ಸಿಎನ್‌ಜಿ ಮತ್ತು ಹೈಬ್ರಿಡ್ ಕಾರುಗಳಿಗಳಿಗೂ ತೆರಿಗೆ ವಿನಾಯ್ತಿ ಕೇಳಿದ ಮಾರುತಿ ಸುಜುಕಿ..!

ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಬಳಕೆ ಮತ್ತು ಮಾರಾಟವನ್ನು ತಗ್ಗಿಸಲು ಕೇಂದ್ರ ಸರ್ಕಾರವು ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಅದೇ ರೀತಿಯಾಗಿ ಎಲೆಕ್ಟ್ರಿಕ್ ಕಾರುಗಳ ಹೆಚ್ಚಳಕ್ಕಾಗಿ ಬರಪೂರ ತೆರಿಗೆ ವಿನಾಯ್ತಿಯನ್ನು ನೀಡುತ್ತಿದೆ. ಈ ಹಿನ್ನಲೆ ಮಾರುತಿ ಸುಜುಕಿ ಸಂಸ್ಥೆಯು ಕೇಂದ್ರಕ್ಕೆ ಹೊಸ ಮನವಿಯೊಂದನ್ನು ಮಾಡಿಕೊಂಡಿದೆ.

ಸಿಎನ್‌ಜಿ ಮತ್ತು ಹೈಬ್ರಿಡ್ ಕಾರುಗಳಿಗಳಿಗೂ ತೆರಿಗೆ ವಿನಾಯ್ತಿ ಕೇಳಿದ ಮಾರುತಿ ಸುಜುಕಿ..!

ಪ್ರಸ್ತುತ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಹೊಸ ಕಾರುಗಳ ಖರೀದಿಯೂ ಗ್ರಾಹಕರಿಗೆ ಬಿಸಿತುಪ್ಪವಾಗಿ ಪರಿಣಮಿಸಿದ್ದು, ಅತ್ತ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿ ಮಾಡುವುದಾದರೇ ಅದು ಇನ್ನಷ್ಟು ದುಬಾರಿಯಾಗುತ್ತಿದೆ. ಹೀಗಿರುವಾಗ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳಿಗೆ ಪರ್ಯಾಯವಾಗಿರುವ ಹೈಬ್ರಿಡ್ ಮತ್ತು ಸಿಎನ್‌ಜಿ ವಾಹನಗಳ ಮೇಲೂ ಕೇಂದ್ರ ಸರ್ಕಾರವು ಗಮನಹರಿಸಬೇಕಾದ ಅವಶ್ಯಕತೆಯಿರುವುದಾಗಿ ಮಾರುತಿ ಸುಜುಕಿ ಹೇಳಿಕೊಂಡಿದೆ.

ಸಿಎನ್‌ಜಿ ಮತ್ತು ಹೈಬ್ರಿಡ್ ಕಾರುಗಳಿಗಳಿಗೂ ತೆರಿಗೆ ವಿನಾಯ್ತಿ ಕೇಳಿದ ಮಾರುತಿ ಸುಜುಕಿ..!

ಸದ್ಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ತಗ್ಗಿಸಲು ಅಧಿಕ ಮಟ್ಟದ ನೋಂದಣಿ ಶುಲ್ಕ ಮತ್ತು ಜಿಎಸ್‌ಟಿ ಪ್ರಮಾಣದಲ್ಲಿ ಹೆಚ್ಚಳ ಸೇರಿದಂತೆ ಕೆಲವು ಕಡ್ಡಾಯ ನಿಯಮಗಳನ್ನು ಜಾರಿಗೆ ತರುತ್ತಿದ್ದು, ಎಲೆಕ್ಟ್ರಿಕ್ ವಾಹನಗಳಿಗೆ ಮಾತ್ರವೇ ಜಿಎಸ್‌ಟಿ ವಿನಾಯ್ತಿಯನ್ನು ನೀಡಲಾಗಿದೆ.

