ಬೈಕ್ ಖರೀದಿದಾರರೇ ಎಚ್ಚರ- ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಜಾವಾ ಡೀಲರ್ಸ್

ಇತ್ತೀಚೆಗಷ್ಟೇ ಭಾರತೀಯ ಆಟೋ ಉದ್ಯಮಕ್ಕೆ ಮರಳಿ ಕಾಲಿಟ್ಟಿರುವ ಜಾವಾ ಸಂಸ್ಥೆಯು ತನ್ನ ಹಳೆಯ ಜನಪ್ರಿಯತೆಯೊಂದಿಗೆ ಗ್ರಾಹಕರನ್ನು ಆಕರ್ಷಣೆ ಮಾಡುತ್ತಲೇ ಹಲವಾರು ಆರೋಪ-ಪ್ರತ್ಯಾರೋಪಗಳಿಗೆ ಗುರಿಯಾಗುತ್ತಿದ್ದು, ಬೈಕ್ ವಿತರಣೆಯಲ್ಲಿ ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿದ್ದ ಜಾವಾ ಸಂಸ್ಥೆಯು ಇದೀಗ ಮತ್ತೊಂದು ಗಂಭೀರ ಆರೋಪಕ್ಕೆ ಗುರಿಯಾಗಿದೆ.

ಬೈಕ್ ಖರೀದಿದಾರರೇ ಎಚ್ಚರ- ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಜಾವಾ ಡೀಲರ್ಸ್

ಹೌದು, ಜಾವಾ ಸಂಸ್ಥೆಯು ಕಳೆದ ವರ್ಷ ನವೆಂಬರ್‌ನಲ್ಲಿಯೇ ತನ್ನ ಬಹುನೀರಿಕ್ಷಿತ ಜಾವಾ ಮತ್ತು ಜಾವಾ 42 ಕ್ಲಾಸಿಕ್ ಬೈಕ್‌ಗಳನ್ನು ಬಿಡುಗಡೆ ಮಾಡಿದ್ದು, ಹೊಸ ಬೈಕ್ ಬಿಡುಗಡೆಯಾಗಿ ಬರೋಬ್ಬರಿ 6 ತಿಂಗಳ ನಂತರ ಬೈಕ್ ವಿತರಣೆಗೆ ಚಾಲನೆ ನೀಡಿತ್ತು. ಇದರಿಂದ ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದ್ದ ಜಾವಾ ಸಂಸ್ಥೆಯು ಇದೀಗ ಮತ್ತೊಂದು ಗಂಭೀರ ಆರೋಪವನ್ನು ಎದುರಿಸುತ್ತಿದ್ದು, ಬೈಕ್ ವಿತರಣೆಯನ್ನು ವಿಳಂಬ ಮಾಡಿದ್ದಲ್ಲದೇ ಕಾನೂನು ಬಾಹಿರವಾಗಿ ಭಾರೀ ಮೊತ್ತದ ಹ್ಯಾಂಡಲಿಂಗ್ ಚಾರ್ಜ್ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಬೈಕ್ ಖರೀದಿದಾರರೇ ಎಚ್ಚರ- ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಜಾವಾ ಡೀಲರ್ಸ್

ಬುಕ್ಕಿಂಗ್ ಮಾಡಿ 8 ತಿಂಗಳ ನಂತರ ಹೊಸ ಬೈಕ್ ಪಡೆಯುತ್ತಿರುವ ಗ್ರಾಹಕನಿಗೆ ಜಾವಾ ಅಧಿಕೃತ ಡೀಲರ್ಸ್ ಒಬ್ಬರು ಕಾನೂನುಬಾಹಿರವಾಗಿ ಹ್ಯಾಂಡಲಿಂಗ್ ಚಾರ್ಜ್ ಸೇರಿ ಹೆಚ್ಚುವರಿ ಮೊತ್ತವನ್ನು ವಸೂಲಿ ಮಾಡಿದ್ದು, ಸುಪ್ರೀಂಕೋರ್ಟಿನ ತೀರ್ಪಿನ ಹೊರತಾಗಿಯೂ ಗ್ರಾಹಕನಿಂದ ಹೆಚ್ಚುವರಿ ಹಣ ವಸೂಲಿ ಮಾಡಿದ್ದಾರೆ.

ಬೈಕ್ ಖರೀದಿದಾರರೇ ಎಚ್ಚರ- ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಜಾವಾ ಡೀಲರ್ಸ್

ಆನ್‌ರೋಡ್ ಬೆಲೆಗಳಿಗೂ ಮತ್ತು ಡೀಲರ್ಸ್ ನೀಡಿರುವ ಬೈಕ್ ಖರೀದಿ ರಶೀದಿಗೂ ಸಾಕಷ್ಟು ವ್ಯತ್ಯಾಸಗಳಿದ್ದು, ಮೂಲ ದರಕ್ಕಿಂತಲೂ ಹೆಚ್ಚುವರಿಯಾಗಿ ರೂ. 9 ಸಾವಿರ ವಸೂಲಿ ಮಾಡಿರುವುದನ್ನು ಗ್ರಾಹಕರೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಬೈಕ್ ಖರೀದಿದಾರರೇ ಎಚ್ಚರ- ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಜಾವಾ ಡೀಲರ್ಸ್

