ವರ್ಷಾಂತ್ಯಕ್ಕೆ ಪೆಟ್ರೋಲ್ ಎಂಜಿನ್‌ನೊಂದಿಗೆ ಬರಲಿದೆ ಮಾರುತಿ ಸುಜುಕಿ ಬ್ರೆಝಾ

ಡೀಸೆಲ್ ಎಂಜಿನ್ ಕಾರುಗಳ ಮಾರಾಟವನ್ನು ಸಾಧ್ಯವಷ್ಟು ಕಡಿತಗೊಳಿಸುವ ನಿಟ್ಟಿನಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ಪರಿಚಯಿಸುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು ಶೀಘ್ರದಲ್ಲೇ ತನ್ನ ಜನಪ್ರಿಯ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಾದ ವಿಟಾರಾ ಬ್ರೆಝಾದಲ್ಲಿ ಪೆಟ್ರೋಲ್ ವರ್ಷನ್ ಬಿಡುಗಡೆಗೊಳಿಸುವ ಸುಳಿವು ನೀಡಿದೆ.

ವರ್ಷಾಂತ್ಯಕ್ಕೆ ಪೆಟ್ರೋಲ್ ಎಂಜಿನ್‌ನೊಂದಿಗೆ ಬರಲಿದೆ ಮಾರುತಿ ಸುಜುಕಿ ಬ್ರೆಝಾ

2020ರ ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬರಲಿರುವ ಬಿಎಸ್-6 ನಿಯಮದಂತೆ ಕಡಿಮೆ ಸಾಮಾರ್ಥ್ಯದ ಡೀಸೆಲ್ ಎಂಜಿನ್ ಕಾರುಗಳ ಆಯ್ಕೆಯನ್ನು ಕೈಬಿಡುತ್ತಿರುವ ಮಾರುತಿ ಸುಜುಕಿಯು ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಸಿಎನ್‌ಜಿ ಕಾರು ಆವೃತ್ತಿಗಳ ಮೇಲೆ ಹೆಚ್ಚಿನ ಗಮನಹರಿಸಿದ್ದು, ತನ್ನ ಜನಪ್ರಿಯ ವಿಟಾರಾ ಬ್ರೆಝಾ ಆವೃತ್ತಿಯ ಎಂಜಿನ್ ಆಯ್ಕೆಯಲ್ಲೂ ಕೂಡಾ ಇದೀಗ ಮಹತ್ವದ ಬದಲಾವಣೆಗಾಗಿ ಯೋಜನೆ ರೂಪಿಸಿದೆ.

ವರ್ಷಾಂತ್ಯಕ್ಕೆ ಪೆಟ್ರೋಲ್ ಎಂಜಿನ್‌ನೊಂದಿಗೆ ಬರಲಿದೆ ಮಾರುತಿ ಸುಜುಕಿ ಬ್ರೆಝಾ

ಬಿಎಸ್-6 ನಿಯಮವನ್ನು ಪಾಲನೆ ಮಾಡಲು ಸಾಧ್ಯವಿರದ ಡೀಸೆಲ್ ಎಂಜಿನ್‌ಗಳಿಗೆ ಗುಡ್ ಬೈ ಹೇಳಲು ನಿರ್ಧರಿಸಿದ್ದು, ಪೆಟ್ರೋಲ್, ಹೈಬ್ರಿಡ್ ಮತ್ತು ಸಿಎನ್‌ಜಿ ಆವೃತ್ತಿಗಳ ಮೇಲೆ ಹೆಚ್ಚು ಒತ್ತು ನೀಡುತ್ತಿದೆ.

ವರ್ಷಾಂತ್ಯಕ್ಕೆ ಪೆಟ್ರೋಲ್ ಎಂಜಿನ್‌ನೊಂದಿಗೆ ಬರಲಿದೆ ಮಾರುತಿ ಸುಜುಕಿ ಬ್ರೆಝಾ

ಈ ಹಿನ್ನಲೆಯಲ್ಲಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಡೀಸೆಲ್ ಎಂಜಿನ್ ಕಾರುಗಳ ಆಯ್ಕೆಯನ್ನು ಈಗಿನಿಂದಲೇ ಕಡಿತಗೊಳಿಸುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು ಮೊದಲ ಹಂತವಾಗಿ ವಿಟಾರಾ ಬ್ರೆಝಾ ಕಂಪ್ಯಾಕ್ಟ್ ಎಸ್‌ಯುವಿಯಲ್ಲಿ ಭಾರೀ ಬದಲಾವಣೆ ತರುತ್ತಿದೆ.

