ಇತಿಹಾಸದ ಪುಟ ಸೇರಿದ ಮಾರುತಿ ಸುಜುಕಿ ಜಿಪ್ಸಿ - ಮಾರಾಟ ಮಾತ್ರವಲ್ಲ ಕಾರಿನ ಉತ್ಪಾದನೆ ಕೂಡಾ ಬಂದ್
ಕೆಲ ದಿನಗಳ ಹಿಂದಷ್ಟೆ ಜನಪ್ರಿಯ ಓಮ್ನಿ ವಾಹನ ಉತ್ಪಾದನೆ ಮತ್ತು ಮಾರಾಟವನ್ನು ಮುಂದಿನ ಕೆಲವೇ ದಿನಗಳಲ್ಲಿ ಬಂದ್ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದ ಮಾರುತಿ ಸುಜುಕಿ ಸಂಸ್ಥೆಯು ಇದೀಗ ಮತ್ತೊಂದು ಆಫ್ ರೋಡ್ ಖ್ಯಾತಿಯ ಜಿಪ್ಸಿ ಕಾರುಗಳಿಗೂ ಗುಡ್ ಬೈ ಹೇಳಿದೆ.

ಹೌದು, ಮಾರುತಿ ಸುಜುಕಿ ಸಂಸ್ಥೆಯು ಕಳೆದ ವರ್ಷ 2018ರ ಡಿಸೆಂಬರ್‌ನಿಂದ ಜಿಪ್ಸಿ ಕಾರುಗಳ ಬುಕ್ಕಿಂಗ್ ಪ್ರಕ್ರಿಯೆಯನ್ನು ಬಂದ್ ಮಾಡಲು ನಿರ್ಧರಿಸಲಾಗಿದ್ದು, ಇದೀಗ ಇನ್ಮುಂದೆ ಜಿಪ್ಸಿ ಕಾರುಗಳ ಉತ್ಪಾದನೆಯನ್ನು ಸಹ ಸ್ಥಗಿತಗೊಳಿಸಿರುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದೆ.

ದೇಶಿಯ ಮಾರುಕಟ್ಟೆಯಲ್ಲಿ ಈ ಹಿಂದೆ 1985ರಲ್ಲಿ ಬಿಡುಗಡೆಗೊಂಡಿದ್ದ ಜಿಪ್ಸಿ ಕಾರುಗಳು ಭಾರೀ ಜನಪ್ರಿಯತೆಯೊಂದಿಗೆ ಆಟೋ ಉದ್ಯಮದಲ್ಲಿ ಇಂದಿಗೂ ಬೇಡಿಕೆಯ ವಾಹನವಾಗಿ ಮಾರಾಟಗೊಳ್ಳುತ್ತಿದ್ದು, ಇತ್ತೀಚೆಗೆ ಆಟೋ ಉದ್ಯಮದಲ್ಲಿ ಬದಲಾಗುತ್ತಿರುವ ಪ್ರಮುಖ ಬೆಳವಣಿಗೆಯಿಂದಾಗಿ ಜಿಪ್ಸಿ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆಗೆ ಕುತ್ತು ಬಂದಿದೆ.

ದೇಶದಲ್ಲಿ ಪ್ರಯಾಣಿಕ ಸುರಕ್ಷತೆಗಾಗಿ ಆಟೋ ಉದ್ಯಮದಲ್ಲಿ ಮಹತ್ವದ ಬದಲಾವಣೆಗಳನ್ನು ತರಲಾಗುತ್ತಿದ್ದು, ಮಾರುತಿ ಸುಜುಕಿ ನಿರ್ಮಾಣದ ಪ್ರಮುಖ ಕಾರುಗಳಲ್ಲಿ ಕನಿಷ್ಠ ಮಟ್ಟದ ಸುರಕ್ಷಾ ಸೌಲಭ್ಯಗಳಿಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ.

ಮಾರುತಿ ಸುಜುಕಿ ಜಿಪ್ಸಿ ಕಾರು ಕೇವಲ ದೇಶಿಯವಾಗಿ ಮಾರ್ತವಲ್ಲದೇ ವಿದೇಶದ ಮಾರುಕಟ್ಟೆಯಲ್ಲಿಯು ಸಹ ಮಾರಾಟವಾಗುತ್ತಿತ್ತು. ವಿದೇಶದ ಮಾರುಕಟ್ಟೆಯಲ್ಲಿ ಸಮುರೈ ಅಥವಾ ಎಸ್‍ಜೆ410 ಎಂದು ಕರೆಯಲ್ಪಡುವ ಜಿಪ್ಸಿ ಕಾರುಗಳು ತಮ್ಮ ಆಫ್ ರೋಡಿಂಗ್ ಕೌಶಲ್ಯದಿಂದಲೇ ಹೆಸರುವಾಸಿಯಾದ ಕಾರನ್ನು ಇಂದಿಗೂ ಸಹ ಹಲವಾರು ರಾಜ್ಯಗಳಲ್ಲಿನ ಶಸ್ತ್ರ ಪಡೆಗಳು ಮತ್ತು ಪೊಲೀಸ್ ಪಡೆಗಳು ಬಳಸುತ್ತಿದ್ದಾರೆ.

