ಪ್ರೇಮಿಗಳಿಲ್ಲದ‌ ಸಿಂಗಲ್ಸ್‌ಗಳಿಗೆ ಸಿಹಿ ಸುದ್ದಿ: ಸಿಂಗಲ್‌ ಸೀಟ್‌ನ ಈ ಬಾಬರ್‌ ಬೈಕ್‌ನಲ್ಲಿ ಮತ್ತಷ್ಟು ಆಯ್ಕೆ!

ಜಾವಾ ಯೆಜ್ಡೀ ಮೋಟಾರ್ ಸೈಕಲ್‌ ಹೆಸರು ಕೇಳದೇ ಇರುವವರು ಕಮ್ಮಿಯೇ ಎಂದು ಹೇಳಬಹುದು. 70 ಮತ್ತು 80 ರ ದಶಕದಲ್ಲಿ ಇಡೀ ಭಾರತೀಯ ಮಾರುಕಟ್ಟೆಯನ್ನೇ ಆಳಿದ್ದ ಈ ಕಂಪನಿಯ ಮೋಟಾರ್‌ ಸೈಕಲ್‌ಗಳು ಆ ನಂತರದಲ್ಲಿ ಭಾರತೀಯ ಮಾರುಕಟ್ಟೆಯಿಂದ ಮರೆಯಾಗಿದ್ದು ಎಲ್ಲರಿಗೂ ತಿಳಿದೇ ಇದೆ.

ಅದಾದ ನಂತರ ಕೆಲವು ವರ್ಷಗಳ ಹಿಂದೆ ಈ ಕಂಪನಿ ಬೈಕ್‌ಗಳ ಮರು ಆಗಮನವಾಗಿತ್ತು. ಈ ಸಂಧರ್ಭದಲ್ಲಿ ಹಲವು ಹೊಸ ಹೊಸ ಮಾಡೆಲ್‌ಗಳನ್ನಯ ಜಾವಾ ಯೆಜ್ಡೀ ಭಾರತೀಯ ಮಾರುಕಟ್ಟೆಗೆ ಪರಿಚಯಿಸಿತ್ತು. ಹೀಗೆ ಪರಿಚಯಿಸಿದ ಬೈಕ್‌ಗಳಲ್ಲಿ ಜಾವಾ ಪೆರಾಕ್ ಸಹ ಒಂದು. ಪಕ್ಕಾ ಬೋಬ್ಬರ್‌ ಮಾದರಿಯ ಈ ಬೈಕ್‌ ಕೇವಲ ಸಿಂಗಲ್‌ ಸೀಟ್‌ನೊಂದಿಗೆ ಮಾರುಕಟ್ಟೆಗೆ ಬಂದಿತ್ತು.

Jawa Yezdi Motocycle Introduced Dual Tone Scheme To The Jawa Perak

ಈ ವಿನ್ಯಾಸ ಮತ್ತು ಪೆರಾಕ್‌ನ (Jawa Perak) ಉತ್ತಮವಾದ ಪರ್ಫಾಮೆನ್ಸ್‌ ಭಾರತೀಯ ಯುವಕರ ಹೃದಯವನ್ನು ಕದ್ದಿಯುವಲ್ಲಿ ಯಶಸ್ವಿಯಾಯಿತು ಎಂದೇ ಹೇಳಬಹುದು. ಇದೀಗ ಜಾವಾ ಕಂಪನಿಯು, ಯುವಕರ ರೈಡಿಂಗ್‌ ಅನುಭವವನ್ನು ಮತ್ತಷ್ಟು ಹೆಚ್ಚಿಸಲು ಜಾವಾ ಪೆರಾಕ್‌ನ ಡ್ಯುಯಲ್‌ ಟೋನ್‌ ಮಾದರಿಯನ್ನು ಮಾರುಕಟ್ಟೆಗೆ ತಂದಿದೆ. ಜಾವಾ ಇದೀಗ ಕೆಂಪು ಮತ್ತು ಬಿಳುಪು ಬಣ್ಣದ ಟ್ಯಾಂಕ್‌ನೊಂದಿಗೆ ಬರುವ ಮಾದರಿಯನ್ನು ಮಾರುಕಟ್ಟೆಗೆ ತಂದಿದೆ.

ಈ ಮಾದರಿಯ ಬೆಲೆ ಗಮನಿಸುವುದಾದರೆ, ಜಾವಾ 42 ಬಾಬರ್ - ಜಾಸ್ಪರ್ ರೆಡ್ ಡ್ಯುಯಲ್ ಟೋನ್ ಸ್ಪೋಕ್ ವೀಲ್ ಆಯ್ಕೆಯ ಬಣ್ಣದ ಬೆಲೆ ಸುಮಾರು ರೂ 2,15,187 ಎಕ್ಸ್‌ ಶೋ ರೂಮ್‌ನಿಂದ ಆರಂಭವಾಗುತ್ತದೆ. ಅದೇ ರೀತಿ ಇದರ ಮತ್ತೊಂದು ಅಲಾಯ್‌ ವ್ಹೀಲ್‌ ಆಯ್ಕೆಯಾದ ಜಾವಾ 42 ಬಾಬರ್ - ಜಾಸ್ಪರ್ ರೆಡ್ ಡ್ಯುಯಲ್ ಟೋನ್ ಅಲಾಯ್ ವೀಲ್ ಮಾದರಿಯ ಬೆಲೆ ರೂ 2,19,950 ಎಕ್ಸ್‌ ಶೋ ರೂಮ್ ಆಗಿದೆ.

