ಮಾರುತಿ ಎಸ್-ಕ್ರಾಸ್ ಆವೃತ್ತಿಯಲ್ಲಿ ಮೊದಲ ಬಾರಿಗೆ ಪೆಟ್ರೋಲ್ ಎಂಜಿನ್ ಆಯ್ಕೆ..!

ಮುಂಬರುವ 2020 ಏಪ್ರಿಲ್ 1ರಿಂದ ದೇಶಾದ್ಯಂತ ಬಿಎಸ್-6 ಪ್ರೇರಣೆಯ ಹೊಸ ವಾಹನಗಳು ರಸ್ತೆಗಿಳಿಯಲು ಸಜ್ಜಾಗುತ್ತಿದ್ದು, ಮಾರುತಿ ಸುಜುಕಿ ಸಂಸ್ಥೆಯು ಸಹ ತನ್ನ ಜನಪ್ರಿಯ ಕಾರುಗಳ ಎಂಜಿನ್ ತಂತ್ರಜ್ಞಾನದಲ್ಲಿ ಮಹತ್ವದ ಬದಲಾವಣೆಗಳನ್ನು ತರಲು ಬೃಹತ್ ಯೋಜನೆ ರೂಪಿಸಿದೆ. ಜೊತೆಗೆ ಡೀಸೆಲ್ ಎಂಜಿನ್‌ಗಳನ್ನು ತಗ್ಗಿಸಿ ಪೆಟ್ರೋಲ್ ಮತ್ತು ಸಿಎನ್‌ಜಿ ಆವೃತ್ತಿಗಳತ್ತ ಮುಖ ಮಾಡುತ್ತಿದೆ.

ಮಾರುತಿ ಎಸ್-ಕ್ರಾಸ್ ಆವೃತ್ತಿಯಲ್ಲಿ ಮೊದಲ ಬಾರಿಗೆ ಪೆಟ್ರೋಲ್ ಎಂಜಿನ್ ಆಯ್ಕೆ..!

ಈ ಹಿಂದೆ 2017ರ ಏಪ್ರಿಲ್ 1ರಂದು ಭಾರತದಲ್ಲಿ ಪರಿಚಯಿಸಲಾಗಿದ್ದ ಬಿಎಸ್ 4(ಭಾರತ್ ಸ್ಟೇಜ್) ನಿಯಮವು ಮುಂದಿನ 2020ರ ಮಾರ್ಚ್ 31ಕ್ಕೆ ಕೊನೆಗೊಳ್ಳಲಿದ್ದು, ಏಪ್ರಿಲ್ 1ರಿಂದಲೇ ಬಿಎಸ್ 6 ನಿಯಮದಂತೆ ಹೊಸ ವಾಹನಗಳ ಮಾರಾಟ ಪ್ರಕ್ರಿಯೆ ಆರಂಭವಾಗಲಿದೆ. ಹೀಗಾಗಿ ಆಟೋ ಉತ್ಪಾದನಾ ಸಂಸ್ಥೆಗಳು ಹೊಸ ನಿಯಮ ಅನ್ವಯ ಹೊಸ ವಾಹನಗಳನ್ನು ಮಾರಾಟ ಮಾಡಬೇಕಿದ್ದು, ನಿಯಮ ಪಾಲಿಸಲು ಸಾಧ್ಯವಾಗದ ವಾಹನಗಳು ಮಾರುಕಟ್ಟೆಯಿಂದ ನಿಷೇಧಗೊಳ್ಳಲಿವೆ.

ಮಾರುತಿ ಎಸ್-ಕ್ರಾಸ್ ಆವೃತ್ತಿಯಲ್ಲಿ ಮೊದಲ ಬಾರಿಗೆ ಪೆಟ್ರೋಲ್ ಎಂಜಿನ್ ಆಯ್ಕೆ..!

ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್ ಸೂಚನೆಯೆಂತೆ 2020ರ ಏಪ್ರಿಲ್ 1ರಿಂದ ಬಿಎಸ್-4 ವಾಹನಗಳ ಉತ್ಪಾದನೆ ಮತ್ತು ಮಾರಾಟ ಮೇಲೆ ನಿಷೇಧ ಹೇರುವುದು ಖಚಿತವಾಗಿದ್ದು, ಬಿಎಸ್-6 ವಾಹನಗಳು ಮತ್ತು ಅದಕ್ಕೂ ಹೆಚ್ಚಿನ ಮಟ್ಟದ ವಾಹನ ಮಾದರಿಗಳಿಗೆ ಮಾತ್ರವೇ ಅವಕಾಶ ನೀಡಲಿದೆ.

ಮಾರುತಿ ಎಸ್-ಕ್ರಾಸ್ ಆವೃತ್ತಿಯಲ್ಲಿ ಮೊದಲ ಬಾರಿಗೆ ಪೆಟ್ರೋಲ್ ಎಂಜಿನ್ ಆಯ್ಕೆ..!

ಹೀಗಾಗಿ ಕೇಂದ್ರ ಸರ್ಕಾರದ ಡೆಡ್‌ಲೈನ್‌ಗೂ ಮುನ್ನವೇ ಬಿಎಸ್ 6 ವೈಶಿಷ್ಟ್ಯತೆಯುಳ್ಳ ಎಂಜಿನ್ ಪ್ರೇರಿತ ಕಾರು ಮಾದರಿಗಳನ್ನು ಬಿಡುಗಡೆಗೊಳಿಸುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು, ಈ ಮೂಲಕ ಮಾಲಿನ್ಯ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ಬಹುದೊಡ್ಡ ಬದಲಾವಣೆ ಮಾಡುತ್ತಿದೆ.