ಬಾಹ್ಯವಾಗಿ ಮಾರುತಿ ಸುಜುಕಿ ಸಂಸ್ಥೆಯು ಅನೇಕ ವರ್ಷಗಳ ವರೆಗು ಜಿಪ್ಸಿ ವಿನ್ಯಾಸದಲ್ಲಿ ಮಾರ್ಪಾಡುಗಳನ್ನು ಮಾಡಲಿಲ್ಲವಾದರೂ ಎಸ್‍ಯುವಿ ಪ್ರಿಯರಲ್ಲಿ ಪ್ರತ್ಯೇಕವಾದ ಸ್ಥಾನವನ್ನು ಪಡೆದುಕೊಂಡಿತ್ತು. ಆನಂತರ ಮಾರುತಿ ಸುಜುಕಿ ಸಂಸ್ಥೆಯು ಜಿಪ್ಸಿ ಕಾರಿನ ಎಂಜಿನ್ ಭಾಗವನ್ನು ಮಾತ್ರವೇ ನವೀಕರಣಗೊಳಿಸಿ ಅದಕ್ಕೆ ಜಿಪ್ಸಿ ಕಿಂಗ್ ಎಂದು ಹೆಸರಿಡಲಾಯಿತು.

ಜಿಪ್ಸಿ ಕಾರಿನಲ್ಲಿ ಮೊದಲ ಬಾರಿಗೆ ಮಾರುತಿ 1000 ಸೆಡಾನ್ ಕಾರಿನಿಂದ ಪಡೆದ 970ಸಿಸಿ, 1.0 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದ್ದು, ನಂತರ ಅದನ್ನು 1.3 ಲೀಟರ್ ಏಂಜಿನ್ ಆಗಿ ಅಪ್ಗ್ರೇಡ್ ಮಾಡಲಾಗಿತ್ತು. ಈ 1.3 ಲೀಟರ್ ಪೆಟ್ರೋಲ್ ಎಂಜಿನ್ 80ಬಿಹೆಚ್‍ಪಿ ಮತ್ತು 104ಎನ್ಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿತ್ತು.

ಜಿಪ್ಸಿ ಕಾರಿನ ಮಾರಾಟವನ್ನು ಸ್ಥಗಿತಗೊಳಿಸಲು ಕಾರಣ.?
ದೇಶದಲ್ಲಿ ಪ್ರಯಾಣಿಕ ಸುರಕ್ಷತೆಗಾಗಿ ಆಟೋ ಉದ್ಯಮದಲ್ಲಿ ಮಹತ್ವದ ಬದಲಾವಣೆಗಳನ್ನು ತರಲಾಗುತ್ತಿದ್ದು, ಮಾರುತಿ ಸುಜುಕಿ ನಿರ್ಮಾಣದ ಪ್ರಮುಖ ಕಾರುಗಳಲ್ಲಿ ಕನಿಷ್ಠ ಮಟ್ಟದ ಸುರಕ್ಷಾ ಸೌಲಭ್ಯಗಳಿಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ.

ಕೇಂದ್ರ ಸರ್ಕಾರವು ಮುಂಬರುವ 2019ರಿಂದ ಪ್ರತಿ ಕಾರು ಮಾದರಿಯಲ್ಲೂ ನಿರ್ದಿಷ್ಟ ಮಟ್ಟದ ಸುರಕ್ಷಾ ಸೌಲಭ್ಯಗಳನ್ನು ಹೊಂದಿದ್ದರೇ ಮಾತ್ರವೇ ಕಾರು ಮಾರಾಟಕ್ಕೆ ಅವಕಾಶ ನೀಡುವ ಉದ್ದೇಶದಿಂದ ಇಂಡಿಯನ್ ಕ್ರ್ಯಾಶ್ ಟೆಸ್ಟಿಂಗ್ ಪ್ರಕ್ರಿಯೆಯನ್ನು ಆರಂಭಿಸಿದ್ದು, ಮಾರುತಿ ಸುಜುಕಿಗೆ ಈಗಲೇ ತಳಮಳ ಶುರುವಾಗಿದೆ.

ಕಳೆದ ತಿಂಗಳು ಹಿಂದಷ್ಟೆ ನಡೆದಿದ್ದ ಮಾರುತಿ ಸುಜುಕಿ ನಿರ್ಮಾಣದ 15 ಪ್ರಮುಖ ಕಾರುಗಳು ಈ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಹತ್ತಕ್ಕೂ ಹೆಚ್ಚು ಕಾರು ಉತ್ಪನ್ನಗಳಲ್ಲಿ ಕನಿಷ್ಠ ಮಟ್ಟದ ಸುರಕ್ಷತೆ ಇಲ್ಲದಿರುವುದು ಖರೀದಿಗೆ ಯೋಗ್ಯವಲ್ಲದ ಎಂಬುವುದು ಸಾಬೀತಾಗಿದೆ.

