Just In
Don't Miss!
- Movies
ಫೋಟೋಗಳು: ರಮೇಶ್ ಅರವಿಂದ್ ಮಗಳ ಮದುವೆ ಆರತಕ್ಷತೆಯಲ್ಲಿ ಸಿನಿ ತಾರೆಯರು; ಯಶ್, ಸುದೀಪ್ ಸಖತ್ ಡ್ಯಾನ್ಸ್
- Sports
ಆಸಿಸ್ ಬೌಲರ್ಗಳಿಗೆ ಪಾಂಟಿಂಗ್ ಚಾಟಿ: ಶಾರ್ದೂಲ್- ಸುಂದರ್ ಆಟಕ್ಕೆ ಮೆಚ್ಚುಗೆ
- Finance
ಪ್ರತಿ ಲೀಟರ್ ಪೆಟ್ರೋಲ್- ಡೀಸೆಲ್ ಗೆ ನೀವು ನೀಡುವ ಬೆಲೆಯಲ್ಲಿ 48% ಕೇಂದ್ರದ ಸುಂಕ
- News
ಕರ್ನಾಟಕ ಆಕ್ರಮಿತ ಪ್ರದೇಶ ಶೀಘ್ರ ಮಹಾರಾಷ್ಟ್ರಕ್ಕೆ ಸೇರ್ಪಡೆ: ಉದ್ಧವ್ ಠಾಕ್ರೆ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಡುಗಡೆಗಾಗಿ ಸಿದ್ದವಾಗಿರುವ ಮಾರುತಿ ಸುಜುಕಿ ವಿಟಾರಾ ಎಸ್‌ಯುವಿಯಿಂದ ರೋಡ್ ಟೆಸ್ಟಿಂಗ್..!
ದೇಶದ ಜನಪ್ರಿಯ ಕಾರು ಉತ್ಪಾದನಾ ಮತ್ತು ಮಾರಾಟ ಸಂಸ್ಥೆಯಾಗಿರುವ ಮಾರುತಿ ಸುಜುಕಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಕಾರು ಉತ್ಪನ್ನಗಳನ್ನು ಪರಿಚಯಿಸುವ ಇರಾದೆಯಲ್ಲಿದ್ದು, ಸದ್ಯ ಮಾರುಕಟ್ಟೆಲ್ಲಿರುವ ಮಧ್ಯಮ ಗಾತ್ರದ ಪ್ರಮುಖ ಎಸ್‌ಯುವಿ ಕಾರುಗಳಿಗೆ ಪೈಪೋಟಿ ನೀಡಬಲ್ಲ ವಿನೂತನ ಮಾದರಿಯ ವಿಟಾರಾ ಆವೃತ್ತಿಯ ಬಿಡುಗಡೆಗಾಗಿ ಸಿದ್ದಗೊಳ್ಳುತ್ತಿದೆ.

ವಿಟಾರಾ ಬ್ರೆಝಾ ಕಾರುಗಳಿಂತಲೂ ವಿಭಿನ್ನವಾಗಿರುವ ವಿಟಾರಾ ಕಾರುಗಳು ಎಸ್ ಕ್ರಾಸ್ ಕಾರುಗಳಿಂತಲೂ ಹೆಚ್ಚಿನ ಮಟ್ಟದ ಐಷಾರಾಮಿ ಸೌಲಭ್ಯಗಳನ್ನು ಹೊಂದಿರಲಿದ್ದು, 2020ರ ಮೊದಲ ತ್ರೈಮಾಸಿಕ ಅವಧಿಗೆ ಭಾರತದಲ್ಲಿ ಬಿಡುಗಡೆಗೊಳಿಸುವುದು ಬಹುತೇಕ ಖಚಿತವಾಗಿದೆ. ಹೀಗಾಗಿ ಕಾರಿನ ಉತ್ಪಾದನಾ ಆವೃತ್ತಿಯನ್ನು ಭಾರತದಲ್ಲಿ ಮೊದಲ ಬಾರಿಗೆ ರೋಡ್ ಟೆಸ್ಟಿಂಗ್ ನಡೆಸಲಾಗಿದ್ದು, ಹೊಸ ಕಾರಿನ ಡಿಸೈನ್‌ಗಳು ಎಸ್‌ಯುವಿ ಪ್ರಿಯರನ್ನು ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಮಾರುತಿ ಸುಜುಕಿ ಸಂಸ್ಥೆಯು ಈ ಹಿಂದಿನ ವಿಟಾರಾ ಗ್ರ್ಯಾಂಡ್ ಎಸ್‌ಯುವಿ ಮಾರಾಟದಲ್ಲಿ ಆದ ಹಿನ್ನಡೆಯನ್ನು ಹೊಸ ಕಾರಿನ ಮೂಲಕ ಸುಧಾರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದು, 2020ರಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಹ್ಯುಂಡೈ ನೆಕ್ಸ್ಟ್ ಜನರೇಷನ್ ಕ್ರೆಟಾ, ಕಿಯಾ ಸೆಲ್ಟೊಸ್ ಮತ್ತು ಮಹೀಂದ್ರಾ ಎಕ್ಸ್‌ಯುವಿ 500 ನೆಕ್ಸ್ಟ್ ಜನರೇಷನ್ ಕಾರುಗಳಿಗೆ ಈ ಕಾರು ತೀವ್ರ ಪೈಪೋಟಿ ನೀಡಲಿದೆ.

