ಶಾಕಿಂಗ್ ನ್ಯೂಸ್: ಮಾರುತಿ ಸುಜುಕಿಯಿಂದ ಮತ್ತೆ 3 ಸಾವಿರ ಉದ್ಯೋಗ ಕಡಿತ

ಭಾರತೀಯ ಆಟೋ ಉದ್ಯಮದವು ಭಾರೀ ಪ್ರಮಾಣದ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದು, ಉತ್ಪಾದನಾ ವಲಯದಲ್ಲಿ ಮತ್ತೆ ನಿರುದ್ಯೋಗ ಸಮಸ್ಯೆ ತಲೆದೊರಿದೆ. ಇದರಲ್ಲಿ ದೇಶದ ನಂ.1 ಕಾರು ಉತ್ಪಾದನಾ ಸಂಸ್ಥೆಯಾದ ಮಾರುತಿ ಸುಜುಕಿ ಕೂಡಾ ತೀವ್ರ ಹಿನ್ನಡೆ ಅನುಭವಿಸುತ್ತಿದ್ದು, ಅರೆಕಾಲಿಕ ಉದ್ಯೋಗಿಗಳ ಪ್ರಮಾಣವನ್ನು ಕಡಿತಗೊಳಿಸಿದೆ.

ಶಾಕಿಂಗ್ ನ್ಯೂಸ್: ಮಾರುತಿ ಸುಜುಕಿಯಿಂದ ಮತ್ತೆ 3 ಸಾವಿರ ಉದ್ಯೋಗ ಕಡಿತ

ಮಾರುತಿ ಸುಜುಕಿ ಸಂಸ್ಥೆಯು ಈಗಾಗಲೇ ಕಾರು ಉತ್ಪಾದನಾ ಪ್ರಮಾಣದಲ್ಲಿ ಸಾಕಷ್ಟು ಕಡಿತಗೊಳಿಸಿರುವುದಲ್ಲದೇ ಮೂರು ಶಿಫ್ಟ್ ಬದಲಾಗಿ ಕೇವಲ ಒಂದು ಶಿಫ್ಟ್‌ನಲ್ಲಿ ಮಾತ್ರವೇ ಕಾರುಗಳ ಉತ್ಪಾದನೆ ಮಾಡುತ್ತಿದ್ದು, ಆರ್ಥಿಕವಾಗಿ ಹೊರೆಯಾಗಿರುವ ಸ್ಟಾಕ್ ಪ್ರಮಾಣವನ್ನು ಕರಗಿಸಲು ಕೆಲವು ಕಠಿಣಕ್ರಮಗಳನ್ನು ಕೈಗೊಂಡಿದೆ. ಇದರಿಂದ ಅರೆಕಾಲಿಕ ಉದ್ಯೋಗಿಗಳ ಪ್ರಮಾಣದಲ್ಲಿ 3 ಸಾವಿರ ಉದ್ಯೋಗಿಗಳನ್ನು ತೆಗೆದುಹಾಕಿರುವ ಬಗ್ಗೆ ಅಧಿಕೃತವಾಗಿಯೇ ಘೋಷಣೆ ಮಾಡಿದ್ದು, ನಿರುದ್ಯೋಗ ಸಮಸ್ಯೆ ಮತ್ತಷ್ಟು ಹೆಚ್ಚಳವಾಗುವ ಮುನ್ಸೂಚನೆ ನೀಡಿದೆ.

ಶಾಕಿಂಗ್ ನ್ಯೂಸ್: ಮಾರುತಿ ಸುಜುಕಿಯಿಂದ ಮತ್ತೆ 3 ಸಾವಿರ ಉದ್ಯೋಗ ಕಡಿತ

ಸದ್ಯ ಮಾರುಕಟ್ಟೆಯಲ್ಲಿ ಹೊಸ ವಾಹನಗಳ ಮಾರಾಟ ಪ್ರಮಾಣವು ದಿನದಿಂದ ದಿನಕ್ಕೆ ಕುಸಿಯುತ್ತಲೇ ಇದ್ದು, ಬಹುತೇಕ ಆಟೋ ಕಂಪನಿಗಳು ಕನಿಷ್ಠ ಪ್ರಮಾಣದ ವಾಹನಗಳ ಮಾರಾಟ ಮಾಡಲು ಕೂಡಾ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.

