ವರ್ಷಾಂತ್ಯದಲ್ಲಿ ಮಾರುತಿ ಸುಜುಕಿ ಎರ್ಟಿಗಾ ಸ್ಪೋರ್ಟ್ ಬಿಡುಗಡೆ ಪಕ್ಕಾ..!

ಮಾರುತಿ ಸುಜುಕಿ ನಿರ್ಮಾಣದ ಎರ್ಟಿಗಾ ಫೇಸ್‌ಲಿಫ್ಟ್ ಆವೃತ್ತಿಯುಈಗಾಗಲೇ ಬಿಡುಗಡೆಗೊಂಡು ಮಾರುಕಟ್ಟೆಯಲ್ಲಿ ಮಹೀಂದ್ರಾ ಮರಾಜೊ ಕಾರುಗಳಿಗೆ ತೀವ್ರ ಪೈಪೋಟಿ ನೀಡುತ್ತಿದೆ. ಈ ನಿಟ್ಟಿನಲ್ಲಿ ಮಾರುತಿ ಸುಜುಕಿ ಸಂಸ್ಥೆಯು ಎರ್ಟಿಗಾ ಎಂಪಿವಿ ಕಾರಿನ ಸ್ಪೋರ್ಟ್ ಆವೃತ್ತಿಯನ್ನು ಬಿಡುಗಡೆ ಮಾಡುವ ಇರಾದೆಯಲ್ಲಿದ್ದು, ಹೊಸ ಕಾರಿನ ಬಿಡುಗಡೆ ಮಾಹಿತಿಯನ್ನು ಹೊರಹಾಕಿದೆ.

ವರ್ಷಾಂತ್ಯದಲ್ಲಿ ಮಾರುತಿ ಸುಜುಕಿ ಎರ್ಟಿಗಾ ಸ್ಪೋರ್ಟ್ ಬಿಡುಗಡೆ ಪಕ್ಕಾ..!

ಹೌದು, ಈಗಾಗಲೇ ಸುಜುಕಿ ಸಂಸ್ಥೆಯು ಎರ್ಟಿಗಾ ಸ್ಪೋರ್ಟ್ ಆವೃತ್ತಿಯನ್ನು ಭಾರತದಲ್ಲಿ ಹೊರತುಪಡಿಸಿ ರಾಷ್ಟ್ರಗಳಲ್ಲಿ ಮಾರಾಟ ಮಾಡಲಾಗುತ್ತಿದ್ದು, ಕಳೆದ ಆಗಸ್ಟ್ 2018ರಲ್ಲಿ ಇಂಡೋನೇಷ್ಯಾದಲ್ಲಿ ಮೊದಲ ಬಾರಿಗೆ ಹೊಸ ಸ್ಪೋರ್ಟ್ ಆವೃತ್ತಿಯನ್ನು ಅನಾವರಣ ಮಾಡಲಾಗಿತ್ತು. ಸದ್ಯ ಪರ್ಫಾಮೆನ್ಸ್ ಪ್ರಿಯರ ಆಕರ್ಷಣೆ ಕಾರಣವಾಗಿರುವ ಹೊಸ ಕಾರು ಮಾರಾಟದಲ್ಲಿ ಹೊಸ ದಾಖಲೆ ಮಾಡುತ್ತಿದ್ದು, ಭಾರತದಲ್ಲೂ ಸ್ಪೋರ್ಟ್ ಕಾರ್ ಪ್ರಿಯರನ್ನು ರಂಜಿಸುವ ನೀರಿಕ್ಷೆಯಲ್ಲಿದೆ.

ಮಾಹಿತಿಗಳ ಪ್ರಕಾರ, ಮಾರುತಿ ಸುಜುಕಿ ಸಂಸ್ಥೆಯು ಮುಂಬರುವ ದೀಪಾವಳಿ ಹೊತ್ತಿಗೆ ಫ್ಯೂಚರ್ ಎಸ್ ಕಾನ್ಸೆಪ್ಟ್ ಆವೃತ್ತಿಯನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ತದನಂತರವಷ್ಟೇ ವಿಟಾರಾ ಬ್ರೆಝಾ ಪೆಟ್ರೋಲ್ ವರ್ಷನ್ ಮತ್ತು ಎರ್ಟಿಗಾ ಸ್ಪೋರ್ಟ್ ವರ್ಷನ್‌ಗಳನ್ನು ಬಿಡುಗಡೆ ಮಾಡಲಿದೆ ಎನ್ನಲಾಗಿದೆ.

ವರ್ಷಾಂತ್ಯದಲ್ಲಿ ಮಾರುತಿ ಸುಜುಕಿ ಎರ್ಟಿಗಾ ಸ್ಪೋರ್ಟ್ ಬಿಡುಗಡೆ ಪಕ್ಕಾ..!

