ಹೆಚ್ಚಿದ ವಾಹನಗಳ ಉತ್ಪಾದನಾ ವೆಚ್ಚ- ಕಾರುಗಳ ಬೆಲೆ ಏರಿಕೆ ಮಾಡಿದ ಮಾರುತಿ ಸುಜುಕಿ..!

ದೇಶದ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾಗಿರುವ ಮಾರುತಿ ಸುಜುಕಿಯು ತನ್ನೆಲ್ಲಾ ಕಾರು ಮಾದರಿಗಳ ಬೆಲೆಯನ್ನು ಹೆಚ್ಚಳ ಮಾಡುವುದಾಗಿ ಹೇಳಿಕೊಂಡಿದ್ದು, ಮುಂಬರುವ ಜನವರಿ 1ರಿಂದಲೇ ಹೊಸ ದರ ಪರಿಷ್ಕರಣೆ ಮಾಡುವುದಾಗಿ ಮಾಹಿತಿ ನೀಡಿದೆ.

ಹೆಚ್ಚಿದ ವಾಹನಗಳ ಉತ್ಪಾದನಾ ವೆಚ್ಚ- ಕಾರುಗಳ ಬೆಲೆ ಏರಿಕೆ ಮಾಡಿದ ಮಾರುತಿ ಸುಜುಕಿ..!

ರೂಪಾಯಿ ಮೌಲ್ಯದಲ್ಲಿ ಸತತ ಕುಸಿತ ಮತ್ತು ಕಾರುಗಳ ಬಿಡಿಭಾಗಗಳ ಆಮದು ಮೇಲಿನ ಸುಂಕಗಳು ಹೆಚ್ಚಳಗೊಂಡಿರುವ ಹಿನ್ನೆಲೆ ಕಾರುಗಳ ಮೂಲ ದರವನ್ನು ಏರಿಕೆ ಮಾಡುವ ನಿರ್ಧಾರ ಕೈಗೊಂಡಿರುವುದಾಗಿ ಹೇಳಿಕೊಂಡಿರುವ ಮಾರುತಿ ಸುಜುಕಿ ಸಂಸ್ಥೆಯು 2020ರ ಜನವರಿ 1ರಂದೇ ಪರಿಷ್ಕೃತ ದರದ ಪ್ರಕಾರವೇ ಹೊಸ ಬೆಲೆಗಳು ಅನ್ವಯವಾಗಲಿವೆ ಎಂದಿದೆ. ಹೀಗಾಗಿ ಡಿಸೆಂಬರ್ 31ರ ತನಕ ಮಾತ್ರವೇ ಹಳೆಯ ದರ ಅನ್ವಯವಾಗಲಿದ್ದು, ತದನಂತರ ಹೆಚ್ಚುವರಿ ದರ ಪಾವತಿಸಬೇಕಾಗುತ್ತದೆ.

ಹೆಚ್ಚಿದ ವಾಹನಗಳ ಉತ್ಪಾದನಾ ವೆಚ್ಚ- ಕಾರುಗಳ ಬೆಲೆ ಏರಿಕೆ ಮಾಡಿದ ಮಾರುತಿ ಸುಜುಕಿ..!

ಮಾಹಿತಿಗಳ ಪ್ರಕಾರ, ಮಾರುತಿ ಸುಜುಕಿ ಸಂಸ್ಥೆಯು ಕಾರುಗಳ ಬೆಲೆಯಲ್ಲಿ ಶೇ. 1.5 ರಿಂದ ಶೇ.3 ರಷ್ಟು ಹೆಚ್ಚಳ ಮಾಡುವ ಸುಳಿವು ನೀಡಿದ್ದು, ಎಂಟ್ರಿ ಲೆವಲ್ ಕಾರು ಮಾದರಿಯಾದ ಆಲ್ಟೋ 800 ಬೆಲೆಯಲ್ಲಿ ರೂ. 5 ಸಾವಿರದಿಂದ 08 ಸಾವಿರ ಮತ್ತು ಟಾಪ್ ಎಂಡ್ ಮಾದರಿಯಾದ ಎಸ್-ಕ್ರಾಸ್ ಎಸ್‌ಯುವಿ ಬೆಲೆಯಲ್ಲಿ ರೂ.10 ಸಾವಿರದಿಂದ ರೂ. 15 ಸಾವಿರ ಬೆಲೆ ಏರಿಕೆಯಾಗಲಿದೆ.

ಹೆಚ್ಚಿದ ವಾಹನಗಳ ಉತ್ಪಾದನಾ ವೆಚ್ಚ- ಕಾರುಗಳ ಬೆಲೆ ಏರಿಕೆ ಮಾಡಿದ ಮಾರುತಿ ಸುಜುಕಿ..!

