಟ್ ಮಾಡಲಾಗಿತ್ತು. ಮಾರುತಿ ಸುಜುಕಿಯು ಭಾರತದಲ್ಲಿ ಅತೀ ಹೆಚ್ಚು ಕಾರು ಮಾರಾಟವಾಗುವ ಕಂಪನಿಯಾಗಿದೆ. ಇದರಿಂದ ಮಾರುತಿ ಸುಜುಕಿ ಕಂಪನಿಯು ಬಿಡುಗಡೆ ಮಾಡಲಿರುವ ಎಕ್ಸ್-ಪ್ರೆಸ್ಸೊ ಕಾರಿನ ಮೇಲೆ ಹೆಚ್ಚಿನ ನಿರೀಕ್ಷೆಗಳಿವೆ. ಕಂಪನಿಯು ಅಧಿಕೃತವಾಗಿ ಬಿಡುಗಡೆಗೊಳಿಸಿರುವ ಟೀಸರ್‍ನಲ್ಲಿ ಕೆಲವೊಂದು ವಿಷಯಗಳು ಬಹಿರಂಗವಾಗಿದೆ. ಟೀಸರ್‍ನಲ್ಲಿ ಬಹಿರಂಗಗೊಂಡ ಪ್ರಮುಖ ಅಂಶಗಳೆಂದರೆ ಮುಂಭಾಗದ ಸ್ಲೀಕ್ ಗ್ರೀಲ್ ಇದರ ಜೊತೆಗೆ ಸುಜುಕಿ ಕಂಪನಿಯ ಲೋಗೋ ವನ್ನು ಅಳವಡಿಸಲಾಗಿದೆ. ಮುಂಭಾಗದಲ್ಲಿ ದೊಡ್ಡ ಗಾತ್ರದ ಬಂಪರ್ ಮತ್ತು ಎಂಟಿಗ್ರೇಟೆಡ್ ಫಾಗ್‍ಲ್ಯಾಂಪ್ ಮತ್ತು ಕೆಳಭಾಗದಲ್ಲಿ ಫಾಕ್ಸ್ ಸಕ್ಫ್ ಪ್ಲೇಟ್‍ಗಳನ್ನು ಅಳವಡಿಸಲಾಗಿದೆ.
ಮಾರುತಿ ಸುಜುಕಿ ಹೊಸ ವಿನ್ಯಾಸ ಶೈಲಿಯನ್ನು ಹೊಂದಲಿದ್ದು, 2018ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಗಿದ್ದ ಮೈಕ್ರೊ ಎಸ್‌ಯುವಿ ಫ್ಯೂಚರ್ ಎಸ್ ಕಾನ್ಸೆಪ್ಟ್ ಮಾದರಿಯು, ಬಿಡುಗಡೆಯಾಗಲಿರುವ ಎಸ್-ಪ್ರೆಸ್ಸೊ ಕಾರಿನ ಉತ್ಪಾದನೆಗೆ ಪ್ರೇರಣೆಯಾಗಿದೆ. ಹೊಸ ಎಸ್-ಪ್ರೆಸ್ಸೊ ಹ್ಯಾಚ್‍ಬ್ಯಾಕ್ ಒಂದು ರೀತಿಯಲ್ಲಿ ರೆನಾಲ್ಟ್ ಕ್ವಿಡ್ ಕಾರಿನ ಶೈಲಿಯಲ್ಲಿದೆ.

ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಕಾರು, ತನ್ನದೆ ಶ್ರೇಣಿಯ ಅಲ್ಟೋ ಕೆ10 ಕಾರಿನ ಮೇಲಿನ ಸ್ಥಾನದಲ್ಲಿರಲಿದೆ. ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಎಸ್-ಪ್ರೆಸ್ಸೊ ಕಾರಿನ ಹಲವು ಮಾಹಿತಿಗಳು ಸೋರಿಕೆಯಾಗಿವೆ.

ಈ ಮಾಹಿತಿಯ ಪ್ರಕಾರ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಮಾದರಿಯು ಮೈಕ್ರೋ ಎಸ್‍ಯುವಿ ವೈಶಿಷ್ಟ್ಯತೆಗಳನ್ನು ಹೊಂದಿದ್ದು, ಕೇಂದ್ರ ಸರ್ಕಾರವು 2020ರ ಎಪ್ರಿಲ್ 1ರಿಂದ ಜಾರಿಗೆ ತರುತ್ತಿರುವ ಬಿಎಸ್-6 ಹೊಸ ನಿಯಮಗಳಿಗೆ ಹೊಂದುವಂತಹ ಬಿಎಸ್6 ಹೊಂದಿರಲಿದೆ. 1.0 ಲೀಟರಿನ ಈ ಎಂಜಿನ್ 68 ಬಿಎಚ್‍ಪಿ ಪವರ್ ಮತ್ತು 90 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍ನಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ 5- ಸ್ಪೀಡ್ ಆಟೋಮ್ಯಾಟಿಕ್ ಎಎಂಟಿ ಗೇರ್‍ಬಾಕ್ಸ್ ಅಳವಡಿಸಲಾಗುವುದು.

