ಮಾರುತಿ ಸುಜುಕಿ ಎರ್ಟಿಗಾ ಜಿಟಿ ಸ್ಪೋರ್ಟಿ ಕಾರು ಹೇಗಿರಲಿದೆ ಗೊತ್ತಾ?

ಸುಜುಕಿ ಸಂಸ್ಥೆಯು ಎಂಪಿವಿ ಮಾದರಿಯಾದ ಎರ್ಟಿಗಾ ಉತ್ಪಾದನೆ ಮತ್ತು ಮಾರಾಟದಲ್ಲಿ ಈಗಾಗಲೇ ಯಶಸ್ವಿ ಸಾಧಿಸಿದ್ದು, ಮುಂದಿನ ದಿನಗಳಲ್ಲಿ ಎರ್ಟಿಗಾ ಆವೃತ್ತಿಯಲ್ಲಿ ಸ್ಪೋರ್ಟಿ ಮಾದರಿಯ ಬಿಡುಗಡೆಗಾಗಿ ಎದುರು ನೋಡುತ್ತಿದೆ. ಹೀಗಾಗಿ ಹೊಸ ಕಾರಿನ ಎಂಜಿನ್ ಕಾರ್ಯಕ್ಷಮತೆ ಕುರಿತಂತೆ ಹಲವು ಸುತ್ತಿನ ಸ್ಪಾಟ್ ಟೆಸ್ಟಿಂಗ್ ನಡೆಸಿದ್ದು, ಇದೀಗ ಹೊಸ ಕಾರಿನ ಕುರಿತಾದ ಕೆಲವು ಮಹತ್ವದ ಮಾಹಿತಿಗಳು ಲಭ್ಯವಾಗಿವೆ.

ಮಾರುತಿ ಸುಜುಕಿ ಎರ್ಟಿಗಾ ಜಿಟಿ ಸ್ಪೋರ್ಟಿ ಕಾರು ಹೇಗಿರಲಿದೆ ಗೊತ್ತಾ?

ಸುಜುಕಿ ಸಂಸ್ಥೆಯು ಕಳೆದ ಅಗಸ್ಟ್‌ನಲ್ಲಿ ನಡೆದಿದ್ದ ಇಂಡೋನೆಷ್ಯಾ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಮಾಡಲಾಗಿದ್ದ ಎರ್ಟಿಗಾ ಜಿಟಿ ಸ್ಪೋರ್ಟಿ ಆವೃತ್ತಿಯನ್ನು ಇದೀಗ ಬಿಡುಗಡೆ ಮಾಡುತ್ತಿದ್ದು, ಇದೇ ತಿಂಗಳು 23ರಂದು ಇಂಡೋನೆಷ್ಯಾ ಸೇರಿದಂತೆ ಕೆಲವು ಯುರೋಪ್ ರಾಷ್ಟ್ರಗಳಲ್ಲೂ ಎರ್ಟಿಗಾ ಜಿಟಿ ಕಾರು ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಇದೇ ವೇಳೆ ಹೊಸ ಕಾರು ಭಾರತದಲ್ಲೂ ಬಿಡುಗಡೆಯಾಗುತ್ತಾ ಎನ್ನುವ ಕುತೂಲಹಕ್ಕೆ ತೆರೆ ಎಳೆಯಲಿರುವ ಸುಜುಕಿ ಸಂಸ್ಥೆಯು ಇನೋವಾ ಕ್ರಿಸ್ಟಾ ಕಾರಿಗೆ ಮತ್ತಷ್ಟು ಪೈಪೋಟಿ ನೀಡುವ ಬಗ್ಗೆ ಸುಳಿವು ನೀಡಿದೆ.

ಮಾರುತಿ ಸುಜುಕಿ ಎರ್ಟಿಗಾ ಜಿಟಿ ಸ್ಪೋರ್ಟಿ ಕಾರು ಹೇಗಿರಲಿದೆ ಗೊತ್ತಾ?

ಇದಲ್ಲದೇ ಮಾರುತಿ ಸುಜುಕಿ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ 1.3-ಲೀಟರ್ ಡೀಸೆಲ್ ಎಂಜಿನ್ ಜೊತೆಗೆ 1.5-ಲೀಟರ್ ಡೀಸೆಲ್ ಎಂಜಿನ್ ಮಾದರಿಯನ್ನು ಸಹ ಎರ್ಟಿಗಾದಲ್ಲಿ ಆಯ್ಕೆಯಾಗಿ ನೀಡುತ್ತಿರುವ ಬಗೆಗೆ ವರದಿಗಳಿದ್ದು, ಐಷಾರಾಮಿ ಸೌಲಭ್ಯಗಳೊಂದಿಗೆ 6 ಸೀಟರ್ ಮಾದರಿಯನ್ನು ಹೊಂದಿರಲಿದೆ ಎಂದು ಹೇಳಲಾಗುತ್ತಿದೆ.

