ಡೆಡ್‌ಲೈನ್‌ಗೂ ಮುನ್ನವೇ ಬಿಎಸ್-4 ಕಾರುಗಳ ಮಾರಾಟವನ್ನು ಪೂರ್ಣಗೊಳಿಸಿದ ಮಾರುತಿ ಸುಜುಕಿ

ಮುಂಬರುವ 2020ರ ಏಪ್ರಿಲ್ 1ರಿಂದ ಬಿಎಸ್-6 ವೈಶಿಷ್ಟ್ಯತೆ ವಾಹನ ಉತ್ಪಾದನೆ ಮತ್ತು ಮಾರಾಟವು ಕಡ್ಡಾಯವಾಗಲಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬಿಎಸ್-4 ವಾಹನಗಳ ಮಾರಾಟವು ಮಾರ್ಚ್ 31ಕ್ಕೆ ಕೊನೆಗೊಳ್ಳಲಿದೆ. ತದನಂತರ ಬಿಎಸ್-4 ಮಾರಾಟ ಮತ್ತು ನೋಂದಣಿ ಸಂಪೂರ್ಣವಾಗಿ ನಿಷೇಧಗೊಳ್ಳಲಿದ್ದು, ಡೆಡ್‌ಲೈನ್‌ಗೂ ಮುನ್ನವೇ ಮಾರುತಿ ಸುಜುಕಿ ಸಂಸ್ಥೆಯು ಬಿಎಸ್-4 ಪೆಟ್ರೋಲ್ ಕಾರುಗಳ ಸ್ಟಾಕ್ ಪ್ರಮಾಣವನ್ನು ಸಂಪೂರ್ಣವಾಗಿ ಮಾರಾಟ ಮಾಡಿದೆ.

ಡೆಡ್‌ಲೈನ್‌ಗೂ ಮುನ್ನವೇ ಬಿಎಸ್-4 ಕಾರುಗಳ ಮಾರಾಟವನ್ನು ಪೂರ್ಣಗೊಳಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಈಗಾಗಲೇ ಪೆಟ್ರೋಲ್ ಕಾರುಗಳನ್ನು ಸಂಪೂರ್ಣವಾಗಿ ಬಿಎಸ್-6 ನಿಯಮ ಅನುಸಾರವಾಗಿಯೇ ಅಭಿವೃದ್ದಿಪಡಿಸಿ ಮಾರಾಟ ಮಾಡುತ್ತಿದ್ದು, ಈಗಾಗಲೇ 2 ಲಕ್ಷ ಪೆಟ್ರೋಲ್ ಕಾರುಗಳನ್ನು ಮಾರಾಟ ಮಾಡಿದೆ. ಆದರೆ ಡೀಸೆಲ್ ಕಾರುಗಳನ್ನು ಮಾತ್ರವೇ ಬಿಎಸ್-4 ನಿಯಮದಂತೆ ಮಾರಾಟ ಮಾಡುತ್ತಿದ್ದು, 2020ರ ಫೆಬ್ರುವರಿ ನಂತರ ಡೀಸೆಲ್ ಕಾರುಗಳನ್ನು ಕೂಡಾ ಬಿಎಸ್-6 ನಿಯಮದಂತೆ ಮಾರಾಟ ಪ್ರಕ್ರಿಯೆ ಆರಂಭಿಸಲಿದೆ.

ಮಾಹಿತಿಗಳ ಪ್ರಕಾರ, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಅಗ್ಗದ ಬೆಲೆಯ ಮಾರುತಿ ಸುಜುಕಿ ಕಾರುಗಳಲ್ಲಿ ಏಪ್ರಿಲ್ 1ರ ನಂತರ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆ ಮಾತ್ರವೇ ಲಭ್ಯವಾಗಲಿದ್ದು, ಡಿಸೇಲ್ ಎಂಜಿನ್ ಆಯ್ಕೆಯನ್ನು ಕೈಬಿಡಲಾಗುತ್ತಿದೆ.

