ಬೈಕ್ ಪ್ರಿಯರಿಗೆ ಸಿಹಿಸುದ್ದಿ- ಸದ್ಯದಲ್ಲೇ ಬದಲಾಗಲಿವೆ ಹೆಲ್ಮೆಟ್ ವಿನ್ಯಾಸ

By Praveen Sannamani

ಕೆಲವರಿಗೆ ಹೆಲ್ಮೆಟ್ ಹಾಕಿ ಬೈಕ್ ಓಡಿಸುವುದು ಅಂದ್ರೆ ತುಂಬಾನೇ ಅಲರ್ಜಿ ಅಂತಾ ಕಾಣುತ್ತೆ. ಇದಕ್ಕೆ ಹಲವಾರು ಕಾರಣಗಳನ್ನು ಕೊಡುವ ಕೆಲವು ಬೈಕ್ ಸವಾರರು ಕೆಜಿಗಷ್ಟಲೇ ತೂಕವಿರುವ ಹೆಲ್ಮೆಟ್‌ಗಳಿಂದ ಕೂದಲು ಉದುರುವಿಕೆ ಸೇರಿದಂತೆ ಹಲವು ಕಾರಣಗಳನ್ನು ನೀಡ್ತಾರೆ. ಆದ್ರೆ ಇದಕ್ಕೆಲ್ಲಾ ಇನ್ಮುಂದೆ ಚಿಂತಿಸಬೇಕಿಲ್ಲಾ.

ಬೈಕ್ ಪ್ರಿಯರಿಗೆ ಸಿಹಿಸುದ್ದಿ- ಸದ್ಯದಲ್ಲೇ ಬದಲಾಗಲಿವೆ ಹೆಲ್ಮೆಟ್ ವಿನ್ಯಾಸ

ಹೌದು, ಕಳೆದ ಕೆಲ ತಿಂಗಳಿನಿಂದ ಐಎಸ್ಐ ಮಾನ್ಯತೆಯಿಲ್ಲದ ಹೆಲ್ಮೆಟ್ ಮಾರಾಟಕ್ಕೆ ಸಾಕಷ್ಟು ನಿರ್ಬಂಧಗಳನ್ನು ಹೇರುತ್ತಿದ್ದು, ಇದರ ಬೆನ್ನಲ್ಲೇ ಬೈಕ್ ಸವಾರರಿಗೆ ಅನೂಕಲಕರವಾಗುವ ಹೊಸ ನಮೂನೆಯ ಫುಲ್ ಫೇಸ್ ಹೆಲ್ಮೆಟ್‌ಗಳನ್ನು ಪರಿಚಯಿಸಲು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್(ಬಿಎಸ್ಐ) ಸಂಸ್ಥೆಯು ಒಪ್ಪಿಗೆ ಸೂಚಿಸಿದೆ.

ಬೈಕ್ ಪ್ರಿಯರಿಗೆ ಸಿಹಿಸುದ್ದಿ- ಸದ್ಯದಲ್ಲೇ ಬದಲಾಗಲಿವೆ ಹೆಲ್ಮೆಟ್ ವಿನ್ಯಾಸ

ಸದ್ಯ ಮೋಟಾರ್ ಕಾಯ್ದೆ ಸುರಕ್ಷಾ ನೀತಿ ಅನ್ವಯ ಐಎಸ್ಐ ಮುದ್ರಿತ ಹೆಲ್ಮೆಟ್‌ಗಳು 1.5 ಕೆ.ಜಿ ಸ್ಟ್ಯಾಂಡರ್ಡ್ ತೂಕವನ್ನು ಪಡೆದುಕೊಂಡಿದ್ದು, ಇದರಿಂದ ಕೆಲವು ಬೈಕ್ ಸವಾರರು ನಿಗದಿತ ಮಟ್ಟದಲ್ಲಿ ಹೆಲ್ಮೆಟ್ ಬಳಕೆ ಮಾಡುತ್ತಿಲ್ಲ ಎನ್ನುವ ಆರೋಪಗಳಿವೆ.

