ಜಗತ್ತಿನ ಅತಿ ದುಬಾರಿ ಕಾರ್ ಕೀ ಬೆಲೆ ಕೇಳಿದ್ರೆ ನಿಮಗೆ ಅಚ್ಚರಿಯಾಗುತ್ತೆ..!
ಜಗತ್ತಿನಾದ್ಯಂತ ಹಲವಾರು ಕಾರು ಉತ್ಪಾದನಾ ಸಂಸ್ಥೆಗಳು ದುಬಾರಿ ಬೆಲೆಯ ಕಾರುಗಳನ್ನು ಮಾರಾಟ ಮಾಡುತ್ತಿರುವುದು ಬಹುತೇಕರಿಗೆ ಗೊತ್ತಿರುವ ವಿಚಾರ. ಆದ್ರೆ ಹೊಸ ಸುದ್ದಿ ಏನೆಂದ್ರೆ ಕಾರಗಳ ಬೆಲೆಗಿಂತಲೂ ದುಬಾರಿ ಬೆಲೆಯಲ್ಲಿ ಅವುಗಳ ಕೀ ಗಳು ಮಾರಾಟವಾಗುತ್ತಿರುವುದು ಸದ್ಯದ ಟ್ರೆಂಡಿಂಗ್ ವಿಚಾರ.

ಹೌದು, ನಾವು ಇಷ್ಟು ದಿನಗಳ ಬುಗಾಟಿ ಕಾರಿ ಬೆಲೆ 20 ಕೋಟಿ ಅಂತೆ, ಹೊಸ ಎಡಿಷನ್ 40 ಕೋಟಿ ಅಂತೆ ಎನ್ನುವ ಸುದ್ಧಿಗಳನ್ನು ಕೇಳಿದ್ದೇವೆ. ಆದ್ರೆ ದುಬಾರಿ ಕಾರಿನ ಬೆಲೆಗಳನ್ನೇ ಹಿಂದಿಕ್ಕುವ ಅವುಗಳ ಕೀ ಬೆಲೆಗಳು ನಿಮಗೆ ಅಚ್ಚರಿ ಉಂಟು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಾದ್ರೆ ಜಗತ್ತಿನ ದುಬಾರಿ ಕಾರ್ ಕೀ ಗಳು ಮಾರಾಟ ಮಾಡುತ್ತಿರುವ ಸಂಸ್ಥೆ ಯಾವುದು? ದುಬಾರಿ ಕೀ ಗಳ ವಿಶೇಷತೆ ಏನು ಎಂದು ತಿಳಿಯುವ ಮುಂದಿನ ಪುಟದತ್ತ ಸಾಗಿರಿ.

ವಿಶ್ವಾದ್ಯಂತ ಸದ್ಯ ಅತಿ ದುಬಾರಿ ಕಾರುಗಳನ್ನು ಪರಿಚಯಿಸುತ್ತಿರುವ ಬುಗಾಟಿ, ರೋಲ್ಸ್ ರಾಯ್ಸ್, ಬೆಂಟ್ಲಿ, ಮಸೆರೆಟಿ ಮತ್ತು ಮೆಕ್ಲೆರನ್ ಸಂಸ್ಥೆಗಳು ಗ್ರಾಹಕರ ಬೇಡಿಕೆಯೆಂತೆ ರೂ. 5 ಕೋಟಿಯಿಂದ ರೂ.100 ಕೋಟಿಯಷ್ಟು ಬೆಳೆಬಾಳುವ ವಿವಿಧ ಮಾದರಿಯ ಕಾರುಗಳನ್ನು ಮಾರಾಟ ಮಾಡುತ್ತಿವೆ.

ಹೀಗಿರುವಾಗ ಐಷಾರಾಮಿ ಕಾರುಗಳ ಬೆಲೆಗೆ ತಕ್ಕಂತೆ ಅವುಗಳ ಕೀ ಕೂಡಾ ತುಸು ವಿಶೇಷತೆ ಎನ್ನುವಂತೆ ಅಭಿವೃದ್ಧಿಗೊಳಿಸುತ್ತಿರುವ ಅವೈನ್ ಎನ್ನುವ ಸಂಸ್ಥೆಯು ಕಾರುಗಳ ಬೆಲೆ ತಕ್ಕಂತೆ ದುಬಾರಿ ಬೆಲೆಯ ಕೀ ಗಳನ್ನು ನಿರ್ಮಾಣ ಮಾಡಿ ಮಾರಾಟ ಮಾಡುತ್ತಿದೆ.

ಕಾರುಗಳ ಬೆಲೆ ಮತ್ತು ಗ್ರಾಹಕರ ಬೇಡಿಕೆಯೆಂತೆ ರೂ. 3 ಲಕ್ಷದಿಂದ ರೂ.4 ಕೋಟಿಯಷ್ಟು ಬೆಲೆಬಾಳುವ ಕಾರು ಕೀ ಮಾದರಿಗಳನ್ನು ಮಾರಾಟ ಮಾಡುತ್ತಿರುವ ಅವೈನ್ ಸಂಸ್ಥೆಯು ಬುಗಾಟಿ, ರೋಲ್ಸ್ ರಾಯ್ಸ್, ಬೆಂಟ್ಲಿ, ಮಸೆರೆಟಿ, ಮರ್ಸಿಡಿಸ್, ಆಸ್ಟನ್ ಮಾರ್ಟಿನ್, ಪೋರ್ಷ ಮತ್ತು ಮೆಕ್ಲೆರನ್ ಕಾರುಗಳಿಗೆ ವಿಶೇಷವಾದ ಕೀ ಗಳನ್ನು ಅಭಿವೃದ್ಧಿಗೊಳಿಸುತ್ತಿದೆ.

