ಎಲೆಕ್ಟ್ರಿಕ್ ವ್ಯಾಗನ್‌ಆರ್ ಬೆಲೆ ಮಾಹಿತಿ ಬಹಿರಂಗ ಪಡಿಸಿದ ಮಾರುತಿ ಸುಜುಕಿ..!

ದೇಶದ ನಂ.1 ಕಾರು ಮಾರಾಟ ಸಂಸ್ಥೆಯಾಗಿ ಜನಪ್ರಿಯತೆ ಗಳಿಸಿರುವ ಮಾರುತಿ ಸುಜುಕಿ ಸಂಸ್ಥೆಯು ಸದ್ಯದಲ್ಲೇ ತನ್ನ ಬಹುನೀರಿಕ್ಷಿತ ಎಲೆಕ್ಟ್ರಿಕ್ ವ್ಯಾನಗ್‌ಆರ್ ಕಾರನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಸಿದ್ದತೆ ನಡೆಸುತ್ತಿದ್ದು, ಈ ಮಧ್ಯೆ ಮಾಧ್ಯಮ ಸಂಸ್ಥೆಯೊಂದರ ಸಂವಾದದಲ್ಲಿ ಮಾರುತಿ ಸುಜುಕಿ ನಿರ್ದೇಶಕರು ಎಲೆಕ್ಟ್ರಿಕ್ ವ್ಯಾಗನ್‌ಆರ್ ಕಾರಿನ ಬೆಲೆ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ.

ಎಲೆಕ್ಟ್ರಿಕ್ ವ್ಯಾಗನ್‌ಆರ್ ಬೆಲೆ ಮಾಹಿತಿ ಬಹಿರಂಗ ಪಡಿಸಿದ ಮಾರುತಿ ಸುಜುಕಿ..!

2030ಕ್ಕೆ ವಿಶ್ವಾದ್ಯಂತ ಶೇ.100 ರಷ್ಟು ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆಗಿಳಿಸುವ ಸಂಬಂಧ ಜಾಗತಿಕ ಮಟ್ಟದಲ್ಲಿ ಬೃಹತ್ ಯೋಜನೆಗಳನ್ನು ರೂಪಿಸಲಾಗುತ್ತಿದ್ದು, ಈಗಾಗಲೇ ಹಲವಾರು ಆಟೋ ಉತ್ಪಾದನಾ ಸಂಸ್ಥೆಗಳು ಅತಿ ಹೆಚ್ಚು ಮೈಲೇಜ್ ನೀಡಬಲ್ಲ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಗೊಳಿಸಿ ಬಿಡುಗಡೆ ಮಾಡುತ್ತಿವೆ. ಈ ನಿಟ್ಟಿನಲ್ಲಿ ಮಾರುತಿ ಸುಜುಕಿ ಸಹ ತನ್ನ ಜನಪ್ರಿಯ ವ್ಯಾಗನ್‌ಆರ್ ಮಾದರಿಯಲ್ಲಿ ಎಲೆಕ್ಟ್ರಿಕ್ ವರ್ಷನ್ ಹೊರತರುತ್ತಿದ್ದು, ಹೊಸ ಸಂಚಲನಕ್ಕೆ ಕಾರಣವಾಗಿದೆ.

ಎಲೆಕ್ಟ್ರಿಕ್ ವ್ಯಾಗನ್‌ಆರ್ ಬೆಲೆ ಮಾಹಿತಿ ಬಹಿರಂಗ ಪಡಿಸಿದ ಮಾರುತಿ ಸುಜುಕಿ..!