ಬೈಕ್ ಪ್ರಿಯರಿಗೆ ಸಿಹಿಸುದ್ದಿ- ಸದ್ಯದಲ್ಲೇ ಬದಲಾಗಲಿವೆ ಹೆಲ್ಮೆಟ್ ವಿನ್ಯಾಸ

ಇದರಿಂದ ಬೈಕ್ ಸವಾರರು ಹೆಲ್ಮೆಟ್ ಧರಿಸಲು ಅನುಕೂಲಕರವಾಗುವಂತೆ ಹೆಲ್ಮೆಟ್ ತೂಕವನ್ನು 1.2 ಕೆ.ಜಿಗೆ ಇಳಿಕೆ ಮಾಡಿದ್ದು, ಇದರಿಂದ ಬೈಕ್ ಸವಾರರು ಹೆಲ್ಮೆಟ್ ಧರಿಸಲು ಅನುಕೂಲಕರವಾಗುವುದಲ್ಲದೇ ಹೆಲ್ಮೆಟ್ ಗುಣಮಟ್ಟವನ್ನು ಕಾಯ್ದುಕೊಳ್ಳಲು ಸಹಕಾರಿಯಾಗಲಿದೆ ಎನ್ನಲಾಗಿದೆ.

ಬೈಕ್ ಪ್ರಿಯರಿಗೆ ಸಿಹಿಸುದ್ದಿ- ಸದ್ಯದಲ್ಲೇ ಬದಲಾಗಲಿವೆ ಹೆಲ್ಮೆಟ್ ವಿನ್ಯಾಸ

ಈ ಬಗ್ಗೆ ಮಾತನಾಡಿರುವ ಐಎಸ್ಐ ಹೆಲ್ಮೆಟ್ ಮ್ಯಾನುಫ್ಯಾಚ್ಚರ್ ಅಸೋಸಿಯೇಷನ್ ಅಧ್ಯಕ್ಷ ರಾಜೀವ್ ಕಪೂರ್ ಅವರು, ಹೆಲ್ಮೆಟ್ ಇಲ್ಲದೆಯೇ ಬೈಕ್ ಸವಾರಿಯಿಂದ ದೇಶದಲ್ಲಿ ಪ್ರತಿ ವರ್ಷ ಸಾವಿರರು ಜನ ಸಾವನ್ನಪ್ಪುತ್ತಿದ್ದು, ಈ ಹಿನ್ನೆಲೆಯಲ್ಲಿ ಹೆಲ್ಮೆಟ್ ಖರೀದಿಗೆ ಪ್ರೋತ್ಸಾಹಿಸುವ ಸಲುವಾಗಿ ಗ್ರಾಹಕರ ಆಕರ್ಷಣೆ ಮಾಡುವಂತಹ ಗುಣಮಟ್ಟದ ಲೈಟ್ ವೇಟ್ ಹೆಲ್ಮೆಟ್‌ಗಳನ್ನ ವಿನ್ಯಾಸ ಮಾಡಿರುವುದಾಗಿ ಮಾಹಿತಿ ನೀಡಿದ್ದಾರೆ.

ಬೈಕ್ ಪ್ರಿಯರಿಗೆ ಸಿಹಿಸುದ್ದಿ- ಸದ್ಯದಲ್ಲೇ ಬದಲಾಗಲಿವೆ ಹೆಲ್ಮೆಟ್ ವಿನ್ಯಾಸ

ಹೊಸ ಯೋಜನೆಯು ಮುಂದಿನ 2019ರ ಜನವರಿ 15ರಿಂದ ಕಡ್ಡಾಯವಾಗಿ ಜಾರಿ ಬರಲಿದ್ದು, ಪ್ರತಿಯೊಬ್ಬರು ಐಎಸ್ಐ ಮುದ್ರಿತ ಅಥವಾ ಅದಕ್ಕೂ ಹೆಚ್ಚಿನ ಗುಣಮಟ್ಟದ ವಿದೇಶಿ ಸಂಸ್ಥೆಗಳಿಂದ ಮಾನ್ಯತೆ ಹೊಂದಿರುವ ಡಾಟ್, ಇಸಿಇ ಮತ್ತು ಎಸ್ಎನ್ಇಎಲ್ಎಲ್ ಹೆಲ್ಮೆಟ್‌ಗಳನ್ನು ಸಹ ಬಳಕೆ ಮಾಡಬಹುದಾಗಿದೆ.