ಮೂಲಗಳ ಪ್ರಕಾರ, ಬೆಂಗಳೂರಿನ ಜಾವಾ ಡೀಲರ್ಸ್‌ವೊಂದರಲ್ಲಿ ಈ ರೀತಿಯಾಗಿ ಹೆಚ್ಚುವರಿ ದರಗಳನ್ನು ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು, ಈ ಕುರಿತಂತೆ ಜಾವಾ ಸಂಸ್ಥೆಯ ಸಿಇಒ ಅವರ ಗಮನಕ್ಕೆ ತಂದಿರುವ ಗ್ರಾಹಕನು ಕಾನೂನು ಬಾಹಿರವಾಗಿ ಆನ್‌ರೋಡ್ ಬೆಲೆಗಳಿಂತ ಹೆಚ್ಚುವರಿ ದರ ವಸೂಲಿ ಮಾಡುತ್ತಿರುವ ಬಗ್ಗೆ ಕೂಡಲೇ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾನೆ. ಆದ್ರೆ ಗ್ರಾಹಕನ ಮನವಿಗೆ ಇದುವರೆಗೂ ಯಾವುದೇ ಪ್ರತಿಕ್ರಿಯೆಯೂ ಬಂದಿಲ್ಲ.

ಬೈಕ್ ಖರೀದಿದಾರರೇ ಎಚ್ಚರ- ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಜಾವಾ ಡೀಲರ್ಸ್

ಜಾವಾ ಬೈಕ್ ಖರೀದಿಗಾಗಿ ನೀಡಲಾಗಿರುವ ಅಂದಾಜು ಬೆಲೆಗಳ ಪಟ್ಟಿಯಲ್ಲಿ ಆನ್‌ರೋಡ್ ಬೆಲೆಗಿಂತ ಹೆಚ್ಚುವರಿಯಾಗಿ ರೂ.9 ಸಾವಿರ ಹೆಚ್ಚುವರಿ ಬಿಲ್ ನೀಡಿರುವುದು ಸ್ಪಷ್ಟವಾಗಿದ್ದು, ಬಿಡಿಭಾಗಳು ಮತ್ತು ಹ್ಯಾಂಡಲಿಂಗ್ ಚಾರ್ಜ್‌ಗಾಗಿ ಹೆಚ್ಚುವರಿ ಮೊತ್ತವನ್ನು ಅದರಲ್ಲಿ ಸೇರಿಸಲಾಗಿದೆ.

ಬೈಕ್ ಖರೀದಿದಾರರೇ ಎಚ್ಚರ- ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಜಾವಾ ಡೀಲರ್ಸ್

ಆದ್ರೆ ಇದು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿಗೆ ಇದು ವಿರುದ್ದವಾಗಿದ್ದು, ಈ ಹಿಂದೆಯೇ ದಾಖಲಾಗಿದ್ದ ಇಂತಹ ಹಲವು ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಆನ್‌ರೋಡ್ ಬೆಲೆಗಳಿಂತ ಹೆಚ್ಚು ಹಣ ವಸೂಲಿ ಮಾಡದಂತೆ ಆದೇಶ ನೀಡಿತ್ತು.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಬೈಕ್ ಖರೀದಿದಾರರೇ ಎಚ್ಚರ- ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಜಾವಾ ಡೀಲರ್ಸ್

ಇದಾಗ್ಯೂ ಜಾವಾ ಡೀಲರ್ಸ್‌ಗಳು ಇದೀಗ ಹೊಸ ಬೈಕ್‌ಗಳ ಮಾರಾಟ ಮೇಲೆ ಹೆಚ್ಚುವರಿ ಮೊತ್ತವನ್ನು ವಿಧಿಸಿ ಅಧಿಕ ಲಾಭಗಳಿಕೆಗೆ ಮುಂದಾಗಿದ್ದು, ಸಂಬಂಧಪಟ್ಟವರು ಗ್ರಾಹಕರಿಗೆ ಮೋಸವಾಗುವುದನ್ನು ತಡೆದು ಸೂಕ್ತ ಕ್ರಮಕೈಗೊಳ್ಳಬೇಕಾದ ಅವಶ್ಯಕತೆಯಿದೆ.

MOST READ: ಅಪಘಾತದ ವೇಳೆ ಏರ್‌ಬ್ಯಾಗ್ ಇದ್ರು ಫ್ಲಾಪ್- ಟೊಯೊಟಾ ವಿರುದ್ಧ ಕಾರು ಮಾಲೀಕನ ಆಕ್ರೋಶ..!