ಶಾಕಿಂಗ್ ನ್ಯೂಸ್: ಮಾರುತಿ ಸುಜುಕಿಯಿಂದ ಮತ್ತೆ 3 ಸಾವಿರ ಉದ್ಯೋಗ ಕಡಿತ

ಆಟೋ ಉದ್ಯಮದಲ್ಲಿನ ಕೆಲವು ಮಹತ್ವದ ಬದಲಾವಣೆಯಿಂದಾಗಿ ಹೊಸ ವಾಹನಗಳ ಮಾರಾಟ ಪ್ರಮಾಣವು ಮಂದಗತಿಯಲ್ಲಿ ಸಾಗಿದ್ದು, ಬಹುತೇಕ ಆಟೋ ಉತ್ಪಾದನಾ ಕಂಪನಿಗಳು ಹೊಸ ವಾಹನಗಳ ಮಾರಾಟದಲ್ಲಿ ಹಿನ್ನಡೆ ಅನುಭವಿಸಿವೆ.

ಶಾಕಿಂಗ್ ನ್ಯೂಸ್: ಮಾರುತಿ ಸುಜುಕಿಯಿಂದ ಮತ್ತೆ 3 ಸಾವಿರ ಉದ್ಯೋಗ ಕಡಿತ

ಹೆಚ್ಚುತ್ತಿರುವ ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್ ವಾಹನಗಳ ಸಂಖ್ಯೆಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರವು ಕೆಲವು ಕಠಿಣ ಕ್ರಮಗಳನ್ನು ಜಾರಿಗೆ ತರುತ್ತಿದ್ದು, ಎಲೆಕ್ಟ್ರಿಕ್ ವಾಹನಗಳ ಮೇಲಿನ ಜಿಎಸ್‌ಟಿ ತಗ್ಗಿಸಿ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಮೇಲಿನ ಜಿಎಸ್‌ಟಿ ಹೆಚ್ಚಿರುವುದು ಹೊಸ ವಾಹನ ಮಾರಾಟದ ಮೇಲೆ ಪ್ರತಿಕೂಲಕರ ಪರಿಣಾಮ ಬೀರಿದೆ. ಇದರಿಂದ ಕಳೆದ 19 ವರ್ಷಗಳ ಅವಧಿಯಲ್ಲೇ ಮೊದಲ ಬಾರಿಗೆ ಆಟೋ ಉತ್ಪಾದನಾ ವಲಯವು ಭಾರೀ ಪ್ರಮಾಣದ ಹಿನ್ನಡೆ ಅನುಭವಿಸಿದ್ದು, ಹೊಸ ಕಾರುಗಳ ಉತ್ಪಾದನೆಯಲ್ಲಿ ತಾತ್ಕಲಿಕವಾಗಿ ಬಂದ್ ಮಾಡಲಾಗುತ್ತಿದೆ.

ಶಾಕಿಂಗ್ ನ್ಯೂಸ್: ಮಾರುತಿ ಸುಜುಕಿಯಿಂದ ಮತ್ತೆ 3 ಸಾವಿರ ಉದ್ಯೋಗ ಕಡಿತ

ಆಟೋ ಉತ್ಪಾದನಾ ನಿಯಮಾವಳಿಗಳಲ್ಲಿ ನಿರಂತರ ಬದಲಾವಣೆ ಮತ್ತು ಇಂಧನ ಆಧರಿತ ವಾಹನಗಳ ನೋಂದಣಿಯ ಮೇಲೆ ಗರಿಷ್ಠ ಪ್ರಮಾಣದ ಜಿಎಸ್‌ಟಿ ಶುಲ್ಕ ವಿಧಿಸುತ್ತಿರುವುದು ದೇಶಿಯ ಆಟೋ ಮಾರುಕಟ್ಟೆಯಲ್ಲಿ ಪ್ರತಿಕೂಲಕರ ವಾತಾವರಣ ಸೃಷ್ಠಿಯಾಗಿದೆ.

ಶಾಕಿಂಗ್ ನ್ಯೂಸ್: ಮಾರುತಿ ಸುಜುಕಿಯಿಂದ ಮತ್ತೆ 3 ಸಾವಿರ ಉದ್ಯೋಗ ಕಡಿತ

ತಿಂಗಳ ಹಿಂದಷ್ಟೇ ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್ ವಾಹನಗಳ ಮೇಲೆ ಶೇ.18ರಷ್ಟಿದ್ದ ಜಿಎಸ್‌ಟಿ ಪ್ರಮಾಣವನ್ನು ಶೇ.28ಕ್ಕೆ ಏರಿಕೆ ಮಾಡಲಾಗಿದ್ದು, ಹೊಸ ವಾಹನಗಳ ಬೆಲೆಯು ಸತತ ಏರಿಕೆಯಿಂದಾಗಿ ಮಾರಾಟ ಪ್ರಮಾಣವು ಕೂಡಾ ಅಷ್ಟೇ ವೇಗದಲ್ಲಿ ಕುಸಿತ ಕಾಣುತ್ತಿದೆ.

