ಸ್ಮಾರ್ಟ್ ಹೈಬ್ರಿಡ್‌ ತಂತ್ರಜ್ಞಾನದೊಂದಿಗೆ ಬಿಎಸ್-6 ಮಾರುತಿ ಬಲೆನೊ ಬಿಡುಗಡೆ

ಭಾರತದಲ್ಲಿ ಹೊಸ ವಾಹನ ಉತ್ಪಾದನಾ ನೀತಿಯಲ್ಲಿ ಬಹುದೊಡ್ಡ ಬದಲಾವಣೆ ತರಲಾಗುತ್ತಿದ್ದು, ಹೆಚ್ಚುತ್ತಿರುವ ಮಾಲಿನ್ಯ ತಡೆಯುವ ಉದ್ದೇಶದಿಂದ ಮುಂದಿನ ಕೆಲವೇ ದಿನಗಳಲ್ಲಿ ಬಿಎಸ್-6 (ಭಾರತ್ ಸ್ಟೇಜ್) ನಿಯಮವನ್ನು ಜಾರಿಗೆ ತರಲಾಗುತ್ತಿದೆ. ಈ ಹಿನ್ನೆಲೆ ಹೊಸ ವಾಹನ ಉತ್ಪಾದನಾ ನೀತಿ ಜಾರಿಯಾಗುವುದಕ್ಕೂ ಮುನ್ನವೇ ಮಾರುತಿ ಸುಜುಕಿ ತನ್ನ ಜನಪ್ರಿಯ ಬಲೆನೊ ಆವೃತ್ತಿಯನ್ನು ಬಿಎಸ್-6 ನಿಯಮಗಳಿಗೆ ಅನುಗುಣವಾಗಿ ಬಿಡುಗಡೆಗೊಳಿಸಿದೆ.

ಸ್ಮಾರ್ಟ್ ಹೈಬ್ರಿಡ್‌ ತಂತ್ರಜ್ಞಾನದೊಂದಿಗೆ ಬಿಎಸ್-6 ಮಾರುತಿ ಬಲೆನೊ ಬಿಡುಗಡೆ

ಮಾರುತಿ ಸುಜುಕಿ ಬಿಡುಗಡೆ ಮಾಡಿರುವ ಬಿಎಸ್-6 ವೈಶಿಷ್ಟ್ಯತೆಯುಳ್ಳ ಬಲೆನೊ ಆವೃತ್ತಿಯು ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನ ಪ್ರೇರಣೆ ಹೊಂದಿದ್ದು, ಮಾಲಿನ್ಯ ಪ್ರಮಾಣ ತಗ್ಗಿಸಲು ಮತ್ತು ಮೈಲೇಜ್ ಹೆಚ್ಚಿಸುವಲ್ಲಿ ಹೊಸ ಎಂಜಿನ್ ಸಾಕಷ್ಟು ಸಹಕಾರಿಯಾಗಿದೆ. ಹೀಗಾಗಿ ಸಾಮಾನ್ಯ ಬಲೆನೊ ಆವೃತ್ತಿಗಿಂತ ಬಿಎಸ್-6 ಎಂಜಿನ್ ಪ್ರೇರಿಚ ಬಲೆನೊ ಕಾರಿನ ಬೆಲೆಯಲ್ಲಿ ತುಸು ಹೆಚ್ಚಳವಾಗಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.7.25 ಲಕ್ಷ ಬೆಲೆ ನಿಗದಿ ಮಾಡಲಾಗಿದೆ.

