ಸಂಕಷ್ಟದಲ್ಲಿ ಆಟೋ ಉದ್ಯಮ- ಕಾರು ಉತ್ಪಾದನೆಗೆ ಬ್ರೇಕ್ ಹಾಕಿದ ಮಾರುತಿ ಸುಜುಕಿ..!
ಕಳೆದ ಒಂದು ದಶಕದ ಅವಧಿಯಲ್ಲೇ ಮೊದಲ ಬಾರಿಗೆ ಆಟೋ ಉತ್ಪಾದನಾ ವಲಯವು ಭಾರೀ ನಷ್ಟದ ಸುಳಿಯಲ್ಲಿ ಸಿಲುಕಿದ್ದು, ಮಾರುತಿ ಸುಜುಕಿ ಸೇರಿದಂತೆ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಹೊಸ ಕಾರುಗಳ ಉತ್ಪಾದನೆಯನ್ನೇ ತಾತ್ಕಲಿಕವಾಗಿ ಬಂದ್ ಮಾಡಿವೆ.

ಆಟೋ ಉತ್ಪಾದನಾ ನಿಯಮಾವಳಿಗಳಲ್ಲಿ ನಿರಂತರ ಬದಲಾವಣೆ ಮತ್ತು ಇಂಧನ ಆಧರಿತ ವಾಹನಗಳ ನೋಂದಣಿಯ ಮೇಲೆ ಗರಿಷ್ಠ ಪ್ರಮಾಣದ ಶುಲ್ಕ ವಿಧಿಸುತ್ತಿರುವುದು ದೇಶಿಯ ಆಟೋ ಮಾರುಕಟ್ಟೆಯಲ್ಲಿ ಪ್ರತಿಕೂಲಕರ ವಾತಾವರಣ ಸೃಷ್ಠಿಯಾಗಿದ್ದು, ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಹೊಸ ವಾಹನಗಳ ಮಾರಾಟದಲ್ಲಿ ತೀವ್ರ ಹಿನ್ನಡೆ ಅನುಭವಿಸಿವೆ. ಅದರಲ್ಲೂ ಕಾರು ಮಾರಾಟದಲ್ಲಿ ಅಗ್ರಸ್ಥಾನದಲ್ಲಿ ಮಾರುತಿ ಸುಜುಕಿಗೂ ಕೂಡಾ ಭಾರೀ ಹಿನ್ನಡೆಯಾಗಿದೆ.

ಹೊಸ ವಾಹನಗಳ ಮಾರಾಟ ಪ್ರಮಾಣವು ಕಳೆದ ಕೆಲ ತಿಂಗಳಿನಿಂದ ದಾಖಲೆ ಪ್ರಮಾಣದಲ್ಲಿ ಕುಸಿತ ಕಾಣುತ್ತಿದ್ದು, ಕನಿಷ್ಠ ಪ್ರಮಾಣದ ವಾಹನಗಳನ್ನು ಮಾರಾಟ ಮಾಡಲು ಸಹ ಪರದಾಡುವಂತಾಗಿದೆ. ಈ ಹಿನ್ನೆಲೆ ಹೊಸ ವಾಹನಗಳ ಉತ್ಪಾದನೆಯು ಕುಂಟುತ್ತಾ ಸಾಗಿದ್ದು, ಆಟೋ ಉದ್ಯಮವನ್ನೇ ನೆಚ್ಚಿಕೊಂಡಿರುವ ಸುಮಾರು 10 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವಂತಾಗಿದೆ.

ಹೊಸ ವಾಹನಗಳ ಮಾರಾಟದಲ್ಲಿ ತೀವ್ರ ಹಿನ್ನಡೆ ಅನುಭವಿಸಿರುವ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಸದ್ಯ ಆರ್ಥಿಕವಾಗಿ ಹೊರೆಯಾಗಿರುವ ಸ್ಟಾಕ್ ಕ್ಲಿಯೆರೆನ್ಸ್‌ಗಾಗಿ ಹರಸಾಹಸ ಪಡುತ್ತಿದ್ದು, ತಾತ್ಕಾಲಿಕವಾಗಿ ಹೊಸ ವಾಹನಗಳ ಉತ್ಪಾದನಾ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುತ್ತಿವೆ.

ಮಾರುತಿ ಸುಜುಕಿ ಸಂಸ್ಥೆಯು ಸಹ ತನ್ನ ಪ್ರಮುಖ ಮೂರು ಕಾರು ಉತ್ಪಾದನಾ ಘಟಕಗಳಲ್ಲಿನ ಹೊಸ ಕಾರು ಉತ್ಪಾದನಾ ಪ್ರಮಾಣವನ್ನು ಕಡಿತಗೊಳಿಸಲಾಗಿದ್ದು, ಮೂರು ಶಿಫ್ಟ್‌ಗಳಲ್ಲಿ ನಡೆಯುತ್ತಿದ್ದ ಹೊಸ ಕಾರು ಉತ್ಪಾದನೆಯನ್ನು ಕೇವಲ ಒಂದು ಶಿಫ್ಟ್‌ಗೆ ತಗ್ಗಿಸಲಾಗಿದೆ. ಮನೆಸಾರ್, ಗುರುಗ್ರಾಮ್ ಮತ್ತು ಗುಜರಾತ್‌ನಲ್ಲಿ ಮೂರು ಘಟಕಗಳಲ್ಲೂ ತಲಾ ಒಂದೊಂದು ಶಿಫ್ಟ್‌ನಲ್ಲಿ ಮಾತ್ರವೇ ಕಾರು ಉತ್ಪಾದನೆಯನ್ನು ಮಾಡಲಾಗುತ್ತಿದ್ದು, ಸಾವಿರಾರು ಗುತ್ತಿಗೆ ಆಧಾರದ ಮೇಲಿನ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ.