ಹೊಸ ಕಾರಿನ ಬಿಡುಗಡೆ ಮತ್ತು ಬೆಲೆಗಳ ಕುರಿತಾಗಿ ದಿ ಎಕಾನಮಿಕ್ ಟೈಮ್ಸ್ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಮಾರುತಿ ಸುಜುಕಿ ವ್ಯವಸ್ಥಾಪಕ ನಿರ್ದೇಶಕ ಕೆನೆಚಿ ಅಯುಕವಾ ಅವರು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಇತರೆ ಎಲೆಕ್ಟ್ರಿಕ್ ಕಾರುಗಳಿಂತಲೂ ವ್ಯಾಗನ್‌ಆರ್ ಎಲೆಕ್ಟ್ರಿಕ್ ಅತ್ಯುತ್ತಮ ಬೆಲೆಗಳೊಂದಿಗೆ ಗ್ರಾಹಕರನ್ನು ಸೆಳೆಯಲಿದೆ ಎಂದಿದ್ದಾರೆ.

ಎಲೆಕ್ಟ್ರಿಕ್ ವ್ಯಾಗನ್‌ಆರ್ ಬೆಲೆ ಮಾಹಿತಿ ಬಹಿರಂಗ ಪಡಿಸಿದ ಮಾರುತಿ ಸುಜುಕಿ..!

ಈ ವೇಳೆ ಹೊಸ ಕಾರಿನ ಬೆಲೆಗಳ ಬಗೆಗೆ ನಿಖರ ಮಾಹಿತಿ ನೀಡದಿದ್ದರೂ ಹೊಸ ತಂತ್ರಜ್ಞಾನ ಪ್ರೇರಣೆ ಹೊಂದಿರುವ ವ್ಯಾಗನ್‌ಆರ್ ಎಲೆಕ್ಟ್ರಿಕ್ ಕಾರು ರೂ.12 ಲಕ್ಷದಿಂದ ಆರಂಭ ಆಗುವ ಸುಳಿವು ನೀಡಿರುವ ಕೆನೆಚಿ ಅಯುಕವಾ ಅವರು, 2020ರ ಮೊದಲ ತ್ರೈಮಾಸಿಕ ಅಂತ್ಯದಲ್ಲಿ ಬಿಡುಗಡೆಯಾಗಲಿದೆ ಎಂದಿದ್ದಾರೆ.

ಎಲೆಕ್ಟ್ರಿಕ್ ವ್ಯಾಗನ್‌ಆರ್ ಬೆಲೆ ಮಾಹಿತಿ ಬಹಿರಂಗ ಪಡಿಸಿದ ಮಾರುತಿ ಸುಜುಕಿ..!

ಸದ್ಯ ಮಾರುಕಟ್ಟೆಯಲ್ಲಿ ಸಾಮಾನ್ಯ ಮಾದರಿಯ ವ್ಯಾಗನ್‌ಆರ್ ಕಾರು ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.4.20 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ. 5.70 ಲಕ್ಷ ಬೆಲೆ ಹೊಂದಿದ್ದು, ಎಲೆಕ್ಟ್ರಿಕ್ ವರ್ಷನ್ ದುಪ್ಪಟ್ಟು ಬೆಲೆ ಪಡೆದುಕೊಳ್ಳುವ ಬಹುತೇಕ ಖಚಿತವಾಗಿದೆ.

ಜೊತೆಗೆ ಎಲೆಕ್ಟ್ರಿಕ್ ಮಾದರಿಯ ವ್ಯಾಗನ್‍ ಆರ್ ಕಾರು ಮಾರುತಿ ಸುಜುಕಿ ಮತ್ತು ಟೊಯೊಟಾ ಪಾಲುದಾರಿಕೆಯಲ್ಲಿ ತಯಾರಾಗಲಿರುವ ಮೊದಲ ಎಲೆಕ್ಟ್ರಿಕ್ ಕಾರು ಇದಾಗಿದ್ದು, ಟೊಯೊಟಾ ಈಗಾಗಲೇ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರಿಗಾಗಿ ಅಲ್ಟ್ರಾ ಹೈ ಎಫಿಶಿಯೆನ್ಸಿ ಪವರ್‌ಟ್ರೈನ್ ಬ್ಯಾಟರಿಯನ್ನು ತಯಾರಿಸಿರುವುದಾಗಿ ಹೇಳಿಕೊಂಡಿದೆ.