ಸ್ಮಾರ್ಟ್ ಹೈಬ್ರಿಡ್‌ ತಂತ್ರಜ್ಞಾನದೊಂದಿಗೆ ಬಿಎಸ್-6 ಮಾರುತಿ ಬಲೆನೊ ಬಿಡುಗಡೆ

ಈ ಹಿಂದೆ ಕೇಂದ್ರ ಸರ್ಕಾರವು 2017 ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಬಿಎಸ್-3 ವಾಹನಗಳ ಉತ್ಪಾದನೆ ಮತ್ತು ಮಾರಾಟವನ್ನು ನಿಷೇಧಗೊಳಿಸಿ ಬಿಎಸ್-4 ನಿಯಮವನ್ನು ಜಾರಿಗೆ ತಂದಿತ್ತು. ಇದೀಗ ಮತ್ತೊಂದು ಸುತ್ತಿನಲ್ಲಿ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಬಿಎಸ್-6 ನತ್ತ ಮಹತ್ವದ ಹೆಜ್ಜೆಯಿಡುತ್ತಿದೆ.

ಸ್ಮಾರ್ಟ್ ಹೈಬ್ರಿಡ್‌ ತಂತ್ರಜ್ಞಾನದೊಂದಿಗೆ ಬಿಎಸ್-6 ಮಾರುತಿ ಬಲೆನೊ ಬಿಡುಗಡೆ

2020ರ ಏಪ್ರಿಲ್ 1ರಿಂದಲೇ ಬಿಎಸ್-6 ನಿಯಮವು ಜಾರಿಯಾಗುವುದು ಬಹುತೇಕ ಖಚಿತವಾಗಿದ್ದು, ಬಿಎಸ್-4 ವಾಹನಗಳ ಉತ್ಪಾದನೆ ಮತ್ತು ಮಾರಾಟ ಸಂಪೂರ್ಣ ನಿಷೇಧಗೊಳ್ಳಲಿದೆ. ಹೊಸ ನಿಯಮವು ವಾಹನ ಉತ್ಪಾದನೆಯಲ್ಲಿ ಮಹತ್ವದ ಬದಲಾವಣೆಗಳಿಗೆ ಕಾರಣವಾಗಿದ್ದು, ಹೆಚ್ಚುತ್ತಿರುವ ಮಾಲಿನ್ಯವನ್ನು ತಡೆಯುವಲ್ಲಿ ಹೊಸ ಬಿಎಸ್-6 ಎಂಜಿನ್‌ಗಳು ಸಾಕಷ್ಟು ಸಹಕಾರಿಯಾಗಿವೆ ಎನ್ನುವುದು ಆಟೋ ತಜ್ಞರ ವಿಶ್ಲೇಷಣೆ.

ಸ್ಮಾರ್ಟ್ ಹೈಬ್ರಿಡ್‌ ತಂತ್ರಜ್ಞಾನದೊಂದಿಗೆ ಬಿಎಸ್-6 ಮಾರುತಿ ಬಲೆನೊ ಬಿಡುಗಡೆ

ಇದರಿಂದಾಗಿ ಮಾರುತಿ ಸುಜುಕಿ ಸೇರಿದಂತೆ ದೇಶದ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ತಮ್ಮ ಜನಪ್ರಿಯ ಕಾರುಗಳನ್ನು ಬಿಎಸ್-6 ಎಂಜಿನ್‌ನೊಂದಿಗೆ ಉನ್ನತೀಕರಿಸಿ ಟೆಸ್ಟಿಂಗ್ ನಡೆಸುತ್ತಿದ್ದು, ಡೆಡ್‌ಲೈನ್‌ಗೂ ಮುನ್ನವೇ ಮಾರುತಿ ಸುಜುಕಿ ತನ್ನ ಬಹುಬೇಡಿಕೆಯ ಬಲೆನೊ ಕಾರನ್ನು ಹೊಸ ನಿಯಮದಂತೆ ಮರುಬಿಡುಗಡೆ ಮಾಡಿದೆ.