ಮಾಹಿತಿಗಳ ಪ್ರಕಾರ, ಸುಮಾರು ರೂ.35 ಸಾವಿರ ಕೋಟಿ ಮೌಲ್ಯದ ಹೊಸ ಕಾರುಗಳು ಮತ್ತು 15 ಸಾವಿರ ಕೋಟಿ ಮೌಲ್ಯದ ಹೊಸ ಬೈಕ್‌ಗಳ ಸ್ಟಾಕ್ ಪ್ರಮಾಣವು ಮಾರಾಟವಾಗದೆ ಆರ್ಥಿಕವಾಗಿ ಹೊರೆಯಾಗಿ ಪರಿಣಮಿಸಿದ್ದು, ಸ್ಟಾಕ್ ಪ್ರಮಾಣವನ್ನು ತೆರೆವುಗೊಳಿಸಲು ಭಾರೀ ಪ್ರಮಾಣದ ಆಫರ್‌ಗಳನ್ನು ನೀಡಿ ಗ್ರಾಹಕರನ್ನು ಸೆಳೆಯಲಾಗುತ್ತಿದೆ.

2018ರ ಮೇ ಅವಧಿಯಲ್ಲಿ ದೇಶಾದ್ಯಂತ 3,01,238 ಹೊಸ ಪ್ಯಾಸೆಂಜರ್ ವಾಹನಗಳು ಮಾರಾಟವಾಗಿದ್ದರೆ ಅದೇ 2019ರ ಮೇ ಅವಧಿಯಲ್ಲಿ 2,39,347 ಹೊಸ ಪ್ಯಾಸೆಂಜರ್ ವಾಹನಗಳು ಮಾತ್ರವೇ ಮಾರಾಟವಾಗುವ ಮೂಲಕ ಭಾರೀ ಪ್ರಮಾಣದ ನಷ್ಟ ಅನುಭವಿಸಿವೆ.
MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಇದಲ್ಲದೇ ಜೂನ್ ಮತ್ತು ಜುಲೈ ಅವಧಿಯಲ್ಲೂ ಕೂಡಾ ಶೇ.20 ರಷ್ಟು ಹೊಸ ಕಾರು ಮಾರಾಟದಲ್ಲಿ ಇಳಿಕೆ ಕಂಡುಬಂದಿದ್ದು, ಹೊಸ ವಾಹನ ಮಾರಾಟವಿಲ್ಲದೇ ಬಹುತೇಕ ಕಾರು ಮಾರಾಟಗಾರರು ತಮ್ಮ ಅಧಿಕೃತ ಮಾರಾಟ ಮಳಿಗೆಗಳ ಕದಮುಚ್ಚುತ್ತಿದ್ದಾರೆ.
MOST READ: ಕಾರ್ ರೀಪೆರಿಗೆ 3 ಲಕ್ಷ ಕೇಳಿದ್ದ ಡೀಲರ್ಸ್ ಅಸಲಿಯತ್ತು ಬಯಲಾಗಿದ್ದು ಲೋಕಲ್ ಗ್ಯಾರೇಜ್‌ನಲ್ಲಿ..!

2017ರಿಂದ ಭಾರತೀಯ ಆಟೋ ಉತ್ಪಾದನಾ ವಲಯದಲ್ಲಿ ನಿರಂತರವಾಗಿ ಸಾಕಷ್ಟು ಬದಲಾವಣೆಗಳು ಕಡ್ಡಾಯವಾಗಿ ಜಾರಿಗೆ ತರಲಾಗುತ್ತಿದ್ದು, ಇದು ಕೆಲವು ಆಟೋ ಉತ್ಪಾದನಾ ಸಂಸ್ಥೆಗಳಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.
MOST READ: ಪ್ಲಾಸ್ಟಿಕ್‌ನಿಂದ ಉತ್ಪಾದನೆ ಮಾಡಲಾದ ಈ ಪೆಟ್ರೋಲ್ ದರ ಎಷ್ಟು ಗೊತ್ತಾ?

ಇದರ ನಡುವೆ ಕೇಂದ್ರ ಸರ್ಕಾರವು ಮಾಲಿನ್ಯ ತಗ್ಗಿಸುವ ಉದ್ದೇಶದೊಂದಿಗೆ ಕಡ್ಡಾಯವಾಗಿ ಬಿಎಸ್-6 ವಾಹನಗಳ ಉತ್ಪಾದನೆ ಮತ್ತು ಮಾರಾಟವನ್ನು 2020ರ ಏಪ್ರಿಲ್‌ನಿಂದ ಕಡ್ಡಾಯಗೊಳಿಸಲು ಚಿಂತನೆ ನಡೆಸಿದ್ದು, ಹೊಸ ನಿಯಮ ಜಾರಿಯಾದಲ್ಲಿ ಈಗಿರುವ ಡೀಸೆಲ್ ಎಂಜಿನ್ ಕಾರುಗಳು ಮತ್ತಷ್ಟು ದುಬಾರಿಯಾಗಲಿವೆ.
Source: Economic Times Auto


Click it and Unblock the Notifications