ಬೈಕ್ ಪ್ರಿಯರಿಗೆ ಸಿಹಿಸುದ್ದಿ- ಸದ್ಯದಲ್ಲೇ ಬದಲಾಗಲಿವೆ ಹೆಲ್ಮೆಟ್ ವಿನ್ಯಾಸ

ಹೀಗಾಗಿ ಕಳಪೆ ಗುಣಮಟ್ಟದ ಹೆಲ್ಮೆಟ್ ಮತ್ತು ನಕಲಿ ಐಎಸ್ಐ ಹೆಲ್ಮೆಟ್ ಉತ್ಪಾದನೆ ಮತ್ತು ಮಾರಾಟದ ಮೇಲೆ ಮತ್ತಷ್ಟು ಕಠಿಣ ಕ್ರಮಗಳನ್ನ ಜಾರಿಗೊಳಿಸಲಿದ್ದು, ಬೈಕ್ ಸವಾರರ ಸುರಕ್ಷತೆಗಾಗಿ ಇಂತದೊಂದು ಮಹತ್ವದ ನಿರ್ಧಾರ ಪ್ರಕಟಿಸುತ್ತಿರುವುದು ಸ್ವಾಗತಾರ್ಹ ನಿರ್ಧಾರ ಅಂದ್ರೆ ತಪ್ಪಾಗುದಿಲ್ಲ.

ಬೈಕ್ ಪ್ರಿಯರಿಗೆ ಸಿಹಿಸುದ್ದಿ- ಸದ್ಯದಲ್ಲೇ ಬದಲಾಗಲಿವೆ ಹೆಲ್ಮೆಟ್ ವಿನ್ಯಾಸ

ಹೆಲ್ಮೆಟ್ ಆಯ್ಕೆ ಕಷ್ಟವೇ? ಇಲ್ಲಿದೆ ಸುಲಭ ಉಪಾಯ.!

ಇಲ್ಲೊಂದು ಜೋಕ್ ಇದೆ. ಭಾರತದಲ್ಲಿ ದ್ವಿಚಕ್ರ ವಾಹನ ಸವಾರರು ಹಲ್ಮೆಟ್ ಯಾತಕ್ಕಾಗಿ ಧರಿಸುತ್ತಾರೆ ಗೊತ್ತಿದೆಯೇ? ಭದ್ರತೆಗಾಗಿ ಅಲ್ಲ; ಬದಲಾಗಿ ಟ್ರಾಫಿಕ್ ಪೊಲೀಸ್ ಕೈಯಿಂದ 100 ರು.ಗಳ ದಂಡದಿಂದ ಪಾರಾಗಲು! ಎಷ್ಟೊಂದು ವಿಚಿತ್ರ ನೋಡಿ.

ಬೈಕ್ ಪ್ರಿಯರಿಗೆ ಸಿಹಿಸುದ್ದಿ- ಸದ್ಯದಲ್ಲೇ ಬದಲಾಗಲಿವೆ ಹೆಲ್ಮೆಟ್ ವಿನ್ಯಾಸ

ಸಾರಿಗೆ ಇಲಾಖೆ ಹಾಗೂ ಸರಕಾರ ಹೆಲ್ಮೆಟ್ ಬಳಕೆ ಬಗ್ಗೆ ಸದಾ ಜಾಗರೂಕತೆ ಮೂಡಿಸಿದರೂ ದ್ವಿಚಕ್ರ ಸವಾರರು ಮಾತ್ರ ಕ್ಯಾರೇ ಅನ್ನುವುದಿಲ್ಲ. ನೀವೊಮ್ಮೆ ಯೋಚಿಸಿ ನೋಡಿ ನಿಮ್ಮ ಜೀವ ಹೋದರೆ ಅಥವಾ ತಲೆಗೆ ಪೆಟ್ಟು ಮಾಡಿಕೊಂಡು ಹಾಸಿಗೆ ಹಿಡಿದ್ದಲ್ಲಿ ಯಾರಿಗೆ ತಾನೇ ನಷ್ಟ?