ವರ್ಷಾಂತ್ಯಕ್ಕೆ ಪೆಟ್ರೋಲ್ ಎಂಜಿನ್‌ನೊಂದಿಗೆ ಬರಲಿದೆ ಮಾರುತಿ ಸುಜುಕಿ ಬ್ರೆಝಾ

ಪೆಟ್ರೋಲ್ ಮಾದರಿಗಳಲ್ಲಿ ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನವನ್ನು ಪರಿಚಯಿಸುತ್ತಿರುವ ಮಾರುತಿ ಸುಜುಕಿಯು 2020ರ ಏಪ್ರಿಲ್ 1ರಿಂದಲೇ ಪೂರ್ಣ ಪ್ರಮಾಣದಲ್ಲಿ ಡೀಸೆಲ್ ಕಾರುಗಳ ಮಾರಾಟವನ್ನು ಬಂದ್ ಮಾಡಲಿದ್ದು, ಬಿಎಸ್-6 ನಿಯಮವನ್ನು ಪಾಲಿಸಲು ಸಾಧ್ಯವಾಗದ ವಿಟಾರಾ ಬ್ರೆಝಾ ಡೀಸೆಲ್ ಎಂಜಿನ್ ಮಾದರಿಯು ಮಾರುಕಟ್ಟೆಯಿಂದ ನಿರ್ಗಮಿಸುವ ಅನಿವಾರ್ಯತೆ ಎದುರಾಗಿದೆ. ಒಂದು ವೇಳೆ ಮಾರುತಿ ಸುಜುಕಿ ಸಂಸ್ಥೆಯು ಬಿಎಸ್-6 ನಿಯಮ ಅನುಸಾರವಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಡೀಸೆಲ್ ಎಂಜಿನ್ ಮಾದರಿಗಳನ್ನು ಉನ್ನತಿಕರಣ ಮಾಡಿದರೂ ಸಹ ಬೆಲೆಯಲ್ಲಿ ಭಾರೀ ಏರಿಕೆಯಾಗಲಿದ್ದು, ಇದರಿಂದ ಗ್ರಾಹಕರನ್ನು ಕಳೆದುಕೊಳ್ಳಬೇಕಾಗುತ್ತದೆ.

ವರ್ಷಾಂತ್ಯಕ್ಕೆ ಪೆಟ್ರೋಲ್ ಎಂಜಿನ್‌ನೊಂದಿಗೆ ಬರಲಿದೆ ಮಾರುತಿ ಸುಜುಕಿ ಬ್ರೆಝಾ

ಹೀಗಾಗಿ ಡೀಸೆಲ್ ಎಂಜಿನ್ ಬಗೆಗೆ ಹೆಚ್ಚು ತೆಲೆಕೆಡಿಸಿಕೊಳ್ಳದೇ ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಸಿಎನ್‌ಜಿ ಆವೃತ್ತಿಗಳಿಗೆ ವಿಶೇಷ ಗಮನಹರಿಸಲು ನಿರ್ಧರಿಸಲಾಗಿದ್ದು, ಡೀಸೆಲ್ ಎಂಜಿನ್‌ನಷ್ಟೇ ಇತರೆ ಕಾರುಗಳಲ್ಲೂ ಮೈಲೇಜ್ ಮತ್ತು ಪರ್ಫಾಮೆನ್ಸ್ ನೀಡುವುದರ ಬಗ್ಗೆ ಹೆಚ್ಚಿನ ಗಮನಹರಿಸಿದೆ.

ವರ್ಷಾಂತ್ಯಕ್ಕೆ ಪೆಟ್ರೋಲ್ ಎಂಜಿನ್‌ನೊಂದಿಗೆ ಬರಲಿದೆ ಮಾರುತಿ ಸುಜುಕಿ ಬ್ರೆಝಾ

ಮಾರುತಿ ಸುಜುಕಿಯು ಇತ್ತೀಚಿಗಷ್ಟೆ ಹೊಸ ತಂತ್ರಜ್ಞಾನ ಪ್ರೇರಿತ 1.5 ಲೀಟರ್ ಕೆ15 ಪೆಟ್ರೊಲ್ ಎಂಜಿನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಹೊಸ ಪೆಟ್ರೋಲ್ ಎಂಜಿನ್ ಅನ್ನು ಮೊದಲ ಬಾರಿಗೆ ಸಿಯಾಜ್ ಸೆಡಾನ್‍ನಲ್ಲಿ ನಂತರ ಎಕ್ಸ್ಎಲ್6 ಕಾರಿನಲ್ಲಿ ಅಳವಡಿಸಲಾಗಿತ್ತು.ಇದೀಗ ಇದೇ ಎಂಜಿನ್ ಅನ್ನು ವಿಟಾರಾ ಬ್ರಿಝಾ ಸೇರಿದಂತೆ ಇತರೆ ಕೆಲವು ಕಾರು ಮಾದರಿಗಳಲ್ಲೂ ಅಳವಡಿಸಿಕೊಳ್ಳಲು ಉದ್ದೇಶಿಸಲಾಗಿದೆ.