ವಿಶೇಷ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಅವೈನ್ ನಿರ್ಮಾಣದ ಕಾರು ಕೀ ಗಳಲ್ಲಿ ಉತ್ಕೃಷ್ಟ ಗುಣಮಟ್ಟದ ಬಂಗಾರ ಮತ್ತು ವಜ್ರದ ಹರಳುಗಳನ್ನು ಬಳಕೆ ಮಾಡಲಾಗಿದ್ದು, ಬೆಲೆಗೆ ತಕ್ಕಂತೆ ಕಾರಿನ ಕೀ ನಲ್ಲಿ ಕೆಲವು ವಿಶ್ವದರ್ಜೆ ವಿನ್ಯಾಸಗಳನ್ನು ಜೋಡಣೆ ಮಾಡಲಾಗಿದೆ.

ಅವೈನ್ ಸಂಸ್ಥೆಯು ನಿರ್ಮಾಣ ಮಾಡುತ್ತಿರುವ ಐಷಾರಾಮಿ ಕಾರ್ ಕೀ ಗಳು ಸಂಪೂರ್ಣವಾಗಿ ಹ್ಯಾಂಡ್ ಕೌಶಲ್ಯದೊಂದಿಗೆ ಸಿದ್ದವಾಗಿದ್ದು, ಬಂಗಾರದ ಕವಕದೊಂದಿಗೆ ವಜ್ರದ ಹರಳುಗಳನ್ನು ಕೀ ಮೇಲ್ಫಾಗದಲ್ಲಿ ಡಿಸೈನ್ ಮಾಡಲಾಗಿರುತ್ತೆ.
MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ಹೀಗಾಗಿ ವಜ್ರದ ಬಳಕೆ, ಡಿಸೈನ್ ಆಧಾರದ ಮೇಲೆ ಕಾರಿನ ಕೀ ಗಳ ಬೆಲೆಗಳು ನಿರ್ಧಾರವಾಗಲಿದ್ದು, ಕಾರುಗಳ ಐಷಾರಾಮಿ ಸೌಲಭ್ಯಗಳಿಗೆ ತಕ್ಕಂತೆ 49,000 ಯುರೋ (ರೂ.3 ಲಕ್ಷ)ದಿಂದ ಆರಂಭವಾಗುವ ಬೆಲೆಗಳು ಗರಿಷ್ಠ 5,00,000 ಯುರೋ(ರೂ.3.88 ಕೋಟಿ)ಗೆ ಮಾರಾಟವಾಗುತ್ತಿವೆ. ಹೀಗಿರುವಾಗ ಇದೇ ಬೆಲೆಯಲ್ಲಿ ಭಾರತದಲ್ಲಿ ಒಂದು ಲಂಬೋರ್ಗಿನಿ ಹುರಕಾನ್ ಇವೊ ಕಾರನ್ನೇ ಖರೀದಿ ಮಾಡಬಹುದು.

ಇನ್ನು 2019ರ ಫೆಬ್ರುವರಿಯಿಂದ ತನ್ನ ಐಷಾರಾಮಿ ಕಾರ್ ಕೀ ನಿರ್ಮಾಣಕ್ಕೆ ಚಾಲನೆ ನೀಡಿರುವ ಅವೈನ್ ಸಂಸ್ಥೆಯು ಕಳೆದ ಒಂದು ತಿಂಗಳಿನಲ್ಲಿ 20 ದುಬಾರಿ ಕೀ ಗಳನ್ನು ಮಾರಾಟ ಮಾಡಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ದುಬಾರಿ ಬೆಲೆಯ ಕಾರ್ ಕೀ ಮಾದರಿಗಳನ್ನು ಪರಿಚಯಿಸುವ ಸುಳಿವು ನೀಡಿದೆ.
MOST READ: ಭದ್ರತೆಗಾಗಿ ಮತ್ತೊಂದು ದುಬಾರಿ ಕಾರು ಖರೀದಿಸಿದ ಉದ್ಯಮಿ ಮುಕೇಶ್ ಅಂಬಾನಿ..!

ಆದ್ರೆ ಇತ್ತೀಚೆಗೆ ಹೊಸ ತಂತ್ರಜ್ಞಾನ ಪ್ರೇರಣೆಯೊಂದಿಗೆ ಐಷಾರಾಮಿ ಕಾರುಗಳಲ್ಲಿ ಕೀ ಲೆಸ್ ಎಂಟ್ರಿ ಮತ್ತು ಲಾಕ್ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ಈ ಮಧ್ಯೆ ಅವೈನ್ ಸಂಸ್ಥೆಯು ಪರಿಚಯಿಸುತ್ತಿರುವ ದುಬಾರಿ ಬೆಲೆಯ ಕಾರ್ ಕೀ ಗಳು ಎಷ್ಟರ ಮಟ್ಟಿಗೆ ಜನಪ್ರಿಯಗೊಳ್ಳಲಿವೆ ಎನ್ನುವುದು ಕುತೂಹಲ ಹುಟ್ಟುಹಾಕಿದೆ. ಹಾಗಾದ್ರೆ ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು?


Click it and Unblock the Notifications