ಸಿಎನ್‌ಜಿ ಮತ್ತು ಹೈಬ್ರಿಡ್ ಕಾರುಗಳಿಗಳಿಗೂ ತೆರಿಗೆ ವಿನಾಯ್ತಿ ಕೇಳಿದ ಮಾರುತಿ ಸುಜುಕಿ..!

ಎಲೆಕ್ಟ್ರಿಕ್ ವಾಹನಗಳನ್ನು ಮಾತ್ರವೇ ಹಸಿರು ವಾಹನ ಮಾದರಿಯನ್ನಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರವು ಇವಿ ವಾಹನಗಳಿಗೆ ಸರಿಸಮನಾದ ಸಿಎನ್‌ಜಿ ಮತ್ತು ಹೈಬ್ರಿಡ್ ವಾಹನಗಳಿಗೆ ಯಾವುದೇ ರೀತಿಯ ತೆರಿಗೆ ವಿನಾಯ್ತಿ ನೀಡದಿರುವುದರ ಬಗ್ಗೆ ಮಾರುತಿ ಸುಜುಕಿಯು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದೆ.

ಸಿಎನ್‌ಜಿ ಮತ್ತು ಹೈಬ್ರಿಡ್ ಕಾರುಗಳಿಗಳಿಗೂ ತೆರಿಗೆ ವಿನಾಯ್ತಿ ಕೇಳಿದ ಮಾರುತಿ ಸುಜುಕಿ..!

ದೇಶಾದ್ಯಂತ ತ್ವರಿತಗತಿಯಲ್ಲಿ ಮಾಲಿನ್ಯ ನಿಯಂತ್ರಣಕ್ಕಾಗಿ ಎಲೆಕ್ಟ್ರಿಕ್ ವಾಹನಗಳ ಮಾರಾಟ ಹೆಚ್ಚಳಕ್ಕಾಗಿ ಜಿಎಸ್‌ಟಿ ದರ ಇಳಿಕೆ, ಆದಾಯ ತೆರಿಗೆಯಲ್ಲಿ ವಿನಾಯ್ತಿ ಸೇರಿದಂತೆ ಹಲವು ಆಕರ್ಷಕ ಯೋಜನೆಗಳನ್ನು ಘೋಷಣೆ ಮಾಡುತ್ತಿರುವ ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್‌ಗೆ ಪರ್ಯಾಯವಾಗಿ ಕಾರು ಖರೀದಿದಾರರನ್ನು ಸೆಳೆಯುತ್ತಿರುವ ಸಿಎನ್‌ಜಿ ಮತ್ತು ಹೈಬ್ರಿಡ್ ಕಾರುಗಳ ಮೇಲೂ ಜಿಎಸ್‌ಟಿ ಇಳಿಕೆಗೆ ಮಾರುತಿ ಸುಜುಕಿ ಸಂಸ್ಥೆಯು ಮನವಿ ಮಾಡಿದೆ.

ಸಿಎನ್‌ಜಿ ಮತ್ತು ಹೈಬ್ರಿಡ್ ಕಾರುಗಳಿಗಳಿಗೂ ತೆರಿಗೆ ವಿನಾಯ್ತಿ ಕೇಳಿದ ಮಾರುತಿ ಸುಜುಕಿ..!

ಕೇಂದ್ರ ಸರ್ಕಾರವು ಸದ್ಯ ಎಲೆಕ್ಟ್ರಿಕ್ ವಾಹನಗಳ ಮೇಲಿನ ಜಿಎಸ್‌ಟಿ ಪ್ರಮಾಣವನ್ನು ಶೇ.12ರಿಂದ ಶೇ.5 ಇಳಿಕೆ ಮಾಡಿದ್ದು, ಡೀಸೆಲ್, ಪೆಟ್ರೋಲ್ ಸೇರಿದಂತೆ ಇನ್ನುಳಿದ ವಾಹನ ಮಾದರಿಗಳ ಮೇಲಿನ ಜಿಎಸ್‌ಟಿ ಪ್ರಮಾಣವನ್ನು ಶೇ.18ರಿಂದ ಶೇ.28ಕ್ಕೆ ಏರಿಕೆಯೊಂದಿಗೆ ಸೆಸ್ ಪ್ರಮಾಣದಲ್ಲೂ ಹೆಚ್ಚಳ ಮಾಡಿದೆ.