ಸ್ಮಾರ್ಟ್ ಹೈಬ್ರಿಡ್‌ ತಂತ್ರಜ್ಞಾನದೊಂದಿಗೆ ಬಿಎಸ್-6 ಮಾರುತಿ ಬಲೆನೊ ಬಿಡುಗಡೆ

ಈ ಕುರಿತಂತೆ ಮಾತನಾಡಿರುವ ಮಾರುತಿ ಸುಜುಕಿ ಮಾರುಕಟ್ಟೆ ಮತ್ತು ಮಾರಾಟ ವಿಭಾಗದ ನಿರ್ದೇಶಕ ಆರ್‌ಎಸ್ ಕಲ್ಸಿಯವರು, 2015ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿದ್ದ ಬಲೆನೊ ಕಾರು ಇದುವರೆಗೆ 5.5 ಲಕ್ಷ ಗ್ರಾಹಕರ ಮೆಚ್ಚುಗೆಗೆ ಕಾರಣವಾಗಿದ್ದು, ಇದೀಗ ಬಿಎಸ್-6 ಎಂಜಿನ್‌ನೊಂದಿಗೆ ಮತ್ತಷ್ಟು ಗ್ರಾಹಕರನ್ನು ಸೆಳೆಯುವು ನಿಟ್ಟಿನಲ್ಲಿ ಪರಿಸರ ಸ್ನೇಹಿ ಕಾರು ಮಾದರಿಯಾಗಿ ರಸ್ತೆಗಿಳಿದೆ ಎಂದಿದ್ದಾರೆ.

ಸ್ಮಾರ್ಟ್ ಹೈಬ್ರಿಡ್‌ ತಂತ್ರಜ್ಞಾನದೊಂದಿಗೆ ಬಿಎಸ್-6 ಮಾರುತಿ ಬಲೆನೊ ಬಿಡುಗಡೆ

ಮಾಹಿತಿಗಳ ಪ್ರಕಾರ, ಬಿಎಸ್-6 ಎಂಜಿನ್ ಹೊಂದಿರುವ ಹೊಸ ಬಲೆನೊ ಕಾರು ಈ ಹಿಂದಿನ ಆವೃತ್ತಿಗಿಂತ ಶೇ.25ರಷ್ಟು ಮಾಲಿನ್ಯ ಹೊರಸೂಸುವಿಕೆ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಜೊತೆಗೆ ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಕಾರಿನ ಎಂಜಿನ್ ದಕ್ಷತೆ ಮತ್ತು ಮೈಲೇಜ್ ಹೆಚ್ಚಳವಾಗಿರುವುದರಿಂದ ಗ್ರಾಹಕರ ಆಕರ್ಷಣೆಗೆ ಕಾರಣವಾಗಲಿದೆಯೆಂತೆ.

MOST READ: ಭಾರತೀಯ ಆಟೋ ಉದ್ಯಮದಲ್ಲಿ ಸಂಚಲನ ಸೃಷ್ಠಿಸಿದ ರೆನಾಲ್ಟ್ ಹೆಚ್‌ಬಿಸಿ..!

ಸ್ಮಾರ್ಟ್ ಹೈಬ್ರಿಡ್‌ ತಂತ್ರಜ್ಞಾನದೊಂದಿಗೆ ಬಿಎಸ್-6 ಮಾರುತಿ ಬಲೆನೊ ಬಿಡುಗಡೆ

ಇದರ ಹೊರಾತಾಗಿ ಹೊಸ ಆವೃತ್ತಿಯ ಬಗೆಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳದ ಮಾರುತಿ ಸುಜುಕಿ ಸಂಸ್ಥೆಯು ಮುಂದಿನ ಕೆಲವೇ ದಿನಗಳಲ್ಲಿ ಮಾರಾಟ ಪ್ರಕ್ರಿಯೆಗೆ ಚಾಲನೆ ನೀಡಲಿದ್ದು, ಆಗಷ್ಟೇ ಹೊಸ ಎಂಜಿನ್ ಮಾದರಿಯ ಮತ್ತಷ್ಟು ಮಾಹಿತಿಗಳು ಬಹಿರಂಗಗೊಳ್ಳಲಿವೆ.

