ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಬಿಡುಗಡೆಯ ದಿನಾಂಕ ಬಹಿರಂಗ
ಮಾರುತಿ ಸುಜುಕಿ ಸಂಸ್ಥೆಯ ಬಹುನೀರಿಕ್ಷಿತ ಎಸ್-ಪ್ರೆಸ್ಸೊ ಕಾರು ಸೆಪ್ಟೆಂಬರ್ 30ಕ್ಕೆ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದ್ದು, ಎಂಟ್ರಿ ಲೆವೆಲ್ ಕಾರುಗಳಲ್ಲಿ ಎಸ್-ಪ್ರೆಸ್ಸೊ ಹೊಸ ಸಂಚಲನ ಮೂಡಿಸುವ ತವಕದಲ್ಲಿದೆ.

ಇತ್ತೀಚೆಗೆ ಬಿಡುಗಡೆಯಾಗಿರುವ ಕೆಲವು ಹೊಸ ಕಾರು ಮಾದರಿಗಳು ಮಾರುತಿ ಸುಜುಕಿ ಸಂಸ್ಥೆಗೆ ತೀವ್ರ ಪೈಪೋಟಿ ನೀಡುತ್ತಿದ್ದು, ಪ್ರತಿಸ್ಪರ್ಧಿಗಳಿಗೆ ಟಕ್ಕರ್ ನೀಡಲು ಎಸ್-ಪ್ರೆಸ್ಸೊ ಎನ್ನುವ ಸಣ್ಣ ಕಾರು ಮಾದರಿಯನ್ನು ಬಿಡುಗಡೆ ಮಾಡುತ್ತಿದೆ. ಮೈಕ್ರೊ ಎಸ್‌ಯುವಿ ವೈಶಿಷ್ಟ್ಯತೆ ಹೊಂದಿರುವ ಎಸ್-ಪ್ರೆಸ್ಸೊ ಕಾರು ವ್ಯಯಕ್ತಿಕ ಕಾರು ಬಳಕೆದಾರರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, ಬಿಡುಗಡೆಗಾಗಿ ಅಂತಿಮ ಹಂತದ ರೋಡ್ ಟೆಸ್ಟ್ ನಡೆಸುತ್ತಿದೆ.

ಅಗ್ಗದ ಬೆಲೆಯ ಪ್ಯಾಸೆಂಜರ್ ಕಾರುಗಳಿಂದಲೇ ಭಾರೀ ಜನಪ್ರಿಯತೆಯನ್ನು ಗಳಿಸಿರುವ ಮಾರುತಿ ಸುಜುಕಿಯು ಪ್ರಸ್ತಕ ವರ್ಷದಲ್ಲಿ ಕೆಲವು ಹೊಸ ನಮೂನೆಯ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, 2018ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳಿಸಲಾಗಿದ್ದ ಮೈಕ್ರೊ ಎಸ್‌ಯುವಿ ಫ್ಯೂಚರ್ ಎಸ್ ಕಾನ್ಸೆಪ್ಟ್ ಮಾದರಿಯನ್ನೇ ಇದೀಗ ಎಸ್-ಪ್ರೆಸ್ಸೊ ಹೆಸರಿನೊಂದಿಗೆ ಬಿಡುಗಡೆ ಮಾಡುತ್ತಿದೆ.

ಎಸ್-ಪ್ರೆಸ್ಸೊ ಕಾರುನ್ನು ಈಗಾಗಲೇ ಹಲವು ಸುತ್ತಿನ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿದ್ದು, ಮಹೀಂದ್ರಾ ಕೆಯುವಿ100 ನೆಕ್ಸ್ ಮತ್ತು ರೆನಾಲ್ಟ್ ಹೊಸದಾಗಿ ಬಿಡುಗಡೆ ಮಾಡುತ್ತಿರುವ ಕ್ವಿಡ್ ಫೇಸ್‌ಲಿಫ್ಟ್ ಕಾರುಗಳಿಗೆ ಪೈಪೋಟಿಯಾಗಿ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ರಸ್ತೆಗಿಳಿಯಲಿದೆ.

ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಮಾದರಿಯು ಮೈಕ್ರೋ ಎಸ್‍ಯುವಿ ವೈಶಿಷ್ಟ್ಯತೆಗಳೊಂದಿಗೆ ಕೇಂದ್ರ ಸರ್ಕಾರವು 2020ರ ಎಪ್ರಿಲ್ 1ರಿಂದ ಜಾರಿಗೆ ತರುತ್ತಿರುವ ಬಿಎಸ್-6 ಹೊಸ ನಿಯಮಾವಳಿ ಪ್ರಕಾರ ಹೊಸ ಎಂಜಿನ್ ಅನ್ನು ಹೊತ್ತು ಬರಲಿದೆ. 1.2-ಲೀಟರ್(1,200 ಸಿಸಿ) ಪೆಟ್ರೋಲ್ ಎಂಜಿನ್ ಅನ್ನು ಪಡೆದುಕೊಳ್ಳಲಿದ್ದು, ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ 5- ಸ್ಪೀಡ್ ಆಟೋಮ್ಯಾಟಿಕ್ ಎಎಂಟಿ ಗೇರ್‍ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿರಲಿದೆ.

ಮಾರುತಿ ಸುಜುಕಿಯ ಜನಪ್ರಿಯ ಕಾರು ಬ್ರೆಝಾಗಿಂತ ಕೆಳಹಂತದ ಕಾರು ಆವೃತ್ತಿಯಾಗಿ ಮಾರಾಟವಾಗಲಿದ್ದು, ಹಲವು ಪ್ರೀಮಿಯಂ ಸೌಲಭ್ಯಗಳೊಂದಿಗೆ ಹ್ಯುಂಡೈ ವೆನ್ಯೂ ಕಾರಿಗೂ ಇದು ಪೈಪೋಟಿ ನೀಡುವ ವಿಶ್ವಾಸದಲ್ಲಿದೆ.

ಮಧ್ಯಮ ವರ್ಗದ ಗ್ರಾಹಕರನ್ನು ಗುರಿಯಾಗಿಸಿ ಕೈಗೆಟುಕುವ ಬೆಲೆಯ ಕಾರು ಮಾದರಿಗಳನ್ನು ಪರಿಚಯಿಸುವುದರಲ್ಲಿ ಜನಪ್ರಿಯವಾಗಿರುವ ಮಾರುತಿ ಸುಜುಕಿ ಸಂಸ್ಥೆಯು ದೇಶದಲ್ಲಿ ಮಾರಾಟವಾಗುತ್ತಿರುವ ಟಾಪ್ 10 ಕಾರುಗಳ ಪಟ್ಟಿಯಲ್ಲಿ ಮೊದಲ ಆರು ಸ್ಥಾನಗಳನ್ನು ತನ್ನದಾಗಿಸಿಕೊಂಡಿದ್ದು, ಇದೀಗ ಬಿಡುಗಡೆಯಾಗುತ್ತಿರುವ ಮತ್ತೊಂದು ಗೇಮ್‌ಚೆಂಜರ್ ಕಾರು ಎಸ್-ಪ್ರೆಸ್ಸೊ ಮಾದರಿಯು ಮತ್ತಷ್ಟು ಸದ್ದು ಮಾಡಲಿದೆ.
MOST READ: ಮಕಾಡೆ ಮಲಗಿರುವ ಆಟೋ ಉದ್ಯಮಕ್ಕೆ ಮತ್ತೆ ಚುರುಕು ನೀಡಿದ ಕೇಂದ್ರ ಸರ್ಕಾರ..!

ಇನ್ನು ಎಸ್-ಪ್ರೆಸ್ಸೊ ಕಾರಿನ ವಿನ್ಯಾಸಗಳನ್ನು ಗಮನಿಸಿದ್ದಲ್ಲಿ ಹ್ಯಾಚ್‌ಬ್ಯಾಕ್ ಕಾರುಗಳಿಂತಲೂ ವಿಭಿನ್ನ ಎನ್ನಿಸಲಿದ್ದು, ಮೈಕ್ರೊ ಎಸ್‌ಯುವಿ ಕಾರಿನ ಗುಣಲಕ್ಷಣಗಳಾದ 4 ಮೀಟರ್‌ಗಿಂತಲೂ ಕಡಿಮೆ ಉದ್ದಳತೆ ಹೊಂದಿರಲಿದೆ. ಎ-ಪಿಲ್ಲರ್ ವಿಭಾಗದಲ್ಲಿನ ಹೊಸ ವಿನ್ಯಾಸದೊಂದಿಗೆ ಚಾಲಕನಿಗೆ ಅನುಕೂಲಕರ ಚಾಲನಾ ಸೌಲಭ್ಯಗಳನ್ನು ಒದಗಿಸಲಿದ್ದು, ಹಿಂಬದಿಯ ಸವಾರರಿಗೂ ಅನುಕೂಲಕರ ಆಸನ ವ್ಯವಸ್ಥೆ ಹೊಂದಿದೆ.
MOST READ: ನಮ್ಮ ಬೆಂಗಳೂರಿನಲ್ಲಿ ಭರ್ಜರಿಯಾಗಿ ಬಿಡುಗಡೆಗೊಂಡ ಕಿಯಾ ಸೆಲ್ಟೊಸ್