ಹಾಗೆಯೇ ಕಳೆದ ತಿಂಗಳ ಹಿಂದಷ್ಟೇ ಬಿಡುಗಡೆಯಾಗಿರುವ ಎಸ್-ಪ್ರೆಸ್ಸೊ ಕಾರಿನ ಬೆಲೆಯಲ್ಲೂ ದರಕ್ಕೆ ಅನುಗುಣವಾಗಿ ಶೇ. 2 ರಷ್ಟು ಬೆಲೆ ಹೆಚ್ಚಳವಾಗಲಿದ್ದು, ಹೊಸ ವರ್ಷದ ಆರಂಭದಲ್ಲಿ ಕಾರು ಖರೀದಿಯ ಯೋಜನೆಯಲ್ಲಿರುವ ಗ್ರಾಹಕರಿಗೆ ಮತ್ತಷ್ಟು ಬೆಲೆ ಏರಿಕೆಯ ಬಿಸಿ ತಟ್ಟಲಿದೆ.

ಹೆಚ್ಚಿದ ವಾಹನಗಳ ಉತ್ಪಾದನಾ ವೆಚ್ಚ- ಕಾರುಗಳ ಬೆಲೆ ಏರಿಕೆ ಮಾಡಿದ ಮಾರುತಿ ಸುಜುಕಿ..!

ಇನ್ನು 2020ರ ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬರಲಿರುವ ಬಿಎಸ್-6 ನಿಯಮಕ್ಕೆ ಅನುಗುಣವಾಗಿ ಮಾರುತಿ ಸುಜುಕಿಯು ತನ್ನ ಜನಪ್ರಿಯ ಕಾರುಗಳನ್ನು ಉನ್ನತೀಕರಿಸಿ ಮಾರಾಟ ಮಾಡುತ್ತಿದ್ದು, ಹೊಸ ನಿಯಮ ಜಾರಿಗೂ ಮುನ್ನವೇ ಬಿಎಸ್-6 ಎಂಜಿನ್ ಪ್ರೇರಿತ 3 ಲಕ್ಷಕ್ಕೂ ಹೆಚ್ಚು ಪೆಟ್ರೋಲ್ ಕಾರುಗಳನ್ನು ಮಾರಾಟ ಮಾಡುವ ಮೂಲಕ ಹೊಸ ದಾಖಲೆಗೆ ಕಾರಣವಾಗಿದೆ. ಆದರೆ ಡೀಸೆಲ್ ಎಂಜಿನ್‌ಗಳನ್ನು ಮಾತ್ರವೇ ಬಿಎಸ್-4 ನಿಯಮದಂತೆಯೇ ಮಾರಾಟ ಮಾಡುತ್ತಿದ್ದು, ಡೀಸೆಲ್ ಕಾರುಗಳನ್ನು ಸಹ 2020ರ ಏಪ್ರಿಲ್ ಒಳಗಾಗಿ ಹೊಸ ಎಂಜಿನ್‌ನೊಂದಿಗೆ ಉನ್ನತೀಕರಿಸಲು ಸಿದ್ದತೆ ನಡೆಸಿದೆ.

ಹೆಚ್ಚಿದ ವಾಹನಗಳ ಉತ್ಪಾದನಾ ವೆಚ್ಚ- ಕಾರುಗಳ ಬೆಲೆ ಏರಿಕೆ ಮಾಡಿದ ಮಾರುತಿ ಸುಜುಕಿ..!

ಸದ್ಯ ಮಾರುಕಟ್ಟೆಯಲ್ಲಿ ಬಲೆನೊ, ಆಲ್ಟೋ 800, ವ್ಯಾಗನ್‌ಆರ್, ಸ್ವಿಫ್ಟ್, ಡಿಜೈರ್, ಎರ್ಟಿಗಾ, ಎಕ್ಸ್ಎಲ್ 6 ಮತ್ತು ಎಸ್-ಪ್ರೆಸ್ಸೊ ಕಾರುಗಳ ಪೆಟ್ರೋಲ್ ಕಾರುಗಳನ್ನು ಬಿಎಸ್-6 ನಿಯಮದಂತೆ ಉನ್ನತೀಕರಿಸಲಾಗಿದ್ದು, ಬಿಎಸ್-4 ಕಾರುಗಳಿಂತೂ ತುಸು ಭಿನ್ನವಾಗಿರುವ ಹೊಸ ಕಾರುಗಳು ಮಾಲಿನ್ಯ ಹೊರಸೂಸುವಿಕೆ ಮತ್ತು ಮೈಲೇಜ್ ಪ್ರಮಾಣದಲ್ಲಿ ಸಾಕಷ್ಟು ಸುಧಾರಣೆ ಕಂಡಿವೆ.