ಡೆಡ್‌ಲೈನ್‌ಗೂ ಮುನ್ನವೇ ಬಿಎಸ್-4 ಕಾರುಗಳ ಮಾರಾಟವನ್ನು ಪೂರ್ಣಗೊಳಿಸಿದ ಮಾರುತಿ ಸುಜುಕಿ

ಸದ್ಯ ಮಾರುತಿ ಸುಜುಕಿ ನಿರ್ಮಾಣದ ಕಾರುಗಳಲ್ಲಿ ಮಾರಾಟವಾಗುತ್ತಿರುವ 1.3-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯು ಬಿಎಸ್-6 ನಿಯಮ ಜಾರಿ ನಂತರ ಸ್ಥಗಿತವಾಗಲಿದ್ದು, ಆಸಕ್ತ ಗ್ರಾಹಕರಿಗಾಗಿ ಮಾತ್ರವೇ ಹೈ ಎಂಡ್ ಕಾರುಗಳಾದ ಎಸ್-ಕ್ರಾಸ್, ಎಕ್ಸ್ಎಲ್6 ಮತ್ತು ಬಿಡುಗಡೆಗೆ ಸಿದ್ದವಾಗುತ್ತಿರುವ ವಿಟಾರಾ ಎಸ್‌ಯುವಿ ಕಾರಿನಲ್ಲಿ ಮಾತ್ರವೇ ಬಿಎಸ್-6 ವೈಶಿಷ್ಟ್ಯತೆಯ 1.6-ಲೀಟರ್ ಡೀಸೆಲ್ ಎಂಜಿನ್ ಮಾರಾಟ ಮಾಡಲಿದೆ.

ಡೆಡ್‌ಲೈನ್‌ಗೂ ಮುನ್ನವೇ ಬಿಎಸ್-4 ಕಾರುಗಳ ಮಾರಾಟವನ್ನು ಪೂರ್ಣಗೊಳಿಸಿದ ಮಾರುತಿ ಸುಜುಕಿ

ಇನ್ನುಳಿದ ಕಾರುಗಳಲ್ಲಿ 1-ಲೀಟರ್, 1.2-ಲೀಟರ್ ಮತ್ತು 1.5-ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಸ್ಮಾರ್ಟ್ ಹೈಬ್ರಿಡ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಮಾತ್ರವೇ ಮಾರಾಟ ಮಾಡಲಿದ್ದು, ಮಾಲಿನ್ಯ ಉತ್ಪಾದನೆಯನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಡುತ್ತಿದೆ.

ಡೆಡ್‌ಲೈನ್‌ಗೂ ಮುನ್ನವೇ ಬಿಎಸ್-4 ಕಾರುಗಳ ಮಾರಾಟವನ್ನು ಪೂರ್ಣಗೊಳಿಸಿದ ಮಾರುತಿ ಸುಜುಕಿ

ಇನ್ನು ಅಗ್ಗದ ಬೆಲೆಯಲ್ಲಿ ಮಾರಾಟವಾಗುತ್ತಿರುವ 1.3-ಲೀಟರ್ ಡೀಸೆಲ್ ಎಂಜಿನ್ ಅನ್ನು ಬಿಎಸ್-6 ನಿಯಮದಂತೆ ಉನ್ನತೀಕರಣ ಕಷ್ಟಸಾಧ್ಯ ಎನ್ನಲಾಗುತ್ತಿದ್ದು, ಒಂದು ವೇಳೆ ಹೊಸ ನಿಯಮ ಅನುಸಾರ ಎಂಜಿನ್ ಉನ್ನತೀಕರಣ ಮಾಡಿದರೂ ಸಹ ದುಬಾರಿ ಬೆಲೆ ವಿಧಿಸಬೇಕಾಗುತ್ತದೆ. ಪ್ರಸ್ತುತ ಮಾರುಕಟ್ಟೆಯಲ್ಲಿನ ಬೆಲೆಗಿಂತ ಬಿಎಸ್-6 ಎಂಜಿನ್ ಬೆಲೆಯು ಕನಿಷ್ಠ 1 ಲಕ್ಷದಿಂದ ರೂ.2 ಲಕ್ಷದ ತನಕ ದುಬಾರಿಯಾಗಲಿದ್ದು , ಇದು ಕಾರು ಮಾರಾಟದ ಮೇಲೆ ಪರಿಣಾಮ ಬೀರುವ ಎಲ್ಲಾ ಸಾಧ್ಯತೆಗಳಿವೆ.