MOST READ: ಕಾರು ಖರೀದಿಗೆ ಇದು ಸುವರ್ಣಾವಕಾಶ- ರೂ.4 ಲಕ್ಷದ ತನಕ ಡಿಸ್ಕೌಂಟ್ ಘೋಷಿಸಿದ ಹೋಂಡಾ

ಶಾಕಿಂಗ್ ನ್ಯೂಸ್: ಮಾರುತಿ ಸುಜುಕಿಯಿಂದ ಮತ್ತೆ 3 ಸಾವಿರ ಉದ್ಯೋಗ ಕಡಿತ

ಜೊತೆಗೆ ಸಾಂಪ್ರಾದಾಯಿಕ ವಾಹನಗಳ ಮೇಲಿನ ಜಿಎಸ್‌ಟಿ ಹೆಚ್ಚಳದಿಂದ ಹೊಸ ವಾಹನ ಮಾರಾಟದ ಮೇಲೆ ಅಷ್ಟೇ ಅಲ್ಲದೇ ಆಟೋ ಉದ್ಯಮವನ್ನೇ ನೆಚ್ಚಿಕೊಂಡಿರುವ ಲಕ್ಷಾಂತರ ಸಣ್ಣ ಉದ್ಯಮಗಳ ಮೇಲೂ ಇದು ಪರಿಣಾಮ ಬೀರುತ್ತಿದೆ.

MOST READ: ಬೈಕ್ ಖರೀದಿದಾರರೇ ಎಚ್ಚರ- ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಜಾವಾ ಡೀಲರ್ಸ್

ಶಾಕಿಂಗ್ ನ್ಯೂಸ್: ಮಾರುತಿ ಸುಜುಕಿಯಿಂದ ಮತ್ತೆ 3 ಸಾವಿರ ಉದ್ಯೋಗ ಕಡಿತ

ಹೊಸ ವಾಹನಗಳ ಮಾರಾಟ ಪ್ರಮಾಣವು 2019ರ ಆರಂಭದಿಂದಲೇ ಕುಸಿತ ಕಾಣುತ್ತಿದ್ದು, ಕಳೆದ 19 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪ್ರಮಾಣಿಕರ ವಾಹನಗಳ ಮಾರಾಟ ಪ್ರಮಾಣವು ಶೇ.30ಕ್ಕೆ ಕುಸಿತ ಕಂಡಿದೆ.

MOST READ: ರೋಲ್ಸ್ ರಾಯ್ಸ್ ಕಾರು ಖರೀದಿಗಾಗಿ ಹತ್ತಾರು ಕಠಿಣ ಪರೀಕ್ಷೆಗಳನ್ನು ಎದುರಿಸಿದ್ರು ಎಂಟಿಬಿ..!

ಶಾಕಿಂಗ್ ನ್ಯೂಸ್: ಮಾರುತಿ ಸುಜುಕಿಯಿಂದ ಮತ್ತೆ 3 ಸಾವಿರ ಉದ್ಯೋಗ ಕಡಿತ

2018ರ ಜುಲೈ ಅವಧಿಗೂ 2019ರ ಜುಲೈ ಅವಧಿಯಲ್ಲಿನ ವಾಹನಗಳ ಮಾರಾಟ ಪ್ರಮಾಣಕ್ಕೆ ಹೋಲಿಕೆ ಮಾಡಿದ್ದಲ್ಲಿ, ಕಳೆದ ವರ್ಷದ ಜುಲೈನಲ್ಲಿ ಒಟ್ಟು 2,90,931 ಪ್ರಯಾಣಿಕ ವಾಹನಗಳು ಮಾರಾಟವಾದರೇ ಪ್ರಸಕ್ತ ವರ್ಷದ ಜುಲೈ ಅವಧಿಯಲ್ಲಿ ಕೇವಲ 2,00,790 ಪ್ರಯಾಣಿಕ ವಾಹನಗಳು ಮಾರಾಟವಾಗಿವೆ.

ಶಾಕಿಂಗ್ ನ್ಯೂಸ್: ಮಾರುತಿ ಸುಜುಕಿಯಿಂದ ಮತ್ತೆ 3 ಸಾವಿರ ಉದ್ಯೋಗ ಕಡಿತ

ಅಂದರೆ, ಕಳೆದ ವರ್ಷದ ಜುಲೈ ಅವಧಿಗೂ ಮತ್ತು 2019ರ ಜುಲೈ ಅವಧಿಯಲ್ಲಿ ಪ್ರಯಾಣಿಕ ವಾಹನಗಳ ಮಾರಾಟಕ್ಕೂ ಶೇ.30.98ರಷ್ಟು ಇಳಿಕೆ ಕಂಡು ಬಂದಿದ್ದು, ಸಣ್ಣ ಕಾರುಗಳ ಮಾರಾಟದಲ್ಲೂ ಬರೋಬ್ಬರಿ ಶೇ.35.95ರಷ್ಟು ಇಳಿಕೆ ದಾಖಲಾಗಿದೆ.