ಹೆಚ್ಚಿದ ವಾಹನಗಳ ಉತ್ಪಾದನಾ ವೆಚ್ಚ- ಕಾರುಗಳ ಬೆಲೆ ಏರಿಕೆ ಮಾಡಿದ ಮಾರುತಿ ಸುಜುಕಿ..!

ಇದೀಗ ಡೀಸೆಲ್ ಕಾರುಗಳ ಉನ್ನತೀಕರಣವು ತುಸು ಸವಾಲಾಗಿದ್ದು, ಬಿಎಸ್-6 ಡೀಸೆಲ್ ಎಂಜಿನ್‌ಗಳು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಡೀಸೆಲ್ ಎಂಜಿನ್‌ಗಿಂತಲೂ ಸಾಕಷ್ಟು ಸುಧಾರಣೆಯೊಂದಿಗೆ ಮಾಲಿನ್ಯ ಹೊರಸೂಸುವಿಕೆಯಲ್ಲಿ ಮಹತ್ವದ ಬದಲಾವಣೆ ಪಡೆದುಕೊಳ್ಳುತ್ತಿವೆ.

MOST READ: ಚಾರ್ಜಿಂಗ್ ಸೌಲಭ್ಯ ನೀಡದ ಬಸ್ಸಿಗೆ ಬಿತ್ತು 5,000 ದಂಡ

ಹೆಚ್ಚಿದ ವಾಹನಗಳ ಉತ್ಪಾದನಾ ವೆಚ್ಚ- ಕಾರುಗಳ ಬೆಲೆ ಏರಿಕೆ ಮಾಡಿದ ಮಾರುತಿ ಸುಜುಕಿ..!

ಪೆಟ್ರೋಲ್ ಎಂಜಿನ್‌ಗಿಂತಲೂ ಡೀಸೆಲ್ ಎಂಜಿನ್‌ಗಳನ್ನು ಬಿಎಸ್-6 ನಿಯಮಕ್ಕೆ ಉನ್ನತೀಕರಿಸುವುದು ತುಸು ದುಬಾರಿಯಾಗಿದ್ದು, ಇದೇ ಕಾರಣಕ್ಕೆ ಮಾರುತಿ ಸುಜುಕಿ ಸೇರಿದಂತೆ ಹಲವು ಕಾರು ಉತ್ಪಾದನಾ ಸಂಸ್ಥೆಗಳು ಸದ್ಯಕ್ಕೆ ಪೆಟ್ರೋಲ್ ಎಂಜಿನ್ ಕಾರುಗಳನ್ನು ಮಾತ್ರವೇ ಬಿಎಸ್-6 ನಿಯಮಕ್ಕೆ ಉನ್ನತೀಕರಿಸಿ ಮಾರಾಟ ಮಾಡುತ್ತಿವೆ. ಮುಂಬರುವ 2020ರ ಏಪ್ರಿಲ್ ನಂತರವಷ್ಟೇ ಡೀಸೆಲ್ ಕಾರುಗಳನ್ನು ಹೊಸ ನಿಯಮದಂತೆ ಬಿಡುಗಡೆ ಮಾಡಲಿದ್ದು, ದುಬಾರಿ ಬೆಲೆ ಪಡೆದುಕೊಳ್ಳಲಿವೆ.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಹೆಚ್ಚಿದ ವಾಹನಗಳ ಉತ್ಪಾದನಾ ವೆಚ್ಚ- ಕಾರುಗಳ ಬೆಲೆ ಏರಿಕೆ ಮಾಡಿದ ಮಾರುತಿ ಸುಜುಕಿ..!

ಬಿಎಸ್-6 ಪೆಟ್ರೋಲ್ ಕಾರುಗಳು ಬಿಎಸ್-4 ಕಾರುಗಳಿಂತಲೂ ರೂ.15 ಸಾವಿರದಿಂದ ರೂ.20 ಸಾವಿರದಷ್ಟು ದುಬಾರಿಯಾಗಿದ್ದರೆ ಡೀಸೆಲ್ ಎಂಜಿನ್ ಮಾತ್ರ ಪ್ರಸ್ತುತ ಮಾರುಕಟ್ಟೆಯಲ್ಲಿನ ಬಿಎಸ್-4 ಕಾರುಗಳಿಂತಲೂ ರೂ.90 ಸಾವಿರದಿಂದ ರೂ.2 ಲಕ್ಷದಷ್ಟು ದುಬಾರಿಯಾಗಲಿವೆ.