ಬೈಕ್ ಪ್ರಿಯರಿಗೆ ಸಿಹಿಸುದ್ದಿ- ಸದ್ಯದಲ್ಲೇ ಬದಲಾಗಲಿವೆ ಹೆಲ್ಮೆಟ್ ವಿನ್ಯಾಸ

ನಿಮಗೆ ತಿಳಿದಿರುವಂತೆಯೇ ದೇಶದಲ್ಲಿ ಹೆಲ್ಮೆಟ್ ಬಳಕೆ ಕಡ್ಡಾಯ. ಅಷ್ಟಕ್ಕೂ ಹೆಸರಿಗೆ ಮಾತ್ರ ಹೆಲ್ಮೆಟ್ ಧರಿಸಿದರೆ ಸಾಲದು. ಅದರ ಸರಿಯಾದ ರೀತಿಯಲ್ಲಿನ ಬಳಕೆ ಸಹ ಅಷ್ಟೇ ಮುಖ್ಯ. ಈ ಮೂಲಕ ಅಚಾನಕ್ ಆಗುವ ಅಪಘಾತದಿಂದ ಪಾರಾಗಬಹುದಾಗಿದೆ. ಇಂದಿನ ಈ ಲೇಖನದಲ್ಲಿ ಸರಿಯಾದ ರೀತಿಯ ಹೆಲ್ಮೆಟ್ ಬಳಕೆಯ ಬಗ್ಗೆ ಮಾಹಿತಿ ಕೊಡಲಿದ್ದೇವೆ.

ಬೈಕ್ ಪ್ರಿಯರಿಗೆ ಸಿಹಿಸುದ್ದಿ- ಸದ್ಯದಲ್ಲೇ ಬದಲಾಗಲಿವೆ ಹೆಲ್ಮೆಟ್ ವಿನ್ಯಾಸ

ಹೆಲ್ಮೆಟ್ ಶೈಲಿ

ಹೆಲ್ಮೆಟ್ ಧರಿಸುವುದಕ್ಕಿಂತಲೂ ಮೊದಲು ಮಾರುಕಟ್ಟೆಯಲ್ಲಿ ಯಾವೆಲ್ಲ ಶೈಲಿಯ ಹೆಲ್ಮೆಟ್‌ಗಳು ದೊರಕುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಸಾಧಾರಣವಾಗಿ ಮೂರು ಶೈಲಿಯ ಹೆಲ್ಮೆಟ್‌ಗಳು ಮಾರುಕಟ್ಟೆಯಲ್ಲಿವೆ. ಅವುಗಳೆಂದರೆ ಓಪನ್, ಫ್ಲಿಪ್ ಅಪ್ ಅಥವಾ ಮೊಡ್ಯುಲರ್ ಹಾಗೆಯೇ ಫುಲ್ ಫೇಸ್ ಹೆಲ್ಮೆಟ್.

ಬೈಕ್ ಪ್ರಿಯರಿಗೆ ಸಿಹಿಸುದ್ದಿ- ಸದ್ಯದಲ್ಲೇ ಬದಲಾಗಲಿವೆ ಹೆಲ್ಮೆಟ್ ವಿನ್ಯಾಸ

ಓಪನ್ ಫೇಸ್ ಹೆಲ್ಮೆಟ್

ಇತರ ಹೆಲ್ಮೆಟ್‌ಗಳಿಗೆ ಹೋಲಿಸಿದಾಗ ಓಪನ್ ಫೇಸ್ ಹೆಲ್ಮೆಟ್‌ನ ಮುಖ್ಯ ಪ್ರಯೋಜನವೆಂದರೆ ಹೆಚ್ಚು ತಂಪಾಗಿರುತ್ತವೆ. ಹಾಗೆಯೇ ಹೆಚ್ಚು ಗೋಚರತೆ ಲಭ್ಯವಾಗುತ್ತದೆ. ಅಷ್ಟೇ ಅಲ್ಲದೆ ವೈಯಕ್ತಿಕವಾಗಿ ನಿಮಗೆ ಸ್ಟೈಲಿಷ್ ಲುಕ್ ನೀಡುತ್ತದೆ. ಆದರೆ ಇಲ್ಲಿ ನೆನಪಿಡಬೇಕಾದ ಅಂಶವೆಂದರೆ ನೆಲಕ್ಕಪ್ಪಳಿಸುವ ಮುಖ ಎಷ್ಟೇ ಸ್ಲೈಲ್ ಆದರೇನು ಪ್ರಯೋಜನ?

