ಮಾರುತಿ ಸುಜುಕಿ ಸಿಯಾಜ್ ಕಾರಿನ ಮೇಲೆ ಭರ್ಜರಿ ರಿಯಾಯಿತಿ

ಮಾರುತಿ ಸುಜುಕಿ ತನ್ನ ಸಿಯಾಜ್ ಕಾರುಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಸಿಯಾಜ್ 1.3 ಡೀಸೆಲ್ ಎಂಜಿನ್ ಮಾದರಿಯ ಮೇಲೆ ಕೆಲವು ಡೀಲರ್‍‍ಗಳು ಒಟ್ಟು 1.15 ಲಕ್ಷ ರಿಯಾಯಿತಿಯನ್ನು ಘೋಷಿಸಿದ್ದಾರೆ. ಮಾರುತಿ ಸುಜುಕಿ ಮಾರಾಟವನ್ನು ಹೆಚ್ಚಿಸಲು ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ.

ಮಾರುತಿ ಸುಜುಕಿ ಸಿಯಾಜ್ ಕಾರಿನ ಮೇಲೆ ಭರ್ಜರಿ ರಿಯಾಯಿತಿ

ಮಾರುತಿ ಸುಜುಕಿ ಕಂಪನಿಯು 1.3 ಲೀಟರ್ ಡೀಸೆಲ್ ಎಂಜಿನ್ ಮಾದರಿಯನ್ನು ಸ್ಥಗಿತಗೊಳಿಸಿದೆ. ಈ ವರ್ಷದ ಆಗಸ್ಟ್ ತಿಂಗಳಲ್ಲಿ ಈ ಮಾದರಿಯನ್ನು 1.5 ಎಂಜಿನ್‍‍ಗಳಾಗಿ ನವೀಕರಿಸಿದೆ. ಆದರೆ 1.3 ಡೀಸೆಲ್ ಮಾದರಿಯ ಯುನಿಟ್‍ಗಳು ಮಾರಾಟವಾಗದೇ ಡೀಲರ್‍‍ಗಳ ಬಳಿ ಉಳಿದಿದ್ದವು, ಇದೀಗ ಆ ಯುನಿಟ್‍‍ಗಳನ್ನು ಮಾರಾಟ ಮಾಡಲು ಭರ್ಜರಿ ಆಫರ್‍‍ಗಳನ್ನು ಘೋಷಿಸಲಾಗಿದೆ.

ಮಾರುತಿ ಸುಜುಕಿ ಸಿಯಾಜ್ ಕಾರಿನ ಮೇಲೆ ಭರ್ಜರಿ ರಿಯಾಯಿತಿ

ಮಾರುತಿ ಸುಜುಕಿ ಕಂಪನಿಯ ಸಿಯಾಜ್ 1.3 ಮಾದರಿಯ ಮೇಲೆ ಕೆಲವು ಡೀಲರ್‍‍ಗಳು ಒಟ್ಟು 1.15 ಲಕ್ಷ ರಿಯಾಯಿತಿಯನ್ನು ಘೋಷಿಸಿದ್ದಾರೆ. ಇದರಲ್ಲಿ ರೂ.55,000 ನಗದು ರಿಯಾಯಿತಿ, ರೂ.30,000 ವಿನಿಮಯ ಮತ್ತು ರೂ.10,000 ಕಾರ್ಪೊರೇಷನ್ ರಿಯಾಯಿತಿಯನ್ನು ನೀಡಿದ್ದಾರೆ. ಗ್ರಾಹಕರಿಗೆ ಹೆಚ್ಚಿನ ನಂಬಿಕೆಯನ್ನು ಮೂಡಿಸಲು 5 ವರ್ಷಗಳ ವಾರಂಟಿಯನ್ನು ನೀಡಿದೆ.

ಮಾರುತಿ ಸುಜುಕಿ ಸಿಯಾಜ್ ಕಾರಿನ ಮೇಲೆ ಭರ್ಜರಿ ರಿಯಾಯಿತಿ

ಈ ಹಿಂದೆ 1.3 ಲೀಟರ್ ಡಿ‍ಡಿಐಎಸ್ ಎಂಜಿನ್ ಅನ್ನು ಎರ್ಟಿಗಾ ಹೊಂದಿತ್ತು. ಮಾರುತಿ ಸುಜುಕಿ ಕಂಪನಿಯು ಇದೇ ಎಂಜಿನ್ ಅನ್ನು ವಿಟಾರಾ ಬ್ರಿಝಾ, ಸ್ವಿಫ್ಟ್, ಇಗ್ನಿಸ್, ಬಲೆನೊ ಮತ್ತು ಎಸ್ - ಕ್ರಾಸ್ ಕಾರಿನಲ್ಲಿ ಅಳವಡಿಸಿದೆ. ಆದರೆ ಎರ್ಟಿಗಾ ಮತ್ತು ಸಿಯಾಜ್ ಮಾದರಿಗಳಲ್ಲಿ 1.5 ಡೀಸೆಲ್ ಎಂಜಿನ್ ಆಗಿ ನವೀಕರಿಸಲಾಗಿದೆ.

