ಹೋಂಡಾ ಆಕ್ಟೀವಾ ಸ್ಕೂಟರ್‌ಗಿಂತಲೂ ದುಬಾರಿ ಈ ಹೆಲ್ಮೆಟ್ ಬೆಲೆ..!
ನಮ್ಮ ದೇಶದಲ್ಲಿ ಹೆಲ್ಮೆಟ್ ಖರೀದಿಗೆ ಎಷ್ಟು ಪ್ರಾಮುಖ್ಯತೆ ನೀಡುತ್ತೆವೆ ಎನ್ನುವುದು ಬಹುತೇಕರಿಗೆ ಗೊತ್ತಿರುವ ವಿಚಾರ. ಅಮೂಲ್ಯವಾದ ಜೀವಕ್ಕಿಂತ ಮುಖ್ಯವಾಗಿ ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕಿಬಿದ್ರೆ ಜೇಬು ಖಾಲಿಯಾಗುತ್ತೆ ಎನ್ನುವ ಭಯಕ್ಕಾಗಿ ಅದೆಷ್ಟೋ ಬೈಕ್ ಸವಾರರು ಹೆಲ್ಮೆಟ್ ಬಳಕೆ ಮಾಡುತ್ತಿರುವುದನ್ನು ನಾವೆಲ್ಲಾ ಒಪ್ಪಿಕೊಳ್ಳಬೇಕಾದ ಸತ್ಯ. ಹೀಗಾಗಿ ಪ್ರತಿಯೊಬ್ಬ ಬೈಕ್ ಸವಾರರು ಕೂಡಾ ಉತ್ತಮ ಗುಣಮಟ್ಟದ ಹೆಲ್ಮೆಟ್ ಬಳಕೆ ಮಾಡುವ ಅವಶ್ಯಕತೆಯಿದ್ದು, ಭಾರತದಲ್ಲಿ ಲಭ್ಯವಿರುವ ಕೆಲವು ಅತ್ಯುತ್ತಮ ಗುಣಮಟ್ಟದ ದುಬಾರಿ ಹೆಲ್ಮೆಟ್‌ಗಳ ಕುರಿತು ಇಲ್ಲಿ ಚರ್ಚಿಸಲಾಗಿದೆ.

ದ್ವಿಚಕ್ರ ವಾಹನ ಸವಾರರ ಜೀವರಕ್ಷಕವಾಗಿರುವ ಹೆಲ್ಮೆಟ್ ಬಗ್ಗೆ ಅದೆಷ್ಟೋ ಜಾಗೃತಿ ಅಭಿಯಾನ ಮಾಡಿದ್ರು ಹೆಲ್ಮೆಟ್ ಬಳಕೆ ಮಾಡದೆ ಜೀವ ಬಿಟ್ಟಿರುವ ಅದೆಷ್ಟೋ ದುರಂತಗಳನ್ನು ನಾವು ನೋಡಿದ್ದೇವೆ. ಅದರಲ್ಲೂ ದಂಡದಿಂದ ತಪ್ಪಿಸಿಕೊಳ್ಳಲು ಅಗ್ಗದ ಬೆಲೆಯ ಹೆಲ್ಮೆಟ್‌ಗಳನ್ನು ಬಳಕೆ ಮಾಡುತ್ತಿರುವುದು ಮತ್ತಷ್ಟು ದುರಂತಗಳಿಗೆ ಕಾರಣವಾಗುತ್ತಿದ್ದು, ಗುಣಮಟ್ಟದ ಹೆಲ್ಮೆಟ್ ಬಳಕೆ ಒಂದೇ ಸದ್ಯದ ಪರಿಸ್ಥಿತಿಯನ್ನು ಸುಧಾರಿಸಲು ಸಾಧ್ಯ ಎನ್ನಬಹುದು.

ದಿನಂಪ್ರತಿ 98 ಮಂದಿ ಸಾವು..!
ಅಧ್ಯಯನ ಒಂದರ ಪ್ರಕಾರ, ಭಾರತದಲ್ಲಿ ಹೆಲ್ಮೆಟ್ ಬಳಕೆ ಮಾಡದೆ ಅಪಘಾತದಲ್ಲಿ ಸಾವನ್ನಪ್ಪುತ್ತಿರುವ ಸಂಖ್ಯೆ ಒಂದು ದಿನಕ್ಕೆ 98 ಎಂದು ಅಂದಾಜಿಸಿದ್ದು, ಇದರಲ್ಲಿ ರಸ್ತೆ ಬದಿಯಲ್ಲಿ ಸಿಗುವ ಅಗ್ಗದ ಬೆಲೆಯ ಹೆಲ್ಮೆಟ್‌ಗಳನ್ನು ಖರೀದಿ ಮಾಡಿ ಜೀವ ಕಳೆದುಕೊಳ್ಳುವರರ ಸಂಖ್ಯೆ ಹೆಚ್ಚಿದೆ ಅಂದ್ರೆ ನೀವು ನಂಬಲೇಬೇಕು.