ಶಾಕಿಂಗ್ ನ್ಯೂಸ್: ಮಾರುತಿ ಸುಜುಕಿಯಿಂದ ಮತ್ತೆ 3 ಸಾವಿರ ಉದ್ಯೋಗ ಕಡಿತ

ಸದ್ಯದ ಪರಿಸ್ಥಿತಿಯಲ್ಲಿ ಇನ್ನು ಅಧಿಕ ಪ್ರಮಾಣದಲ್ಲಿ ವಾಹನಗಳ ಮಾರಾಟ ಪ್ರಮಾಣವು ಇಳಿಕೆ ಕಾಣುವ ಸಾಧ್ಯತೆಗಳಿದ್ದು,ಕನಿಷ್ಠ ಪ್ರಮಾಣದ ವಾಹನಗಳನ್ನು ಮಾರಾಟ ಮಾಡಲು ಸಹ ಬಹುತೇಕ ಆಟೋ ಕಂಪನಿಗಳು ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.

ಶಾಕಿಂಗ್ ನ್ಯೂಸ್: ಮಾರುತಿ ಸುಜುಕಿಯಿಂದ ಮತ್ತೆ 3 ಸಾವಿರ ಉದ್ಯೋಗ ಕಡಿತ

ಇದರ ಪರಿಣಾಮವಾಗಿ ಆಟೋ ಉತ್ಪಾದನಾ ವಲಯದಲ್ಲಿ ಇದುವರೆಗೆ ಸುಮಾರು 3.30 ಲಕ್ಷ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದು, ಪರೋಕ್ಷವಾಗಿ ಆಟೋ ಉತ್ಪಾದನಾ ವಲಯವನ್ನೇ ನಂಬಿಕೊಂಡಿರುವ ಬಿಡಿಭಾಗಗಳ ಉತ್ಪಾದನಾ ವಲಯದಲ್ಲೂ ಸುಮಾರು 10 ಲಕ್ಷ ಉದ್ಯೋಗಿಗಳನ್ನು ಕೆಲಸ ಕಳೆದುಕೊಂಡಿದ್ದಾರೆ.

ಶಾಕಿಂಗ್ ನ್ಯೂಸ್: ಮಾರುತಿ ಸುಜುಕಿಯಿಂದ ಮತ್ತೆ 3 ಸಾವಿರ ಉದ್ಯೋಗ ಕಡಿತ

ಮಾಹಿತಿಗಳ ಪ್ರಕಾರ, ಸುಮಾರು ರೂ.35 ಸಾವಿರ ಕೋಟಿ ಮೌಲ್ಯದ ಹೊಸ ಕಾರುಗಳು ಮತ್ತು 15 ಸಾವಿರ ಕೋಟಿ ಮೌಲ್ಯದ ಹೊಸ ಬೈಕ್‌ಗಳ ಸ್ಟಾಕ್ ಪ್ರಮಾಣವು ಮಾರಾಟವಾಗದೆ ಆರ್ಥಿಕವಾಗಿ ಹೊರೆಯಾಗಿ ಪರಿಣಮಿಸಿದ್ದು, ಸ್ಟಾಕ್ ಪ್ರಮಾಣವನ್ನು ತೆರೆವುಗೊಳಿಸಲು ಭಾರೀ ಪ್ರಮಾಣದ ಆಫರ್‌ಗಳನ್ನು ನೀಡಿ ಗ್ರಾಹಕರನ್ನು ಸೆಳೆಯಲಾಗುತ್ತಿದೆ.

ಶಾಕಿಂಗ್ ನ್ಯೂಸ್: ಮಾರುತಿ ಸುಜುಕಿಯಿಂದ ಮತ್ತೆ 3 ಸಾವಿರ ಉದ್ಯೋಗ ಕಡಿತ

ಆದರೂ ಕೂಡಾ ವಾಹನ ಮಾರಾಟ ಪ್ರಮಾಣವು ಸತತ ಇಳಿಕೆ ಕಾಣುತ್ತಿದ್ದು, ಈ ಹಿನ್ನಲೆಯಲ್ಲಿ ಹೊಸ ವಾಹನಗಳ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿರುವ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಬೇಡಿಕೆಯ ಆಧಾರ ಮೇಲೆ ಹೊಸ ವಾಹನಗಳನ್ನು ಉತ್ಪಾದನೆ ಮಾಡುತ್ತಿರುವುದು ಭಾರೀ ಪ್ರಮಾಣದ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿದೆ

Article Published On: Saturday, August 17, 2019, 16:01 [IST]
English summary
Maruti Suzuki Announce Job Cuts For Over 3000 Temporary Employees.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+