ಎಲೆಕ್ಟ್ರಿಕ್ ವ್ಯಾಗನ್‌ಆರ್ ಬೆಲೆ ಮಾಹಿತಿ ಬಹಿರಂಗ ಪಡಿಸಿದ ಮಾರುತಿ ಸುಜುಕಿ..!

ಹೀಗಾಗಿ ಹೊಸ ಕಾರಿನಲ್ಲಿ ಲೀಥಿಯಂ ಅಯಾನ್ ಪ್ರೇರಿತ 72 ವೊಲ್ಟ್, 25kWh ಬ್ಯಾಟರಿ ಪ್ಯಾಕ್ ಜೋಡಣೆ ಮಾಡಲಾಗಿದ್ದು, ಮಾರುತಿ ಸುಜುಕಿ ಅಧಿಕೃತ ಮಾಹಿತಿ ಪ್ರಕಾರ, ಒಂದು ಬಾರಿ ಪೂರ್ಣ ಪ್ರಮಾಣದಲ್ಲಿ ಚಾರ್ಜಿಂಗ್ ಮಾಡಿದ್ದಲ್ಲಿ ಗರಿಷ್ಠವಾಗಿ 150 ರಿಂದ 160 ಕಿ.ಮಿ ಮೈಲೇಜ್ ಪಡೆಯಬಹುದು ಎಂದಿದೆ.

ಎಲೆಕ್ಟ್ರಿಕ್ ವ್ಯಾಗನ್‌ಆರ್ ಬೆಲೆ ಮಾಹಿತಿ ಬಹಿರಂಗ ಪಡಿಸಿದ ಮಾರುತಿ ಸುಜುಕಿ..!

ಆದ್ರೆ ವಾಸ್ತಾಂಶಕ್ಕೆ ಬಂದಲ್ಲಿ ವ್ಯಾಗನ್ ಆರ್ ಕಾರನ್ನು ನಗರಪ್ರದೇಶದಲ್ಲಿ ಬಳಕೆಗಾಗಿ ವಿಶೇಷವಾಗಿ ವಿನ್ಯಾಸ ಮಾಡಲಾಗಿದ್ದು, ಟ್ರಾಫಿಕ್ ದಟ್ಟಣೆ ಸಮಸ್ಯೆಯ ನಡುವೆ ಮಾರುತಿ ಸುಜುಕಿ ಸಂಸ್ಥೆಯು ಹೇಳಿಕೊಂಡಷ್ಟು ಮೈಲೇಜ್ ಸಿಗುವುದು ಕಷ್ಟಸಾಧ್ಯವಾದರ ಹೊಸ ಕಾರು ಪ್ರತಿ ಚಾರ್ಜ್‌ಗೆ 130 ರಿಂದ 140ಕಿ.ಮಿ ಮೈಲೇಜ್ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಎಲೆಕ್ಟ್ರಿಕ್ ವ್ಯಾಗನ್‌ಆರ್ ಬೆಲೆ ಮಾಹಿತಿ ಬಹಿರಂಗ ಪಡಿಸಿದ ಮಾರುತಿ ಸುಜುಕಿ..!

ಇನ್ನು ಎಲೆಕ್ಟ್ರಿಕ್ ವಾಹನಗಳ ಬೆಲೆ ದುಬಾರಿಯಾಗಲು ಪ್ರಮುಖ ಕಾರಣವಾಗಿರುವ ಲೀಥಿಯಂ ಅಲಾಯ್ ಬ್ಯಾಟರಿಗಳನ್ನು ಸದ್ಯಕ್ಕೆ ವಿದೇಶಿ ಮಾರುಕಟ್ಟೆಗಳಾದ ಚೀನಾ, ತೈವಾನ್ ಮತ್ತು ಥೈಲ್ಯಾಂಡ್‌ನಿಂದಲೇ ಶೇ.100ರಷ್ಟು ಆಮದು ಮಾಡಿಕೊಳ್ಳಲಾಗುತ್ತಿದ್ದು, ದೇಶದಲ್ಲಿ ಯಾವುದೇ ಕಾರು ಉತ್ಪಾದನಾ ಸಂಸ್ಥೆಯು ಸ್ವಂತ ಬ್ಯಾಟರಿ ಉತ್ಪಾದನಾ ಸೌಲಭ್ಯವನ್ನು ಹೊಂದಿಲ್ಲ.

