ರೆನಾಲ್ಟ್ ಕ್ವಿಡ್ ಕಾರಿಗಿಂತಲೂ ದೊಡ್ಡ ಗಾತ್ರದಲ್ಲಿ ಬರಲಿದೆ ಮಾರುತಿ ಸುಜುಕಿ ಎಸ್-ಪ್ರೆಸ್ಸೊ

ಮಾರುತಿ ಸುಜುಕಿ ಇಂಡಿಯಾ ಸಂಸ್ಥೆಯು ಈ ಆಗಸ್ಟ್ ತಿಂಗಳಿನಲ್ಲಿ ತಮ್ಮ ಎರ್ಟಿಗಾ ಕಾರಿನ ಆಧಾರಿತ ಎಕ್ಸ್ಎಲ್6 ಪ್ರೀಮಿಯಂ ಎಂಪಿವಿ ಕಾರನ್ನು ಬಿಡುಗಡೆ ಮಾಡಲಿದ್ದು, ಇನ್ನು ಮುಂದಿನ ತಿಂಗಳು ಹಲವಾರು ವಿಶೇಷ ವಾಹನಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ. ಅವುಗಳಲ್ಲಿ ಒಂದು ಸಂಸ್ಥೆಯು ಮುಂದಿನ ತಿಂಗಳು ಬಿಡುಗಡೆ ಮಾಡಲಿರುವ ಎಸ್-ಪ್ರೆಸ್ಸೊ ಕಾರು.

ರೆನಾಲ್ಟ್ ಕ್ವಿಡ್ ಕಾರಿಗಿಂತಲೂ ದೊಡ್ಡ ಗಾತ್ರದಲ್ಲಿ ಬರಲಿದೆ ಮಾರುತಿ ಸುಜುಕಿ ಎಸ್-ಪ್ರೆಸ್ಸೊ

ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಮಿನಿ ಎಸ್‍ಯುವಿ ಮಾದರಿಯ ಕಾರು ಮಾರುಕಟ್ಟೆಯಲ್ಲಿರುವ ರೆನಾಲ್ಟ್ ಕ್ವಿಡ್ ಕಾರುಗಳಿಗೆ ಪೈಪೋಟಿ ನೀಡಲಿದ್ದು, ಕ್ವಿಡ್ ಕಾರಿಗಿಂತಲೂ ಹೆಚ್ಚಿನ ಗಾತ್ರವನ್ನು ಪಡೆಯಲಿದೆ ಎಂದು ಇತ್ತೀಚೆಗೆ ಸೋರಿಕೆಯಾದ ಸ್ಪೈ ಚಿತ್ರಗಳು ಹೇಳುತ್ತಿವೆ. ಗಾಡಿವಾಡಿ ವರದಿ ಪ್ರಕಾರ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಕಾರು ವಿಶಾಲವಾದ ಒಳಾಂಗಣ ವಿನ್ಯಾವನ್ನು ಪಡೆಯಲಿದ್ದು, ಮಾರುಕಟ್ಟೆಯಲ್ಲಿರುವ ತನ್ನ ಎದುರಾಳಿಗಳಿಗೆ ಟಕ್ಕರ್ ನೀಡಲು ಸಿದ್ದಗೊಳ್ಳುತ್ತಿದೆ.

ರೆನಾಲ್ಟ್ ಕ್ವಿಡ್ ಕಾರಿಗಿಂತಲೂ ದೊಡ್ಡ ಗಾತ್ರದಲ್ಲಿ ಬರಲಿದೆ ಮಾರುತಿ ಸುಜುಕಿ ಎಸ್-ಪ್ರೆಸ್ಸೊ

ಎಸ್-ಪ್ರೆಸ್ಸೊ ಕಾರುನ್ನು ಈಗಾಗಲೇ ಹಲವು ಸುತ್ತಿನ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿದ್ದು, ಮಹೀಂದ್ರಾ ಕೆಯುವಿ100 ನೆಕ್ಸ್ ಮತ್ತು ರೆನಾಲ್ಟ್ ಹೊಸದಾಗಿ ಬಿಡುಗಡೆ ಮಾಡುತ್ತಿರುವ ಕ್ವಿಡ್ ಫೇಸ್‌ಲಿಫ್ಟ್ ಕಾರುಗಳಿಗೆ ಪೈಪೋಟಿಯಾಗಿ ಮಾರುತಿ ಸುಜುಕಿ ಎಸ್‌-ಪ್ರೆಸ್ಸೊ ರಸ್ತೆಗಿಳಿಯಲಿದೆ.