ಡೆಡ್‌ಲೈನ್‌ಗೂ ಮುನ್ನವೇ ಬಿಎಸ್-4 ಕಾರುಗಳ ಮಾರಾಟವನ್ನು ಪೂರ್ಣಗೊಳಿಸಿದ ಮಾರುತಿ ಸುಜುಕಿ

ಇದೇ ಕಾರಣಕ್ಕೆ 1.3-ಲೀಟರ್ ಸಾಮಾರ್ಥ್ಯದ ಡೀಸೆಲ್ ಎಂಜಿನ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದ ಮಾರುತಿ ಸುಜುಕಿಯು ಡೀಸೆಲ್ ಕಾರುಗಳ ಇಂಧನ ದಕ್ಷತೆಗೆ ಸರಿಸಮನಾಗಿ ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಸಿಎನ್‌ಜಿ ಕಾರುಗಳ ಆಯ್ಕೆಯನ್ನು ಹೆಚ್ಚಿಸುತ್ತದೆ.

ಡೆಡ್‌ಲೈನ್‌ಗೂ ಮುನ್ನವೇ ಬಿಎಸ್-4 ಕಾರುಗಳ ಮಾರಾಟವನ್ನು ಪೂರ್ಣಗೊಳಿಸಿದ ಮಾರುತಿ ಸುಜುಕಿ

ಒಂದು ವೇಳೆ ಬೆಲೆ ದುಬಾರಿಯಾದರೂ ಸರಿ ಡೀಸೆಲ್ ಎಂಜಿನ್ ಕಾರುಗಳನ್ನೇ ಖರೀದಿ ಬಯಸುವ ಗ್ರಾಹಕರಿಗೆ ಹೈ ಎಂಡ್ ಮಾದರಿಗಳಲ್ಲಿ 1.6-ಲೀಟರ್ ಸಾಮಾರ್ಥ್ಯದ ಎಂಜಿನ್ ಆಯ್ಕೆ ದೊರೆಯಲಿದ್ದು, ಮಧ್ಯಮ ವರ್ಗದ ಕಾರು ಖರೀದಿದಾರರಿಗೆ ಬೆಲೆ ಹೊರೆಯಾಗದಂತೆ ಎಚ್ಚರಿಕೆಯ ಹೆಜ್ಜೆಯಿಡುತ್ತಿದೆ.

MOST READ: ಸ್ಟಾರ್ ನಟಿಗೆ ಬರೋಬ್ಬರಿ 11 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಕಾರ್ ಗಿಫ್ಟ್

ಡೆಡ್‌ಲೈನ್‌ಗೂ ಮುನ್ನವೇ ಬಿಎಸ್-4 ಕಾರುಗಳ ಮಾರಾಟವನ್ನು ಪೂರ್ಣಗೊಳಿಸಿದ ಮಾರುತಿ ಸುಜುಕಿ

ಹೀಗಿರುವಾಗ ಅಗ್ಗದ ಬೆಲೆಯ ಡೀಸೆಲ್ ಎಂಜಿನ್ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸುತ್ತಿರುವ ಮಾರುತಿ ಸುಜುಕಿಗೆ ಪೈಪೋಟಿ ನೀಡಲು ಕೆಲವು ಕಾರು ಉತ್ಪಾದನಾ ಸಂಸ್ಥೆಗಳು ಗ್ರಾಹಕರ ಸೆಳೆಯಲು ಸಣ್ಣ ಕಾರುಗಳಲ್ಲೂ ಬಿಎಸ್-6 ವೈಶಿಷ್ಟ್ಯತೆಯ ಡೀಸೆಲ್ ಎಂಜಿನ್ ಉನ್ನತೀಕರಿಸಲು ಮುಂದಾಗಿವೆ.