ಬೈಕ್ ಪ್ರಿಯರಿಗೆ ಸಿಹಿಸುದ್ದಿ- ಸದ್ಯದಲ್ಲೇ ಬದಲಾಗಲಿವೆ ಹೆಲ್ಮೆಟ್ ವಿನ್ಯಾಸ

ಪ್ಲಿಪ್ ಅಪ್ ಅಥವಾ ಮೊಡ್ಯುಲರ್ ಹೆಲ್ಮೆಟ್

ಫುಲ್ ಫೇಸ್ ಹೆಲ್ಮೆಟ್‌ಗಳಷ್ಟೇ ಸುರಕ್ಷತೆಯನ್ನು ನೀಡುವ ಪ್ಲಿಪ್ ಅಪ್ ಹೆಲ್ಮೆಟ್‌ಗಳು ಹೆಚ್ಚು ಜನಪ್ರಿಯವಾಗಿದೆ. ಇದರ ಮುಖ್ಯ ಪ್ರಯೋಜನವೆಂದರೆ ಟ್ರಾಫಿಕ್ ಮುಂತಾದ ಪ್ರದೇಶಗಳಲ್ಲಿ ಇದರ ಮುಂಭಾಗವನ್ನು ಮೇಲಕ್ಕೆ ತಿರುವುದರಿಂದ ನಿಮಗೆ ತಂಪಾದ ಗಾಳಿ ಸವಿಯಬಹುದಾಗಿದೆ. ಆದರೆ ಇದರಿಂದ ದುಷ್ಪಪರಿಣಾವು ಇದೆ. ಕೆಲವೊಂದು ಅಪಘಾತ ಸಂದರ್ಭದಲ್ಲಿ ಇದೇ ಕಾರಣದಿಂದ ಪೆಟ್ಟಾಗುವ ಸಾಧ್ಯತೆಗಳಿವೆ.

ಬೈಕ್ ಪ್ರಿಯರಿಗೆ ಸಿಹಿಸುದ್ದಿ- ಸದ್ಯದಲ್ಲೇ ಬದಲಾಗಲಿವೆ ಹೆಲ್ಮೆಟ್ ವಿನ್ಯಾಸ

ಫುಲ್ ಫೇಸ್ ಹೆಲ್ಮೆಟ್

ಇಷ್ಟೆಲ್ಲ ವಿಚಾರಗಳಿದ್ದರೂ ಸಂಪೂರ್ಣ ಮುಖ ಮರೆಮಾಚುವ ಹೆಲ್ಮೆಟ್‌ನಿಂದ ಮಾತ್ರ ನಿಮಗೆ ಗರಿಷ್ಠ ಸುರಕ್ಷತೆ ನೀಡಲು ಸಾಧ್ಯ. ಇತರ ಶೈಲಿಗಿಂತಲೂ ಫುಲ್ ಫೇಸ್ ಹೆಲ್ಮೆಟ್‌ಗಳಲ್ಲಿ ಹಲವಾರು ಪ್ರಯೋಜನಗಳಿವೆ. ಇದು ನಿಮ್ಮ ತಲೆ ಹಾಗೂ ಕುತ್ತಿಗೆಗೆ ಗರಿಷ್ಠ ಸುರಕ್ಷತೆಯನ್ನು ಒದಗಿಸುತ್ತದೆ. ಹಾಗೆಯೇ ಸವಾರಿಯ ವೇಳೆ ನಿಮ್ಮ ಮುಖದತ್ತ ಬೀಸಬಹುದಾದ ಧೂಳಿನ ಕಣ, ಸಣ್ಣ ಸಣ್ಣ ಕಲ್ಲು ಅಥವಾ ಕೀಟಗಳಿಂದ ರಕ್ಷಣೆ ಒದಗಿಸುತ್ತವೆ.