ಇದಕ್ಕೆ ಪೂರಕ ಎನ್ನುವಂತೆ ಭಾರತದಲ್ಲಿ ಈಗಾಗಲೇ ಸ್ಪೋರ್ಟಿ ವರ್ಷನ್ ಎರ್ಟಿಗಾ ಕಾರುಗಳನ್ನು ಸ್ಪಾಟ್ ಟೆಸ್ಟಿಂಗ್ ನಡೆಸಲಾಗುತ್ತಿದ್ದು, ಸ್ಮೋಕ್ಡ್ ಹೆಡ್‌ಲ್ಯಾಂಪ್, ಎಲ್‌ಇಡಿ ಡಿಆರ್‌ಎಸ್, 17-ಇಂಚಿನ ಅಲಾಯ್ ವೀಲ್ಹ್, ಬ್ಯಾಕ್ ನೆಕ್ಡ್ ಗ್ರಿಲ್‌ನೊಂದಿಗೆ ಸಾಮಾನ್ಯ ಕಾರಿಗಿಂತ ವಿಭಿನ್ನವಾಗಿರುವುದು ಸ್ಪಾಟ್ ಟೆಸ್ಟಿಂಗ್‌ನಲ್ಲಿ ಬಹಿರಂಗವಾಗಿದೆ.

ವರ್ಷಾಂತ್ಯದಲ್ಲಿ ಮಾರುತಿ ಸುಜುಕಿ ಎರ್ಟಿಗಾ ಸ್ಪೋರ್ಟ್ ಬಿಡುಗಡೆ ಪಕ್ಕಾ..!

ಮತ್ತೊಂದು ಗಮನಿಸಬೇಕಾದ ಮುಖ್ಯವಾದ ವಿಚಾರ ಅಂದ್ರೆ, ಹೊರ ವಿನ್ಯಾಸಗಳಲ್ಲಿ ಮಾತ್ರವೇ ಸ್ಪೋರ್ಟಿ ಲುಕ್ ಪಡೆದಿರುವ ಎರ್ಟಿಗಾ ಸ್ಪೋರ್ಟ್ ಕಾರುಗಳು ತಾಂತ್ರಿಕವಾಗಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎನ್ನಲಾಗಿದ್ದು, ಸದ್ಯ ಲಭ್ಯವಿರುವ ಪ್ರೀಮಿಯಂ ಸೌಲಭ್ಯಗಳ ಜೊತೆಗೆ ಹೊರ ಭಾಗದಲ್ಲಿ ಐಷಾರಾಮಿ ಕಾರುಗಳ ಮಾದರಿಯಲ್ಲಿ ಸೌಲಭ್ಯಗಳನ್ನು ಜೋಡಿಸಲಾಗಿದೆಯೆಂತೆ.

ವರ್ಷಾಂತ್ಯದಲ್ಲಿ ಮಾರುತಿ ಸುಜುಕಿ ಎರ್ಟಿಗಾ ಸ್ಪೋರ್ಟ್ ಬಿಡುಗಡೆ ಪಕ್ಕಾ..!

ಕಳೆದ ಬಾರಿ ನಡೆದ ಇಂಡೋನೇಷ್ಯಾ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಮಾಡಲಾಗಿದ್ದ ಎರ್ಟಿಗಾ ಫೇಸ್‌ಲಿಫ್ಟ್‌ಗೂ ಮತ್ತು ಸ್ಪೋರ್ಟಿ ಎರ್ಟಿಗಾ ಕಾರಿಗಳ ನಡುವಿನ ವಿನ್ಯಾಸಗಳು ಬೇರೆ ಬೇರೆಯಾಗಿದ್ದರೂ ಎಂಜಿನ್ ವೈಶಿಷ್ಟ್ಯತೆ ಒಂದೇ ಆಗಿದ್ದು, ಫೇಸ್‌ಲಿಫ್ಟ್ ವರ್ಷನ್‌ಗಳು ಪ್ರಿಮಿಯಂ ಸೌಲಭ್ಯಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

ಜೊತೆಗೆ ಸ್ಪ್ಲಿಟ್ ಎಲ್ ಶೇಪ್ ಟೈಲ್ ಲೈಟ್ ಕ್ಲಸ್ಟರ್, ಎಲ್ಇಡಿ ಹೈ ಮೌಂಟ್ ಸ್ಟಾಪ್ ಲ್ಯಾಂಪ್, ರೀ ಡಿಸೈನ್ ಟೈಲ್‌ಗೇಟ್ ಮತ್ತು ಬಂಪರ್ ಹೊಂದಿರಲಿವೆ. ಅದೇ ರೀತಿಯಾಗಿ ಕಾರಿನ ಒಳಭಾಗದಲ್ಲಿ ಫ್ಲಕ್ಸ್ ವುಡ್‌ನೊಂದಿಗೆ 6.8-ಇಂಚಿನ ಟಚ್ ಸ್ಟ್ರೀನ್ ಇನ್ಪೋಟೈನ್‌ಮೆಂಟ್, ಲೆದರ್ ವ್ಯಾರ್ಪ್ ಇರುವ ಸ್ಟೀರಿಂಗ್ ಮತ್ತು ನ್ಯೂ ಇನ್ಟ್ರುಮೆಂಟಲ್ ಕ್ಲಸ್ಟರ್ ಪಡೆದಿದೆ.