MOST READ: ರೂ.10 ಲಕ್ಷದೊಳಗೆ ಬಿಡುಗಡೆಯಾಗಲಿದೆ ಎಂಜಿ ಮೋಟಾರ್ ಹೊಸ ಕಂಪ್ಯಾಕ್ಟ್ ಎಸ್‌ಯುವಿ

ಡೆಡ್‌ಲೈನ್‌ಗೂ ಮುನ್ನವೇ ಬಿಎಸ್-4 ಕಾರುಗಳ ಮಾರಾಟವನ್ನು ಪೂರ್ಣಗೊಳಿಸಿದ ಮಾರುತಿ ಸುಜುಕಿ

ಹ್ಯುಂಡೈ ನಿಟ್ಟಿನಲ್ಲಿ ಮೊದಲ ಸ್ಥಾನದಲ್ಲಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ 1.2-ಲೀಟರ್ ಮತ್ತು 1.4-ಲೀಟರ್ ಡೀಸೆಲ್ ಎಂಜಿನ್ ಅನ್ನು ಕೂಡಾ ಬಿಎಸ್-6 ಜಾರಿ ನಂತರವೂ ದುಬಾರಿ ಬೆಲೆಯಲ್ಲಿ ಮಾರಾಟ ಮಾಡಲು ಮುಂದಾಗಿದೆ.

MOST READ: ಮೂರನೇ ವ್ಯಕ್ತಿಯ ಕೈಗೆ ಕಾರು ಕೊಟ್ಟ ಮಾಲೀಕನಿಗೆ ಶಾಕ್ ಕೊಟ್ಟ ವಿಮಾ ಕಂಪನಿ..!

ಡೆಡ್‌ಲೈನ್‌ಗೂ ಮುನ್ನವೇ ಬಿಎಸ್-4 ಕಾರುಗಳ ಮಾರಾಟವನ್ನು ಪೂರ್ಣಗೊಳಿಸಿದ ಮಾರುತಿ ಸುಜುಕಿ

1.2-ಲೀಟರ್ ಮತ್ತು 1.4-ಲೀಟರ್ ಡೀಸೆಲ್ ಎಂಜಿನ್ ಜೊತೆಗೆ ಹೈ ಕಾರುಗಳಲ್ಲಿರುವ 1.6-ಲೀಟರ್ ಡೀಸೆಲ್ ಎಂಜಿನ್ ಅನ್ನು ಸಹ ಉನ್ನತೀಕರಿಸುತ್ತಿರುವ ಹ್ಯುಂಡೈ ಸಂಸ್ಥೆಯು ಪೆಟ್ರೋಲ್ ಕಾರುಗಳ ಜೊತೆಗೆ ಡೀಸೆಲ್ ಎಂಜಿನ್ ಕಾರುಗಳ ಮಾರಾಟವನ್ನು ಮುಂದುವರಿಸಲಿದ್ದು, ಬಿಎಸ್-6 ಜಾರಿ ನಂತರ ಮಾರುತಿ ಸುಜುಕಿಗೆ ಇದು ಯಾವ ರೀತಿ ಪೈಪೋಟಿ ನೀಡಲಿದೆ ಎಂಬುವುದನ್ನು ಕಾಯ್ದುನೋಡಬೇಕಿದೆ.

Most Read Articles

Kannada
English summary
Maruti running out of BS-IV stock. Read in Kannada.
Story first published: Thursday, October 31, 2019, 14:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X