ಮಾರುತಿ ಸುಜುಕಿ ಸಿಯಾಜ್ ಕಾರಿನ ಮೇಲೆ ಭರ್ಜರಿ ರಿಯಾಯಿತಿ

ಮಾರುತಿ ಸುಜುಕಿ ಸಿಯಾಜ್ 1.3 ಲೀಟರ್ ಡೀಸೆಲ್ ಎಂಜಿನ್ 89 ಬಿ‍ಹೆಚ್‍‍ಪಿ ಪವರ್ ಮತ್ತು 200 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ನವೀಕರಿಸಿದ 1.5 ಲೀಟರ್ 4 ಸಿಲಿಂಡರ್ ಡಿಡಿಐಎಸ್ ಡೀಸೆಲ್ ಎಂಜಿನ್ 94 ಬಿಹೆಚ್‍ಪಿ ಪವರ್ ಮತ್ತು 225 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಮಾರುತಿ ಸುಜುಕಿ ಸಿಯಾಜ್ ಕಾರಿನ ಮೇಲೆ ಭರ್ಜರಿ ರಿಯಾಯಿತಿ

ಸಿಯಾಜ್ ಕಾರಿನಲ್ಲಿ ಮರು ವಿನ್ಯಾಸಗೊಳಿಸಲಾದ ಗ್ರಿಲ್, ಹೊಸ ವಿನ್ಯಾಸದ ಎಲ್ಇಡಿ ಡಿಆರ್‍ಎಲ್ ಹೆಡ್‍‍ಲ್ಯಾಂಪ್, ಸೆಂಟ್ರಲ್ ಏರ್ ಡ್ಯಾಮ್‍‍‍ನೊಂದಿಗೆ ಫ್ರಂಟ್ ಬಂಪರ್ ಮತ್ತು ಫಾಗ್ ಲ್ಯಾಂಪ್‍‍ಗಳಿವೆ .

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಮಾರುತಿ ಸುಜುಕಿ ಸಿಯಾಜ್ ಕಾರಿನ ಮೇಲೆ ಭರ್ಜರಿ ರಿಯಾಯಿತಿ

ಸಿಯಾಜ್ ಕಾರಿನಲ್ಲಿ ಮಲ್ಟಿ ಸ್ಪೋಕ್ 15 ಇಂಚಿನ ಅಲಾಯ್ ವ್ಹೀಲ್, ಕ್ರೋಮ್ ಆಧಾರಿತ ಡೋರ್ ಹ್ಯಾಂಡಲ್ಸ್ ಮತ್ತು ಒಆರ್‍‍ವಿಎಮ್ ಅನ್ನು ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್ಸ್ ಗಳಿವೆ. ಹಾಗೆಯೇ ಮರು ವಿನ್ಯಾಸಗೊಳಿಸಲಾದ ಹಿಂಭಾಗದ ಬಂಪರ್ ಅನ್ನು ಹೊಂದಿದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಮಾರುತಿ ಸುಜುಕಿ ಸಿಯಾಜ್ ಕಾರಿನ ಮೇಲೆ ಭರ್ಜರಿ ರಿಯಾಯಿತಿ

ಸಿಯಾಜ್ ಕಾರಿನ ಇಂಟಿರಿಯರ್ ಆಕರ್ಷಕ ಲುಕ್ ಅನ್ನು ಹೊಂದಿದೆ. ಸ್ಟೀಯರಿಂಗ್ ವ್ಹೀಲ್, ಲೆದರ್ ಸೀಟುಗಳು, ಟಚ್ ಸ್ಕ್ರೀನ್ ಇನ್ಫೋಟೇನ್‍‍ಮೆಂಟ್, ಆಂಡ್ರಾಯ್ಡ್ ಆಟೋ, ಆ್ಯಪಲ್ ಕಾರ್ ಪ್ಲೇ, ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಜೊತೆ ಟಿಟಿಪಿ ಕಲರ್ ಎಂಐಡಿ ಮತ್ತು ಕ್ರೂಸ್ ಕಂಟ್ರೊಲರ್ ಅನ್ನು ಹೊಂದಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!<

ಮಾರುತಿ ಸುಜುಕಿ ಸಿಯಾಜ್ ಕಾರಿನ ಮೇಲೆ ಭರ್ಜರಿ ರಿಯಾಯಿತಿ

ಮಾರುತಿ ಸುಜುಕಿ ಸಿಯಾಜ್ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.8.19 ಲಕ್ಷದಿಂದ ರೂ.11.38 ಲಕ್ಷಗಳಾಗಿದೆ. ಸಿಯಾಜ್ ಕಾರು ದೇಶಿಯ ಮಾರುಕಟ್ಟೆಯಲ್ಲಿ ಹ್ಯುಂಡೈ ವೆರ್ನಾ, ಹೋಂಡಾ ಸಿಟಿ, ಸ್ಕೋಡಾ ರಾಪಿಡ್, ಟೊಯೊಟಾ ಯಾರಿಸ್‍ ಕಾರುಗಳಿಗೆ ಪೈಪೋಟಿ ನೀಡುತ್ತದೆ.

Article Published On: Friday, November 15, 2019, 18:17 [IST]
English summary
Maruti Suzuki Offering Upto Rs 1.15 Lakh Discount On Ciaz 1.3 Diesel - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+