ರೆನಾಲ್ಟ್ ಕ್ವಿಡ್ ಕಾರಿಗಿಂತಲೂ ದೊಡ್ಡ ಗಾತ್ರದಲ್ಲಿ ಬರಲಿದೆ ಮಾರುತಿ ಸುಜುಕಿ ಎಸ್-ಪ್ರೆಸ್ಸೊ

ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಮಾದರಿಯು ಮೈಕ್ರೋ ಎಸ್‍ಯುವಿ ವೈಶಿಷ್ಟ್ಯತೆಗಳೊಂದಿಗೆ ಕೇಂದ್ರ ಸರ್ಕಾರವು 2020ರ ಎಪ್ರಿಲ್ 1ರಿಂದ ಜಾರಿಗೆ ತರುತ್ತಿರುವ ಬಿಎಸ್-6 ಹೊಸ ನಿಯಮಾವಳಿ ಪ್ರಕಾರ ಹೊಸ ಎಂಜಿನ್ ಅನ್ನು ಹೊತ್ತು ಬರಲಿದೆ ಎನ್ನಲಾಗಿದೆ.

ರೆನಾಲ್ಟ್ ಕ್ವಿಡ್ ಕಾರಿಗಿಂತಲೂ ದೊಡ್ಡ ಗಾತ್ರದಲ್ಲಿ ಬರಲಿದೆ ಮಾರುತಿ ಸುಜುಕಿ ಎಸ್-ಪ್ರೆಸ್ಸೊ

ಎಸ್‍-ಪ್ರೆಸ್ಸೊ ಕಾರು ಬಿಎಸ್‍-6 ಆಧಾರಿತ 1.2-ಲೀಟರ್(1,200 ಸಿಸಿ) ಪೆಟ್ರೋಲ್ ಎಂಜಿನ್ ಅನ್ನು ಪಡೆದುಕೊಳ್ಳಲಿದ್ದು, ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ 5- ಸ್ಪೀಡ್ ಆಟೋಮ್ಯಾಟಿಕ್ ಎಎಂಟಿ ಗೇರ್‍‍ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿರಲಿದೆ. ಮಾಹಿತಿಗಳ ಪ್ರಕಾರ ಎಸ್-ಪ್ರೆಸ್ಸೊ ಕಾರು 2019ರ ಸೆಪ್ಟೆಂಬರ್ ಅಂತ್ಯದಲ್ಲಿ ಬಿಡುಗಡೆಯಾಗುವುದು ಖಚಿತ ಎನ್ನಲಾಗಿದ್ದು, ಮಾರುತಿ ಸುಜುಕಿಯ ಜನಪ್ರಿಯ ಬ್ರೆಝಾ ಕಾರಿಗಿಂತ ಕೆಳಹಂತದ ಕಾರು ಆವೃತ್ತಿಯಾಗಿ ಮಾರಾಟವಾಗಲಿದೆ.