ಬೈಕ್ ಖರೀದಿದಾರರೇ ಎಚ್ಚರ- ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಜಾವಾ ಡೀಲರ್ಸ್

ಇನ್ನು ಜಾವಾ ಬೈಕ್‌ಗಳು ದಶಕಗಳ ಹಿಂದೆ ಭಾರತದಲ್ಲಿ ಅಬ್ಬರಿಸಿ ಮರೆಯಾಗಿದ್ದಲ್ಲದೆ ಇದೀಗ ನವ ವಿನ್ಯಾಸ ಹಾಗೂ ನೂತನ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಜಾವಾ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ಬೈಕ್ ನಿರ್ಮಿಸುವಲ್ಲಿ ಮಹೀಂದ್ರಾ ಅಂಗಸಂಸ್ಥೆಯಾದ ಕ್ಲಾಸಿಕ್ ಲೆಜೆಂಡ್ ಸಂಸ್ಥೆಯು ಯಶಸ್ವಿಯಾಗಿದೆ.

MOST READ: ಕಾರು ಖರೀದಿಗೆ ಇದು ಸುವರ್ಣಾವಕಾಶ- ರೂ.4 ಲಕ್ಷದ ತನಕ ಡಿಸ್ಕೌಂಟ್ ಘೋಷಿಸಿದ ಹೋಂಡಾ

ಬೈಕ್ ಖರೀದಿದಾರರೇ ಎಚ್ಚರ- ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಜಾವಾ ಡೀಲರ್ಸ್

ಕ್ಲಾಸಿಕ್ ಲೆಜೆಂಡ್ ಸಂಸ್ಥೆಯು ಒಟ್ಟು ಮೂರು ಹೊಸ ಬೈಕ್‌ಗಳನ್ನು ಹೊರತಂದಿದ್ದು, ಇದರಲ್ಲಿ ಜಾವಾ, ಜಾವಾ 42 ಬೈಕ್‌ಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಪೆರಾಕ್ ಎನ್ನುವ ಕಸ್ಟಮ್ ಮಾದರಿಯನ್ನು ಕೇವಲ ಅನಾವರಣಗೊಳಿಸಿ ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದೆ.

ಬೈಕ್ ಖರೀದಿದಾರರೇ ಎಚ್ಚರ- ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಜಾವಾ ಡೀಲರ್ಸ್

ಹೊಸ ಬೈಕ್‌ಗಳ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೆಟ್ರೋ ಜಾವಾ ಮಾದರಿಗೆ ರೂ. 1.64 ಲಕ್ಷ, ಜಾವಾ 42 ಮಾದರಿಗೆ ರೂ. 1.55 ಲಕ್ಷ ಮತ್ತು ಅನಾವರಣ ಮಾಡಲಾದ ಜಾವಾ ಪೆರಾಕ್ ಬೈಕಿಗೆ ರೂ. 1.89 ಲಕ್ಷ ಬೆಲೆ ನಿಗದಿಪಡಿಸಲಾಗಿದೆ. ಇದರ ಹೊರತಲಾಗಿ ಗ್ರಾಹಕರು ತಮ್ಮ ಹೊಸ ಬೈಕ್‌ಗಳಿಗೆ ಹೆಚ್ಚುವರಿ ದರ ಪಾವತಿಸಿ ಬೇಡಿಕೆ ಅನ್ವಯ ಆಕ್ಸ್‌ಸರಿಸ್ ಪಡೆದುಕೊಳ್ಳಬಹುದಾಗಿದೆ.

ಬೈಕ್ ಖರೀದಿದಾರರೇ ಎಚ್ಚರ- ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಜಾವಾ ಡೀಲರ್ಸ್

ಎಂಜಿನ್ ಸಾಮರ್ಥ್ಯ

ಜಾವಾ ಮತ್ತು ಜಾವಾ 42 ಬೈಕ್‌ಗಳು 293ಸಿಸಿ ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದಿಂದ 27-ಬಿಹೆಚ್‍ಪಿ ಮತ್ತು 28-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬೈಕ್ ಖರೀದಿದಾರರೇ ಎಚ್ಚರ- ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಜಾವಾ ಡೀಲರ್ಸ್

ಇದರಲ್ಲಿ ಬಾಬ್ಬರ್ ವಿನ್ಯಾಸದ ಜಾವಾ ಪೆರಾಕ್ ಬೈಕ್ ಮಾದರಿಯು 334ಸಿಸಿ ಎಂಜಿನ್ ಪಡೆದುಕೊಂಡಿದ್ದು, ಬಿಎಸ್ 6 ಎಂಜಿನ್ ಪ್ರೇರಣೆಯೊಂದಿಗೆ 30-ಬಿಎಚ್‌ಪಿ ಮತ್ತು 31-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿರಲಿದೆ. ಇದು ಜಾವಾ ಸಂಸ್ಥೆಯಿಂದಲೇ ಮಾಡಿಫೈಗೊಂಡ ಮೊದಲ ಬೈಕ್ ಮಾದರಿಯಾಗಿದ್ದು, ಇದೇ ವರ್ಷ ಅಕ್ಟೋಬರ್‌ ಅಥವಾ ನವೆಂಬರ್‌ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

Source: Rushlane

Most Read Articles

Kannada
English summary
Jawa dealer adds illegal handling charges etc of Rs 9 thousand. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more