ವರ್ಷಾಂತ್ಯಕ್ಕೆ ಪೆಟ್ರೋಲ್ ಎಂಜಿನ್‌ನೊಂದಿಗೆ ಬರಲಿದೆ ಮಾರುತಿ ಸುಜುಕಿ ಬ್ರೆಝಾ

ಹೊಚ್ಚ ಹೊಸ 1.5 ಲೀಟರ್ ಕೆ15 ಪೆಟ್ರೋಲ್ ಎಂಜಿನ್ ಮಾದರಿಯು ಬಿಎಸ್-6 ಪ್ರೇರಣೆಯೊಂದಿಗೆ ಅಭಿವೃದ್ಧಿ ಹೊಂದಿದ್ದು, ಉತ್ತಮ ಮೈಲೇಜ್‌ನೊಂದಿಗೆ 105-ಬಿಹೆಚ್‍ಪಿ ಮತ್ತು 138-ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ವರ್ಷಾಂತ್ಯಕ್ಕೆ ಪೆಟ್ರೋಲ್ ಎಂಜಿನ್‌ನೊಂದಿಗೆ ಬರಲಿದೆ ಮಾರುತಿ ಸುಜುಕಿ ಬ್ರೆಝಾ

ಪ್ರಸ್ತುತ ಮಾರುತಿ ಸುಜುಕಿ ವಿಟಾರಾ ಬ್ರಿಝಾ ಮತ್ತು ಎಸ್-ಕ್ರಾಸ್ ಮಾದರಿಗಳಲ್ಲಿ ಕೇವಲ ಡೀಸೆಲ್ ಎಂಜಿನ್ ಆಯ್ಕೆಯನ್ನು ಮಾತ್ರ ನೀಡಲಾಗುತ್ತಿದ್ದು, 1.3 ಲೀಟರ್ ಡೀಸೆಲ್ ಎಂಜಿನ್ ಮೂಲಕ 82‍-ಬಿಎಚ್‍‍ಪಿ ಮತ್ತು 200-ಎನ್ಎಂ ಟಾರ್ಕ್ ಅನ್ನು ಉತ್ಪಾದನಾ ಗುಣಹೊಂದಿದೆ.

ವರ್ಷಾಂತ್ಯಕ್ಕೆ ಪೆಟ್ರೋಲ್ ಎಂಜಿನ್‌ನೊಂದಿಗೆ ಬರಲಿದೆ ಮಾರುತಿ ಸುಜುಕಿ ಬ್ರೆಝಾ

ಆದರೆ ಬಿಎಸ್-6 ನಿಯಮದ ಪ್ರಕಾರ ಈ 1.3-ಲೀಟರ್ ಡೀಸೆಲ್ ಎಂಜಿನ್ ಮಾದರಿಯು ಸಾಕಷ್ಟು ಸುಧಾರಣೆಯಾಗಬೇಕಿದ್ದು, ಒಂದು ವೇಳೆ ಹೊಸ ತಂತ್ರಜ್ಞಾನ ಪ್ರೇರಣೆಯೊಂದಿಗೆ ಉನ್ನತೀಕರಿಸಿದರೂ ಸಹ ಬೆಲೆ ಹೆಚ್ಚಳವಾಗಲಿದೆ. ಇದರಿಂದ ಪೆಟ್ರೋಲ್ ಎಂಜಿನ್ ಆಯ್ಕೆಯತ್ತ ಮುಖ ಮಾಡಿರುವ ಮಾರುತಿ ಸುಜುಕಿ ಸಂಸ್ಥೆಯು ಕೆಲವೇ ಆಯ್ದ ಟಾಪ್ ಎಂಡ್ ಕಾರುಗಳಲ್ಲಿ ಮಾತ್ರವೇ ಬಿಎಸ್-6 ಪ್ರೇರಣೆಯ 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ನೀಡಲಿದೆ ಎನ್ನಲಾಗಿದೆ. ಆದರೆ ಮಧ್ಯಮ ಗಾತ್ರದ ವಿಟಾರಾ ಬ್ರೆಝಾ ಕಾರಿನಲ್ಲಿ ಪೆಟ್ರೋಲ್ ಹೊರತುಪಡಿಸಿ ಡೀಸೆಲ್ ಎಂಜಿನ್ ಆಯ್ಕೆ ನೀಡುವುದು ಸಾಧ್ಯವಿಲ್ಲ ಎನ್ನಬಹುದು.

Article Published On: Tuesday, October 15, 2019, 17:47 [IST]
English summary
According to report, Maruti Suzuki will launch Vitara Brezza with BS-6 engine later this year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+