ಈ ಕಾರಣಕ್ಕೆ ಭಾರತದಲ್ಲಿ ಬಿಡುಗಡೆಯಾಗುತ್ತಿಲ್ಲ ಜಿಮ್ನಿ
ಜನಪ್ರಿಯ ವಾಹನ ಉತ್ಪಾದನಾ ಸಂಸ್ಥೆಯಾದ ಮಾರುತಿ ಸುಜುಕಿ ದೇಶಿಯ ಮಾರುಕಟ್ಟೆಯಲ್ಲೊ ಜಿಮ್ನಿ ಎಸ್‍ಯುವಿಯನ್ನು ಬಿಡುಗಡೆ ಮಾಡುವುದಿಲ್ಲ ಎಂದು ಖಚಿತಪಡಿಸಿದೆ. ಅದು ಯಾಕೆ ಅಂದರೆ ಜಿಮ್ನಿ ಎಂದು ಮರುನಾಮಕರಣಗೊಂಡ ಎರಡನೇ ತಲೆಮಾರಿನ ಜಿಪ್ಸಿ 3 ಡೋರ್ ಹೊಂದಿರುವ ಮಾದರಿಯಾಗಿದ್ದು, ಇದು ಭಾರತೀಯ ಮಾರುಕಟ್ಟೆಗೆ ಸೂಕ್ತವಲ್ಲ ಎಂದು ಕಂಪನಿ ನಿರ್ಧರಿಸಿದೆ.

ಆಟೊಕಾರ್ ಪ್ರೊಫೆಷನಲ್ ಇಂಡಿಯಾ ಪ್ರಕಾರ, ಆದರೇ ದೇಶಿಯ ಮಾರುಕಟ್ಟೆಯಲ್ಲಿ 3 ಡೋರ್ ಎಸ್‍ಯುವಿ ಕಾರುಗಳ ಸರಣಿಯಲ್ಲಿ ಬೇಡಿಕೆಯು ಮತ್ತು ಮಾರಾಟವು ಕಡಿಮೆ ಆಗುತ್ತಿರುವ ಕಾರಣ ಸುಜುಕಿ ಸಂಸ್ಥೆಯು ಜಿಮ್ನಿ ಕಾರನ್ನು ಬಿಡುಗಡೆಗೊಳಿಸಲು ನಿರಾಕರಿಸಿದೆ. ಜಿಮ್ನಿಯು 5 ಡೋರ್ ಎಸ್‍ಯುವಿಯನ್ನು ಸಿದ್ದಪಡಿಸಬಹುದು ಅಂತಹ ವಾಹನಗಳ ಬೇಡಿಕೆಗೆ ಹೋಲಿಸಿದರೆ ಉತ್ಪಾದನೆ ವೆಚ್ಚ ಹೆಚ್ಚು ಬೇಕಾಗುತ್ತದೆ.

ಸುಜುಕಿ ಜಿಮ್ನಿ ಪ್ರಸ್ತುತ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಳಸಿಕೊಂಡಿದೆ. ಜಿಮ್ನಿ ಆಪ್-ರೋಡ್ ಎಸ್‍ಯುವಿ ಎರಡು ರೀತಿಯ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಅವುಗಳಲ್ಲಿ ಜಪಾನ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಜಿಮ್ನಿ 660ಸಿಸಿ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಎಂಜಿನ್‍ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು 4-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಒದಗಿಸಲಾಗಿದೆ. ಮತ್ತೊಂದು ಎಂಜಿನ್ ಆಯ್ಕೆಯಲ್ಲಿ 1.5 ಲೀಟರ್ 4-ಸಿಲಿಂಡರ್ ಕೆ-ಸೀರೀಸ್ ಪೆಟ್ರೋಲ್ ಎಂಜಿನ್ ಹೊಂದಿದೆ.

ಅಫ್-ರೋಡರ್‍ನಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‍ಬಾಕ್ಸ್ ಅಥವಾ ಇನ್ನೊಂದು ಆಯ್ಕೆಯಾಗಿ 4-ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಯುನಿಟ್ ಹೊಂದಿದೆ. 4x4 ಡ್ರೈವ್ ಟೆಕ್ನಾಲಜಿ ಅಳವಡಿಕೆ ಹೊಂದಿರುವ ಜಿಮ್ನಿ ಕಾರುಗಳು ವಿದೇಶದ ಮಾರುಕಟ್ಟೆಯಲ್ಲಿ ಪ್ರಮುಖವಾಗಿ ಎರಡು ವೆರಿಯೆಂಟ್‌ಗಳಲ್ಲಿ ಲಭ್ಯವಿದೆ.

ಜಿಮ್ನಿ ಕಾರುಗಳಲ್ಲಿ ಮಾರ್ಡನ್ ಲುಕ್‌ನೊಂದಿಗೆ ಸ್ಮಾರ್ಟ್ ಕನೆಕ್ಟಿವಿಗಳ ಸೌಲಭ್ಯವಿದ್ದು, 7-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೊಲರ್, ಪುಶ್ ಬಟನ್ ಸ್ಮಾರ್ಟ್, ಆಟೋ ಎಲ್‍ಇಡಿ ಹೆಡ್‌ಲ್ಯಾಂಪ್, ಕ್ರೂಸ್ ಕಂಟ್ರೋಲರ್ ಮತ್ತು ಸ್ಟಿರಿಂಗ್ ಮೌಟೆಂಡ್ ಕಂಟ್ರೋಲ್ ಅಳವಡಿಸಲಾಗಿದೆ.