ರೆನಾಲ್ಟ್ ಕ್ವಿಡ್ ಕಾರಿಗಿಂತಲೂ ದೊಡ್ಡ ಗಾತ್ರದಲ್ಲಿ ಬರಲಿದೆ ಮಾರುತಿ ಸುಜುಕಿ ಎಸ್-ಪ್ರೆಸ್ಸೊ

ಮಧ್ಯಮ ವರ್ಗದ ಗ್ರಾಹಕರನ್ನು ಗುರಿಯಾಗಿಸಿ ಕೈಗೆಟುಕುವ ಬೆಲೆಯ ಕಾರು ಮಾದರಿಗಳನ್ನು ಪರಿಚಯಿಸುವುದರಲ್ಲಿ ಜನಪ್ರಿಯವಾಗಿರುವ ಮಾರುತಿ ಸುಜುಕಿ ಸಂಸ್ಥೆಯು ದೇಶದಲ್ಲಿ ಮಾರಾಟವಾಗುತ್ತಿರುವ ಟಾಪ್ 10 ಕಾರುಗಳ ಪಟ್ಟಿಯಲ್ಲಿ ಮೊದಲ ಆರು ಸ್ಥಾನಗಳನ್ನು ತನ್ನದಾಗಿಸಿಕೊಂಡಿದ್ದು, ಇದೀಗ ಬಿಡುಗಡೆಯಾಗುತ್ತಿರುವ ಮತ್ತೊಂದು ಗೇಮ್‌ಚೆಂಜರ್ ಕಾರು ಎಸ್-ಪ್ರೆಸ್ಸೊ ಮಾದರಿಯು ಮತ್ತಷ್ಟು ಸದ್ದು ಮಾಡಲಿದೆ.

ರೆನಾಲ್ಟ್ ಕ್ವಿಡ್ ಕಾರಿಗಿಂತಲೂ ದೊಡ್ಡ ಗಾತ್ರದಲ್ಲಿ ಬರಲಿದೆ ಮಾರುತಿ ಸುಜುಕಿ ಎಸ್-ಪ್ರೆಸ್ಸೊ

ಇನ್ನು ಎಸ್-ಪ್ರೆಸ್ಸೊ ಕಾರಿನ ವಿನ್ಯಾಸಗಳನ್ನು ಗಮನಿಸಿದ್ದಲ್ಲಿ ಹ್ಯಾಚ್‌ಬ್ಯಾಕ್ ಕಾರುಗಳಿಂತಲೂ ವಿಭಿನ್ನ ಎನ್ನಿಸಲಿದ್ದು, ಮೈಕ್ರೊ ಎಸ್‌ಯುವಿ ಕಾರಿನ ಗುಣಲಕ್ಷಣಗಳಾದ 4 ಮೀಟರ್‌ಗಿಂತಲೂ ಕಡಿಮೆ ಉದ್ದಳತೆ ಹೊಂದಿರಲಿದೆ. ಎ-ಪಿಲ್ಲರ್ ವಿಭಾಗದಲ್ಲಿನ ಹೊಸ ವಿನ್ಯಾಸದೊಂದಿಗೆ ಚಾಲಕನಿಗೆ ಅನುಕೂಲಕರ ಚಾಲನಾ ಸೌಲಭ್ಯಗಳನ್ನು ಒದಗಿಸಲಿದ್ದು, ಹಿಂಬದಿಯ ಸವಾರರಿಗೂ ಅನುಕೂಲಕರ ಆಸನ ವ್ಯವಸ್ಥೆ ಹೊಂದಿದೆ.

MOST READ: ವಾಹನ ಚಾಲಕರೇ ಇತ್ತ ಗಮನಿಸಿ - ಅಕ್ಟೋಬರ್ 1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ರೆನಾಲ್ಟ್ ಕ್ವಿಡ್ ಕಾರಿಗಿಂತಲೂ ದೊಡ್ಡ ಗಾತ್ರದಲ್ಲಿ ಬರಲಿದೆ ಮಾರುತಿ ಸುಜುಕಿ ಎಸ್-ಪ್ರೆಸ್ಸೊ

ಹೀಗಾಗಿ ವಿಟಾರಾ ಬ್ರೆಝಾ ಕಾರುಗಳಂತೆ ವಿಶೇಷ ಸೌಲಭ್ಯ ಹೊಂದಲಿರುವ ಎಸ್-ಪ್ರೆಸ್ಸೊ ಎಸ್‌ಯುವಿ ಕಾರುಗಳು ಗಾತ್ರದಲ್ಲಿ ಚಿಕ್ಕದಾದರೂ ಅತ್ಯುತ್ತಮ ಸೌಲಭ್ಯಗಳೊಂದಿಗೆ ಅಭಿವೃದ್ಧಿ ಹೊಂದಿರಲಿದ್ದು, ನಗರ ಪ್ರದೇಶಗಳಲ್ಲಿ ವ್ಯಯಕ್ತಿಕ ಕಾರು ಬಳಕೆಗಾಗಿ ಇದು ಅತಿಹೆಚ್ಚು ಬೇಡಿಕೆ ಸೃಷ್ಠಿಸುವ ನೀರಿಕ್ಷೆಯಿದೆ.