ಹೀಗಾಗಿ ಮಿಡ್ ರೇಂಜ್ ಎಸ್‍ಯುವಿ ವೈಶಿಷ್ಟ್ಯತೆ ಹೊಂದಿರುವ ವಿಟಾರಾ ಕಾರು ಕೂಡಾ 2020ರ ಫೆಬ್ರುವರಿಯಲ್ಲಿ ನಡೆಯಲಿರುವ ದೆಹಲಿ ಆಟೋ ಮೇಳದಲ್ಲಿ ಪ್ರದರ್ಶನ ನಂತರ ಬಿಡುಗಡೆಗೊಳಿಸಲು ನಿರ್ಧರಿಸುವ ಮಾರುತಿ ಸುಜುಕಿಯ ಹೊಸ ಎಸ್‍ಯುವಿ ಕಾರು ಅನ್ನು ಇದೇ ಮೊದಲ ಬಾರಿಗೆ ರೋಡ್ ಟೆಸ್ಟಿಂಗ್ ನಡೆಸಿದ್ದು, ಹತ್ತು ಹಲವು ಐಷಾರಾಮಿ ಫೀಚರ್ಸ್‌ಗಳನ್ನು ಹೊಂದಿರುವ ಹೊಸ ಕಾರು ಮಾರುತಿ ಸುಜುಕಿ ಸಂಸ್ಥೆಗೆ ಮತ್ತಷ್ಟು ಜನಪ್ರಿಯತೆ ತಂದುಕೊಡಲಿದೆ.

ಎಂಜಿನ್ ಸಾಮರ್ಥ್ಯ
ವಿದೇಶಿ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿರುವ ವಿಟಾರಾ ಕಾರುಗಳು ಕೇವಲ ಪೆಟ್ರೋಲ್ ಆವೃತ್ತಿಯಲ್ಲಿ ಮಾತ್ರವೇ ಲಭ್ಯವಿದ್ದು, 1.0-ಲೀಟರ್ ಮತ್ತು 1.4-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ಆಯ್ಕೆಯೊಂದಿಗೆ 140-ಬಿಹೆಚ್‍ಪಿ ಮತ್ತು 230-ಎನ್ಎಂ ಟಾರ್ಕ್ಅನ್ನು ಉತ್ಪಾದನಾ ಸಾಮರ್ಥ್ಯ ಪಡೆದಿವೆ.

ಆದ್ರೆ ಭಾರತದಲ್ಲಿ ಬಿಡುಗಡೆಯಾಗಲಿರುವ ವಿಟಾರಾ ಕಾರು 5 ಸೀಟರ್ ಮತ್ತು 7 ಸೀಟರ್ ಆವೃತ್ತಿಯಲ್ಲಿ ಬರಲಿದೆ ಎನ್ನಲಾಗಿದ್ದು, ಬಿಎಸ್-6 ವರ್ಷನ್ ಮಾದರಿಯ 1.4-ಲೀಟರ್ ಬೂಸ್ಟರ್‌ಜೆಟ್ ಟರ್ಬೋ ಪೆಟ್ರೋಲ್ ಎಂಜಿನ್ ಜೊತೆ ಬಿಎಸ್-6 ವರ್ಷನ್ 1.6-ಲೀಟರ್ ಡೀಸೆಲ್ ಟರ್ಬೋ ಎಂಜಿನ್ ಪಡೆದುಕೊಳ್ಳುವ ಸಾಧ್ಯತೆಗಳಿವೆ.

ಇದಲ್ಲದೇ ಹೊಸ ರೂಪದ ವಿಟಾರಾ ಕಾರುಗಳು ಎಸ್‌ಯುವಿ ಕಾರುಗಳಲ್ಲೇ ವಿಶೇಷ ಗುಣಲಕ್ಷಣಗಳನ್ನು ಹೊಂದಿದ್ದು ಪ್ರಯಾಣಿಕರ ಸುರಕ್ಷತೆಗಾಗಿ ಎಬಿಎಸ್ ಜೊತೆ ಇಬಿಡಿ, 6 ಏರ್‍ಬ್ಯಾಗ್‌ಗಳು, ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಆಲ್ ವೀಲ್ಹ್ ಡ್ರೈವ್ ಟೆಕ್ನಾಲಜಿಯೊಂದಿಗೆ ಹಲವು ಪ್ರೀಮಿಯಂ ಸೌಲಭ್ಯಗಳನ್ನು ಹೊಂದಿರಲಿದೆ.


ಈ ಮೂಲಕ ಎಸ್‌ಯುವಿ ಪ್ರಿಯರನ್ನು ಸೆಳೆಯುವ ನೀರಿಕ್ಷೆಯಲ್ಲಿರುವ ಮಾರುತಿ ಸುಜುಕಿ ಸಂಸ್ಥೆಯು ಪ್ರೀಮಿಯಂ ಕಾರುಗಳ ಮಾರಾಟ ವಿಭಾಗದಲ್ಲಿನ ಕೊರತೆಯನ್ನು ನಿಗಿಸಲು ವಿಟಾರಾ ಹೊಸ ಆವೃತ್ತಿಯನ್ನು ಬಿಡುಗಡೆಗೊಳಿಸುತ್ತಿದ್ದು, ನೆಕ್ಸ್ಟ್ ಜನರೇಷನ್ ಕ್ರೆಟಾ, ನೆಕ್ಸ್ಟ್ ಜನರೇಷನ್ ಮಹೀಂದ್ರಾ ಎಕ್ಸ್‌ಯುವಿ 500, ಟಾಟಾ ಹ್ಯಾರಿಯರ್, ಎಂಜಿ ಮೋಟಾರ್ ಹೆಕ್ಟರ್, ಕಿಯಾ ಸೆಲ್ಟೊಸ್ ಕಾರುಗಳಿಗೂ ಇದು ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.
Source: Gaadiwaadi