ಎಲೆಕ್ಟ್ರಿಕ್ ವ್ಯಾಗನ್‌ಆರ್ ಬೆಲೆ ಮಾಹಿತಿ ಬಹಿರಂಗ ಪಡಿಸಿದ ಮಾರುತಿ ಸುಜುಕಿ..!

ಇದೇ ಕಾರಣಕ್ಕೆ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳು ಸಾಮಾನ್ಯ ಕಾರುಗಳಿಂತಲೂ ಎರಡರಿಂದ ಮೂರು ಪಟ್ಟು ಹೆಚ್ಚು ದುಬಾರಿ ದರಗಳಲ್ಲಿ ಮಾರಾಟವಾಗುತ್ತಿದ್ದು, ಇದರಿಂದಲೂ ಕೂಡಾ ಬಹುತೇಕ ಕಾರು ಖರೀದಿದಾರರು ಎಲೆಕ್ಟ್ರಿಕ್ ಕಾರುಗಳ ಖರೀದಿಸುವ ಆಸಕ್ತಿ ಇದ್ದರೂ ದುಬಾರಿ ಬೆಲೆಯಿಂದಾಗಿ ಹಿಂದೆ ಸರಿಯುತ್ತಿದ್ದಾರೆ.

MOST READ: ಸ್ಮಾರ್ಟ್ ಹೈಬ್ರಿಡ್ ಟೆಕ್ನಾಲಜಿಯೊಂದಿಗೆ ಮಾರಾಟದಲ್ಲಿ ಮಿಂಚುತ್ತಿದೆ ಮಾರುತಿ ಬಲೆನೊ

ಎಲೆಕ್ಟ್ರಿಕ್ ವ್ಯಾಗನ್‌ಆರ್ ಬೆಲೆ ಮಾಹಿತಿ ಬಹಿರಂಗ ಪಡಿಸಿದ ಮಾರುತಿ ಸುಜುಕಿ..!

ಇದನ್ನು ಗಂಭೀರವಾಗಿ ಪರಿಣಿಸಿರುವ ಸುಜುಕಿ ಸಂಸ್ಥೆಯು ಭಾರತದಲ್ಲೇ ಲೀಥಿಯಂ ಬ್ಯಾಟರಿ ಉತ್ಪಾದನೆ ಮಾಡಿ ತನ್ನ ಕಾರುಗಳಿಗೆ ಅಷ್ಟೇ ಅಲ್ಲದೇ ಇತರೆ ಸಂಸ್ಥೆಗಳಿಗೂ ಬ್ಯಾಟರಿ ಪೂರೈಕೆ ಮಾಡುವ ಯೋಜನೆ ರೂಪಿಸಿದ್ದು, ಇದಕ್ಕಾಗಿ ಗುಜರಾತ್‌ನಲ್ಲಿ ಟೊಯೊಟಾ ಜೊತೆ ಸೇರಿ ರೂ.1,300 ಕೋಟಿ ವೆಚ್ಚದಲ್ಲಿ ಹೊಸ ಬ್ಯಾಟರಿ ಉತ್ಪಾದನಾ ಘಟಕದ ನಿರ್ಮಾಣಕ್ಕೆ ಚಾಲನೆ ನೀಡಿವೆ.

Most Read Articles

Kannada
English summary
Maruti Suzuki Indicates The Price Of Upcoming WagonR Electric. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X