ಹೀಗಾಗಿ ವಿಟಾರಾ ಬ್ರೆಝಾ ಕಾರುಗಳಂತೆ ವಿಶೇಷ ಸೌಲಭ್ಯ ಹೊಂದಲಿರುವ ಎಸ್-ಪ್ರೆಸ್ಸೊ ಎಸ್‌ಯುವಿ ಕಾರುಗಳು ಗಾತ್ರದಲ್ಲಿ ಚಿಕ್ಕದಾದರೂ ಅತ್ಯುತ್ತಮ ಸೌಲಭ್ಯಗಳೊಂದಿಗೆ ಅಭಿವೃದ್ಧಿ ಹೊಂದಿರಲಿದ್ದು, ನಗರ ಪ್ರದೇಶಗಳಲ್ಲಿ ವ್ಯಯಕ್ತಿಕ ಕಾರು ಬಳಕೆಗಾಗಿ ಇದು ಅತಿಹೆಚ್ಚು ಬೇಡಿಕೆ ಸೃಷ್ಠಿಸುವ ನೀರಿಕ್ಷೆಯಿದೆ.
MOST READ: ಆಕರ್ಷಕ ಬೆಲೆಗಳಲ್ಲಿ ಮಾರುತಿ ಸುಜುಕಿ 6 ಸೀಟರ್ ಎಕ್ಸ್ಎಲ್6 ಬಿಡುಗಡೆ

ಈ ಮೂಲಕ ನಗರ ಪ್ರದೇಶಗಳಲ್ಲಿನ ಟ್ರಾಫಿಕ್ ದಟ್ಟಣೆಯಲ್ಲೂ ಸಲೀಸಾಗಿ ಸಾಗಬಲ್ಲ ಗುಣಹೊಂದಿರುವ ಎಸ್-ಪ್ರೆಸ್ಸೊ ಎಸ್‌ಯುವಿ ಮಾದರಿಯು ಸ್ಪೋರ್ಟಿ ಕಾರು ಪ್ರಿಯರನ್ನು ಸೆಳೆಯಬಹುದಾದ ಅಲಾಯ್ ಚಕ್ರಗಳು, ಹೈ ಮೌಟೆಂಡ್ ಲೈಟ್ಸ್ ಒದಗಿಸಿರುವುದು ಕಾರಿನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.

ಎಸ್-ಪ್ರೆಸ್ಸೊ ಕಾರಿನ ಬೆಲೆಗಳು(ಅಂದಾಜು)
ಸಣ್ಣ ಗಾತ್ರದ ಕಾರುಗಳಲ್ಲೇ ವಿಭಿನ್ನ ಎನ್ನಿಸಲಿರುವ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಮೈಕ್ರೊ ಎಸ್‌ಯುವಿ ಕಾರುಗಳು ದೇಶದಲ್ಲಿ ಹೊಸ ಸಂಚಲನ ಸೃಷ್ಠಿಸುವ ತವಕದಲ್ಲಿದ್ದು, ಹೊಸ ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರಂ ಪ್ರಕಾರ ಆರಂಭಿಕವಾಗಿ ರೂ. 4.50 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 5.50 ಲಕ್ಷಕ್ಕೆ ಖರೀದಿಗೆ ಲಭ್ಯವಾಗಬಹುದು ಎನ್ನಲಾಗಿದೆ.
Source:autocarindia


Click it and Unblock the Notifications