ಸಿಎನ್‌ಜಿ ಮತ್ತು ಹೈಬ್ರಿಡ್ ಕಾರುಗಳಿಗಳಿಗೂ ತೆರಿಗೆ ವಿನಾಯ್ತಿ ಕೇಳಿದ ಮಾರುತಿ ಸುಜುಕಿ..!

ಇದರಿಂದಾಗಿಯೇ ಮಾರುತಿ ಸುಜುಕಿ ಸಂಸ್ಥೆಯು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಕಾರುಗಳನ್ನು ಹೊರತುಪಡಿಸಿ ಪರಿಸರಕ್ಕೆ ಪೂರಕವಾಗಿರುವ ಎಲೆಕ್ಟ್ರಿಕ್ ವಾಹನಗಳ ಜೊತೆ ಜೊತೆಗೆ ಸಿಎನ್‌ಜಿ ಮತ್ತು ಹೈಬ್ರಿಡ್ ವಾಹನಗಳ ಬಳಕೆಯನ್ನೂ ಸಹ ಹೆಚ್ಚಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕಿರುವ ಬಗ್ಗೆ ಮಾರುತಿ ಸುಜುಕಿ ಅಭಿಪ್ರಾಯಪಟ್ಟಿದೆ.

MOST READ: ಹತ್ತು ಸಾವಿರಕ್ಕೆ ಎಲೆಕ್ಟ್ರಿಕ್ ಬೈಕ್ ತಯಾರಿಸಿದ ಮೆಕಾನಿಕ್

ಸಿಎನ್‌ಜಿ ಮತ್ತು ಹೈಬ್ರಿಡ್ ಕಾರುಗಳಿಗಳಿಗೂ ತೆರಿಗೆ ವಿನಾಯ್ತಿ ಕೇಳಿದ ಮಾರುತಿ ಸುಜುಕಿ..!

ಇನ್ನು ಮಾರುತಿ ಸುಜುಕಿ ಸಂಸ್ಥೆಯು 2020ರ ಏಪ್ರಿಲ್ 1ರಿಂದ ಜಾರಿಗೆ ಬರಲಿರುವ ಬಿಎಸ್-6 ನಿಯಮದನ್ವಯ ತನ್ನ ಜನಪ್ರಿಯ ಕಾರುಗಳನ್ನು ಉನ್ನತಿಕರಿಸುತ್ತಿದ್ದು, 2020ರ ಏಪ್ರಿಲ್ 1ರಿಂದಲೇ ಡೀಸೆಲ್ ಕಾರುಗಳನ್ನು ಸಂಪೂರ್ಣವಾಗಿ ಬಂದ್ ಮಾಡುವ ನಿರ್ಧಾರಕ್ಕೆ ಬಂದಿದೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಸಿಎನ್‌ಜಿ ಮತ್ತು ಹೈಬ್ರಿಡ್ ಕಾರುಗಳಿಗಳಿಗೂ ತೆರಿಗೆ ವಿನಾಯ್ತಿ ಕೇಳಿದ ಮಾರುತಿ ಸುಜುಕಿ..!