ಆದ್ರು ಹೆಲ್ಮೆಟ್ ಆಯ್ಕೆಯು ಇತ್ತೀಚೆಗೆ ಒಂದು ಪ್ಯಾಶನ್ ಆಗಿ ಮಾರ್ಪಾಡುತ್ತಿದೆ. ಯಾಕೆಂದ್ರೆ ದೇಶದಲ್ಲಿ ಹೆಚ್ಚುತ್ತಿರುವ ಸೂಪರ್ ಬೈಕ್‌ಗಳ ಕ್ರೇಜ್‌ಯಿಂದಾಗಿ ಗುಣಮಟ್ಟದ ಹೆಲ್ಮೆಟ್ ಆಯ್ಕೆ ಕೂಡಾ ತುಂಬಾ ಮುಖ್ಯವಾದ ಸಂಗತಿಯಾಗಿದೆ.

ಸದ್ಯ ಭಾರತದಲ್ಲಿ ರೂ.100 ದಿಂದ ಹಿಡಿದು ಲಕ್ಷ ರೂಪಾಯಿ ತನಕವೂ ಹೆಲ್ಮೆಟ್‌ಗಳು ಮಾರಾಟಕ್ಕಿದ್ದು, ಹತ್ತಾರು ವಿದೇಶಿ ಹೆಲ್ಮೆಟ್ ಉತ್ಪಾದನಾ ಸಂಸ್ಥೆಗಳು ಭಾರತದಲ್ಲಿ ವಿಶ್ವದರ್ಜೆ ಗುಣಮಟ್ಟದ ಹೆಲ್ಮೆಟ್ ಮಾರಾಟದಲ್ಲಿ ಭಾರೀ ಲಾಭಗಳಿಸುತ್ತಿವೆ.

ಅದರಲ್ಲೂ ಕೆಲವು ಹೆಲ್ಮೆಟ್ ಉತ್ಪಾದನಾ ಸಂಸ್ಥೆಗಳು ಸಾಮಾನ್ಯ ಸ್ಕೂಟರ್ ಮಾದರಿಗಳಿಂತಲೂ ಹೆಚ್ಚಿನ ಬೆಲೆಗೆ ಹೆಲ್ಮೆಟ್‌ಗಳನ್ನು ಮಾರಾಟ ಮಾಡುತ್ತಿದ್ದು, ಜರ್ಮನ್ ಬ್ರಾಂಡ್ ಸುಬರ್ತ್ ಸಂಸ್ಥೆಯು ಮಾರಾಟ ಮಾಡುತ್ತಿರುವ ಸಿ4 ಹೆಲ್ಮೆಟ್‌ಗಳು ದೇಶದಲ್ಲಿ ಮಾರಾಟವಾಗುತ್ತಿರುವ ಅತಿ ದುಬಾರಿ ಹೆಲ್ಮೆಟ್‌ಗಳಲ್ಲಿ ಒಂದಾಗಿದೆ.

ಜನಪ್ರಿಯ ಸುಬರ್ತ್ ಹೆಲ್ಮೆಟ್ ಸಂಸ್ಥೆಯು ಇಂದು ವಿಶ್ವದ ಅತಿ ದುಬಾರಿ ಹೆಲ್ಮೆಟ್‌ಗಳನ್ನು ಮಾರಾಟ ಮಾಡುತ್ತಿರುವ ಸಂಸ್ಥೆಗಳಲ್ಲಿ ಒಂದಾಗಿದ್ದು, ಫಾರ್ಮುಲಾ ಒನ್ ರೇಸ್ ವಿಶ್ವ ಚಾಂಪಿಯನ್ ಲೂಯಿಸ್ ಹ್ಯಾಮಿಲ್ಟನ್ ಕೂಡಾ ಸುಬರ್ತ್ ಹೆಲ್ಮೆಟ್ ಬಳಕೆದಾರನಾಗಿದ್ದಾನೆ.
MOST READ: ಖರೀದಿಗೆ ಲಭ್ಯವಾದ ವಿಶ್ವದ ಮೊದಲ ಎಸಿ ಹೆಲ್ಮೆಟ್ ವಿಶೇಷತೆಗಳು ಏನು?