MOST READ: ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಉತ್ಪಾದನೆಗಾಗಿ ರೂ.2,800 ಕೋಟಿ ಹೂಡಿಕೆ ಮಾಡಲಿದೆ ಬಿವೈಡಿ

ಹೆಚ್ಚಿದ ವಾಹನಗಳ ಉತ್ಪಾದನಾ ವೆಚ್ಚ- ಕಾರುಗಳ ಬೆಲೆ ಏರಿಕೆ ಮಾಡಿದ ಮಾರುತಿ ಸುಜುಕಿ..!

ಇದೇ ಕಾರಣಕ್ಕೆ ಮಾರುತಿ ಸುಜುಕಿ ಸಂಸ್ಥೆಯು ಅಗ್ಗದ ಬೆಲೆಯ ಕಾರುಗಳಲ್ಲಿ ಡೀಸೆಲ್ ಎಂಜಿನ್‌ಗಳನ್ನು ಉನ್ನತೀಕರಿಸುವ ಯೋಜನೆಯನ್ನು ಕೈಬಿಡಲು ನಿರ್ಧರಿಸಿದ್ದು, ಕೇವಲ ಪೆಟ್ರೋಲ್, ಹೈಬ್ರಿಡ್, ಸಿಎನ್‌ಜಿ ಮತ್ತು ಎಲೆಕ್ಟ್ರಿಕ್ ಕಾರುಗಳ ಮೇಲೆ ಹೆಚ್ಚು ಒತ್ತುನೀಡಲು ನಿರ್ಧರಿಸಿದೆ.

ಹೆಚ್ಚಿದ ವಾಹನಗಳ ಉತ್ಪಾದನಾ ವೆಚ್ಚ- ಕಾರುಗಳ ಬೆಲೆ ಏರಿಕೆ ಮಾಡಿದ ಮಾರುತಿ ಸುಜುಕಿ..!

ಹೀಗಾಗಿ ರೂ.10 ಲಕ್ಷದೊಳಗಿನ ಕಾರುಗಳಲ್ಲಿ ಡೀಸೆಲ್ ಎಂಜಿನ್ ಆಯ್ಕೆಯ ಬಗೆಗೆ ಹೆಚ್ಚು ತೆಲೆಕೆಡಿಸಿಕೊಳ್ಳದೇ ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಸಿಎನ್‌ಜಿ ಆವೃತ್ತಿಗಳಿಗೆ ವಿಶೇಷ ಗಮನಹರಿಸಲು ನಿರ್ಧರಿಸಲಾಗಿದ್ದು, ಎಂಟ್ರಿ ಲೆವೆಲ್ ಕಾರುಗಳಲ್ಲಿ 1.0-ಲೀಟರ್, 1.2-ಲೀಟರ್ ಮತ್ತು 1.5-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು ಹೈ ಎಂಡ್ ಮಾದರಿಗಳಲ್ಲಿ ಮಾತ್ರ 1.5-ಲೀಟರ್, 1.6-ಲೀಟರ್ ಸಾಮರ್ಥ್ಯದ ಡೀಸೆಲ್ ಎಂಜಿನ್ ಬಿಡುಗಡೆ ಮಾಡಲಿದೆ.

ಹೆಚ್ಚಿದ ವಾಹನಗಳ ಉತ್ಪಾದನಾ ವೆಚ್ಚ- ಕಾರುಗಳ ಬೆಲೆ ಏರಿಕೆ ಮಾಡಿದ ಮಾರುತಿ ಸುಜುಕಿ..!

ಒಂದು ವೇಳೆ ಮಾರುತಿ ಸುಜುಕಿ ಸಂಸ್ಥೆಯು ಬಿಎಸ್-6 ನಿಯಮ ಅನುಸಾರವಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ 1.3-ಲೀಟರ್ ಡೀಸೆಲ್ ಎಂಜಿನ್ ಮಾದರಿಯನ್ನು ಉನ್ನತೀಕರಣ ಮಾಡಿದರೂ ಸಹ ಬೆಲೆಯಲ್ಲಿ ಭಾರೀ ಏರಿಕೆಯಾಗಲಿದ್ದು, ಇದರಿಂದ ಗ್ರಾಹಕರನ್ನು ಕಳೆದುಕೊಳ್ಳಬೇಕಾಗುತ್ತದೆ.

Most Read Articles

Kannada
English summary
Maruti Suzuki to hike prices from Jan 2020. Read in Kannada.
Story first published: Tuesday, December 3, 2019, 17:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X