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ನಿರ್ಮಾಣದ ಬಿಎಸ್-4 ಡೀಸೆಲ್ ಎಂಜಿನ್ ಅನ್ನು ಬಿಎಸ್-6 ನಿಯಮಕ್ಕೆ ಉನ್ನತೀಕರಣವು ಅಸಾಧ್ಯ ಎನ್ನಲಾಗುತ್ತಿದ್ದು, ಆರ್ಥಿಕವಾಗಿ ಹೊರೆಯಾಗಲಿರುವ ಉನ್ನತೀಕರಣ ಪ್ರಕ್ರಿಯೆಯಿಂದ ಹಿಂದೆ ಸರಿದಿರುವ ಮಾರುತಿ ಸುಜುಕಿಯು ಡೀಸೆಲ್ ಎಂಜಿನ್ ಪರ್ಯಾಯವಾಗಿ ಹೈಬ್ರಿಡ್ ಮತ್ತು ಸಿಎನ್‌ಜಿ ಆಯ್ಕೆಯನ್ನು ಹೆಚ್ಚಿಸುತ್ತಿದೆ.

MOST READ: ರೋಲ್ಸ್ ರಾಯ್ಸ್ ಕಾರು ಖರೀದಿಗಾಗಿ ಹತ್ತಾರು ಕಠಿಣ ಪರೀಕ್ಷೆಗಳನ್ನು ಎದುರಿಸಿದ್ರು ಎಂಟಿಬಿ..!

ಸಿಎನ್‌ಜಿ ಮತ್ತು ಹೈಬ್ರಿಡ್ ಕಾರುಗಳಿಗಳಿಗೂ ತೆರಿಗೆ ವಿನಾಯ್ತಿ ಕೇಳಿದ ಮಾರುತಿ ಸುಜುಕಿ..!

ಈಗಾಗಲೇ ಮಾರುಕಟ್ಟೆಯಲ್ಲಿ ವ್ಯಾಗನ್‌ಆರ್, ಸೆಲೆರಿಯೊ, ಆಲ್ಟೋ 800 ಮತ್ತು ಎರ್ಟಿಗಾ ಮಾದರಿಗಳಲ್ಲಿ ಸಿಎನ್‌ಜಿ ಆಯ್ಕೆಯನ್ನು ಪರಿಚಯಿಸಿರುವ ಮಾರುತಿ ಸುಜುಕಿ ಸಂಸ್ಥೆಯು ಹೆಚ್ಚುತ್ತಿರುವ ಮಾಲಿನ್ಯ ತಡೆಗಾಗಿ ಹೊಸ ಹೊಸ ಪ್ರಯತ್ನಗಳನ್ನು ಕೈಗೊಳ್ಳುತ್ತಿದೆ.

ಸಿಎನ್‌ಜಿ ಮತ್ತು ಹೈಬ್ರಿಡ್ ಕಾರುಗಳಿಗಳಿಗೂ ತೆರಿಗೆ ವಿನಾಯ್ತಿ ಕೇಳಿದ ಮಾರುತಿ ಸುಜುಕಿ..!

ಈ ಮೂಲಕ ಡೀಸೆಲ್ ಎಂಜಿನ್‌ನಲ್ಲಿ ದೊರೆಯುತ್ತಿದ್ದ ಮೈಲೇಜ್ ಪ್ರಮಾಣವನ್ನೇ ಪೆಟ್ರೋಲ್ ಹೈಬ್ರಿಡ್ ಮತ್ತು ಪೆಟ್ರೋಲ್ ಸಿಎನ್‌ಜಿ ವರ್ಷನ್‌ಗಳ ಮೂಲಕ ಒದಗಿಸಲು ಪ್ರಯತ್ನಿಸುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು ಬಿಎಸ್-6 ಜಾರಿಯಾಗುವುದಕ್ಕೂ ಮುನ್ನವೇ ಗ್ರಾಹಕರನ್ನು ಹೊಸ ಕಾರುಗಳತ್ತ ಸೆಳೆಯುವ ವಿಶ್ವಾಸದಲ್ಲಿದೆ.

Most Read Articles

Kannada
English summary
Maruti Suzuki Seeking Tax Relief For Hybrid And CNG Vehicles To Promote Sales Over Electric Vehicles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X