Jawa Yezdi Motocycle Introduced Dual Tone Scheme To The Jawa Perak

ಈ ಜಾವಾ ಪೆರಾಕ್ ತನ್ನ ಸ್ಟೈಲಿಂಗ್ ಅನ್ನು ಮೂಲ ಪೆರಾಕ್ ಬೈಕಿನಿಂದ ಎರವಲು ಪಡೆದುಕೊಂಡಿದೆ. ಮೂಲ ಪೆರಾಕ್ ಬೈಕ್ ಅನ್ನು 1946 ರಲ್ಲಿ ಪ್ರದರ್ಶಿಸಲಾಯಿತು. ಈ ಬೈಕ್ ತನ್ನ ರೆಟ್ರೊ ವಿನ್ಯಾಸವನ್ನು ಇನ್‌ಸ್ಟ್ರುಮೆಂಟ್ ಕನ್ಸೋಲ್‌ಗೆ ಹಾಗೆಯೇ ಈಗಿನ ಬೈಕಿನಲ್ಲಿ ನೀಡಿದೆ.

ಜಾವಾ ಪೆರಾಕ್ ಬೈಕಿನಲ್ಲಿ 334 cc ಲಿಕ್ವಿಡ್-ಕೂಲ್ಡ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 29.9PS ಮತ್ತು 30Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಈ ಜಾವಾ ಪೆರಾಕ್ ಬೈಕ್ ಒಂದೇ ಬಣ್ಣದಲ್ಲಿ ಲಭ್ಯವಿದೆ. ಇದು ಮ್ಯಾಟ್ ಬ್ಲ್ಯಾಕ್ ಪೇಂಟ್ ಸ್ಕೀಮ್ ಮತ್ತು ಕಾಂಟ್ರಾಸ್ಟ್ ಬ್ರೌನ್ ಸೀಟ್‌ನೊಂದಿಗೆ ಲಭ್ಯವಿತ್ತು.

Jawa Yezdi Motocycle Introduced Dual Tone Scheme To The Jawa Perak

ಇದೀಗ ಆ ಸಾಲಿಗೆ ಡ್ಯುಯಲ್‌ ಟೋನ್‌ ಬಣ್ಣದ ಆಯ್ಕೆಯೂ ಸೇರಿಕೊಂಡಿದೆ. ಇನ್ನ ಬೈಕ್‌ನ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಈ ಜಾವಾ ಪೆರಾಕ್ ಬೈಕ್ ಒಂದೇ ಬಣ್ಣದಲ್ಲಿ ಲಭ್ಯವಿದೆ. ಇದು ಮ್ಯಾಟ್ ಬ್ಲ್ಯಾಕ್ ಪೇಂಟ್ ಸ್ಕೀಮ್ ಮತ್ತು ಕಾಂಟ್ರಾಸ್ಟ್ ಬ್ರೌನ್ ಸೀಟ್‌ನೊಂದಿಗೆ ಲಭ್ಯವಿದೆ.

ಫ್ಲೋಟಿಂಗ್ ಸೀಟ್ ಮಾರುಕಟ್ಟೆಯಲ್ಲಿ ಎಲ್ಲಕ್ಕಿಂತ ವಿಶಿಷ್ಟವಾದ ನೋಟವನ್ನು ನೀಡುತ್ತದೆ. ಬಾಬರ್‌ ಶೈಲಿಯ ವಿಶಿಷ್ಟವಾದ ಜಾವಾ ಪೆರಾಕ್ ಬೈಕ್ ಉದ್ದವಾದ ವ್ಹೀಲ್‌ಬೇಸ್ ಮತ್ತು ಕಡಿಮೆ-ಸ್ಲಂಗ್ ಪ್ರೊಫೈಲ್ ಅನ್ನು ಹೊಂದಿದೆ. ಅದರ ಬಾರ್-ಎಂಡ್ ರೌಂಡ್ ಮೀರರ್ ಗಳು, ಫ್ಲೋಟಿಂಗ್ ಶೈಲಿಯ ಸಿಂಗಲ್-ಪೀಸ್ ಸೀಟ್, ಅಂಡರ್ ಸೀಟ್ ಟೈಲ್ ಲ್ಯಾಂಪ್, ಫೆಂಡರ್‌ಗಳು ಮತ್ತು ಡ್ಯುಯಲ್ ಸ್ಲ್ಯಾಷ್-ಕಟ್ ಎಕ್ಸಾಸ್ಟ್ ಅನ್ನು ಹೊಂದಿದೆ.

Jawa Yezdi Motocycle Introduced Dual Tone Scheme To The Jawa Perak

ಇನ್ನು ಈ ಜಾವಾ ಪೆರಾಕ್ ಬೈಕ್ 175 ಕೆಜಿ ತೂಕವನ್ನು ಹೊಂದಿದೆ. ಇನ್ನು ಈ ಬೈಕ್ 14 ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಅನ್ನು ಅಳವಡಿಸಲಾಗಿದೆ. ಈ ಜಾವಾ ಪೆರಾಕ್ ಬೈಕಿನಲ್ಲಿ 18-17-ಇಂಚಿನ ಸ್ಪೋಕ್ ವ್ಹೀಲ್ ಅನ್ನು ಹೊಂದಿವೆ. ಜಾವಾ ಪೆರಾಕ್ ಬೈಕಿಗೆ ಭಾರತೀಯ ಮಾರುಕಟ್ಟೆಯಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿಗಳಿಲ್ಲ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, April 10, 2024, 10:46 [IST]
English summary
Jawa yezdi motorcycle introduced dual tone scheme to the jawa perak
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+