MOST READ: ದಂಡ ವಿಧಿಸಿದ ಪೊಲೀಸರಿಗೆ ಸರಿಯಾಗಿ ಚಮಕ್ ಕೊಟ್ಟ ಎಲೆಕ್ಟ್ರಿಷಿಯನ್

ರೆನಾಲ್ಟ್ ಕ್ವಿಡ್ ಕಾರಿಗಿಂತಲೂ ದೊಡ್ಡ ಗಾತ್ರದಲ್ಲಿ ಬರಲಿದೆ ಮಾರುತಿ ಸುಜುಕಿ ಎಸ್-ಪ್ರೆಸ್ಸೊ

ಈ ಮೂಲಕ ನಗರ ಪ್ರದೇಶಗಳಲ್ಲಿನ ಟ್ರಾಫಿಕ್ ದಟ್ಟಣೆಯಲ್ಲೂ ಸಲೀಸಾಗಿ ಸಾಗಬಲ್ಲ ಗುಣಹೊಂದಿರುವ ಎಸ್-ಪ್ರೆಸ್ಸೊ ಎಸ್‌ಯುವಿ ಮಾದರಿಯು ಸ್ಪೋರ್ಟಿ ಕಾರು ಪ್ರಿಯರನ್ನು ಸೆಳೆಯಬಹುದಾದ ಅಲಾಯ್ ಚಕ್ರಗಳು, ಹೈ ಮೌಟೆಂಡ್ ಲೈಟ್ಸ್ ಒದಗಿಸಿರುವುದು ಕಾರಿನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.

MOST READ: ವ್ಯವಸಾಯಕ್ಕಾಗಿ ರೂ.50 ಲಕ್ಷ ಬೆಲೆ ಬಾಳುವ ಐಷಾರಾಮಿ ಕಾರನ್ನು ಬಳಸಿದ ರೈತ

ರೆನಾಲ್ಟ್ ಕ್ವಿಡ್ ಕಾರಿಗಿಂತಲೂ ದೊಡ್ಡ ಗಾತ್ರದಲ್ಲಿ ಬರಲಿದೆ ಮಾರುತಿ ಸುಜುಕಿ ಎಸ್-ಪ್ರೆಸ್ಸೊ

ಎಸ್-ಪ್ರೆಸ್ಸೊ ಕಾರಿನ ಬೆಲೆಗಳು(ಅಂದಾಜು)

ಸಣ್ಣ ಗಾತ್ರದ ಕಾರುಗಳಲ್ಲೇ ವಿಭಿನ್ನ ಎನ್ನಿಸಲಿರುವ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಮೈಕ್ರೊ ಎಸ್‌ಯುವಿ ಕಾರುಗಳು ದೇಶದಲ್ಲಿ ಹೊಸ ಸಂಚಲನ ಸೃಷ್ಠಿಸುವ ತವಕದಲ್ಲಿದ್ದು, ಹೊಸ ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರಂ ಪ್ರಕಾರ ಆರಂಭಿಕವಾಗಿ ರೂ. 4.50 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 5.50 ಲಕ್ಷಕ್ಕೆ ಖರೀದಿಗೆ ಲಭ್ಯವಾಗಬಹುದು ಎನ್ನಲಾಗಿದೆ.

More from DriveSpark

Article Published On: Monday, August 12, 2019, 9:15 [IST]
English summary
Maruti Suzuki S-presso Looks Bigger Than Renault Kwid. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+