ಮಾರುತಿ ಸುಜುಕಿ ಜಿಮ್ನಿಯಲ್ಲಿ ಸುರಕ್ಷತಾ ಕ್ರಮವಾಗಿ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ(ಇಎಸ್ಪಿ), ಟ್ರಾಕ್ಷನ್ ಕಂಟ್ರೋಲ್(ಟಿಸಿ), ಹಿಲ್ ಹೋಲ್ಡ್, ಹಿಲ್ ಡಿಸೆಂಟ್ ಕಂಟ್ರೋಲ್ ಹೊಂದಿದ್ದು, ಇನ್ನೂ ಪ್ರಯಾಣಿಕರ ಸುರಕ್ಷತೆಗೆ 6-ಏರ್‍ಬ್ಯಾಗ್‍ಗಳನ್ನು ಅಳವಡಿಸಿದ್ದಾರೆ. ಮಾರುತಿ ಸುಜುಕಿ ಜಿಮ್ನಿ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿದ್ದರೆ ಜಿಪ್ಸಿ ಎಸ್‍ಯುವಿ ಕಾರಿನ ಉತ್ತರಾಧಿಕಾರಿಯಾಗುತ್ತಿತ್ತು.

ನ್ಯೂಯಾರ್ಕ್ ಇಂಟರ್ನ್ಯಾಷನಲ್ ಆಟೋಶೋನಲ್ಲಿ ಸುಜುಕಿ ಜಿಮ್ನಿಗೆ 2019 ರ ವಿಶ್ವ ಅರ್ಬನ್ ಕಾರ್ ಪ್ರಶಸ್ತಿ ಲಭಿಸಿದೆ. ಹ್ಯುಂಡೈ ಸ್ಯಾಂಟ್ರೊ, ಮತ್ತು ಕಿಯಾ ಸೋಲ್ ಸೇರಿದಂತೆ ವಿಭಾಗಕ್ಕೆ ಶಾರ್ಟ್‌ಲಿಸ್ಟ್ ಮಾಡಲಾದ ಇತರ ವಾಹನಗಳನ್ನು ಓವರ್ ಟೇಕ್ ಮಾಡಿ ಪ್ರಶಸ್ತಿಯನ್ನು ತನ್ನದಾಗಿಸಿತ್ತು.
MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಪ್ರಸ್ತುತ ಮಾರುತಿ ಕಂಪನಿಯು ಪೆಟ್ರೋಲ್ ಚಾಲಿತ ಮಾದರಿಗಳಿಗೆ ಪರ್ಯಾಯವಾಗಿ ತಮ್ಮ ಸಿಎನ್‍ಜಿ ಶ್ರೇಣಿಯನ್ನು ಹೆಚ್ಚಿಸುವುದಕ್ಕೆ ಗಮನಹರಿಸುತ್ತಿದೆ. ಕಂಪನಿಯು ಪ್ರಸ್ತುತ ಸಿಎನ್‍ಜಿ ಶ್ರೇಣೆಯಡಿಯಲ್ಲಿ 7 ಮಾದರಿಗಳನ್ನು ಹೊಂದಿದೆ. ಮಾರುತಿಯ ಜನಪ್ರಿಯ ಕಾರುಗಳಲ್ಲಿ ಒಂದಾದ ವಿಟಾರಾ ಬ್ರೆಝಾವನ್ನು ಬಿಎಸ್-6 ಪ್ರೇರಿತ ಪೆಟ್ರೋಲ್ ಎಂಜಿನ್‍ಗೆ ಅಪ್‍ಡೇಟ್ ಮಾಡಲು ಪ್ರಾರಂಭಿಸಿದೆ ಎಂದು ಕಂಪನಿ ಹೇಳಿದೆ. ಈ ಕಾರನ್ನು ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆ.
MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಜಿಪ್ಸಿ ಎಂದು ಕರೆಯಲ್ಪಡುವ ಜಿಮ್ನಿಯ ಹಳೆಯ ತಲೆಮಾರಿನ ಎಸ್‍ಯುವಿ ಭಾರತದಲ್ಲಿ ಪಾರುಪತ್ಯ ಮೆರೆದ ವಾಹನವಾಗಿದೆ. ಆಫ್ ರೋಡ್ ಪ್ರಿಯರ ಮೆಚ್ಚಿನ ವಾಹನವಾಗಿದೆ. ಆಫ್ ರೋಡ್ ಸಾಹಿಸಿಗಳಿಗೆ ಹೇಳಿ ಮಾಡಿಸಿದಂತೆ ಈ ವಾಹನ ವಿತ್ತು, ಆದರೆ ಬಹುನಿರೀಕ್ಷೆಯಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಇದು ಅಘಾತಕಾರಿ ಸುದ್ದಿಯಾಗಿದೆ. ಆಫ್-ರೋಡ್ ಪ್ರಿಯರಿಗೆ ಈಗ ಇರುವ ಏಕೈಕ ಆಯ್ಕೆಯಂದರೆ ಮಹೀಂದ್ರಾ ಥಾರ್ ಮತ್ತು ಫೋರ್ಸ್ ಗುರ್ಖಾದ 2020ರ ಆವೃತ್ತಿಗಳನ್ನು ಆಯ್ಕೆ ಮಾಡುವುದು.


Click it and Unblock the Notifications