ವರ್ಷಾಂತ್ಯದಲ್ಲಿ ಮಾರುತಿ ಸುಜುಕಿ ಎರ್ಟಿಗಾ ಸ್ಪೋರ್ಟ್ ಬಿಡುಗಡೆ ಪಕ್ಕಾ..!

ನೆಕ್ಸ್ಟ್ ಜನರೇಷನ್ ವೈಶಿಷ್ಟ್ಯತೆಗಳನ್ನು ಹೊಂದಿರುವ ಹೊಸ ಎರ್ಟಿಗಾದಲ್ಲಿ ಸುರಕ್ಷಾ ಸೌಲಭ್ಯಗಳಿಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಪ್ರೋಗ್ರಾಂ, ಎಬಿಎಸ್, ಇಬಿಡಿ, ISOFIX ಚೈಲ್ಡ್ ಸೀಟ್ ಮೌಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್ ಸೇರಿಸಲಾಗಿದೆ.

ವರ್ಷಾಂತ್ಯದಲ್ಲಿ ಮಾರುತಿ ಸುಜುಕಿ ಎರ್ಟಿಗಾ ಸ್ಪೋರ್ಟ್ ಬಿಡುಗಡೆ ಪಕ್ಕಾ..!

ಸದ್ಯ ಮಾರಾಟವಾಗುತ್ತಿರುವ ಹೊಸ ಮಾರುತಿ ಎರ್ಟಿಗಾ ಎಮ್‍‍ಪಿವಿ ಫೇಸ್‌ಲಿಫ್ಟ್ ಕಾರುಗಳು 1.5 ಲೀಟರ್ ಕೆ15ಬಿ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಸಹಾಯದಿಂದ 105-ಬಿಹೆಚ್‍‍ಪಿ ಮತ್ತು 98-ಬಿಎಚ್‌ಪಿ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಪ್ರತಿ ಲೀಟರ್ ಡೀಸೆಲ್‌ಗೆ 24ಕಿ.ಮಿ ನಿಂದ 26 ಕಿ.ಮಿ ಮೈಲೇಜ್ ನೀಡುತ್ತದೆ.

MOST READ: ಕಾರ್ ರೀಪೆರಿಗೆ 3 ಲಕ್ಷ ಕೇಳಿದ್ದ ಡೀಲರ್ಸ್ ಅಸಲಿಯತ್ತು ಬಯಲಾಗಿದ್ದು ಲೋಕಲ್ ಗ್ಯಾರೇಜ್‌ನಲ್ಲಿ..!

ವರ್ಷಾಂತ್ಯದಲ್ಲಿ ಮಾರುತಿ ಸುಜುಕಿ ಎರ್ಟಿಗಾ ಸ್ಪೋರ್ಟ್ ಬಿಡುಗಡೆ ಪಕ್ಕಾ..!

ಇದೀಗ ಮಾರುಕಟ್ಟೆಯಲ್ಲಿ ಅಧಿಕವಾಗುತ್ತಿರುವ ಎಂಪಿವಿ ಕಾರುಗಳ ಬೇಡಿಕೆಯಿಂದಾಗಿ ಮಾರುತಿ ಸುಜುಕಿ ಸಂಸ್ಥೆಯು ತಮ್ಮ ಜನಪ್ರಿಯ ಎರ್ಟಿಗಾ ಕಾರಿನ ಸ್ಪೋರ್ಟ್ ಮಾದರಿಯನ್ನು ಬಿಡುಗಡೆ ಮಾಡುವ ತವಕದಲಿದ್ದು, ಎರ್ಟಿಗಾ ಮತ್ತು ಎರ್ಟಿಗಾ ಫೇಸ್‍ಲಿಫ್ಟ್ ಕಾರುಗಳಂತೆಯೇ ಹೆಚ್ಚಿನ ಜನಪ್ರಿಯತೆಯನ್ನು ಪಡೆಯಲಿದೆಯೇ ಎಂದು ಕಾಯ್ದು ನೋಡಬೇಕಿದೆ.

Source: Moneycontrol

Article Published On: Monday, May 13, 2019, 20:10 [IST]
English summary
According to reports, Maruti suzuki is planning to launch a new top-end variant of the MPV, christened Maruti Suzuki Ertiga Sport by end of this year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+