ಮಾರುತಿ ಎಸ್-ಕ್ರಾಸ್ ಆವೃತ್ತಿಯಲ್ಲಿ ಮೊದಲ ಬಾರಿಗೆ ಪೆಟ್ರೋಲ್ ಎಂಜಿನ್ ಆಯ್ಕೆ..!

ಕೆಲವು ಮೂಲಗಳ ಪ್ರಕಾರ, ಮಾರುತಿ ಸುಜುಕಿ ಸಂಸ್ಥೆಯು ಸದ್ಯ ಎರ್ಟಿಗಾ ಮತ್ತು ಎಸ್-ಕ್ರಾಸ್ ಕಾರುಗಳಲ್ಲಿ ಜೋಡಣೆ ಮಾಡಲಾಗುತ್ತಿರುವ 1.3-ಲೀಟರ್ ಡೀಸೆಲ್ ಎಂಜಿನ್ ಅನ್ನು ಸ್ಥಗಿತಗೊಳಿಸಿ 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ಪರಿಚಯಿಸುತ್ತಿದ್ದು, ಇದರ ಜೊತೆಗೆ 1.0-ಲೀಟರ್ ಟರ್ಬೋ ಪೆಟ್ರೋಲ್ ಮತ್ತು 1.4-ಲೀಟರ್ ಟರ್ಬೋ ಪೆಟ್ರೋಲ್ ಆವೃತ್ತಿಗಳನ್ನು ಪರಿಚಯಿಸುವ ಇರಾದೆಯಲ್ಲಿದೆ.

ಮಾರುತಿ ಎಸ್-ಕ್ರಾಸ್ ಆವೃತ್ತಿಯಲ್ಲಿ ಮೊದಲ ಬಾರಿಗೆ ಪೆಟ್ರೋಲ್ ಎಂಜಿನ್ ಆಯ್ಕೆ..!

ಇನ್ನು ಫಿಯೆಟ್‌ ಸಂಸ್ಥೆಯಿಂದ ಎರವಲು ಪಡೆಯಲಾಗಿರುವ 1.5-ಲೀಟರ್ ಡಿಡಿಐಎಸ್225 ಫೋರ್ ಸಿಲಿಂಡರ್ ಎಂಜಿನ್ ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ 1.3-ಲೀಟರ್ ಡೀಸೆಲ್ ಎಂಜಿನ್‌ಗಿಂತಲೂ ಹೆಚ್ಚು ಪರ್ಫಾಮೆನ್ಸ್ ಮತ್ತು ಇಂಧನ ದಕ್ಷತೆಯನ್ನು ಪಡೆದುಕೊಂಡಿದ್ದು, ಇಂಗಾಲ ಹೊರಸೂಸುವಿಕೆ ಪ್ರಮಾಣವು ಸಹ ಪರಿಣಾಮಕಾರಿಯಾಗಿ ತಗ್ಗಿರುವುದನ್ನ ನಾವಿಲ್ಲಿ ಗಮನಿಸಬಹುದು.

MOST READ: ಹೋಂಡಾ ಆಕ್ಟೀವಾ ಸ್ಕೂಟರ್‌ಗಿಂತಲೂ ದುಬಾರಿ ಈ ಹೆಲ್ಮೆಟ್ ಬೆಲೆ..!

ಮಾರುತಿ ಎಸ್-ಕ್ರಾಸ್ ಆವೃತ್ತಿಯಲ್ಲಿ ಮೊದಲ ಬಾರಿಗೆ ಪೆಟ್ರೋಲ್ ಎಂಜಿನ್ ಆಯ್ಕೆ..!

ಜೊತೆಗೆ ಬಿಎಸ್-6 ನಿಯಮ ಅನುಸಾರವೇ ಸಿದ್ದಗೊಂಡಿರುವ ಹೊಸ ಎಂಜಿನ್ ಮಾದರಿಯು ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಪಡೆದುಕೊಂಡಿದ್ದು, 95-ಬಿಎಚ್‌ಪಿ ಮತ್ತು 225-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಪ್ರತಿ ಲೀಟರ್ ಡೀಸೆಲ್‌ಗೆ ಇದು 26.82 ಕಿ.ಮಿ ಮೈಲೇಜ್ ಹಿಂದಿರುಗಿಸಬಲ್ಲದು.

ಮಾರುತಿ ಎಸ್-ಕ್ರಾಸ್ ಆವೃತ್ತಿಯಲ್ಲಿ ಮೊದಲ ಬಾರಿಗೆ ಪೆಟ್ರೋಲ್ ಎಂಜಿನ್ ಆಯ್ಕೆ..!

ಇದರಿಂದ ಮಾರುತಿ ಸುಜುಕಿ ಕಾರುಗಳು ಮುಂಬರುವ ದಿನಗಳಲ್ಲಿ ಬಲಿಷ್ಠ ಎಂಜಿನ್ ಜೊತೆಗೆ ಅತ್ಯುತ್ತಮ ಇಂಧನ ದಕ್ಷತೆಯೊಂದಿಗೆ ಮತ್ತಷ್ಟು ಗ್ರಾಹಕರನ್ನು ಸೆಳೆಯುವ ನೀರಿಕ್ಷೆಯಲ್ಲಿದ್ದು, ಹೊಗೆಯ ಪ್ರಮಾಣವನ್ನು ತಗ್ಗಿಸುವಲ್ಲಿ ನೆರವಾಗಲಿರುವ ಹೊಸ ಎಂಜಿನ್‌ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿರುವ ಬೆಲೆಗಿಂತ ತುಸು ದುಬಾರಿಯಾಗಿರಲಿದೆ.

Article Published On: Saturday, April 27, 2019, 9:00 [IST]
English summary
Maruti Suzuki S-Cross Petrol Variant Coming Soon — The Petrol Way Of Life.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+