ಕಳೆದ ತಿಂಗಳು ಹಿಂದಷ್ಟೆ ನಡೆದಿದ್ದ ಮಾರುತಿ ಸುಜುಕಿ ನಿರ್ಮಾಣದ 15 ಪ್ರಮುಖ ಕಾರುಗಳು ಈ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಹತ್ತಕ್ಕೂ ಹೆಚ್ಚು ಕಾರು ಉತ್ಪನ್ನಗಳಲ್ಲಿ ಕನಿಷ್ಠ ಮಟ್ಟದ ಸುರಕ್ಷತೆ ಇಲ್ಲದಿರುವುದು ಖರೀದಿಗೆ ಯೋಗ್ಯವಲ್ಲದ ಎಂಬುವುದು ಸಾಬೀತಾಗಿದೆ.

ವಾಸ್ತಾವವಾಗಿ ಸೊನ್ನೆ ರೇಟಿಂಗ್ ಹೊಂದಿರುವ ಕಾರುಗಳನ್ನು ಮಾರಾಟ ಮಾಡಲು ವಿದೇಶಿ ಮಾರುಕಟ್ಟೆಗಳಲ್ಲಿ ಅನುಮತಿಯೇ ಇಲ್ಲದಿರುವ ಸಂದರ್ಭದಲ್ಲಿ ಮಾರುತಿ ಸುಜುಕಿ ಸಂಸ್ಥೆಯು ಮಾತ್ರ ಭಾರತೀಯ ಮಾರುಕಟ್ಟೆಯಲ್ಲಿ ಆಲ್ಟೊ, ವ್ಯಾಗನ್ ಆರ್, ಓಮ್ನಿ ಮತ್ತು ಜಿಪ್ಸಿ ಕಾರುಗಳನ್ನ ಹಾಟ್ ಚಿಪ್ಸ್‌ನಂತೆ ಮಾರಾಟ ಮಾಡುತ್ತಿರುವುದು ಕಳವಳಕಾರಿ ಸಂಗತಿ ಅಂದ್ರೆ ತಪ್ಪಾಗುದಿಲ್ಲ.

ಕನಿಷ್ಠ ಮಟ್ಟದ ಸುರಕ್ಷೆತೆಯನ್ನು ನೀಡಲು ಹಿಂದೆ ಮುಂದೆ ನೋಡುವ ಮಾರುತಿ ಸುಜುಕಿಗೆ ಇದೀಗ ಸಂಕಷ್ಟ ಎದುರಾಗಿದ್ದು, 2019ರಿಂದ ಜಾರಿಗೆ ಬರಲಿರುವ ಹೊಸ ಕಾಯ್ದೆಯಿಂದ ಸೊನ್ನೆ ರೇಟಿಂಗ್ ಪಡೆದಿರುವ ಕಾರುಗಳು ಮೂಲೆಗುಂಪಾಬೇಕಾದ ಅನಿವಾರ್ಯತೆಗಳಿವೆ.

ಇಲ್ಲವಾದ್ರೆ, ಗುಣಮಟ್ಟದ ಸುರಕ್ಷಾ ಸೌಲಭ್ಯಗಳನ್ನು ಅಳವಡಿಸಿದ ನಂತರವೇ ಮಾರಾಟ ಮಾಡಬಹುದಾದ ಅವಕಾಶವಿದ್ದು, ಇದುವರೆಗೆ ಆಲ್ಟೊ, ವ್ಯಾಗನ್ ಆರ್, ಒಮ್ನಿ, ಇಕೊ ಖರೀದಿ ಮಾಡಿರುವ ಗ್ರಾಹಕರ ಪರಿಸ್ಥಿತಿ ಉಹಿಸಲು ಅಸಾಧ್ಯ.
MOST READ: ತುಕ್ಕು ಹಿಡಿದಿದ್ದ ಅಂಬಾಸಿಡರ್ ಕಾರು ಹೇಗೆ ಐಷಾರಾಮಿ ಕಾರಾಗಿ ಪರಿವರ್ತನೆಯಾಗಿದೆ ನೀವೆ ನೋಡಿ...

ಹೀಗಾಗಿಯೇ ಜಿಪ್ಸಿ ವಾಹನಗಳಿಗೆ ಗುಡ್‌ಬೈ ಹೇಳಲು ನಿರ್ಧರಿಸುವ ಮಾರುತಿ ಸುಜುಕಿ ಸಂಸ್ಥೆಯು ಇನ್ನುಳಿದ ಕಾರು ಮಾದರಿಗಳಲ್ಲಿ ಹೆಚ್ಚಿನ ಗುಟ್ಟಮಟ್ಟ ಒದಗಿಸುವತ್ತ ಚಿಂತನೆ ನಡೆಸಿದ್ದು, ಇನ್ಮುಂದೆ ಜಿಪ್ಸಿ ಕಾರುಗಳು ಇತಿಹಾಸದ ಪುಟ ಸೇರಿದೆ.
Source: Team bhp


Click it and Unblock the Notifications