ಬೈಕ್ ಪ್ರಿಯರಿಗೆ ಸಿಹಿಸುದ್ದಿ- ಸದ್ಯದಲ್ಲೇ ಬದಲಾಗಲಿವೆ ಹೆಲ್ಮೆಟ್ ವಿನ್ಯಾಸ

ಪೆಟ್ಟಾಗುವ ಸಾಧ್ಯತೆ

ಅಮೆರಿಕ ಸಂಶೋಧನೆ ಪ್ರಕಾರ, ಶೇಕಡಾ 60ರಷ್ಟು ಪ್ರಕರಣಗಳಲ್ಲಿ ಹೆಲ್ಮೆಟ್ ಮುಂಭಾಗದಲ್ಲಿ ಗಲ್ಲದ ಸುತ್ತಲೂ ಪೆಟ್ಟಾಗುವ ಸಾಧ್ಯತೆ ಜಾಸ್ತಿಯಾಗಿರುತ್ತದೆ. ಇದರಿಂದಲೇ ಫುಲ್ ಫೇಸ್ ಹೆಲ್ಮೆಟ್‌ಗಳ ಮಹತ್ವವನ್ನು ಅರಿಯಬಹುದಾಗಿದೆ. ಈ ಸಂಶೋಧನಾ ವರದಿಯು ಭಾರತಕ್ಕೂ ಬಹುತೇಕ ಸಮಾನವಾಗಿದೆ ಎಂಬುದು ಅಷ್ಟೇ ಗಮನಾರ್ಹ ಸಂಗತಿ.

ಬೈಕ್ ಪ್ರಿಯರಿಗೆ ಸಿಹಿಸುದ್ದಿ- ಸದ್ಯದಲ್ಲೇ ಬದಲಾಗಲಿವೆ ಹೆಲ್ಮೆಟ್ ವಿನ್ಯಾಸ

ಫುಲ್ ಫೇಸ್ ಹೆಲ್ಮೆಟ್ ಅನಾನುಕೂಲತೆ

ಅಂದ ಹಾಗೆ ಫುಲ್ ಫೇಸ್ ಹೆಲ್ಮೆಟ್‌ಗಳಿಂದ ಕೆಲವೊಂದು ಅನಾನುಕೂಲತೆಗಳು ಇರುತ್ತದೆ. ಬೇಸಿಗೆಯಲ್ಲಿ ಬಿಸಿಲು ನೆತ್ತಿಗೇರಿದಾಗ (ತಲೆಗೆ ಕರವಸ್ತ್ರ ಬಳಸಬಹುದು), ಅಥವಾ ಮಂಜು ಕವಿದ ಹಾಗೂ ಮಂಕಾದ ವಾತಾವರಣದಲ್ಲಿ ಗೋಚರತೆಯ ಸಮಸ್ಯೆ ಉಂಟಾಗಬಹುದು. ಆದರೆ ಗುಣಮಟ್ಟತೆಯ ಹೆಲ್ಮೆಟ್ ಧರಿಸುವುಕೆಯಿಂದ ಇವೆಲ್ಲವನ್ನು ನಿಭಾಯಿಸಬಹುದಾಗಿದೆ.

ಬೈಕ್ ಪ್ರಿಯರಿಗೆ ಸಿಹಿಸುದ್ದಿ- ಸದ್ಯದಲ್ಲೇ ಬದಲಾಗಲಿವೆ ಹೆಲ್ಮೆಟ್ ವಿನ್ಯಾಸ

ಅಂತಿಮ ಮಾತು

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಅತ್ಯಂತ ಹೆಚ್ಚು ಸುರಕ್ಷತಾ ಮಾನದಂಡಗಳನ್ನು ಹೊಂದಿರುವ ಹೆಲ್ಮೆಟ್‌ಗಳನ್ನು ಧರಿಸಬೇಕು. ಇಲ್ಲಿ ಫುಲ್ ಫೇಸ್ ಹೆಲ್ಮೆಟ್‌ಗಳಿಂದ ಮಾತ್ರ ಹೆಚ್ಚು ಭದ್ರತೆಯನ್ನು ನೀಡಲು ಸಾಧ್ಯ. ಹಾಗಾಗಿ ಮಾರುಕಟ್ಟೆಯಲ್ಲಿ ವೈವಿಧ್ಯಮಯ ಹೆಲ್ಮೆಟ್‌ಗಳ ಖರೀದಿಗೆ ಮನ ಸೋಲುವ ಮೊದಲು ಫುಲ್ ಫೇಸ್ ಹೆಲ್ಮೆಟ್ ಬಳಕೆಯತ್ತ ಸ್ವಲ್ಪ ಎಚ್ಚರ ವಹಿಸಿದರೆ ಒಳ್ಳೆಯದು. ಹ್ಯಾಪಿ ರೈಡಿಂಗ್!

Most Read Articles

Kannada
Read more on helmet traffic rules bikes
English summary
New ISI Helmet Standards Introduced In India — Helmets To Become Lighter From January 2019.
Story first published: Wednesday, July 25, 2018, 18:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X