ಮಾರುತಿ ಸುಜುಕಿ ಎರ್ಟಿಗಾ ಜಿಟಿ ಸ್ಪೋರ್ಟಿ ಕಾರು ಹೇಗಿರಲಿದೆ ಗೊತ್ತಾ?

ಒಂದು ವೇಳೆ 1.5-ಲೀಟರ್ ಡೀಸೆಲ್ ಎಂಜಿನ್ ಜೊತೆಗೆ 6 ಸೀಟರ್ ಮಾದರಿಯ ಎರ್ಟಿಗಾ ಭಾರತದಲ್ಲಿ ಬಿಡುಗಡೆಯಾದಲ್ಲಿ ಎರ್ಟಿಗಾ ಜಿಟಿ ಬಿಡುಗಡೆಯಾಗುವುದು ಕಷ್ಟ ಸಾಧ್ಯ ಎನ್ನಲಾಗುತ್ತಿದೆ. ಇನ್ನೂ ಕೆಲವು ಮೂಲಗಳ ಪ್ರಕಾರ ಭಾರತದಲ್ಲಿ ಬಿಡುಗಡೆಯಾಗಿ ನಿರ್ಧರಿಸಲಾಗಿರುವ 1.5-ಲೀಟರ್ ಡೀಸೆಲ್ ಎಂಜಿನ್ ಮಾದರಿಯೇ ಜಿಟಿ ಆವೃತ್ತಿ ಎಂದು ಹೇಳಲಾಗುತ್ತಿದೆ.

ಮಾರುತಿ ಸುಜುಕಿ ಎರ್ಟಿಗಾ ಜಿಟಿ ಸ್ಪೋರ್ಟಿ ಕಾರು ಹೇಗಿರಲಿದೆ ಗೊತ್ತಾ?

ಯಾಕೆಂದ್ರೆ ಇಂಡೋನೇಷ್ಯಾದಲ್ಲಿ ಬಿಡುಗಡೆಯಾಗುತ್ತಿರುವ ಎರ್ಟಿಗಾ ಜಿಟಿ ಆವೃತ್ತಿಯು ಕೂಡಾ 1.5-ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ 6 ಸೀಟರ್ ಸೌಲಭ್ಯ ಪಡೆದಿದ್ದು, ಸ್ಮೋಕ್ಡ್ ಹೆಡ್‌ಲ್ಯಾಂಪ್, ಎಲ್‌ಇಡಿ ಡಿಆರ್‌ಎಸ್, 16-ಇಂಚಿನ ಅಲಾಯ್ ವೀಲ್ಹ್, ಬ್ಯಾಕ್ ನೆಕ್ಡ್ ಗ್ರಿಲ್‌ನೊಂದಿಗೆ ಸಾಮಾನ್ಯ ಕಾರಿಗಿಂತ ವಿಭಿನ್ನವಾಗರಲಿದೆ.

MOST READ: ವಾಹನ ಚಾಲಕರೇ ಇತ್ತ ಗಮನಿಸಿ - ಅಕ್ಟೋಬರ್ 1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಮಾರುತಿ ಸುಜುಕಿ ಎರ್ಟಿಗಾ ಜಿಟಿ ಸ್ಪೋರ್ಟಿ ಕಾರು ಹೇಗಿರಲಿದೆ ಗೊತ್ತಾ?

ಹೀಗಾಗಿ ಭಾರತದಲ್ಲಿ ಬಿಡುಗಡೆಗಾಗಿ ಎದುರು ನೋಡುತ್ತಿರುವ 1.5-ಲೀಟರ್ ಡೀಸೆಲ್ ಎಂಜಿನ್ 6 ಸೀಟರ್ ಮಾದಿರಿಗೂ ಮತ್ತು ಇಂಡೋನೇಷ್ಯಾದಲ್ಲಿ ಬಿಡುಗಡೆಯಾಗುತ್ತಿರುವ ಸೋರ್ಟಿ ವರ್ಷನ್ ಜಿಟಿ ಆವೃತ್ತಿಗೂ ಸಾಕಷ್ಟು ಸಾಮ್ಯತೆಗಳಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಎರ್ಟಿಗಾ ಹೊಸ ಸ್ಪೋರ್ಟಿ ಆವೃತ್ತಿಯ ಬಗ್ಗೆ ಮಾರುತಿ ಸುಜುಕಿ ಸಂಸ್ಥೆಯೇ ಗೊಂದಲಕ್ಕೆ ತೆರೆ ಎಳೆಯಲಿದೆ.

Most Read Articles

Kannada
English summary
Maruti Suzuki Ertiga GT Images Leaked: Sporty Variant Of The Ertiga Coming Soon. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X