ಸುಮಾರು 1.81 ಕೆ.ಜಿ ತೂಕ ಹೊಂದಿರುವ ಈ ಹೆಲ್ಮೆಟ್ ಮಾದರಿಯು ಡಾಟ್ ಮತ್ತು ಇಸಿಇ ಸಂಸ್ಥೆಗಳಿಂದ ಪ್ರಾಮಾಣಿಕೃತಗೊಂಡಿದ್ದು, ಗರಿಷ್ಠ ಸುರಕ್ಷಾ ಸೌಲಭ್ಯಗಳನ್ನು ಹೊಂದಿರುವ ಈ ಹೆಲ್ಮೆಟ್‌ನಲ್ಲಿ ಹತ್ತು ಹಲವು ವಿಶ್ವದರ್ಜೆ ವಿನ್ಯಾಸಗಳಿವೆ.

ಎಲ್ಲಾ ಸಮಯದಲ್ಲೂ ಹೆಲ್ಮೆಟ್ ಒಳಭಾಗದಲ್ಲಿ ತಂಪು ಇರುವಂತೆ ಮಾಡಲು ಹೆಲ್ಮೆಟ್ ಅಂಚುಗಳಲ್ಲಿ ಏರ್ ವೆಂಟ್‌ಗಳನ್ನು ಜೋಡಿಸಲಾಗಿದ್ದು, ಲೈಟ್‌ವೆಟ್ ಫೈಬರ್‌ನೊಂದಿಗೆ ಆ್ಯಂಟಿ ಬ್ಯಾಕ್ಟಿರಿಯಾ ಮತ್ತು ಎರಡು ಹಂತದಲ್ಲಿ ಹೆಲ್ಮೆಟ್ ಅನ್ನು ವಿಸ್ತರಿಸಬಹುದಾದ ಗುಣಹೊಂದಿದೆ.

ಹೆಲ್ಮೆಟ್ ಬೆಲೆ 70 ಸಾವಿರ ಅಷ್ಟೇ..!
ಹೌದು, ಸುಬರ್ತ್ ಸಿ4 ಹೆಲ್ಮೆಟ್ ಬೆಲೆಗಳು ರೂ.70 ಸಾವಿರವಿದ್ದು, ಕಸ್ಟಮ್ ಟ್ಯಾಕ್ಸ್ ಸೇರಿ ರೂ.85 ಸಾವಿರದಿಂದ ರೂ. 90 ಸಾವಿರ ತನಕ ಬೆಲೆ ಪಡೆದುಕೊಂಡಿವೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕಡಿಮೆ ಬೆಲೆಯಲ್ಲೂ ಸಿ4 ಹೆಲ್ಮೆಟ್‌ಗಳು ಮಾರಾಟಕ್ಕಿದ್ದು, ಸುರಕ್ಷತೆ ಹೆಚ್ಚಿನ ಆದ್ಯತೆ ನೀಡುತ್ತಿದೆ.
MOST READ: ಬೈಕ್ ಪ್ರಿಯರಿಗೆ ಸಿಹಿಸುದ್ದಿ- ಸದ್ಯದಲ್ಲೇ ಬದಲಾಗಲಿವೆ ಹೆಲ್ಮೆಟ್ ವಿನ್ಯಾಸ

ಹಾಗಂತ ನೀವು ಕೂಡಾ ಸುಬರ್ತ್ ಹೆಲ್ಮೆಟ್‌ಗಳನ್ನೇ ಖರೀದಿ ಮಾಡಿ ಅಂತಾ ಹೇಳುತ್ತಿಲ್ಲ. ಸುಬರ್ತ್ ಹೆಲ್ಮೆಟ್‌ಗಳು ಹೆಚ್ಚಾಗಿ ಸೂಪರ್ ಬೈಕ್ ಸವಾರರಿಗೆ ಹೆಚ್ಚಿನ ಅವಶ್ಯಕತೆಯಿದ್ದು, ಅವರು ಅದನ್ನು ಖರೀದಿ ಮಾಡಿಯೇ ಮಾಡುತ್ತಾರೆ. ಆದ್ರೆ ಸಾಮಾನ್ಯ ಬೈಕ್ ಸವಾರರು ಅಗ್ಗದ ಬೆಲೆಯಲ್ಲಿ ಸಿಗುವ ಹೆಲ್ಮೆಟ್ ಖರೀದಿ ಮಾಡುವುದನ್ನು ಬಿಟ್ಟು ತುಸು ದುಡ್ಡು ಖರ್ಚಾದ್ರು ಪರವಾಗಿಲ್ಲ ಒಂದು ಉತ್ತಮ ಗುಣಮಟ್ಟದ ಹೆಲ್ಮೆಟ್ ಖರೀದಿ ಮಾಡಿ ಎನ್ನುವುದು ನಮ್ಮ ಕಳಕಳಿ.


Click it and Unblock the Notifications