ಸ್ಮಾರ್ಟ್ ಹೈಬ್ರಿಡ್‌ ತಂತ್ರಜ್ಞಾನದೊಂದಿಗೆ ಬಿಎಸ್-6 ಮಾರುತಿ ಬಲೆನೊ ಬಿಡುಗಡೆ

ಇನ್ನು ಬಿಎಸ್-6 ಜೊತೆಗೆ ಬಿಎಸ್-4 ಬಲೆನೊ ಕಾರು ಮಾದರಿಯು ಕೂಡಾ ಸದ್ಯಕ್ಕೆ ಮಾರಾಟಕ್ಕೆ ಲಭ್ಯವಿರಲಿದ್ದು, ಸ್ಟಾಕ್ ಮುಕ್ತಾಯದ ನಂತರ ಬಿಎಸ್-4 ಬಲೆನೊ ಕಾರುಗಳಿಗೆ ಮಾರಾಟವನ್ನು ಸ್ಥಗಿತಗೊಳಿಸಿ ಬಿಎಸ್-6 ಎಂಜಿನ್ ಕಾರುಗಳನ್ನು ಮಾತ್ರವೇ ಮಾರಾಟ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ.

MOST READ: ಜಗತ್ತಿನ ಅತಿ ದುಬಾರಿ ಕಾರ್ ಕೀ ಬೆಲೆ ಕೇಳಿದ್ರೆ ನಿಮಗೆ ಅಚ್ಚರಿಯಾಗುತ್ತೆ..!

ಸ್ಮಾರ್ಟ್ ಹೈಬ್ರಿಡ್‌ ತಂತ್ರಜ್ಞಾನದೊಂದಿಗೆ ಬಿಎಸ್-6 ಮಾರುತಿ ಬಲೆನೊ ಬಿಡುಗಡೆ

ಸದ್ಯ ಮಾರುಕಟ್ಟೆಯಲ್ಲಿ ಬಲೆನೊ ಕಾರುಗಳು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಒಟ್ಟು ಆರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದರಲ್ಲಿ ಡೆಲ್ಟಾ ಪೆಟ್ರೋಲ್ ಮತ್ತು ಜೆಟಾ ಪೆಟ್ರೋಲ್ ವೆರಿಯೆಂಟ್‌ಗಳಲ್ಲಿ ಮಾತ್ರವೇ ಹೊಸ ಬಿಎಸ್-6 ಪ್ರೇರಿತ ಡ್ಯುಯೆಲ್ ಜೆಟ್ ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನವನ್ನು ಜೋಡಿಸಲಾಗಿದೆ.

ಸ್ಮಾರ್ಟ್ ಹೈಬ್ರಿಡ್‌ ತಂತ್ರಜ್ಞಾನದೊಂದಿಗೆ ಬಿಎಸ್-6 ಮಾರುತಿ ಬಲೆನೊ ಬಿಡುಗಡೆ

ಈ ಮೂಲಕ ಹೊಸ ಎಂಜಿನ್ ಪ್ರೇರಿತ ಡೆಲ್ಟಾ ಪೆಟ್ರೋಲ್ ಆವೃತ್ತಿಯು ಲೀಟರ್‍‌ಗೆ 21.4ಕಿ.ಮಿ ಮೈಲೇಜ್ ನೀಡಿದ್ದಲ್ಲಿ ಜೆಟಾ ಪೆಟ್ರೋಲ್ ಆವೃತ್ತಿಯು ಪ್ರತಿ ಲೀಟರ್‌ಗೆ 23.87ಕಿ.ಮಿ ಮೈಲೇಜ್ ನೀಡಲಿದ್ದು, ಇವು ಸಾಮಾನ್ಯ ಆವೃತ್ತಿಗಳಿಂತ ರೂ.89 ಸಾವಿರದಷ್ಟು ದುಬಾರಿಯಾಗಿರಲಿವೆ.

Most Read Articles

Kannada
English summary
BS-VI Maruti Baleno Launched In India. Read in Kannada.
Story first published: Monday, April 22, 2019, 15:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X