ರೆನಾಲ್ಟ್ ಕ್ವಿಡ್ ಮಾದರಿಯಲ್ಲೇ ಉದ್ದಳತೆಯನ್ನು ಹೊಂದಿದೆ. ಹೊಸ ಕಾರು 3,565-ಎಂಎಂ ಉದ್ದ, 1,520-ಎಂಎಂ ಅಗಲ, 1,564-ಎಂಎಂ ಎತ್ತರ, 2,380-ಎಂಎಂ ಮತ್ತು 165/70 ಆರ್14 ಇಂಚಿನ ಟಯರ್‍ಗಳನ್ನು ಹೊಂದಿರಲಿದೆ.

ಎಸ್-ಪ್ರೆಸ್ಸೊ ವಿನ್ಯಾಸವು ಆಕರ್ಷಕವಾಗಿದ್ದು, ಈ ವಿನ್ಯಾಸವನ್ನು ಫ್ಯೂಚರ್ ಎಸ್ ಕಾನ್ಸೆಪ್ಟ್ ಕಾರಿನಿಂದ ಪಡೆಯಲಾಗಿದೆ. ಎಸ್-ಪ್ರೆಸ್ಸೊ ಕಾರಿನಲ್ಲಿ ಪ್ರೊಜೆಕ್ಟರ್ ಎಲ್‍ಇಡಿ, ಎಲ್‍ಇಡಿ ಡಿಆರ್‍ಎಲ್, ಎಲ್‍ಇಡಿ ಟೈಲ್‍ಲೈಟ್ ಗಳಂತಹ ಫೀಚರ್‍ಗಳಿವೆ. ಈ ಫೀಚರ್‍ಗಳು ಕಾರಿಗೆ ಪ್ರೀಮಿಯಂ ಲುಕ್ ಅನ್ನು ನೀಡುತ್ತವೆ.
MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಇಂಟಿರಿಯರ್ ನಲ್ಲಿ ಹಲವಾರು ವೈಶಿಷ್ಟ್ಯಗಳಿದ್ದು, ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಕೀಲೆಸ್ ಎಂಟ್ರಿ, ಫುಶ್ ಬಟನ್ ಸ್ಟಾರ್ಟ್/ಸ್ಟಾಪ್, ಅಗಲವಾದ ಇನ್ಫೋಟೇನ್‍ಮೆಂಟ್ ಡಿಸ್‍ಪ್ಲೆಗಳಿವೆ. ಮಾರುತಿ ಸುಜುಕಿಯ ಹೊಸ ಸ್ಮಾರ್ಟ್ ಪ್ಲೇ ಸ್ಟುಡಿಯೊ ಸಿಸ್ಟಂ ಜೊತೆ ಹಲವರು ಸುರಕ್ಷತಾ ಉಪಕರಣಗಳನ್ನು ಹೊಂದಿದೆ.
MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಮಾರುತಿ ಸುಜುಕಿಯ ಎಸ್-ಪ್ರೆಸ್ಸೊ ಕಾರಿನ ಬುಕ್ಕಿಂಗ್‍ಗಳನ್ನು ಈ ತಿಂಗಳ 25ರಿಂದ ಆರಂಭಿಸಲಾಗುವುದು. ಮಾರುತಿ ಸುಜುಕಿ ಇದೇ ತಿಂಗಳು 30ಕ್ಕೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಬಿಡುಗಡೆಯಾದ ನಂತರ ಹೊಸ ಎಸ್-ಪ್ರೆಸ್ಸೊ ಕಾರು ರೆನಾಲ್ಟ್ ಕ್ವಿಡ್ ಮತ್ತು ಡಸ್ಟನ್ ರೆಡಿ-ಗೋ ಕಾರುಗಳಿಗೆ ಪೈಪೋಟಿ ನೀಡಲಿದೆ. ಈ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ. 3 ಲಕ್ಷದಿಂದ 3.5 ಲಕ್ಷಗಳಿರಬಹುದೆಂದು ನಿರೀಕ್ಷಿಸುತ್ತೇವೆ.


Click it and Unblock the Notifications